Cini NewsSandalwood

‘ಇರುಮುಡಿ’ ಹೊತ್ತು ಬಂದ ಮಾಸ್ ಮಹಾರಾಜ.. ರವಿತೇಜ ಸಿನಿಮಾದ ಫಸ್ಟ್ ಲುಕ್ ರಿಲೀಸ್

Spread the love

ತೆಲುಗಿನ ಮಾಸ್ ಮಹಾರಾಜ ರವಿತೇಜ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರ ಜನ್ಮದಿನ ಅಂಗವಾಗಿ 77ನೇ ಸಿನಿಮಾ ಘೋಷಣೆಯಾಗಿದೆ. ರವಿತೇಜ ಹೊಸ ಚಿತ್ರಕ್ಕೆ ಇರುಮುಡಿ‌ ಎಂಬ ಶೀರ್ಷಿಕೆ‌ ಇಡಲಾಗಿದೆ. ಜೊತೆಗೆ ಫಸ್ಟ್ ಲುಕ್ ಕೂಡ ಬಿಡುಗಡೆ ಮಾಡಲಾಗಿದೆ. ಶಬರಿಮಲೆ ಅಯ್ಯಪ್ಪ ದೀಕ್ಷಾಧಾರಿಗಳು ಯಾತ್ರೆಯ ಸಮಯದಲ್ಲಿ ತಲೆಯ ಮೇಲೆ ಹೊತ್ತುಕೊಂಡು ಸಾಗುವುದನ್ನು ಇರುಮುಡಿ ಎನ್ನುತ್ತಾರೆ. ಇರುಮುಡಿ ಸಿನಿಮಾಗೆ ಶಿವ‌ ನಿರ್ವಾಣ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ನಿರ್ದೇಶಕ ಶಿವ ನಿರ್ವಾಣ ಭಕ್ತಿಯ ಆಳ, ಭಾವನಾತ್ಮಕ ತೂಕ ಇರುವ ಪ್ರಬಲ ಚಿತ್ರಕಥೆಯನ್ನು ರಚಿಸಿದ್ದಾರೆ. ಅಲ್ಲದೇ ತಂದೆ-ಮಗಳ ಬಾಂಧವ್ಯ ಚಿತ್ರದ ಹೈಲೆಟ್. ರವಿತೇಜ ಹಿಂದೆಂದೂ ಕಾಣದ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇರುಮುಡಿ ಸಿನಿಮಾದಲ್ಲಿ ಪ್ರಿಯಾ ಭವಾನಿ ಶಂಕರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಬೇಬಿ ನಕ್ಷತ್ರ ರವಿತೇಜ ಅವರ ಮಗಳನ್ನು ಅಭಿನಯಿಸುತ್ತಿದ್ದಾರೆ. ತಾರಾಗಣದಲ್ಲಿ ಸಾಯಿ ಕುಮಾರ್, ಅಜಯ್ ಘೋಷ್, ರಮೇಶ್ ಇಂದಿರಾ ಮತ್ತು ಸ್ವಸಿಕಾ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ನಡಿ ನವೀನ್ ಯರ್ನೇನಿ ಹಾಗೂ ರವಿ ಶಂಕರ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ‌ಜಿವಿ ಪ್ರಕಾಶ್ ಸಂಗೀತ ನಿರ್ದೇಶನ, ವಿಷ್ಣು ಶರ್ಮ ಛಾಯಾಗ್ರಹಣ, ಪ್ರವೀಣ್ ಪುಡಿ ಸಂಕಲನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಶಿವ ನಿರ್ವಾಣ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ.
ಇರುಮುಡಿ ಸಿನಿಮಾದ ಚಿತ್ರೀಕರಣ ಸದ್ಯ ಭರದಿಂದ ಸಾಗುತ್ತಿದೆ.

Visited 1 times, 1 visit(s) today
error: Content is protected !!