Cini NewsSandalwoodTV Serial

ರವಿಗೌಡ ನಟನೆಯ “I’m god” ಚಿತ್ತದ ಹಾಡು ರಿಲೀಸ್

I’m god ಅಂತ ತೆರೆಮೇಲೆ ಹೀರೋ ಆಗಿ ಮಿಂಚಲು ರೆಡಿಯಾಗಿದ್ದಾರೆ ನಾಯಕ ರವಿ ಗೌಡ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರ್ ಅನ್ನು ಸಿ ಎಂ ಸಿದ್ಧರಾಮಯ್ಯ ರಿಲೀಸ್ ಮಾಡಿ ಸಿನಿಮಾತಂಡಕ್ಕೆ ಶುಭಕೋರಿದ್ದರು. ಇದೀಗ I’m god ಹಾಡಿನ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. I’m god ಸಿನಿಮಾದಲ್ಲಿ ರವಿ ಗೌಡ ನಾಯಕನಾಗಿ ಕಾಣಿಸಿಕೊಳ್ಳುವ ಜೊತೆಗೆ ನಿರ್ದೇಶನ ಮತ್ತು ನಿರ್ಮಾಣದ ಜಬಾವ್ದಾರಿಯನ್ನು ಅವರೇ ವಹಿಸಿಕೊಂಡಿರುವುದು ವಿಶೇಷ.

ಅಂದಹಾಗೆ ರವಿ ಅವರಿಗೆ ಇದು ಮೊದಲ ಸಿನಿಮಾವೇನು ಅಲ್ಲ.. ಈ ಮೊದಲು ಧ್ವಜ ಎನ್ನುವ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಆದರೀಗ I’m god ಸಿನಿಮಾ ಮೂಲಕ ಮೊದಲ ಬಾರಿಗೆ ಸ್ವತಂತ್ರ ಹೀರೋ ಆಗಿ ಕಾಣಿಸಿಕೊಳ್ಳುವ ಜೊತೆಗೆ ನಿರ್ದೇಶಕರಾಗಿಯೂ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ.

ಸದ್ಯ I’m god ಸಿನಿಮಾದಿಂದ ಮೊದಲ ಹಾಡು ರಿಲೀಸ್ ಆಗಿದೆ. ಈ ಮೂಲಕ ಸಿನಿಮಾತಂಡ ಚಿತ್ರೀಕರಣ ಮುಗಿಸಿ ಪ್ರಮೋಷನ್ ಕೆಲಸ ಕೆಲಸವನ್ನು ಶುರು ಮಾಡಿಕೊಂಡಿದೆ. ಸದ್ಯ ರಿಲೀಸ್ ಆಗಿರುವ ಹಾಡನ್ನು ಯೂತ್ ಅಟ್ಯ್ರಾಕ್ಷನ್ ಸಂಚಿತ್ ಹೆಗ್ಡೆ ಹಾಡಿದ್ದು ಯುವಕರ ಗಮನ ಸೆಳೆಯುತ್ತಿದೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿರುವ ಈ ಹಾಡಿಗೆ ನಾಗಾರ್ಜುನ್ ಶರ್ಮಾ ಸಾಹಿತ್ಯವಿದೆ.

ಈ ಬಗ್ಗೆ ಮಾತನಾಡಿರುವ ನಾಯಕ ಹಾಗೂ ನಿರ್ದೇಶಕ ರವಿ ಗೌಡ,’ಈ ಹಾಡಿನಲ್ಲಿ ಒಂದು ಹುಡುಗಿ ಮೇಲೆ ಲವ್ ಆದಾ ನಂತರ ಏನೆಲ್ಲ ಅನುಭವಗಳಾಗುತ್ತೆ ಎನ್ನುವುದು ತೋರಿಸಲಾಗಿದೆ. ಅಜನೀಶ್ ಲೋಕನಾಥ್ ಅವರ ಸಂಗೀತ ಜೊತೆಗೆ ಸಂಚಿತ್ ಹೆಗ್ಡೆ ಧ್ವನಿ ಈ ಹಾಡಿಗೆ ಮತ್ತಷ್ಟು ಮೈಲೇಜ್ ತಂದುಕೊಟ್ಟಿದೆ’ ಎನ್ನುತ್ತಾರೆ. ಇನ್ನು ನಟೆ, ನಿರ್ದೇಶನ ಮತ್ತು ನಿರ್ಮಾಣ ಎಲ್ಲವನ್ನು ಒಟ್ಟಿಗೆ ನಿಭಾಯಿಸಿದ ಬಗ್ಗೆ ಪ್ರತಿಕ್ರಿಯಿಸಿದ ರವಿ ಗೌಡ, ‘ಖುಷಿ ಹಾಗೂ ಭಯ ಎಲ್ಲಾ ರೀತಿಯ ಅನುವಾಗಿದೆ. ಒಂದೊಂದು ಸಾರಿ ಇದು ಬೇಕಿತ್ತ ಅಂತ ಅನಿಸಿತ್ತು. ಆದರೀಗ ನೋಡಿದ್ರೆ ಖುಷಿಯಾಗುತ್ತೆ’ ಎಂದು ಹೇಳಿದರು.

I’m god ಈಗಾಗಲೇ ಶೂಟಿಂಗ್ ಮುಗಿಸಿದ್ದು ರಿಲೀಸ್‌ಗೆ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ I’m god ಸಿನಿಮಾತಂಡ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಸಿನಿಮಾತಂಡ ಬ್ಯುಸಿಯಾಗಿದ್ದು ಎಲ್ಲವೂ ಅಂದುಕೊಂಡಂತೆ ಆದರೆ ಈ ವರ್ಷದ ಕೊನೆಯಲ್ಲಿ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲಿದೆ.

I’m god ರೋಮ್ಯಾಂಟಿಕ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ. ಬೆಂಗಳೂರು ಹಾಗೂ ಕೇರಳದಲ್ಲಿ ಶೂಟಿಂಗ್ ನಡೆಸಲಾಗಿದೆ. ಈ ಚಿತ್ರದಲ್ಲಿ ರವಿ ಗೌಡ ಅವರಿಗೆ ನಾಯಕಿಯಾಗಿ ವಿತೇಜಾ ಪರೀಕ್ ಕಾಣಿಸಿಕೊಂಡಿದ್ದಾರೆ. ಇದು ಇವರಿಗೆ ಮೊದಲ ಸಿನಿಮಾವಾಗಿದೆ. ಇನ್ನು ಉಳಿದಂತೆ ಈ ಸಿನಿಮಾದಲ್ಲಿ ರವಿಶಂಕರ್, ಹಿರಿಯ ನಟ ಅವಿನಾಶ್, ಅರುಣ ಬಾಲರಾಜ್ ಸೇರಿದಂತೆ ಅನೇಕ ಕಲಾವಿದರಿದ್ದಾರೆ..

error: Content is protected !!