Cini NewsSandalwood

ಟ್ರೇಲರ್ ಡಿಕೋಡ್ ಸ್ಪರ್ಧೆ ಮೂಲಕ ಕೂತೂಹಲ ಹುಟ್ಟಿಸಿದ್ದ “ಮಾತೊಂದ ಹೇಳುವೆ” ಚಿತ್ರದ ಟ್ರೇಲರ್ ಬಿಡುಗಡೆ

ಹುಬ್ಬಳ್ಳಿ-ಧಾರವಾಡ ಹುಡುಗ ಮತ್ತು ಮೈಸೂರು ಹುಡುಗಿಯ ಕಥಾಹಂದರವಿರುವ ಈ ಚಿತ್ರ ಜೂನ್ 20ರಂದು ರಾಜ್ಯಾದ್ಯಂತ ಬಿಡುಗಡೆ . ವಿಭಿನ್ನ ರೀತಿಯ ಪ್ರಚಾರ ತಂತ್ರಗಳ ಮೂಲಕ ಗಮನ ಸೆಳೆದಿರೋ ಮಯೂರ್ ಕಡಿ ನಿರ್ದೇಶನದ ‘ಮಾತೊಂದ ಹೇಳುವೆ’ ಚಿತ್ರದ ಟ್ರೇಲರ್ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿದೆ.

ಬಿಡುಗಡೆಯಾದ ಕ್ಷಣದಿಂದಲೇ ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಟ್ರೇಲರ್ ಬಿಡುಗಡೆಗೂ ಪೂರ್ವಭಾವಿಯಾಗಿ ಚಿತ್ರತಂಡ ‘ ಟ್ರೇಲರ್ ಡಿಕೋಡ್ ‘ ಸ್ಪರ್ಧೆ ಹೊರಬಿಟ್ಟಿತ್ತು. ಚಿತ್ರದ ನಾಯಕ ಮತ್ತು ನಾಯಕಿಯ ಡೈಲಾಗ್ ಮ್ಯೂಟ್ ಮಾಡಿ, ಜನರಿಗೆ ಡೈಲಾಗ್ ಊಹಿಸಲು ಈ ಸ್ಪರ್ಧೆ ಏರ್ಪಡಿಸಲಾಗಿತ್ತು. ಸರಿ ಉತ್ತರ ನೀಡಿದ ಮೊದಲ 5 ಜನರಿಗೆ ತಲಾ 5,000 ನಗದು ಬಹುಮಾನ ಎಂದು ಘೋಷಿಸಲಾಗಿತ್ತು. ಈಗ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಸದ್ಯದಲ್ಲೇ ವಿಜೇತರಿಗೆ ಬಹುಮಾನ ಕೊಡಲಾಗುವುದು ಎಂದು ಚಿತ್ರತಂಡ ತಿಳಿಸಿದೆ.

ಹುಬ್ಬಳ್ಳಿ – ಧಾರವಾಡ ಹುಡುಗ ಹಾಗೂ ಮೈಸೂರು ಭಾಗದ ಹುಡುಗಿಯ ಪ್ರೇಮ ಕಥಾನಕ ಹೊಂದಿರುವ ಈ ಚಿತ್ರದಲ್ಲಿ ಮಯೂರ್ ಕಡಿ, ರಾಧ್ಯ, ಗಿರೀಶ್ ಶಿವಣ್ಣ, ಪಿ.ಡಿ ಸತೀಶ್ ಮುಂತಾದವರು ನಟಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಕೆಲವು ಕಂಟೆಂಟ್ ಗಳ ಮೂಲಕ ಪ್ರೇಕ್ಷಕರ ಮನ ತಲುಪಿರುವ ‘ಮಾತೊಂದ ಹೇಳುವೆ’ ಚಿತ್ರ ಜೂನ್ 20 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

error: Content is protected !!