Cini NewsSandalwood

ಪ್ರಚಾರದ ಕಾರ್ಯವನ್ನು ಆರಂಭಿಸಿದ “ಕಮಲ್ ಶ್ರೀದೇವಿ”

Spread the love

ತನ್ನ ಶೀರ್ಷಿಕೆ ಮೂಲಕವೇ ಬಹಳಷ್ಟು ಸದ್ದನ್ನ ಮಾಡಿರುವಂತಹ ಚಿತ್ರ ತಂಡ “ಕಮಲ್ ಶ್ರೀದೇವಿ”. ಬಹಳಷ್ಟು ಪೂರ್ವ ತಯಾರಿಯೊಂದಿಗೆ 63 ದಿನಗಳ ಕಾಲ ಚಿತ್ರೀಕರಣವನ್ನು ಮಾಡುತ್ತಾ , ಮೈಸೂರಿನಲ್ಲಿ ಕಮಲ್ ಶ್ರೀದೇವಿ ಚಿತ್ರಕ್ಕೆ ಕುಂಬಳಕಾಯಿ ಯನ್ನ ಹೊಡೆದಿದ್ದಾರೆ. ಇದರಿಂದ ಚಿತ್ರದ ಚಿತ್ರೀಕರಣವು ಪೂರ್ಣಗೊಂಡಿದ್ದು , ಈಗ ಪ್ರಚಾರದ ಕಾರ್ಯವನ್ನು ಅದ್ದೂರಿಯಾಗಿ ಆರಂಭಿಸಲು ಶ್ರೀ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಚಿತ್ರತಂಡ ಪ್ರಚಾರಕ್ಕೆ ಚಾಲನೆ ನೀಡಿದೆ.

ಇದೊಂದು ಬಹಳ ಕುತೂಹಲಕಾರಿಯಾದ ಚಿತ್ರವಾಗಿದ್ದು , ಈ ಚಿತ್ರದ ನಾಯಕ ನಟ ಸಚಿನ್ ಚೆಲುವರಾಯ ಸ್ವಾಮಿ ಅವರ ತಂದೆ ಎನ್. ಚೆಲುವರಾಯಸ್ವಾಮಿ ಅರ್ಪಿಸಿ , ಸ್ವರ್ಣಾಂಬಿಕ ಪಿಕ್ಚರ್ಸ್ ಬ್ಯಾನರ್ ನಡಿಯಲ್ಲಿ ನಾಯಕನ ತಾಯಿ ಬಿ.ಕೆ. ಧನಲಕ್ಷ್ಮಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಬರ್ನ್ಸ್ವಾಲ್ಲೋ ಕಂಪನಿಯ ರಾಜ್ವರ್ಧನ್ ಸಹ ನಿರ್ಮಾಣದಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರಕ್ಕೆ ಸುನಿಲ್ ನಿರ್ದೇಶನ ಮಾಡಿದ್ದಾರೆ. ಇನ್ನೂ ಈ “ಕಮಲ್ ಶ್ರೀದೇವಿ” ಚಿತ್ರದ ಪ್ರಚಾರವನ್ನು ಅದ್ದೂರಿಯಾಗಿ ಮಾಡಲು ದೇವಿಯ ಆಶೀರ್ವಾದ ಪಡೆಯಲು ನಾಯಕನಟ ಸಚಿನ್ ಚೆಲುವರಾಯಸ್ವಾಮಿ , ಅವರ ಶ್ರೀಮತಿ ಆಕಾಂಕ್ಷ ಪಟ್ಟಮಕ್ಕಿ , ಸಹ ನಿರ್ಮಾಪಕರಾದ ರಾಜವರ್ಧನ್ , ನಿರ್ದೇಶಕ ಸುನಿಲ್ ಸೇರಿದಂತೆ ಇಡೀ ಚಿತ್ರತಂಡ ಮುಂದಾಗಿದೆ.

ಈ “ಕಮಲ್ ಶ್ರೀದೇವಿ” ಚಿತ್ರದಲ್ಲಿ ಸಚಿನ್ ಚಲುವರಾಯ ಸ್ವಾಮಿ ಸೇರಿದಂತೆ ಕಿಶೋರ್, ರಮೇಶ್ ಇಂದಿರಾ, ಸಂಗೀತಾ ಭಟ್ ಸೇರಿದಂತೆ ಅನೇಕ ಪ್ರತಿಭಾವಂತ ಕಲಾವಿದರು ಅಭಿನಯಿಸಿದ್ದಾರಂತೆ. ಈ ಚಿತ್ರವನ್ನ ವಿ.ಎ. ಸುನೀಲ್ ಕುಮಾರ್ ನಿರ್ದೇಶಿಸಿದ್ದು, ಈ ಚಿತ್ರದ ಸಂಪೂರ್ಣ ಕ್ರಿಯೇಟಿವ್ ಜವಾಬ್ದಾರಿಯನ್ನ ಸಹ ನಿರ್ಮಾಪಕ ರಾಜವರ್ಧನ್ ಹೊತ್ತಿಕೊಂಡಿದ್ದಾರೆ. ಈಗಾಗ್ಲೇ ಟೈಟಲ್ ಜತೆ ಕ್ರಿಯೇಟೀವ್ ಕಾನ್ಸೆಪ್ಟ್ ಪೋಸ್ಟರ್ ರಿಲೀಸ್ ಮಾಡಿ ಸುದ್ದಿಯಾಗಿದ್ದ ಚಿತ್ರತಂಡ ಇದೀಗ ಚಿತ್ರೀಕರಣ ಮುಗಿಸಿ ನಾವು ರಿಲೀಸ್ ಗೆ ರೆಡಿ ಆಗುತ್ತಿದ್ದೇವೆ ಎಂದಿದೆ.

ಇತ್ತೀಚೆಗೆ ಶ್ರೀ ಬಂಡೆ ಮಹಕಾಳಿಯಮ್ಮನ ದೇವಸ್ಥಾನದಲ್ಲಿ ಚಿತ್ರೀಕರಣ ಯಶಸ್ವಿಯಾಗಿದೆ. ಇಲ್ಲಿಂದ ಪ್ರಚಾರ ಕಾರ್ಯ ಆರಂಭಿಸ್ತಿದ್ದೀವಿ ಅಂತ ಪೂಜೆ ಸಲ್ಲಿಸಿದ್ರು. ಜೊತೆಗೆ ಮಾತನಾಡಿದ ಚಿತ್ರತಂಡ ಎಲ್ಲವೂ ನಾವಂದುಕೊಂಡಂತೆ ಆಗಿದೆ. ಆಗಸ್ಟ್ ಅಥವಾ ಸೆಪ್ಟೆಂಬರ್ ವೇಳೆಗೆ ಪ್ರೇಕ್ಷಕರೆದುರಿಗೆ ಬರಲಿದ್ದೇವೆ. ಇಲ್ಲಿಂದ ಒಂದೊಂದಾಗಿ ಸಿನಿಮಾದ ವಿಶೇಷತೆಗಳನ್ನ ಮಧ್ಯಮದೊಂದಿಗೆ ಹಂಚಿಕೊಂಡು ಬರಲಿದ್ದೇವೆ ಎಂದಿದ್ದಾರೆ. ಬಹಳಷ್ಟು ನಿರೀಕ್ಷೆಯನ್ನ ಹುಟ್ಟು ಹಾಕಿರುವ ಈ “ಕಮಲ್ ಶ್ರೀದೇವಿ” ಚಿತ್ರ ಪ್ರೇಕ್ಷಕರ ಮುಂದೆ ಯಾವ ರೀತಿ ಬರಲಿದೆ ಎಂಬುದನ್ನು ಸದ್ಯದಲ್ಲೇ ಕಾದು ನೋಡಬೇಕಿದೆ.

Visited 1 times, 1 visit(s) today
error: Content is protected !!