Cini NewsTollywood

ಮಂಗಳವಾರಂ ಸಿನಿಮಾದ ಎರಡನೇ ಹಾಡು ರಿಲೀಸ್, ಬೋಲ್ಡ್ ಆಗಿ ಕಾಣಿಸಿಕೊಂಡ ಪಾಯಲ್

Spread the love

ಆರ್​ಎಕ್ಸ್​ 100 ಸಿನಿಮಾ ಬಳಿಕ ನಿರ್ದೇಶಕ ಅಜಯ್ ಭೂಪತಿ ಆ್ಯಕ್ಷನ್​-ಕಟ್ ಹೇಳಿರುವ ಮಂಗಳವಾರಂ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ನವೆಂಬರ್ 17ಕ್ಕೆ ತೆರೆಗೆ ಬರ್ತಿರುವ ಈ ಚಿತ್ರದ ಎರಡನೇ ಹಾಡು ಅನಾವರಣಗೊಂಡಿದೆ. ನಿನ್ನಲ್ಲಿ ನಾ ಎಂಬ ಸಾಹಿತ್ಯದ ಹಾಡಿಗೆ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ಹರ್ಷಿಕಾ ದೇವನಾಥ್ ಧ್ವನಿಯಾಗಿದ್ದು, ಕಾಂತಾರ ಖ್ಯಾತಿಯ ಬಿ ಅಜನೀಶ್ ಲೋಕನಾಥ್ ಟ್ಯೂನ್ ಹಾಕಿದ್ದಾರೆ. ನಿನ್ನಲ್ಲಿ ನಾ ಮಧುರ ಗೀತೆಯಲ್ಲಿ ಪಾಯಲ್ ಬೋಲ್ಡ್ ಅಗಿ ಕಾಣಿಸಿಕೊಂಡಿದ್ದರು. ಮುದ್ದಾದ ಜೋಡಿ ನಡುವಿನ ರೋಮ್ಯಾಂಟಿಕ್ ಹಾಡು ಇದಾಗಿದೆ.

ಟಾಲಿವುಡ್​ನಲ್ಲಿ ನಿರ್ದೇಶಕ ಅಜಯ್ ಭೂಪತಿ ಅವರು ತಮ್ಮ ಛಾಪು ಮೂಡಿಸಿದ್ದಾರೆ. ‘ಆರ್​ಎಕ್ಸ್ 100’ ಚಿತ್ರದಿಂದ ಅವರಿಗೆ ಅಂತಹ ಜನಪ್ರಿಯತೆ ಸಿಕ್ಕಿದೆ. ಈಗ ಅವರು ‘ಮಂಗಳವಾರಂ’ ಸಿನಿಮಾದ ಮೂಲಕ ತೆಲುಗು ಚಿತ್ರರಂಗ ಮಾತ್ರವಲ್ಲದೇ ದೇಶಾದ್ಯಂತ ಹವಾ ಮಾಡಲು ಹೊರಟಿದ್ದಾರೆ. ಸ್ವಾತಿ ಗುಣಪತಿ ಹಾಗೂ ಸುರೇಶ್ ವರ್ಮಾ ಅವರ ‘ಮುದ್ರಾ ಮೀಡಿಯಾ ವರ್ಕ್ಸ್’ ಮತ್ತು ಅಜಯ್ ಭೂಪತಿ ಒಡೆತನದ ‘ಎ ಕ್ರಿಯೇಟಿವ್ ವರ್ಕ್ಸ್’ ಸಂಸ್ಥೆಗಳು ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿವೆ.

ಪಾಯಲ್ ರಜಪೂತ್ ಜೊತೆ ಶ್ರೀತೇಜ್, ಅಜಯ್ ಘೋಷ್, ಚೈತನ್ಯ ಕೃಷ್ಣ, ಲಕ್ಷ್ಮಣ್ ಸೇರಿದಂತೆ ಹಲವು ಕಲಾವಿದರು ‘ಮಂಗಳವಾರಂ’ ಸಿನಿಮಾದಲ್ಲಿ ನಟಿಸಿದ್ದಾರೆ. ದಶರಥಿ ಶಿವೇಂದ್ರ ಅವರ ಛಾಯಾಗ್ರಹಣ, ರಘು ಕುಲಕರ್ಣಿ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಸಾಯಿಕುಮಾರ್ ಯಡವಲ್ಲಿ ಅವರು ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಇದೊಂದು ರಗಡ್​ ಆ್ಯಕ್ಷನ್-ಥ್ರಿಲ್ಲರ್ ಚಿತ್ರವಾಗಿದೆ. ಅಜನೀಶ್​ ಲೋಕನಾಥ್​ ಅವರು ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಇಷ್ಟು ವರ್ಷಗಳ ಕಾಲ ನಿರ್ದೇಶಕನಾಗಿ ಗಮನ ಸೆಳೆದಿದ್ದ ಅಜಯ್ ಭೂಪತಿ ಅವರು ‘ಮಂಗಳವಾರಂ’ ಸಿನಿಮಾದಿಂದ ನಿರ್ಮಾಪಕರಾಗಿಯೂ ಬಡ್ತಿ ಪಡೆಯುತ್ತಿದಾರೆ. ಟೀಸರ್ ಮೂಲಕ ಗಮನಸೆಳೆದಿರುವ ಚಿತ್ರತಂಡ ಈಗ ಹಾಡುಗಳ ಮೂಲಕ ಪ್ರೇಕ್ಷಕರಿಗೆ ಆಮಂತ್ರಣ ನೀಡುತ್ತಿದೆ. ನವೆಂಬರ್ 17ರಂದು ತೆಲುಗಿನ ಜೊತೆ ಕನ್ನಡ, ಹಿಂದಿ, ಮಲಯಾಳಂ ಮತ್ತು ತಮಿಳಿನಲ್ಲಿ ‘ಮಂಗಳವಾರಂ’ ಬಿಡುಗಡೆ ಆಗಲಿದೆ,

Visited 1 times, 1 visit(s) today
error: Content is protected !!