Cini NewsSandalwoodTV Serial

“ಕಮಲ್ ಶ್ರೀದೇವಿ” ಚಿತ್ರದ ಟ್ರೈಲರ್ ರಿಲೀಸ್… ಸೆಪ್ಟೆಂಬರ್ 19 ರಂದು ತೆರೆಗೆ.

ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಕುತೂಹಲ ಭರಿತ ಸಸ್ಪೆನ್ಸ್ , ಥ್ರಿಲ್ಲರ್ , ಮರ್ಡರ್ ಮಿಸ್ಟರಿಯ ಚಿತ್ರ ತೆರೆಯ ಮೇಲೆ ಬರಲು ಸಜ್ಜಾಗಿದೆ. ಸ್ವರ್ಣಾಂಬಿಕ ಪಿಚ್ಚರ್ಸ್ ಬ್ಯಾನರ್ ನಡಿಯಲ್ಲಿ ಬಿ.ಕೆ ಧನಲಕ್ಷ್ಮೀ ನಿರ್ಮಾಣದ ಬಹು ನಿರೀಕ್ಷಿತ ‘ಕಮಲ್ ಶ್ರೀದೇವಿ’ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. Barnswallow company ಮುಖೇನ ಈ ಚಿತ್ರವನ್ನು ನಟ ರಾಜವರ್ಧನ್ ಸಹ ನಿರ್ಮಾಣಮಾಡಿದ್ದು, ಜೊತೆಗೆ ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಸೆಪ್ಟೆಂಬರ್ 19ರಂದು ರಾಜ್ಯಾದ್ಯಂತ ತೆರೆಗೆ ಬರಲಿರುವ ಈ ಚಿತ್ರದ ನಾಯಕನಾಗಿ ಸಚಿನ್ ಚಲುವರಾಯ ಸ್ವಾಮಿ ನಾಯಕಿಯಾಗಿ ಸಂಗೀತ ಭಟ್ ಅಭಿನಯಿಸಿದ್ದಾರೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆದ ಟ್ರೇಲರ್ ಗೆ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಗುಲ್ಬರ್ಗದ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾ ಸ್ವಾಮಿಗಳು ಹಾಜರಿದ್ದು, ತಂಡಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಹಿರಿಯ ನಟ ಮಿತ್ರ ಮಾತನಾಡಿ, ‘ಸಿನಿಮಾ ಕಲೆ ಹೇಗೂ, ವ್ಯಾಪಾರ ಕೂಡ ಹಾಗೆ. ನಿರ್ದೇಶಕರು ಕುತೂಹಲ ಮೂಡಿಸುವ ಟ್ರೇಲರ್ ಕೊಟ್ಟಿದ್ದಾರೆ. ಕಥೆ ಕೇಳಿದಾಗ ಹೇಗೆ ಕುತೂಹಲ ಮೂಡಿತ್ತೂ ಹಾಗೆ ಸಿನಿಮಾ ಬಂದಿದೆ. ನಿರ್ದೇಶಕರು ಹೇಳಿದಂತೆ ಸಿನಿಮಾ ಮಾಡಿದ್ದಾರೆ. ಈ ಸಿನಿಮಾದಲ್ಲಿ ನಟಿಸಿದ ಖುಷಿ ತುಂಬಾ ಇದೆ. ನಾನಿಲ್ಲಿ ಸ್ವಾಮಿಜಿ ಪಾತ್ರ ಮಾಡಿದ್ದೇನೆ. ಇದು ಕನ್ನಡದ ಒಳ್ಳೆಯ ಸಿನಿಮಾಗಳು ಗೆಲ್ಲುವ ಟೈಮ್’ ಎಂದು ಹೇಳಿದರು.

ಚಿತ್ರದ ಕೋ ಪ್ರೊಡುಸರ್ ಹಾಗೂ ಕ್ರಿಯೇಟಿವ್ ಹೆಡ್ ರಾಜವರ್ಧನ್ ಮಾತನಾಡಿ, ‘ತುಂಬಾ ಕ್ರಿಯೇಟಿವ್ ಆಗಿ ಸಿನಿಮಾ ಬಂದಿದೆ. ಒಂದು ಹೆಣ್ಣಿನ ಸುತ್ತ ಕಥೆ ಸಾಗುತ್ತದೆ. ನಂಗೆ ಮುಖ್ಯ ಪಾತ್ರವನ್ನು ಸಂಗೀತಾ ಮಾಡಬೇಕು ಎಂಬ ಆಸೆ. ಆದ್ರೆ ನಿರ್ದೇಶಕರು ಬೇಡ ಎನ್ನುತ್ತಿದ್ದರು. ಕೊನೆಗೂ ಸಂಗೀತಾ ಅವರೇ ಬಂದರು. ಅವರಿಲ್ಲಿ ವೇಶ್ಯೆ ಪಾತ್ರ ಮಾಡಿದ್ದಾರೆ. ಸಂಗೀತಾ, ಸಚಿನ್ ಸೇರಿದಂತೆ ಎಲ್ಲ ಕಲಾವಿದರು ಚನ್ನಾಗಿ ನಟಿಸಿದ್ದಾರೆ. ಕಿಶೋರ್ ಸರ್ ತುಂಬಾ ಸಪೋರ್ಟ್ ಮಾಡಿದ್ದಾರೆ.‌ ರಮೇಶ್ ಇಂದಿರಾ ಕೂಡ ಅದ್ಭುತ ಅಭಿನಯ ಮಾಡಿದ್ದಾರೆ. ಇದು ಹೆಣ್ಣಿನ ದೌರ್ಜನ್ಯ ಹಾಗೂ ನಂತರದ ವಿಷಯ ಇದರಲ್ಲಿ ತೋರಿಸಲಾಗಿದೆ’ ಎಂದು ಹೇಳಿದರು.

ಕ್ರೈಂ, ಥ್ರಿಲ್ಲರ್ ಜೊತೆಗೆ ಮಹಿಳೆಯರಿಗೆ ಆಪ್ತವಾದ ಸಿನಿಮಾ ಇದಾಗಿದ್ದು, ಸೂಕ್ಷ್ಮವಾದ ಕಥೆ ಇದರಲ್ಲಿ ಇದು. ಈ ಮೊದಲು ಗಜರಾಮ ಸಿನಿಮಾ ನಿರ್ದೇಶಿಸಿದ್ದ ಸುನೀಲ್ ಎರಡನೇ ಪ್ರಯತ್ನವಾಗಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ‘ತುಂಬಾ ಒಳ್ಳೆಯ ಜರ್ನಿ ಇದು ನಂಗೆ. ಚಿತ್ರದಲ್ಲಿ ದೊಡ್ಡ ತಾರಾಗಣವಿದೆ’ ಎಂದಷ್ಟೇ ಹೇಳಿದರು. ಚಿತ್ರದ ನಾಯಕ ಸಚಿನ್ ಚಲುವರಾಯಸ್ವಾಮಿ ಮಾತನಾಡಿ, ‘ಪ್ರೇಕ್ಷಕರಿಗೆ ಬೇಕಾದ ಎಲ್ಲಾ ಅಂಶಗಳು ಇದರಲ್ಲಿ ಇವೆ. ಇದು ಕಂಟೆಂಟ್ ಒರೆಂಟೆಡ ಸಿನಿಮಾ. ಇದರಲ್ಲಿ ನಾನು ಡೈರೆಕ್ಟರ್ ಪಾತ್ರ ಮಾಡಿದ್ದೇನೆ’ ಎಂದರು. ನಾಯಕಿ ಸಂಗೀತಾ ಭಟ್, ‘ಕಮಲ್ ಮತ್ತು ಶ್ರೀದೇವಿ ಒಂದೊಂದು ಪಾತ್ರ. ಅವರನ್ನು ಹೇಗೆ ಒಂದು ಆಗುತ್ತಾರೆ. ನಂತರದ ಅವರ ಜರ್ನಿ ಇದರಲ್ಲಿ ಇದೆ’ ಎನ್ನುವರು. ನಾಗೇಶ್ ಛಾಯಾಗ್ರಹಣ, ಕೀರ್ತನ ಛಾಯಾಗ್ರಹಣ ವಿರುವ ಈ ಚಿತ್ರದ ತಾರಾಗಣದಲ್ಲಿ ಕಿಶೋರ್, ರಮೇಶ್ ಇಂದಿರಾ, ಅಕ್ಷಿತಾ ಬೋಪಯ್ಯ, ಪ್ರತಾಪ್, ಕಾರ್ತಿಕ್, ನವೀನ್ ಮುಂತಾದವರು ಇದ್ದಾರೆ.

error: Content is protected !!