Cini NewsSandalwood

ಟ್ರೆಂಡಿಂಗ್‌‌ನಲ್ಲಿ “ಕೋಟಿ”ಯ ‘ಮಾತು ಸೋತು’ ಹಾಡು.

Spread the love

ಕೋಟಿ ಸಿನಿಮಾದ ‘ಮಾತು ಸೋತು’ ಹಾಡು ರೀಲ್ಸ್‌ಗಳಲ್ಲಿ ಟ್ರೆಂಡಿಂಗ್ ಆಗ್ತಾ ಇದೆ. ಈಗಾಗಲೇ ಸಾವಿರಾರು ರೀಲ್ಸ್ ಆಗಿದ್ದು, ಈ ರೀಲ್ಸ್‌ಗಳು ಮಿಲಿಯನ್‌ಗಟ್ಟಲೆ ವೀಕ್ಷಣೆ ಪಡೆದಿವೆ.‌ಇನ್ಸ್ಟಾಗ್ರಾಮ್‌ನಲ್ಲಿ ಕಳೆದ ಒಂದು ವಾರದಿಂದ ‘ಟ್ರೆಂಡಿಂಗ್’ನಲ್ಲಿರುವ ಈ ಹಾಡನ್ನು ವಾಸುಕಿ ವೈಭವ್ ಸಂಯೋಜಿಸಿ, ಯೋಗರಾಜ್ ಭಟ್ ಬರೆದು, ಅರ್ಮಾನ್ ಮಲಿಕ್ ಹಾಡಿದ್ದಾರೆ‌.‌ ಈಗಾಗಲೇ ಈ ಹಾಡಿನ ಲಿರಿಕಲ್ ವಿಡಿಯೋ ಯೂಟ್ಯೂಬಿನಲ್ಲಿ ಹದಿನಾಲ್ಕು ಲಕ್ಷದಷ್ಟು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಯೂಟ್ಯೂಬ್ ಶಾರ್ಟ್ಸಲ್ಲೂ ಟ್ರೆಂಡಿಂಗ್ ಆಗ್ತಾ ಇದೆ.

ಈ ಹಾಡಿನ ಸಂಯೋಜಕರಾದ ವಾಸುಕಿ ವೈಭವ್ “ಮಾತು ಸೋತು ಟ್ರೆಂಡ್ ಆಗ್ತಿರೋದು ಖುಷಿ ನೀಡಿದೆ.‌ ಇದು ಇನ್ನೂ ಪಿಕ್ ಆಗೋ ಭರವಸೆ ಇದೆ. ಇಷ್ಟಪಟ್ಟು ಮಾಡಿದ ಹಾಡುಗಳು ಹೀಗೆ ಜನರನ್ನು ತಲುಪಿದಾಗ ಆಗೋ ಖುಷಿ ವಿಶೇಷವಾದದ್ದು” ಎಂದರು.

ಕೋಟಿ ಸಿನಿಮಾದ ನಿರ್ದೇಶಕರಾದ ಪರಮ್ ಅವರು “ನನ್ನ ಮೊದಲ ಸಿನಿಮಾದ ಮೊದಲ ಹಾಡು ಈ ಮಟ್ಟಿಗಿನ ಸದ್ದು ಮಾಡುತ್ತಿರುವುದ ನೋಡಿ ಖುಷಿ ಆಗಿದೆ. ದಿನಾಲೂ ಸಾವಿರಾರು ರೀಲ್ಸ್‌ಗಳು ಅಪ್ಲೋಡ್ ಆಗುತ್ತಿದ್ದು, ಟ್ರೆಂಡಿಂಗ್ ಹೀಗೆ ಮುಂದುವರಿಯುವ ಭರವಸೆ ಇದೆ” ಎಂದರು.

ಈ ಹಾಡಿನ ಸಾಹಿತ್ಯ ರಚಿಸಿರುವ ಯೋಗರಾಜ್ ಭಟ್ “ಕನ್ನಡದ ಜನತೆಗಾಗಿ ಯಾರೇ ಕಷ್ಟಪಟ್ಟರೂ ನಾಡಿನ ಜನತೆ ಅವರ ಕೆಲಸವನ್ನು ಗೆಲ್ಲಿಸುತ್ತಾರೆ” ಎಂದು ಅಭಿಪ್ರಾಯಪಟ್ಟರು.

ಕೋಟಿ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್‌ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್‌ ಸತ್ಯ ಜತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.

ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್‌ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್‌ ಭಟ್‌ ಮತ್ತು ವಾಸುಕಿ ವೈಭವ್‌ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು 777 ಚಾರ್ಲಿ ಖ್ಯಾತಿಯ ನೊಬಿನ್‌ ಪೌಲ್‌ ಹೊತ್ತಿದ್ದಾರೆ. ಕಾಂತಾರ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್‌ ಶೆಟ್ಟಿ ಕೋಟಿಯ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಈ ಸಿನಿಮಾದ ಕ್ಯಾಮರಮನ್.

ಈ ಸಿನಿಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್‌ ಅವರು ಬರೆದು ನಿರ್ದೇಶಿಸಿದ್ದಾರೆ. ʼಕೋಟಿʼ ಜೂನ್‌ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Visited 1 times, 1 visit(s) today
error: Content is protected !!