ಬ್ರಹ್ಮಗೊಂಬೆ ಹಿಂದಿರುವ ಬಲಿಯ ಕಥೆ “ಕೋಣ” (ಚಿತ್ರವಿಮರ್ಶೆ -ರೇಟಿಂಗ್ : 3.5 /5)
ರೇಟಿಂಗ್ : 3.5 /5
ಚಿತ್ರ : ಕೋಣ
ನಿರ್ದೇಶಕ : ಹರಿಕೃಷ್ಣ . ಎಸ್
ನಿರ್ಮಾಪಕಿ :ತನಿಷಾ ಕುಪ್ಪಂಡ
ಸಂಗೀತ : ಶಶಾಂಕ್ ಶೇಷಗಿರಿ
ಛಾಯಾಗ್ರಹಣ : ವೀನಸ್ ನಾಗರಾಜ್ ಮೂರ್ತಿ
ತಾರಾಗಣ : ಕೋಮಲ್ ಕುಮಾರ್ , ತನಿಷಾ ಕುಪ್ಪಂಡ , ಕೀರ್ತಿರಾಜ್, ರಿತ್ವಿ ಜಗದೀಶ್, ರಾಘು ರಾಮನಕೊಪ್ಪ , ವಿಜಯ್ ಚೆಂಡೂರ್, ರಂಜಿತ್ ಗೌಡ, ತುಕಾಲಿ ಸಂತೋಷ್, ಶಿಶಿರ್ , ಸುಷ್ಮಿತ, ಜಗಪ್ಪ, ಮಂಜು ಪಾವಗಡ , ನಮ್ರತಾ ಗೌಡ ಹಾಗೂ ಮುಂತಾದವರು…
ಯುಗ ಯುಗಗಳಿಂದಲೂ ನಂಬಿಕೆ , ಆಚಾರ , ಪದ್ಧತಿ , ದೈವ , ದೆವ್ವದ ಬಗ್ಗೆ ಕೇಳಿದ್ದೇವೆ, ಹಾಗೆಯೇ ಕೆಲವೊಂದು ಘಟನೆಗಳು ನಡೆದಿದೆ ಎಂಬ ಮಾಹಿತಿ ಕೂಡ ತಿಳಿದಿದ್ದೇವೆ. ಅಂತದ್ದೇ ಒಂದು ರಾಜರ ಆಳ್ವಿಕೆಯಲ್ಲಿ ಪ್ರಾಣಿ , ಜನರನ್ನ ಬಲಿ ಪಡೆಯುತ್ತಿದ್ದ ಬ್ರಹ್ಮಗೊಂಬೆ ಯನ್ನು ದಿಗ್ಬಂಧನದ ಮೂಲಕ ಬಂಧಿಸಿ ಬೇರೆ ಪ್ರಾಂತ್ಯಕ್ಕೆ ರವಾನಿಸಿದರೂ , ಕಾಲಾನುಕಾಲ ಕಳೆದು ಗ್ರಾಮವೊಂದಕ್ಕೆ ಕಂಟಕ ಎದುರಾಗಿ ಊರ್ ಹಬ್ಬಕ್ಕೆ ಕೋಣ ಕಡಿಯುವ ನಿರ್ಧಾರಕ್ಕೆ ಎದುರಾಗುವ ಒಂದಷ್ಟು ತಿರುವಿನ ಸುತ್ತ ಕುತೂಹಲಕಾರಿ ಅಂಶಗಳೊಂದಿಗೆ ತೆರೆಯ ಮೇಲೆ ಬಂದಿರುವಂತಹ ಚಿತ್ರ “ಕೋಣ”.
ಇನ್ನು ತಾನಾಯಿತು ತನ್ನ ಜೋಗಿ ರೋಬೋ ಹೇಳುವ ಜ್ಯೋತಿಷ್ಯ ಆಯ್ತು ಎನ್ನುವ ನಾರಾಯಣ (ಕೋಮಲ್) , ತನ್ನ ಮಡದಿ ಲಕ್ಷ್ಮಿ (ತನಿಷಾ ಕುಪ್ಪಂಡ) ಜೊತೆ ಮಾತೆ ಜೀವನ ವಾಗಿರತ್ತೆ. ಮತ್ತೊಂದೆಡೆ ಒಂದು ಸುಂದರ ಊರಿನ ಮುಖಂಡ ಕೃಷ್ಣಪ್ಪ ಜನರ ಸಮ್ಮುಖದಲ್ಲಿ ಮಾತನಾಡುತ್ತಾ (ಕೀರ್ತಿರಾಜ್) ನಮ್ಮ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಂತಹ ಪದ್ಧತಿ , ಆಚಾರವನ್ನು ಈಗಲೂ ನಡೆಯಬೇಕು ಅದರಲ್ಲೂ ಕೋಣ ಬಲಿಯಿಂದಲೇ ಊರು ಸುಭಿಕ್ಷವಾಗಿರಲು ಸಾಧ್ಯ , ಜನರು ನೆಮ್ಮದಿಯಿಂದ ಬದುಕಬಹುದು ಎಂದು ಊರಿನಲ್ಲಿ ಜಾತ್ರೆ ಮಾಡಲು ನಿರ್ಧರಿಸುತ್ತಾನೆ.
ಆದರೆ ಕಳೆದ ವರ್ಷ ಪೊಲೀಸ್ ಮಧ್ಯಪ್ರವೇಶದಿಂದ ಪ್ರಾಣಿ ಬಳಿ ನಡೆಯದೆ ಊರಬ್ಬ ನಿಂತಿರುತ್ತದೆ. ಈ ಬಾರಿ ಕೃಷ್ಣಪ್ಪ ಹೇಗಾದರೂ ಕೋಣ ಬಲಿ ಕೊಟ್ಟು ಊರು ಜಾತ್ರೆ ಅದ್ದೂರಿಯಾಗಿ ಮಾಡಬೇಕೆಂದು ತನ್ನ ಮಕ್ಕಳಿಗೆ ಜವಾಬ್ದಾರಿ ವೈಸಿರುತ್ತಾನೆ. ಪ್ರತಿ ವರ್ಷದಂತೆ ಈ ವರ್ಷವೂ ಊರಿನಲ್ಲಿ ನಾಟಕ ಮಾಡಿಸಲು ತಂಡವನ್ನ ಕರೆಸಲು ನಿರ್ಧರಿಸುತ್ತಾರೆ. ಅದರಂತೆ ನಾಟಕ ಮಂಡಳಿಯ ಸದಸ್ಯರು ಒಂದು ಬಸ್ಸಿನಲ್ಲಿ ಊರಿಗೆ ಬರುವ ಹಾದಿಯಲ್ಲಿ ಅಲೆಮಾರಿ ನಾರಾಯಣ ಆಕಸ್ಮಿಕವಾಗಿ ಸಿಕ್ಕಿ ಈ ತಂಡವನ್ನು ಸೇರುತ್ತಾನೆ.
ಒಮ್ಮೆ ಕಂಕಣ ಕಟ್ಟಿ ಊರಿನ ಒಳಗೆ ಬಂದವರು ಜಾತ್ರೆ ಮುಗಿದ ನಂತರವೇ ಹೋಗಬೇಕು ಇಲ್ಲದಿದ್ದರೆ ಸಮಸ್ಯೆ ತಪ್ಪಿದ್ದಿಲ್ಲ ಎಂಬ ನಂಬಿಕೆ ಜನರದ್ದು, ಇದರ ನಡುವೆ ನಾಟಕ ತಯಾರಿ , ನಾರಾಯಣನ ಹಿನ್ನೆಲೆಯ ಜೀವನ , ಊರ ಜನರಿಗಿರುವ ಭಯ , ಹಬ್ಬ ನಡೆಸುವ ಮುಖಂಡನ ನಿರ್ಧಾರದ ನಡುವೆಯೇ ಒಂದೊಂದೆ ಅವಗಡಗಳು ನಡೆಯುತ್ತಾ ಹೋಗುತ್ತದೆ.
ಪಕ್ಷಿ , ಪ್ರಾಣಿ , ಮನುಷ್ಯರ ಸಾವಿಗೆ ಅಗೋಚರ ಸದ್ದು ಎಲ್ಲರಲ್ಲೂ ಆತಂಕ ಮಾಡಿಸುತ್ತದೆ. ಇದರ ನಡುವೆ ಕೋಣ ನಾಪತ್ತೆಯಾಗಿ ಊರ ಜನರಿಗೆ ಗೊಂದಲ ಮೂಡುತ್ತದೆ. ಮುಂದೆ ಯಾರೆಲ್ಲಾ ಬಲಿ ಆಗುತ್ತಾರೆ ಎನ್ನುವುದರ ನಡುವೆ , ಮತ್ತೊಂದು ಜನ್ಮಾಂತರದ ತಿರುವು ಗೋಚರಗೊಳ್ಳುತ್ತದೆ. ಅದು ಏನು… ಹೇಗೆ… ಯಾರಿಂದ… ಬ್ರಹ್ಮಗೊಂಬೆಯ ಶಕ್ತಿ… ಕೋಣ ಬಲಿ ನಡೆಯುತ್ತಾ… ನಾರಾಯಣ ಹೇಳುವ ಸತ್ಯ ಏನು ಎಂಬುದರ ಕುತೂಹಲಕಾರಿ ಅಂಶ ತಿಳಿಯಬೇಕಾದರೆ ಒಮ್ಮೆ ಈ ಚಿತ್ರವನ್ನು ನೋಡಬೇಕು.
ನಟ ಕೋಮಲ್ ಕುಮಾರ್ ವಿಭಿನ್ನ ಪಾತ್ರದ ಮೂಲಕ ಗಮನ ಸೆಳೆಯುತ್ತಾರೆ. ಮುಗ್ಧನಾಗಿ ನೋವಿನಲ್ಲೂ ರೋಬೋ ಜ್ಯೋತಿಷ್ಯವೇ ತನ್ನ ಬದುಕು ಎನ್ನುವಂತೆ ಕಾಣುವ ನಾರಾಯಣ ಹಿನ್ನಲೆಯ ಅಗೋಚರ ಪವಾಡ ಏರಿಳಿತದ ಮುಖಾಂತರ ಮುಖ ಭಾವನೆ , ಕಣ್ಣೋಟ ರೋಮಾಂಚನವಾಗಿದೆ.
ಇನ್ನು ಪ್ರೀತಿಯ ಮಡದಿಯ ಪಾತ್ರಕ್ಕೆ ನ್ಯಾಯವನ್ನು ಒದಗಿಸಿರುವ ನಟಿ ತನಿಷಾ ಕುಪ್ಪಂಡ , ಚಿತ್ರ ನಿರ್ಮಾಣದ ಮೂಲಕ ಚಿತ್ರೋದ್ಯಮದಲ್ಲಿ ಮತ್ತೊಂದು ದಿಟ್ಟ ಹೆಜ್ಜೆ ಮುಂದೆ ಇಟ್ಟಿದ್ದಾರೆ. ಇನ್ನು ಹಿರಿಯ ನಟ ಕೀರ್ತಿರಾಜ್ ಊರ ಮುಖಂಡನಾಗಿ ಗಮನ ಸೆಳೆದಿದ್ದು , ನಾಟಕದ ಮೇಷ್ಟ್ರು ಪಾತ್ರದಲ್ಲಿ ರಾಘು ರಾಮನಕೊಪ್ಪ ಪಾತ್ರಕ್ಕೆ ಜೀವ ತುಂಬಿದ್ದಾರೆ. ವಿಜಯ್ ಚೆಂಡೂರ್, ಎಂ.ಕೆ.ಮಠ್ ತಮ್ಮ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಉಳಿದಂತೆ ಅಭಿನಯಿಸಿರುವ ರಿತ್ವಿ ಜಗದೀಶ್, ರಂಜಿತ್ ಗೌಡ, ತುಕಾಲಿ ಸಂತೋಷ್, ಹುಲಿ ಕಾರ್ತಿಕ್, ನಿರಂಜನ್, ಅನಂತ್, ಶಿಶಿರ್ ಶಾಸ್ತ್ರಿ, ಗೋಲ್ಡ್ ಸುರೇಶ್, ಸುಷ್ಮಿತ, ಜಗಪ್ಪ, ಮಂಜು ಪಾವಗಡ, ಕುರಿ ಸುನಿಲ್, ನಮ್ರತಾ ಗೌಡ, ವಿನಯ್ ಗೌಡ, ಮೋಹನ್ ಕೃಷ್ಣರಾಜ್ ಹೀಗೆ ಎಲ್ಲಾ ಪಾತ್ರಗಳು ಸರದಿ ಪ್ರಕಾರ ಬಂದು ಹೋದಂತಿದೆ. ನಿರ್ದೇಶಕ ಹರಿಕೃಷ್ಣ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಕುತೂಹಲಕಾರಿ ಆಗಿದ್ದು , ಆಚಾರ ವಿಚಾರ , ನಂಬಿಕೆ , ಸಂಪ್ರದಾಯ , ಪದ್ಧತಿಯ ಸುಳಿಯಲ್ಲಿ ಅಗೋಚರ ಶಕ್ತಿಯ ನಡುವೆ ಪ್ರಾಣಿ ಬಲಿ ಪದ್ಧತಿ ಬಗ್ಗೆ ಬೆಳಕು ಚೆಲ್ಲಿದು ಚೆಲ್ಲಿದ್ದು, ಚಿತ್ರಕಥೆಯಲ್ಲಿ ಇನ್ನಷ್ಟು ಹಿಡಿತ ಬೇಕಾಗಿತ್ತು ಅನ್ಸುತ್ತೆ , ನಾಟಕ ಮಂಡಳಿಯ ಪ್ರತಿಭೆಗಳ ಹಾಸ್ಯ ಸನ್ನಿವೇಶಗಳು ಅತಿರೇಖಾ ಎನಿಸುವಂತಿದೆ.
ಆದರೆ ಚಿತ್ರ ಆರಂಭ ಹಾಗೂ ಕ್ಲೈಮಾಕ್ಸ್ ಸನ್ನಿವೇಶ ಅದ್ಭುತವಾಗಿದೆ. ಇನ್ನು ಶಶಾಂಕ್ ಶೇಷಗಿರಿ ಸಂಗೀತ , ಹಿನ್ನೆಲೆ ಸಂಗೀತ ಉತ್ತಮವಾಗಿದೆ. ವೀನಸ್ ನಾಗರಾಜ್ ಮೂರ್ತಿ ಕ್ಯಾಮರಾ ಕೈಚಳಕ ಸೊಗಸಾಗಿದ್ದು , ಉಮೇಶ್ ಆರ್ಬಿ ಸಂಕಲನ , ವಿನೋದ್ ಕುಮಾರ್ ಸಾಹಸ , ಮುರುಗ ಮಾಸ್ಟರ್ ಸ್ಟೆಪ್ಸ್ , ಶಶಿಕುಮಾರ್ ಸಂಭಾಷಣೆ ಗಮನ ಸೆಳೆಯುತ್ತದೆ. ಒಟ್ಟಾರೆ ಸಸ್ಪೆನ್ಸ್ , ಥ್ರಿಲ್ಲರ್ , ಹಾರರ್ ಕಂಟೆಂಟ್ ಒಳಗೊಂಡಿರುವ ಈ ಕೋಣ ಚಿತ್ರ ಒಮ್ಮೆ ನೋಡುವಂತಿದೆ.
 
			 
							 
							