Cini NewsSandalwoodTV Serial

‘ಕೆಡಿ’ ಚಿತ್ರದಲ್ಲಿ ಬಾಲಿವುಡ್ ಬೆಡಗಿ ನೋರಾ ಫತೇಹಿ ಭರ್ಜರಿ ಕುಣಿತದ ಹಾಡು ಬಿಡುಗಡೆ.

Spread the love

ಜೋಗಿ ಪ್ರೇಮ್ ನಿರ್ದೇಶನದ ಹಾಗೂ ಆಕ್ಷನ್‌ಪ್ರಿನ್ಸ್ ದ್ರುವ ಸರ್ಜಾ ನಟನೆಯ ಪ್ಯಾನ್ ಇಂಡಿಯಾ ಚಿತ್ರ ಕೆಡಿ. ಈ ವರ್ಷದ ಬಹು ನಿರೀಕ್ಷಿತ ಕೆಡಿ ಸಿನಿಮಾದ ನಾಲ್ಕನೇ ಹಾಡು ಸರ‍್ಸೇ ಸರ‍್ಸೇ ನಿನ್ನ ಸೆರಗಾ ಸರಿಸೇ ಎಂಬ ಡಾನ್ಸ್ ನಂಬರ್ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಕಾರ್ಯಕ್ರಮ ಶನಿವಾರ ಎ.ಎಂ.ಬಿ. ಸಿನಿಮಾಸ್ ನಲ್ಲಿ ನಡೆಯಿತು. ವೇದಿಕೆ ಮೇಲೆ ಸರ್ಸೇ ಹಾಡಲ್ಲಿ ಹೆಜ್ಜೆ ಹಾಕಿದ ಬಾಲಿವುಡ್ ನಟಿ ನೋರಾ ಫತೇಹಿ, ನಿರ್ದೇಶಕ ಪ್ರೇಮ್, ದ್ರುವ ಸರ್ಜಾ, ರಕ್ಷಿತಾಪ್ರೇಮ್, ನಾಯಕಿ ರೀಶ್ಮಾ ನಾಣಯ್ಯ, ಕಾರ್ಯಕಾರಿ ನಿರ್ಮಾಪಕ ಸುಪ್ರೀತ್ , ಆನಂದ್ ಆಡಿಯೋ ಶಾಮ್ ಕೆವಿಎನ್ ಪ್ರೊಡಕ್ಷನ್ಸ್ ನ ಸುಪ್ರೀತ್ ಸೇರಿದಂತೆ ಹಲವು ಪ್ರಮುಖ ಉಪಸ್ಥಿತರಿದ್ದರು.


ನಾಯಕ ದ್ರುವ ಸರ್ಜಾ ಮಾತನಾಡಿ ನಮ್ಮ ಚಿತ್ರದ ೪ನೇ ಹಾಡಿದು, ಈಗಾಗಲೇ ಮೂರೂ ಹಾಡುಗಳೂ ಹಿಟ್ ಆಗಿವೆ. ಇದೂ ಆಗುತ್ತೆ, ಚಿತ್ರಕ್ಕೆ ಫೌಂಡೇಷನ್ ಆಗಿ ಕೆವಿಎನ್ ಸಂಸ್ಥೆ ನಿಂತಿರುವುದು ಅದಕ್ಕೆ ಕಾರಣ. ನಾಯಕಿ ಗಿಡ್ ಪರ್ಫಾರ್ಮರ್, ಅವರ ಅದ್ಭುತವಾದ ಡೈಲಾಗ್ ಡಿಲವರಿ ಚಿತ್ರದಲ್ಲಿದೆ. ರಕ್ಷಿತಾ ಮೇಡಂ ಅವರ ದೊಡ್ಡ ಸಪೋರ್ಟ್ ಚಿತ್ರಕ್ಕಿದೆ‌. ಇನ್ನು ಈ ಸಿನಿಮಾದ ಕ್ಯಾಪ್ಟನ್, ನಿಜವಾದ ಹೀರೋ ಅಂದ್ರೆ ಪ್ರೇಮ್. ಅರ್ಜುನ್ ಜನ್ಯ ಪ್ರೇಮ್ ಸೇರಿ ಇಷ್ಟು ದೊಡ್ಡ ಆಲ್ಬಂ ಆಗಿದೆ. ಚಿತ್ರಕ್ಕೆ ಲಂಡನ್‌ನಲ್ಲಿ ಲೈವ್ ಮ್ಯೂಸಿಕ್ ಮಾಡಿಸಿದ್ದಾರೆ, ಈಗ ಲೈವ್ ಮ್ಯೂಸಿಕ್ ತುಂಬಾ ಕಮ್ಮಿಯಾಗಿದೆ. ಆಲ್ಬಂ ಇಷ್ಟು ಚೆನ್ನಾಗಿ ಆಗಿದೆ ಎಂದರೆ ಅದಕ್ಕೆ ಜನ್ಯ ಅವರೇ ಕಾರಣ. ಇನ್ನು ನನ್ನ ಅದ್ದೂರಿ ಚಿತ್ರದಿಂದ ಈ ಚಿತ್ರದವರೆಗೆ ಎಲ್ಲ ಹಾಡುಗಳನ್ನು ಆನಂದ್ ಆಡಿಯೋದವರೇ ತೆಗೆದುಕೊಂಡು ಗೆಲ್ಲಿಸಿದ್ದಾರೆ. ಎಂದರು,


ನಿರ್ದೇಶಕ ಪ್ರೇಮ್ ಮಾತನಾಡುತ್ತ ಈಗಾಗಲೇ ಮೂರು ಹಾಡುಗಳನ್ನು ಹಿಟ್ ಮಾಡಿದ್ದೀರಿ, ನಾಲ್ಕನೇ ಸಾಂಗ್‌ನ್ನು ರಕ್ಷಿತಾ ಪ ಬಿಡುಗಡೆ ಮಾಡಿದ್ದಾರೆ. ಮೊದಲ ಗೀತೆಯನ್ನು ಸಹ ಅವರೇ ರಿಲೀಸ್ ಮಾಡಿದ್ದರು, ಉಳಿದಂತೆ ಸದ್ಯದಲ್ಲೇ ಟ್ರೈಲರ್ ರಿಲೀಸ್ ಪ್ಲಾನ್ ಮಾಡುತ್ತಿದ್ದೇವೆ. ಚಿತ್ರ ಇನ್ನೇನು ಏಪ್ರಿಲ್‌ನಲ್ಲಿ ತೆರೆಗೆ ಬರಲಿದೆ, ಕೆವಿಎನ್ ಟೀಮ್ ಪ್ಲಾನ್ ಪ್ರಕಾರ ಎಲ್ಲಾ ಕಡೆ ಪ್ರಮೋಷನ್ ಮಾಡಿ, ಫೈನಲಿ ಥೇಟರಿಗೆ ಬರುತ್ತೇವೆ ಎಂದರು, ಚಿತ್ರದ ನಾಯಕಿ ರೀಷ್ಮಾ ನಾಣಯ್ಯ ಮಾತನಾಡಿ ನೋರಾ ಫತೇಹಿ ಅವರು ಅದ್ಭುತವಾದ ಡ್ಯಾನ್ಸರ್, ಅವರಜತೆ ಕೆಲಸ ಮಾಡಿದ್ದು ತುಂಬಾ ಖುಷಿಯಾಗಿದೆ, ಈ ಚಿತ್ರದ ನಿಜವಾದ ಹೀರೋ ಎಂದರೆ ನಿರ್ದೇಶಕ ಪ್ರೇಮ್ ಎಂದರು. ರಕ್ಷಿತಾ ಪ್ರೇಮ್ ಮಾತನಾಡುತ್ತ ನಾನು ಚಿತ್ರರಂಗಕ್ಕೆ ಬಂದು ೨೪ ವರ್ಷ ಆಯ್ತು. ಕೆಡಿ ಚಿತ್ರದ ಬಗ್ಗೆ ಹೇಳಬೇಕೆಂದರೆ, ಸುಪ್ರೀತ್, ಅರ್ಜುನ್ ಜನ್ಯ, ಪ್ರೇಮ್ ಈ ಮೂವರ ಕಾಂಬಿನೇಷನ್ ಹಿಟ್ ಆಗ್ತಾನೇ ಬಂದಿದೆ. ಏಪ್ರಿಲ್ ೩೦ಕ್ಕೆ ಕೆಡಿ ರಿಲೀಸ್ ಆಗುತ್ತಿದೆ. ಚಿತ್ರದ ಎಲ್ಲಾ ಹಾಡುಗಳು ಹಿಟ್ ಆಗಿದ್ದು, ಸಿನಿಮಾ ಕೂಡ ಹಿಟ್ ಆಗುವ ಭರವಸೆಯಿದೆ ಎಂದರು.


ಕಾರ್ಯಕ್ರಮದ ಕೇಂದ್ರಬಿಂದು ನಟಿ ನೋರಾ ಫತೇಹಿ ಮಾತನಾಡಿ ನಾನು ಕೊನೆಯ ಕ್ಷಣದಲ್ಲಿ ಈ ಚಿತ್ರತಂಡ ಸೇರಿದೆ. ಈ ಸಾಂಗ್‌ನಲ್ಲಿ ನನ್ನ ಡ್ಯಾನ್ಸನ್ನು ಸಿನಿಮಾದಲ್ಲಿ ನೋಡಿ. ಈಗಾಗಲೇ ಸೌತ್ ನಲ್ಲಿ ಅಭಿನಯಿಸಿದ್ದೇನೆ. ಕನ್ನಡದಲ್ಲಿ ಕೆಡಿ ಮೊದಲ ಚಿತ್ರ, ಪ್ರೇಮ್ ಟ್ಯಾಲೆಂಟ್ ನಿರ್ದೇಶಕ ಎಂದು ಮೆಚ್ಚಿಕೊಂಡರು. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮಾತನಾಡಿ ಕೆಡಿ ಪ್ರೇಮ್ ಅವರ ಜೊತೆ ನಾಲ್ಕನೇ ಚಿತ್ರ. ಇಡೀ ಸಿನಿಮಾ ರೆಟ್ರೋ ಶೈಲಿಯಲ್ಲಿರುತ್ತದೆ. ಅದೇ ಸ್ಟೈಲ್‌ನಲ್ಲಿ ಮ್ಯೂಸಿಕ್ ಮಾಡಿದ್ದೇನೆ ಎಂದರು.

ಆನಂದ್ ಆಡಿಯೋ ಶಾಮ್ ಮಾತನಾಡಿ ನಿರ್ಮಾಪಕರಿಗೆ ಈ ಸಿನಿಮಾ ಮೇಲೆ ದೊಡ್ಡಮಟ್ಟದ ನಿರೀಕ್ಷೆಯಿದೆ. ಈಗಾಗಲೇ ಮೂರು ಹಾಡುಗಳು ಹಿಟ್ ಆಗಿದ್ದು, ಇನ್ನೂ ಮೂರು ಅದ್ಭುತವಾದ ಹಾಡುಗಳಿವೆ. ಪ್ರೇಮ್ ಅವರ ಹಿಂದಿನ ಎಲ್ಲಾ ರೆಕಾರ್ಡನ್ನು ಈ ಸಿನಿಮಾ ಮುರಿಯುವ ನಿರೀಕ್ಷೆ ಇದೆ ಎಂದರು. ಅನುಶ್ರೀ ಅವರ ಸೊಗಸಾದ ನಿರೂಪಣೆ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿತ್ತು.
ಜೋಗಿ ಪ್ರೇಮ್ ನಿರ್ದೇಶನದ ಚಿತ್ರಗಳಲ್ಲಿ ಹಾಡುಗಳೇ ಹೈಲೈಟ್, ಅದೇ ರೀತಿ ಕೆಡಿ ಚಿತ್ರದಲ್ಲೂ ಸಹ ಸಂಗೀತಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ದು, ಅರ್ಜುನ್ ಜನ್ಯ ಇಡೀ ಚಿತ್ರದ ಮ್ಯೂಸಿಕ್‌ನಲ್ಲಿ ಮ್ಯಾಜಿಕ್ಕನ್ನೇ ಮಾಡಿದ್ದಾರೆ,
೧೯೭೦-೭೫ರ ಸಮಯದಲ್ಲಿ ನಡೆದ ನೈಜಘಟನೆ ಆಧಾರಿತ ಗ್ಯಾಂಗ್‌ಸ್ಟರ್ ಕಥೆ ಕೆಡಿ ಚಿತ್ರಲ್ಲಿದೆ, ಕೆ.ವಿ.ಎನ್. ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ್ ಅವರ ನಿರ್ಮಾಣದ ಬಿಗ್ ಬಜೆಟ್ ಚಿತ್ರ ಇದಾಗಿದ್ದು ಈ ಚಿತ್ರಕ್ಕೆ ವಿಕ್ರಾಂತ್ ರೋಣ ಖ್ಯಾತಿಯ ವಿಲಿಯಂ ಡೇವಿಡ್ ಅವರ ಕ್ಯಾಮೆರಾ ವರ್ಕ್ ಇದೆ. ನಟ ಸಂಜಯ್ ದತ್, ಶಿಲ್ಪಾ ಶೆಟ್ಟಿ, ನೋರಾ ಫತೇಹಿ ಸೇರಿದಂತೆ ಬಾಲಿವುಡ್‌ನ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್, ನಟ ರಮೇಶ್ ಅರವಿಂದ್ ಹೀಗೆ ಹೆಸರಾಂತ ಕಲಾವಿದರ ದೊಡ್ಡ ಬಳಗವೇ ಈ ಚಿತ್ರದಲ್ಲಿದೆ.

Visited 1 times, 1 visit(s) today
error: Content is protected !!