“ಲವ್ ಮ್ಯಾಟ್ರು” ಚಿತ್ರ ಬಿಡುಗಡೆಗೆ ಸಿದ್ದ
ಚಂದನವನದಲ್ಲಿ ಬಹಳಷ್ಟು ಪ್ರೀತಿ , ಪ್ರೇಮ , ಪ್ರಣಯದ ಚಿತ್ರಗಳು ಪ್ರೇಕ್ಷಕರ ಮನಸ್ಸನ್ನು ಗೆದ್ದಿವೆ. ಆ ನಿಟ್ಟಿನಲ್ಲಿ ಯುವ ಪ್ರತಿಭೆಗಳ ತಂಡ ಸೇರಿಕೊಂಡು ಮಧುರವಾದ ಪ್ರೇಮ ಕಥೆಯನ್ನ ತೆರೆಯ ಮೇಲೆ ತೋರಿಸಲು ಸಿದ್ದರಾಗಿದ್ದಾರೆ.
ಪ್ರೇಮಿಗಳ ಕಥೆಯಲ್ಲಿ ಸುಂದರವಾದ ಹಾಡುಗಳು ಕೂಡ ಮಿಂಚಲಿದೆಯಂತೆ. ಸಾಮಾನ್ಯವಾಗಿ ಲವ್ ಸಬ್ಜೆಕ್ಟ್ ಒಳಗೊಂಡಿರುವಂತಹ ಚಿತ್ರಗಳು ಬಹಳ ಬೇಗ ಸೆಳೆಯುತ್ತದೆ. ಇಷ್ಟೆಲ್ಲ ಹೇಳೋದಕ್ಕೆ ಕಾರಣ “ಲವ್ ಮ್ಯಾಟ್ರು” ಸಿನಿಮಾ ತನ್ನ ಎಲ್ಲಾ ಕೆಲಸಗಳನ್ನು ಮುಗಿಸಿಕೊಂಡು ಜನರ ಮುಂದೆ ಬರಲು ಸಿದ್ಧವಾಗಿದೆ.
ಈ ಚಿತ್ರದ ಹೆಸರೇ ಹೇಳುವಂತೆ ಇದೊಂದು ಲವ್ ಕಂಟೆಂಟ್ ಇರುವ ಸಿನಿಮಾ ಆಗಿದ್ದು, ಲವ್ ಮ್ಯಾಟ್ರು ಸಿನಿಮಾದಲ್ಲಿ ಬೇಜಾನ್ ಲವ್ ಮ್ಯಾಟ್ರು ಇದೆ ಅಂತಿದೆ ಚಿತ್ರತಂಡ. ಈಗಾಗಲೇ ಈ ಚಿತ್ರದ ಹಾಡುಗಳು ಬಿಡುಗಡೆಗೊಂಡಿದ್ದು ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆಯಂತೆ. ಅದರಲ್ಲೂ ಲವ್ ಮಾಡೋರಿಗೆ ಮನಸ್ಸು ತೇಲುವಂತೆ ಮಾಡುತ್ತಿರುವ ‘ ಏನೋ ಗೊತ್ತಿಲ್ಲ’ … ಎಂಬ ಹಾಡು ಬಾರಿ ವೈರಲ್ ಆಗಿದ್ದು , ಈ ಹಾಡಿಗೆ ನಟ ವಿರಾಟ ಬಿಲ್ವ ಹಾಗೂ ಸೋನಲ್ ಹೆಜ್ಜೆ ಹಾಕಿದ್ದಾರೆ. ಈ ಹಾಡಿನಲ್ಲಿ ಸೊನಲ್ ಅಂತು ತುಂಬಾ ಕ್ಯೂಟ್ ಆಗಿ ಕಾಣಿಸ್ತಾ ಇದ್ದಾರೆ. ಶೇಡ್ರಾಕ್ ಸೋಲೋಮನ್ ಸಂಗೀತದಲ್ಲಿ ಹಾಡುಗಳು ಅದ್ಭುತವಾಗಿ ಮೂಡಿ ಬಂದಿದೆ.
ಈ ಸಿನಿಮಾಗೆ ವಿರಾಟ ಬಿಲ್ವ ನಟನೆಯ ಜೊತೆ ನಿರ್ದೇಶನ ಕೂಡ ಮಾಡಿದ್ದಾರೆ. ಚಿತ್ರ ನಿರ್ದೇಶನ ಮಾಡಲು ಸುಕ್ಕಾ ಸೂರಿ, ಪ್ರಶಾಂತ್ ನೀಲ್, ಕೆ .ಎಂ. ಚೈತನ್ಯ ಅವರ ಸಿನಿಮಾಗಳೇ ಇವರಿಗೆ ಸ್ಪೂರ್ತಿಯಂತೆ. ಈ ಹಿಂದೆ ಕಡ್ಡಿಪುಡಿ ಚಿತ್ರದಲ್ಲೂ ನಟನೆ ಮಾಡಿದ್ದು, ಬಳಿಕ ಈ ಸಿನಿಮಾ ಮೂಲಕ ನಟನೆ ಹಾಗೂ ನಿರ್ದೇಶನ ಎರಡ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ವಂದನ ಪ್ರಿಯ. ವಿ ರವರ ಸಿಲ್ವರಿಥಮ್ PRODUCTION ಮತ್ತು INK ಸಿನಿಮಾಸ್ ಸಂಸ್ಥೆ ನಿರ್ಮಾಣ ಮಾಡಿರುವ “ಲವ್ ಮ್ಯಾಟ್ರೂ” ಎಲ್ಲರ ಶ್ರಮದಿಂದ ರಿಲೀಸ್ ಗೆ ರೆಡಿಯಾಗಿದೆ. ಸೋನಲ್, ಸುಶ್ಮಿತಾ ಗೋಪಿನಾಥ್, ಅಚ್ಯುತ್ಕುಮಾರ್, ಸುಮನ್ ರಣಗನಾಥ್, ಅನಿತಾ ಭಟ್ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.
ಶೇಡ್ರಾಕ್ ಸೋಲೋಮನ್ ಸಂಗೀತ, ದೇವೇಂದ್ರ ಆರ್ ನಾಯ್ಡು ಮತ್ತು ಪರಮೇಶ್. ಸಿ. ಎಂ ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನವಿದೆ. ಎಲ್ಲಾ ಅಂದುಕೊಂಡಂತೆ ರೆಡಿಯಾಗಿದ್ದು, ಇನ್ನು ತಂಡ ಮತ್ತಷ್ಟು ಮಾಹಿತಿಯನ್ನು ನೀಡುವುದರ ಜೊತೆಗೆ ಅತಿ ಶೀಘ್ರದಲ್ಲಿ ಬೆಳ್ಳಿ ಪರದೆ ಮೇಲೆ ಚಿತ್ರ ಬರಲಿದೆಯಂತೆ.