ವೈಜ್ಞಾನಿಕ ಆಕ್ಷನ್ ಥ್ರಿಲ್ಲರ್ (AI) ಸಮ್ಮಿಶ್ರಣದ “ಕಿಲ್ಲರ್”ನಲ್ಲಿ ಜ್ಯೋತಿ ಪೂರ್ವಜ್
ಹೊಸ ಹೊಸ ಆಲೋಚನೆ , ಆಧುನಿಕತೆಯ ತಂತ್ರಜ್ಞಾನದ ಮೂಲಕ ನಿರೀಕ್ಷೆಗೂ ಮೀರಿದಂತಹ ಚಿತ್ರಗಳು ಪ್ರೇಕ್ಷಕರ ಗಮನವನ್ನು ಸೆಳೆಯುತ್ತಾ ಬರುತ್ತಿದೆ. ಆ ನಿಟ್ಟಿನಲ್ಲಿ “ಕಿಲ್ಲರ್” ಎಂಬ ವಿಭಿನ್ನ ಕಥಾನಕದ ಚಿತ್ರವು ವೈಜ್ಞಾನಿಕ ಆಕ್ಷನ್ , ಥ್ರಿಲ್ಲರ್ ನೊಂದಿಗೆ ಮಾನವೀಯ ಭಾವನೆಗಳು ಮತ್ತು ಕೃತಕ ಬುದ್ಧಿಮತ್ತೆ (AI) ಒಂದಾಗುವ ಈ ಸಿನಿಮಾದಲ್ಲಿ ಪ್ರೀತಿ, ಸೇಡು ಮತ್ತು ವಿಜ್ಞಾನವನ್ನು ಒಳಗೊಂಡ ಹೊಸ ಯುಗದ ಕಥೆಯನ್ನು ಒಳಗೊಂಡು ತೆರೆಗೆ ಬರಲು ಸಿದ್ಧತೆ ನಡೆಯುತ್ತಿದೆ.
ಈಗಾಗಲೇ “ಶುಕ್ರ”, “ಮಾತರಾಣಿ ಮೌನಮಿಡಿ”, ಮತ್ತು “ಎ ಮಾಸ್ಟರ್ಪೀಸ್” ಮುಂತಾದ ವಿಶಿಷ್ಟ ಚಿತ್ರಗಳ ಮೂಲಕ ಸಿನಿಪ್ರೇಮಿಗಳ ಮೆಚ್ಚುಗೆ ಗಳಿಸಿದ ನಿರ್ದೇಶಕ ಪೂರ್ವಜ್, ಇದೀಗ ಮತ್ತೊಂದು ಸಂವೇದನಾಶೀಲ ಹಾಗೂ ವಿಭಿನ್ನ ಪ್ರಯತ್ನದೊಂದಿಗೆ ವೈಜ್ಞಾನಿಕ ಆಕ್ಷನ್ , ಥ್ರಿಲ್ಲರ್ ಕಥಾನಕವಾದ “ಕಿಲ್ಲರ್” ಸಾರಥ್ಯ ವಹಿಸಿಕೊಂಡಿದ್ದಾರೆ.
ಇನ್ನು ಪೂರ್ವಜ್ ಅವರ ನಿರ್ದೇಶನದ ಜೊತೆಗೆ ತಾವೇ ಪ್ರಮುಖ ಪಾತ್ರದಲ್ಲಿ ನಟಿಸಿದ್ದು , ಜ್ಯೋತಿ ಪೂರ್ವಜ್ ನಾಯಕಿಯಾಗಿ ಅಭಿನಯಿಸಿದ್ದಾರೆ. ವಿಶಾಲ್ ರಾಜ್ ಮತ್ತು ಗೌತಮ್ ಚಕ್ರಧರ ಕೊಪ್ಪಿಸೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಥಿಂಕ್ ಸಿನಿಮಾ ಬ್ಯಾನರ್ ಅಡಿಯಲ್ಲಿ, AU&I ಸ್ಟುಡಿಯೋಸ್ ಮತ್ತು ಮರ್ಜಿ XR ಸಹಯೋಗದೊಂದಿಗೆ, ಜ್ಯೋತಿ ಪೂರ್ವಜ್, ಪ್ರಜಯ್ ಕಾಮತ್, ಮತ್ತು ಎ. ಪದ್ಮನಾಭ ರೆಡ್ಡಿ ನಿರ್ಮಿಸಿದ್ದಾರೆ.
ಈ ಚಿತ್ರದ ಕಥೆ ಪ್ರೀತಿ, ಪ್ರಣಯ, ಸೇಡು ಮತ್ತು ಕೃತಕ ಬುದ್ಧಿಮತ್ತೆ (AI) ಗಳ ಸಮ್ಮಿಶ್ರಣವಾಗಿದ್ದು “ಕಿಲ್ಲರ್” ಚಿತ್ರವು ಭಾವನೆಗಳ ಮತ್ತು ತಂತ್ರಜ್ಞಾನಗಳ ನಡುವೆ ನಡೆಯುವ ಭಯಾನಕ ಪಯಣವನ್ನು ಹೇಳುತ್ತದೆ. ಮಾನವ ಮನಸ್ಸಿನ ಅಸ್ತಿತ್ವ ಮತ್ತು ಯಂತ್ರದ ಚಿಂತನೆ ನಡುವೆ ನಡೆಯುವ ಹೋರಾಟವೇ ಈ ಕಥೆಯ ಹೃದಯ ಭಾಗವಾಗಿದೆ. ಈಗಾಗಲೇ “ಕಿಲ್ಲರ್ – ಭಾಗ 1 : ಡ್ರೀಮ್ ಗರ್ಲ್ ” ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಪ್ರಸ್ತುತ ಪ್ಯಾಚ್ವರ್ಕ್ ಹಂತದಲ್ಲಿದೆ. ಶೀಘ್ರದಲ್ಲೇ ಅದ್ದೂರಿ ತೆರೆಗೆ ತರುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ.
ಈ ಚಿತ್ರದಲ್ಲಿ ಜ್ಯೋತಿ ಪೂರ್ವಜ , ಪೂರ್ವಜ, ಇನಬಾತಿನ್ ದಸರಾಧ, ಚಂದ್ರಕಾಂತ್ ಕೊಲ್ಲು, ವಿಶಾಲ್ ರಾಜ್ ,ಅರ್ಚನ ಅನಂತ್, ಗೌತಮ್ ಚಕ್ರದರ , ರವಿಪ್ರಕಾಶ್ , ಶಿವಾನಿ ರೆಡ್ಡಿ , ವೆಂಕಟೇಶ್ ಸಾಯಿ , ರಮೇಶ್ ರೆಡ್ಡಿ , ಅಜಯ್ ಕುಮಾರ್ ಅಭಿನಯವಿದೆ.
ಇನ್ನು ತಾಂತ್ರಿಕ ವರ್ಗದಲ್ಲಿ ಪೂರ್ವಜ ನಿರ್ದೇಶಕ , ಜ್ಯೋತಿ ಪೂರ್ವಜ , ಪ್ರಜೆ ಕಾಮತ್ , ಪದ್ಮನಾಭ ರೆಡ್ಡಿ ರವರು ಥಿಂಕ್ ಸಿನಿಮಾಸಯೋಗದೊಂದಿಗೆ AU&I ಸ್ಟುಡಿಯೋ ಹಾಗೂ ಮರ್ಜ XR ಸಂಸ್ಥೆ ಮೂಲಕ ಸಿದ್ಧವಾಗುತ್ತಿದೆ.
ಜಗದೀಶ್ ಬೊಮ್ಮಿಶೆಟ್ಟಿ ಛಾಯಾಗ್ರಹಣ , ಆಶೀರ್ವಾದ ಹಾಗೂ ಸುಮನ್ ಜೀವ ಸಂಗೀತ , ಮನೋಜ್ ಕುಮಾರ್ ಸಂಕಲನ , ಪೂರ್ವಜ ಚಿತ್ರಕಥೆ , ಮಣಿ ಕಲೆ, ಉದಯ ಸಿರಿ ಪೂರ್ವಜ ಕಾಸ್ಟಿಂಗ್ ಡಿಸೈನ್ , ಶಿವ ಸರ್ವಾಣಿ ಫೈನಲ್ ಟ್ರಿಮ್ಮಿಂಗ್, ಸತೀಶ್ ಕುಮಾರ್ ಸೌಂಡ್ ಎಫೆಕ್ಟ್ , ರಾಜ್ ಕುಮಾರ್ ಗಂಗಾ ಪುತ್ರ ಸಾಹಸ , ಮರ್ಜ XR ಸ್ಟುಡಿಯೋಸ್ ಬಿ ಎಫ್ ಎಕ್ಸ್, ಮನೋಜ್ ಪಬ್ಲಿಸಿಟಿ ಡಿಸೈನ್, ಭಾಷಾ ಎಕ್ಸ್ಪೆಕ್ಟಿವ್ ಪ್ರೊಡ್ಯೂಸರ್, ಶ್ರೀನಿ ಸುರೇಶ್ ಪಿ ಆರ್ ಓ , ಪ್ರತೀಕ್ ರೆಡ್ಡಿ ಮಾರ್ಕೆಟಿಂಗ್ , ಡಿಜಿಟಲ್ ಪ್ರಮೋಷನ್ ಸೇರಿದಂತೆ ದೊಡ್ಡ ತಾಂತ್ರಿಕ ಬಳಗವೇ ಈ ಚಿತ್ರಕ್ಕಾಗಿ ಕೆಲಸ ಮಾಡಿದೆ.
