Cini NewsMovie ReviewSandalwood

ಮೊಬೈಲ್ ಸುಳಿಯಲ್ಲಿ ಬದುಕಿನ ಪುಸ್ತಕ “ಮಗ್ಗಿಪುಸ್ತಕ” (ಚಿತ್ರವಿಮರ್ಶೆ-ರೇಟಿಂಗ್ : 3.5 /5)

Spread the love

ರೇಟಿಂಗ್ : 3.5 /5
ಚಿತ್ರ : ಮಗ್ಗಿಪುಸ್ತಕ
ನಿರ್ದೇಶಕ : ಹರಿವರಾಸನಂ
ನಿರ್ಮಾಪಕ : ಸಿ. ಯತಿರಾಜ್
ಸಂಗೀತ : ಯಶಸ್ ನಾಚಪ್ಪ
ಛಾಯಾಗ್ರಹಣ : ನಂದಕುಮಾರ್
ವಿತರಣೆ : ಎಂ.ಪಿ. ಫಿಲಂಸ್
ತಾರಾಗಣ : ರಾನ್ವಿ ಶೇಖರ್, ರಕ್ಷಾ ಗೌಡ, ಮೈಸೂರು ರಮಾನಂದ್ , ಕೃಷ್ಣ ಮಹೇಶ್, ರಂಜನ್ ಕಾಸರಗೋಡು, ಮೇಘಶ್ರೀ ಶೋಭರಾಜ್, ಮಿಮಿಕ್ರಿ ಗೋಪಿ, ಚಂದ್ರಪ್ರಭ, ರಾಘು ರಮನಕೊಪ್ಪ ಹಾಗೂ ಮುಂತಾದವರು…

ಜೀವನವೇ ಒಂದು ಪಾಠ, ಪ್ರತಿ ಹಂತದಲ್ಲೂ ಬದುಕಿನ ಲೆಕ್ಕಾಚಾರ ಬಹಳ ಮುಖ್ಯ. ಒಂದು ವೇಳೆ ಏರುಪೇರು ಆದರೆ ಸೂತ್ರವಿಲ್ಲದ ಗಾಳಿಪಟದಂತೆ ದಿಕ್ಕಾಪಾಲಾಗಿ ಬದುಕಿನ ಪುಸ್ತಕವೇ ಅಲ್ಲೋಲಕಲ್ಲೋವಾಗಿ ಹೋಗುತ್ತದೆ. ಇದರ ನಡುವೆ ಮೊಬೈಲ್ ನ ಹಾವಳಿ , ಕೋವಿಡ್ ಪರಿಸ್ಥಿತಿ , ಬದುಕಿನ ಸ್ಥಿತಿಗತಿ , ವಿದ್ಯಾಭ್ಯಾಸ , ಬಡತನದ ಸುಳಿ,ಲೆಕ್ಕಾಚಾರದ ಕೋಡ್ ವರ್ಡ್ ಸುತ್ತ ಬೆಸೆದುಕೊಂಡು ಜಾಗೃತಿ ಮೂಡಿಸುವ ಹಾದಿಯಲ್ಲಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಮಗ್ಗಿ ಪುಸ್ತಕ”.

ಕರೋನಾ ಸಂಕಷ್ಟ ಎಲ್ಲರ ಬದುಕನ್ನ ಸಂಕಷ್ಟದಲ್ಲಿ ಸಿಲುಕಿಸಿದಂತೂ ನಿಜ. ಅಂತದ್ದೇ ಸ್ಥಿತಿಯಲ್ಲಿ ಸರ್ಕಾರವು ಕೂಡ ಇನ್ನಷ್ಟು ಕ್ರಮಗಳನ್ನು ಕೈಗೊಂಡಿದ್ದು , ಅದರಲ್ಲೂ ವಿದ್ಯಾಭ್ಯಾಸಕ್ಕಾಗಿ
ಮಕ್ಕಳ ಭವಿಷ್ಯ ಹಾಳಾಗಬಾರದೆಂದು ಆನ್ಲೈನ್ ಕ್ಲಾಸಸನ್ನ ಮಾಡುವ ನಿರ್ಧಾರಕ್ಕೆ ಬರುವ ಶಿಕ್ಷಣ ಮಂತ್ರಿ (ಮಿಮಿಕ್ರಿ ಗೋಪಿ). ತನ್ನ ಭಾವನಿಗೆ ಪಿಎ ಯಾಗಿ ಎಜುಕೇಶನ್ ವಿಚಾರವನ್ನೇ ಅಸ್ತ್ರವಾಗಿಸಿಕೊಂಡು ಡಾಟಾಬೇಸ್ ಕೊಡ್ ವರ್ಡ್ ಮೂಲಕ ತನ್ನದೇ ಗೇಮ್ ಪ್ಲಾನ್ ಮಾಡುವ ವೈರಮುಡಿ (ಕೃಷ್ಣ ಮಹೇಶ್). ಇದರ ಹಿಂದೆ ಒಂದಷ್ಟು ಗುಪ್ತ ವಿಚಾರಗಳ ಸಂಚಲನ ನಡೆಯುತ್ತದೆ.

ಗಂಡನನ್ನ ಕಳೆದುಕೊಂಡು ಮನೆ ಕೆಲಸ ಮಾಡುತ್ತಾ ಮೂರು ಮಕ್ಕಳನ್ನು ಸಾಕುವ ತಾಯಿ ಭಾಗ್ಯ(ರಕ್ಷಾ ಗೌಡ). ತಂದೆಯ ಆಸೆಯಂತೆ ಎಸ್‍ಎಸ್‍ಎಲ್‍ಸಿಯನ್ನು ಪಾಸ್ ಮಾಡಲು ಶ್ರಮಪಟ್ಟು ಓದುವ ಮಗಳು ಅವನಿ ( ರಾನ್ವಿ ಶೇಖರ್). ಆದರೆ ಮನೆಯ ಬಾಡಿಗೆ , ಸಾಲ , ಬಡತನದ ನಡುವೆ ಸಿಲುಕಿರುವಾಗಲೇ ಶಾಲೆಯಿಂದ ಆನ್ಲೈನ್ ಕ್ಲಾಸ್ ಆರಂಭಗೊಂಡು ಮೊಬೈಲ್ಗಾಗಿ ಇಡೀ ಕುಟುಂಬ ನಾನು ರೀತಿಯ ಸಂಕಷ್ಟವನ್ನು ಎದುರಿಸುತ್ತಾರೆ.

ಇನ್ನು ಕುಟುಂಬಕ್ಕೆ ಬೆಂಬಲವಾಗಿ ನಿಂತು ತಮ್ಮ ಕೈಲಾದಷ್ಟು ಸಹಾಯ ಮಾಡುವ ಹಿರಿಯ ಹೋರಾಟಗಾರ ಹುಲಿಯಪ್ಪ (ಮೈಸೂರು ರಾಮಾನಂದ). ಒಂದು ಕಡೆ ಶಾಲೆ ಪ್ರಿನ್ಸಿಪಲ್ ಜ್ಞಾನ ದೀಪ ರಿಂದ ನಿಂದನೆ , ಅಕ್ಕ ಪಕ್ಕದವರ ಅಪಮಾನದಿಂದ ನೊಂದರು ವಿದ್ಯಾಭ್ಯಾಸದ ಕಡೆಗೆ ಗಮನ ಕೊಡುವ ಅವನಿ ಕುಟುಂಬವನ್ನು ಅಪಹರಿಸುವ ಒಂದು ಗ್ಯಾಂಗ್ ಒಂದು ನಿಗೂಢ ಸತ್ಯವನ್ನು ತಿಳಿದುಕೊಳ್ಳಲು ಸಂಚು ರೂಪಿಸುತ್ತದೆ.

ಇದರ ನಡುವೆ ಅನಾಮಿಕ ವ್ಯಕ್ತಿ ಅಗಸ್ತ್ಯ (ರಂಜನ್ ಕಾಸರಗೋಡು) ತನ್ನ ಆರೋಗ್ಯದ ವಿಚಾರವಾಗಿ ನಿಗೂಢ ಸ್ಥಳದಲ್ಲಿದ್ದು , ಅವನಿಯನ್ನು ಭೇಟಿಯಾಗುವ ಸಂದರ್ಭ ಒದಗುತ್ತೆ. ಇದೆಲ್ಲವೂ ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡು ನಿಗೂಢ ಸತ್ಯ ಹೊರ ಬರುವ ಹಂತಕ್ಕೆ ಬರುತ್ತದೆ. ಅದು ಏನು… ಯಾರ ಕೈವಾಡ… ಹಿಂದಿರುವ ಕೋಡ್ ವರ್ಡ್… ಯಾವ ಉದ್ದೇಶ ಎಂಬ ಸತ್ಯಕ್ಕೆ ಎಲ್ಲರೂ ಹೋಗಿ ಚಿತ್ರ ನೋಡಬೇಕು.

ಇನ್ನು ನಿರ್ದೇಶಕ ಹರಿವರಾಸನಂ ಬಹಳಷ್ಟು ವಿಚಾರವನ್ನು ಒಂದೇ ಭಂಡಾರದಲ್ಲಿ ಹೇಳುವ ದೊಡ್ಡ ಪ್ರಯತ್ನ ಮಾಡಿದ್ದಾರೆ. ಬಡತನದ ನೋವು, ತಳಮಳ ಸಂಕಷ್ಟಗಳ ನಡುವೆ ವಿದ್ಯಾಭ್ಯಾಸದ ಪ್ರಾಮುಖ್ಯತೆ ಬಗ್ಗೆ ಹೇಳೋದ್ರ ಜೊತೆಗೆ ಪ್ರಸ್ತುತ ಮೊಬೈಲ್ ಹಾವಳಿ ಸಂಬಂಧಗಳ ಚೂರು , ಮಕ್ಕಳ ಭವಿಷ್ಯ , ಒಳ್ಳೆಯದು , ಕೆಟ್ಟದ್ದು , ರಾಜಕೀಯ ನೆಂಟು , ಕ್ರೂರಿಗಳ ಹಾವಳಿ ಹೀಗೆ ಜೀವನದ ಪರಿಸ್ಥಿತಿ ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತದೆ ಎಂಬ ಸೂಕ್ಷ್ಮತೆಯನ್ನು ಹೇಳುವ ಪ್ರಯತ್ನವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಆದರೆ ಚಿತ್ರಕಥೆ ಇನ್ನಷ್ಟು ಹಿಡಿತ ಮಾಡಬೇಕಿತ್ತು , ಒಂದಷ್ಟು ಸನ್ನಿವೇಶಗಳು ಅನವಶ್ಯಕ ಅನಿಸುತ್ತದೆ. ಆದರೂ ಪ್ರಯತ್ನ ಹಾಗೂ ಕ್ಲೈಮಾಕ್ಸ್ ನಲ್ಲಿ ಹೇಳಿರುವ ಸಂದೇಶ ಉತ್ತಮವಾಗಿದೆ.

ನೋಡಲು ಮಕ್ಕಳ ಚಿತ್ರ ಅನಿಸಿದರೂ ಕಮರ್ಷಿಯಲ್ ರೀತಿಯಲ್ಲಿ ಹೇಳಿರುವ ಹಾದಿ ಗಮನ ಸೆಳೆದು ನಿರ್ಮಾಪಕರ ಸಹಕಾರ ಮೆಚ್ಚುವಂತದ್ದು , ಇನ್ನು ಚಿತ್ರದ ಓಟಕ್ಕೆ ಹಾಡುಗಳು ಲೀಲಾಜಾಲವಾಗಿ ಹರಿದು ಬಂದಿದ್ದು , ಕ್ಯಾಮೆರಾ ಕೈಚಳಕ ಉತ್ತಮವಾಗಿದೆ. ಸಂಕಲನಕ್ಕೆ ಹೆಚ್ಚು ಗಮನ ಕೊಡಬಹುದಿತ್ತು. ಇನ್ನು ಶಾಲಾ ವಿದ್ಯಾರ್ಥಿಯಾಗಿ ರಾನ್ವಿ ಶೇಖರ್ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇನ್ನು ಅವನಿಗೆ ತಂದೆಯಾಗಿ ಅಭಿನಯಿಸಿರುವ ರಂಗಭೂಮಿ ಪ್ರತಿಭೆ ಕೂಡ ಪಾತ್ರಕ್ಕೆ ನ್ಯಾಯವನ್ನು ನೀಡಿದ್ದಾರೆ.

ವಯಸ್ಸಿಗೆ ಮೀರಿದಂತಹ ತಾಯಿಯ ಪಾತ್ರವನ್ನು ರಕ್ಷಾ ಗೌಡ ನಿರ್ವಹಿಸಲು ಶ್ರಮ ಪಟ್ಟಿದ್ದಾರೆ. ಒಬ್ಬ ಹೋರಾಟಗಾರನಾಗಿ , ಬಡ ಕುಟುಂಬಕ್ಕೆ ರಕ್ಷಣೆ ನೀಡುವ ಹಿರಿಯ ಜೀವವಾಗಿ ಮೈಸೂರು ರಮಾನಂದ ಉತ್ತಮವಾಗಿ ನಟಿಸಿದ್ದಾರೆ. ಹಾಗೆಯೇ ಕೃಷ್ಣ ಮಹೇಶ್ ವಿಲನ್ ಗೆಟಪ್ ನಲ್ಲಿ ಗಮನ ಸೆಳೆದಿದ್ದು , ಬೇರೆ ರೀತಿಯ ಪಾತ್ರಗಳಿಗೂ ಸೈ ಎನ್ನುವಂತೆ ಅಭಿನಯಿಸಿದ್ದಾರೆ. ಒಂದು ವಿಭಿನ್ನ ಪಾತ್ರದಲ್ಲಿ ಯುವ ಪ್ರತಿಭೆ ರಂಜನ್ ಕಾಸರಗೋಡು ಕೂಡ ಗಮನ ಸೆಳೆಯುತ್ತಾರೆ.

ಇನ್ನೂ ಪ್ರಿಸಿಪಲ್ ಯಾಗಿ ರಘು ರಾಮನಕೊಪ್ಪ ಪಾತ್ರಕ್ಕೆ ಜೀವ ತುಂಬಿದ್ದಾರೆ. ಡಾಕ್ಟರ್ ಪಾತ್ರದಲ್ಲಿ ವರ್ಧನ್ ತೀರ್ಥಹಳ್ಳಿ ಸೇರಿದಂತೆ ಅಭಿನಯಿಸಿರುವ ಹಿರಿಯ ಕಲಾವಿದೆ ಗಿರಿಜಾ ಲೋಕೇಶ್, ಶೋಭ ರಾಜ್ , ಬಾಲ ರಾಜ್ವಾಡಿ , ಮಿಮಿಕ್ರಿ ಗೋಪಿ, ಗೋಪಿ , ಚಂದ್ರಪ್ರಭ , ವಾಣಿಶ್ರೀ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಪೂರಕವಾಗಿದೆ. ಒಟ್ಟಾರೆ ಮಗ್ಗಿ ಪುಸ್ತಕದಲ್ಲಿಬದುಕಿನ ಲೆಕ್ಕಾಚಾರ ಹೇಳಿರುವ ಈ ಚಿತ್ರವನ್ನು ಯಾವುದೇ ಮುಜುಗರವಿಲ್ಲದೆ ಎಲ್ಲರೂ ನೋಡುವಂತಿದೆ.

Visited 1 times, 1 visit(s) today
error: Content is protected !!