Cini NewsSandalwoodTV Serial

*ಹಾಡಿನ ಸಾಲಿನ “ಇಲ್ಲೆ ಸ್ವರ್ಗ ಇಲ್ಲೆ ನರಕ ” ಚಿತ್ರ ಬಿಡುಗಡೆಗೆ  ಸಿದ್ಧ.*

’ನಾಗರಹೊಳೆ’ ಚಿತ್ರದಲ್ಲಿ ಅಂಬರೀಷ್ ಅಭಿನಯದಲ್ಲಿ *ಇಲ್ಲೆ ಸ್ವರ್ಗ ಇಲ್ಲೆ ನರಕ* ಹಾಡು ಸೂಪಟ್ ಹಿಟ್ ಆಗಿತ್ತು. ಈಗ ಅದೇ ಹೆಸರಿನಲ್ಲಿ ಸಿನಿಮಾವೊಂದು ಸಿದ್ದಗೊಂಡಿದೆ. *ಲೋಕನಾಥ್.ಎಂ.ವಿ ಚಿತ್ರಕ್ಕೆ ಕಥೆ,ಚಿತ್ರಕಥೆ, ನಿರ್ದೇಶನ ಮತ್ತು ನಾಯಕನಾಗಿ ನಟಿಸುವ ಜತೆಗೆ ಉದ್ಯಾತ್ ಫಿಲ್ಮ್ಸ್ ಇಂಟರ್ ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ* ಮಾಡಿದ್ದಾರೆ. ಕೇದರನಾಥ ಧಾಮದಲ್ಲಿ ಚಿತ್ರೀಕರಣಗೊಂಡ ಮೊದಲ ಭಾರತೀಯ ಚಿತ್ರ ಇದಾಗಿದೆ. ತಂದೆ ಮಗನ ಬಾಂಧ್ಯವದ ಬಗ್ಗೆ ಸನ್ನಿವೇಶಗಳು ಮನಸ್ಸನ್ನು ಕದಡುತ್ತದೆ.

ತಾರಾಗಣದಲ್ಲಿ ನಾಗರಾಜ್, ಅಪೂರ್ವ, ಆಶಾ, ಮಹಾಸತಿ ನರಸಗೌಡ, ಹನುಮಂತು, ಮಧು ಹಾಗೂ ವಾರನಾಸಿ ಪ್ರತಿಭೆಗಳಾದ ಸಂದೀಪ್‌ಗೌರ್, ತಾನ್ಯಾ, ಲಕಿ, ಶಶಿಕಾಂತ್ ಇವರುಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಸಂಗೀತ ರಮೇಶ್ ಕೃಷ್ಣ, ಛಾಯಾಗ್ರಹಣ ಧನಪಾಲ್-ಸತೀಶ್ ಸನ್ಯಾಲ್, ಸಾಹಿತ್ಯ ಕೆ.ರಾಮನಾರಾಯಣ್, ಗಾಯಕರು ಕೃಷ್ಣ ಬಳ್ಳೇಶ್-ರವೀಂದ್ರಸ್ವರ್ಗಾವಿ-ಚೇತನ್ ನಾಯಕ್, ಪ್ರಚಾರ ವಿಜಯಕುಮಾರ್ ಅವರದಾಗಿದೆ. ಕಾಶಿ, ಋಷಿಕೇಶ, ಮುಂತಾದ ಸುಂದರ ತಾಣಗಳಲ್ಲಿ ಶೂಟಿಂಗ್ ನಡೆಸಲಾಗಿದೆ. ಸೆನ್ಸಾರ್‌ನಿಂದ ಪ್ರಶಂಸೆ ಹಾಗೂ ಯುಎ ಪ್ರಮಾಣ ಪತ್ರ ಪಡೆದುಕೊಂಡಿರುವ ಚಿತ್ರವು ಮುಂದಿನ ತಿಂಗಳು ಬಿಡುಗಡೆಯಾಗುವೆ ಸಾಧ್ಯತೆ ಇದೆ.

error: Content is protected !!