“ಆಲ್ಫಾ ಮೆನ್ ಲವ್ ವೈಲೆನ್ಸ್” ಚಿತ್ರದ ಮೇಕಿಂಗ್ ರಿಲೀಸ್
ಹೇಮಂತ್ ಕುಮಾರ್ ಅಭಿನಯದ “ಆಲ್ಫಾ ಮೆನ್ ಲವ್ ವೈಲೆನ್ಸ್” ಹೊಸ ಭರವಸೆ ಮೂಡಿಸುವಂತಿದೆ. ಆಲ್ಫಾ ಮೆನ್ ಲವ್ ವೈಲೆನ್ಸ್ ಈಗಾಗಲೇ ಫಸ್ಟ್ ಲುಕ್ ನಿಂದಲೇ ಸದ್ದು ಮಾಡಿದ ಸಿನಿಮಾ. ಗೀತಾ , ಹೊಯ್ಸಳ ಸಿನಿಮಾವನ್ನ ನಿರ್ದೇಶನ ಮಾಡಿದ್ದ ವಿಜಯ್ ಅವ್ರೇ ಆಕ್ಷನ್ ಕಟ್ ಹೇಳ್ತಿರೋ ಸಿನಿಮಾ ಆಲ್ಫಾ. ಹೀರೋ ಫಸ್ಟ್ ಲುಕ್ ಹಾಗೂ ಥೀಮ್ ಮ್ಯೂಸಿಕ್ ನಿಂದ ಗಮನ ಸೆಳೆದಿದ್ದ ಆಲ್ಫಾ ಸಿನಿಮಾತಂಡ ಸದ್ಯ ಚಿತ್ರದ ಮೇಕಿಂಗ್ ರಿಲೀಸ್ ಮಾಡೋದ್ರ ಜೊತೆಗೆ ಹೀರೋಯಿನ್ ಅನ್ನು ಪ್ರೇಕ್ಷಕರಿಗೆ ಪರಿಚಯಿಸಿದೆ.
ಹೇಮಂತ್ ಕುಮಾರ್ ನಾಯಕನಾಗಿ ಆಕ್ಟ್ ಮಾಡ್ತಿರೋ ಆಲ್ಫಾ ಮೆನ್ ಲವ್ ವೈಲೆನ್ಸ್ ಸಿನಿಮಾಗೆ ಗೋಪಿಕಾ ಸುರೇಶ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಸಿನಿಮಾದ ಶೇಕಡ ೬೦ ರಷ್ಟು ಚಿತ್ರೀಕರಣ ಕಂಪ್ಲೀಟ್ ಆಗಿದ್ದು ಆಲ್ಫಾ ಸಿನಿಮಾದಲ್ಲಿ ಹೇಮಂತ್ ಗೆ ಸಾಥ್ ಕೊಡಲು ದೊಡ್ಡ ತಾರಾ ಬಳಗವೇ ಇದೆ. ಆಲ್ಫಾ ಮೆನ್ ಲವ್ ವೈಲೆನ್ಸ್ ಆಕ್ಷನ್ ಸಿನಿಮಾ ಜತೆಗೆ ಅಪ್ಪ ಮತ್ತು ಮಗನ ಸ್ಟ್ರಾಂಗ್ ಎಮೋಷನ್ ಕೂಡ ಹೈಲೆಟ್.
ಆಲ್ಫಾ ಮೆನ್ ಲವ್ ವೈಲೆನ್ಸ್ ಚಿತ್ರದಲ್ಲಿ ಅಚ್ಚುತ್ ಕುಮಾರ್ , ರಮೇಶ್ ಇಂದಿರಾ, ಬಾಲು ನಾಗೇಂದ್ರ, ಅವಿನಾಶ್ ಮಾನ್ಸಿ ಸುಧೀರ್ ಹೀಗೆ ಸಾಕಷ್ಟು ಕಲಾವಿದರು ಚಿತ್ರದಲ್ಲಿ ಭಾಗಿಯಾಗಿದ್ದಾರೆ . ಸದ್ಯ ರಿಲೀಸ್ ಆಗಿರೋ ಮೇಕಿಂಗ್ ನಲ್ಲಿ ಹೆಚ್ಚು ಸ್ಟಂಟ್ಸ್ ಸೀನ್ ಗಳನ್ನ ಚಿತ್ರೀಕರಣ ಮಾಡಿದ ಸಮಯದ್ದಾಗಿದ್ದು ಈ ಸ್ಟಂಟ್ಸ್ ಗಳನ್ನ ವಿನೋದ್ ಮಾಸ್ಟರ್ ನಿರ್ದೇಶನ ಮಾಡಿದ್ದಾರೆ.
ಸದ್ಯ ಟಾಕಿ ಚಿತ್ರೀಕರಣ ಮುಗಿಸಿದ್ದು ಇನ್ನುಳಿದ ಫೈಟ್ ಗಳನ್ನ ಟಾಲಿವುಡ್ ನ ವಿಜಯ್ ಮಾಸ್ಟರ್ ಡೈರೆಕ್ಟ್ ಮಾಡಲಿದ್ದಾರೆ.. ಇನ್ನು ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಚಿತ್ರೀಕರಣದ ಕೊನೆಯಲ್ಲಿ ಹಾಡಿನ ಶೂಟಿಂಗ್ ಪ್ಲಾನ್ ಮಾಡಿದೆ ಸಿನಿಮಾ ಟೀಮ್.ಈ ಸಿನಿಮಾ ಮೂಲಕ ಆನಂದ್ ಕುಮಾರ್ ನಿರ್ಮಾಪಕರಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ. ‘ಎಲ್ ಎ’ ಬ್ಯಾನರ್ನಲ್ಲಿ ಆಲ್ಫಾ ಸಿನಿಮಾ ಮೂಡಿಬರುತ್ತಿದೆ. ಇನ್ನು ಮೇಕಿಂಗ್ ನಲ್ಲಿ ನಾಯಕ ನಟ ಹೇಮಂತ್ ಅವ್ರ ಪರ್ಫಾಮೆನ್ಸ್ ಭರವಸೆ ಮೂಡಿಸುವಂತಿದ್ದು, ಆದಷ್ಟು ಬೇಗ ಸಿನಿಮಾ ಚಿತ್ರೀಕರಣ ಕಂಪ್ಲೀಟ್ ಆಗಿ ತೆರೆ ಮೇಲೆ ಸಿನಿಮಾ ಬರಲಿದೆ.