ಯುವ ಪ್ರತಿಭೆಗಳ “ಲವ್ 2 ಲಸ್ಸಿ” ಪೋಸ್ಟರ್ ಲಾಂಚ್.
ಚಂದನವನಕ್ಕೆ ಮತ್ತೊಂದು ಯುವ ಪ್ರತಿಭೆಗಳ ಬಳಗ ಪ್ರೀತಿಯ ಬಲೆಯನ್ನ ಬೀಸಕ್ಕೆ ಸಿದ್ಧವಾಗಿದೆ. ಪ್ರೀತಿ ಪ್ರೇಮದ ಕಥಾನಕ ಮೂಲಕ ಪ್ರೇಕ್ಷಕರ ಪ್ರೀತಿಯನ್ನು ಪಡೆಯುತ್ತೇವೆ ಎನ್ನುತ್ತಾ “ಲವ್ 2 ಲಸ್ಸಿ” ಎಂಬ ಚಿತ್ರದ ಪೋಸ್ಟರ್ ಲಾಂಛನ ಬಿಡುಗಡೆ ಮಾಡುವ ಮೂಲಕ ರೇಣುಕಾಂಬ ಸ್ಟುಡಿಯೋದಲ್ಲಿ ಪತ್ರಿಕಾಗೋಷ್ಠಿಯನ್ನು ಆಯೋಜಿಸಿತ್ತು , ಇದಕ್ಕೂ ಮೊದಲು ಪರದೆಯ ಮೇಲೆ ಹ್ಯಾಟ್ರಿಕ್ ಹೀರೋ
ಶಿವರಾಜಕುಮಾರ್ ದಂಪತಿಗಳ ಕೈಯಲ್ಲಿ ಪೋಸ್ಟರ್ ಲಾಂಚ್ ಹಾಗೂ ನಟ , ನಿರ್ದೇಶಕ ರಾಜ್.ಬಿ. ಶೆಟ್ಟಿ ಅವರಿಂದ ಮೆಚ್ಚುಗೆಯನ್ನ ಪಡೆದು ಶುಭಹಾರೈಸಿಕೊಂಡ ದೃಶ್ಯವನ್ನು ತೋರಿಸಲಾಯಿತು.
ಈ ಚಿತ್ರದ ಕುರಿತು ನಿರ್ದೇಶಕ ಹರಿ ಪ್ರಾಣ ಮಾತನಾಡುತ್ತ ನಾನು ಮಾಧ್ಯಮದಲ್ಲಿ ಕೆಲಸ ಮಾಡ್ತಿದ್ದೆ. ರಂಗಭೂಮಿಯ ಜೊತೆಗೆ ಬರವಣಿಗೆ ನನ್ನ ಮೂಲ ಅಸ್ತ್ರವಾಗಿಸಿಕೊಂಡೆ. ಇದು ನನ್ನ ಎರಡನೇ ಚಿತ್ರ. ಇದೊಂದು ನೈಜ ಘಟನೆಗಳ ಆಧಾರಿತ ಚಿತ್ರವಾಗಿದ್ದು, ಬಂಟ್ವಾಳ ಹಾಗೂ ಬೆಂಗಳೂರು ನಡುವೆ ನಡೆದ ಪ್ರೇಮ ಘಟನೆಯ ಆಧಾರಿತ ಚಿತ್ರವಾಗಿದೆ. 2006ರಲ್ಲಿ ನಡೆದ ಈ ಘಟನೆಯ ಮೂಲ ವ್ಯಕ್ತಿಗಳಿಂದ ಅನುಮತಿಯನ್ನು ಕೂಡ ಪಡೆದುಕೊಂಡಿದ್ದೇನೆ. ಈಗಾಗಲೇ ಚಿತ್ರ ಪೂರ್ಣಗೊಂಡಿದ್ದು , ಒಂದು ಹಾಡು ಮಾತ್ರ ಬಾಕಿ ಇದೆ. ಈ ಚಿತ್ರಕ್ಕೆ ಹಾಡುಗಳನ್ನು ನಾನೇ ಬರೆದಿದ್ದು , 18 ಶಾಯಿರಿ ಇರುವುದು ಈ ಚಿತ್ರದ ವಿಶೇಷ. ನನ್ನ ಚಿತ್ರಕ್ಕೆ ಹೊಸ ಪ್ರತಿಭೆಗಳೇ ಬೇಕಿತ್ತು, ಹಾಗಾಗಿ ಅವರನ್ನೇ ಇಟ್ಟುಕೊಂಡು ಸಿನಿಮಾ ಮಾಡಿದ್ದೇನೆ. ನನ್ನ ಈ ಕತೆಗೆ ನಟಿಯ ಮೂಲಕ ನಿರ್ಮಾಪಕರು ಸಿಕ್ಕಿದರು , ಅವರು ನಮಗೆ ಏನು ಬೇಕೋ ಅದನ್ನು ಒದಗಿಸಿದ್ದಾರೆ. ಚಿತ್ರೀಕರಣ ಸಮಯದಲ್ಲಿ ನಡೆದ ಒಂದಷ್ಟು ಘಟನೆಗಳನ್ನ ನೇಮಿಸಿಕೊಳ್ಳುತ್ತ , ಸಿನಿಮಾ ಬಹಳ ಸೊಗಸಾಗಿ , ಪೋಸ್ಟ್ ಪ್ರೊಡಕ್ಷನ್ ಕೆಲಸವು ನಡೆಯುತ್ತಿದ್ದು ಅತಿ ಶೀಘ್ರದಲ್ಲಿ ತೆರೆಯ ಮೇಲೆ ಬರುತ್ತೇವೆ ನಿಮ್ಮೆಲ್ಲರ ಪ್ರೀತಿ ಸಹಕಾರ ಇರಲಿ ಎಂದು ಕೇಳಿಕೊಂಡರು.
ಇನ್ನು ಈ ಚಿತ್ರದ ನಿರ್ಮಾಪಕಿ ಭಾರತಿ ಶ್ರೀನಿವಾಸರಾಜು ಮಾತನಾಡುತ್ತಾ ನಾನು ಹೌಸ್ ವೈಫ್ ಈ ಹುಡುಗರು ಹೇಳಿದ ಕಥೆ ಇಷ್ಟವಾಯಿತು , ಹಾಗಾಗಿ ಸಿನಿಮಾ ಮಾಡಿದ್ದೇನೆ. ನನಗೆ ಹೆಚ್ಚು ಮಾತನಾಡಲು ಬರುವುದಿಲ್ಲ, ನಾನು ಕೂಡಿಟ್ಟ ಹಣದೊಂದಿಗೆ ಈ ಸಿನಿಮಾ ಮಾಡಿದ್ದೇನೆ ನಿಮ್ಮೆಲ್ಲರ ಸಹಕಾರ ನಮ್ಮ ಚಿತ್ರತಂಡದ ಮೇಲೆ ಇರಲಿ ಎಂದರು.
ಈ ಚಿತ್ರದ ನಟ ಆರ್ಯನ್ ಮಾತನಾಡತ ಮಾತನಾಡುತ್ತಾ ನನ್ನ ತಮ್ಮನ ಮೂಲಕ ಈ ಚಿತ್ರದ ನಿರ್ದೇಶಕರು ಪರಿಚಯವಾದರು. ಅವರು ಹೇಳಿದ ಕಥೆ ನನಗೆ ಬಹಳ ಇಷ್ಟವಾಯಿತು. ನಾನು ಅಶ್ವವೇಗ ನ್ಯೂಸ್ ಚಾನೆಲ್ ನಲ್ಲಿ ಕೆಲಸ ಮಾಡುತ್ತಾ ಬಂದೆ. 11ವರ್ಷದ ಇಂಡಸ್ಟ್ರಿ ಅನುಭವವಿದೆ. ಸಿನಿಮಾ ಬಗ್ಗೆ ಆಸಕ್ತಿ ಇದ್ದಿದ್ರಿಂದ ಸಣ್ಣ ಪುಟ್ಟ ಪಾತ್ರಗಳನ್ನು ಕೂಡ ಮಾಡುತ್ತಿದ್ದೆ. ತದನಂತರ
ಲೂಡೋ , ಗ್ರೂಫಿ ಚಿತ್ರದಲ್ಲಿ ಪ್ರಮುಖ ಪಾತ್ರ ಅಭಿನಯಿಸಿದೆ. ಇದು ನನ್ನ ಅಭಿನಯದ ಮೂರನೇ ಚಿತ್ರ. ಈ ಪ್ರೀತಿಯ ಕಥೆಯನ್ನ ನಿರ್ದೇಶಕರು ಬಹಳ ಸೊಗಸಾಗಿ ಚಿತ್ರಕರಿಸಿದ್ದಾರೆ. ನನ್ನ ಪಾತ್ರವೂ ಕೂಡ ಬಹಳ ಸೊಗಸಾಗಿದೆ. ಅದರಲ್ಲೂ ತಂದೆ ಮಗನ ಸೆಂಟಿಮೆಂಟ್ ದೃಶ್ಯ ನನಗೆ ಬಹಳ ಅಚ್ಚುಮೆಚ್ಚು. ಇದರಲ್ಲಿ ನಾನು ಕೃಷಿಕನಾಗಿಯೂ ಕಾಣಿಸಿಕೊಂಡಿದ್ದೇನೆ. ಪ್ರೀತಿಯ ಸೆಳೆತದ ಜೊತೆ ಬಾಂಧವ್ಯದ ಕಥೆ ಇರುವ ಈ ಚಿತ್ರ ಎಲ್ಲರನ್ನ ಸೆಳೆಯುತ್ತದೆ. ನನಗೆ ನಮ್ಮ ಮಾಧ್ಯಮದವರ ಸಹಕಾರ , ಬೆಂಬಲ ಇರಲಿ. ನನಗೆ ಶುಭ ಹಾರೈಸಲು ನನ್ನ ಮುಂದಿನ ಚಿತ್ರದ ನಿರ್ಮಾಪಕರು ಬಂದಿದ್ದಾರೆ. ಹಾಗೂ ನನ್ನ ಗೆಳೆಯರು ಆತ್ಮೀಯರು ಇದ್ದಾರೆ, ಈ ನಮ್ಮ ಚಿತ್ರತಂಡವನ್ನು ಹರಿಸಿ ಬೆಳೆಸಿ ಎಂದು ಕೇಳಿಕೊಂಡರು.
ಇನ್ನೂ ನಾಯಕಿ ಜೀವಿತ ಪ್ರಭಾಕರ್ ಮಾತನಾಡುತ್ತಾ ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಲಸ್ಸಿ , ನನ್ನ ಸುತ್ತ ಇಡೀ ಚಿತ್ರದ ಕಥೆ ಸಾಗುತ್ತದೆ. ನಿರ್ದೇಶಕರು ನನ್ನನ್ನು ಬಹಳಷ್ಟು ಅಳಿಸಿದ್ದಾರೆ. ಚಿತ್ರ ಬಹಳ ಸೊಗಸಾಗಿ ಬಂದಿದೆ. ನಿಮ್ಮ ಸಹಕಾರ , ಬೆಂಬಲ ನಮ್ಮ ತಂಡಕ್ಕೆ ಇರಲಿ ಎಂದರು.
ಸಂಗೀತ ನಿರ್ದೇಶಕ ವಿನು ಮನಸ್ಸು ಮಾತನಾಡುತ್ತಾ ಇಡೀ ತಂಡ ಬಹಳ ಸೊಗಸಾಗಿ ಕೆಲಸ ಮಾಡಿದೆ. ಚಿತ್ರ ಚೆನ್ನಾಗಿ ಬಂದಿದೆ. ಒಟ್ಟು ಐದು ಹಾಡುಗಳು ಇದೆ. ನಿರ್ದೇಶಕರೇ ಸಾಹಿತ್ಯ ಬರೆದಿದ್ದು , 18 ಶಾಯಿರಿಗಳಿಗೆ ಅಗತ್ಯ ಇದ್ದ ಕಡೆ ಸಂಗೀತ ನೀಡಿದ್ದೇನೆ. ರೀ ರೆಕಾರ್ಡಿಂಗ್ ಉತ್ತಮವಾಗಿ ಬರ್ತಿದೆ. ನಿಮ್ಮ ಸಹಕಾರ ಇರಲಿ ಎಂದರು. ಈ ಚಿತ್ರಕ್ಕೆ ನರೇಂದ್ರ ಬಿಂದು ಛಾಯಾಗ್ರಹಣ, ಶಂಕರ್ ಮೇಕಪ್ , ಧೋನಿ ಎಡಿಟಿಂಗ್ , ಗೋಕುಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ನಾಯಕಿಯ ತಾಯಿ ಗೀತಮ್ಮ ಸಪೋರ್ಟ್ ಮಾಡಿದ್ದಾರಂತೆ. ಒಟ್ಟಾರೆ ಒಂದು ವಿಭಿನ್ನ ಪ್ರಯತ್ನವಾಗಿ ಸಿದ್ಧವಾಗುತ್ತಿರುವ ಈ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.