Cini NewsSandalwood

“ಇದ್ರೇ ನೆಮ್ದಿಯಾಗ್‍ ಇರ್ಬೇಕ್‍ …”ಹಾಡಿಗೆ ಭರ್ಜರಿ ರೆಸ್ಪಾನ್ಸ್.

Spread the love

‘ಚಾಲೆಂಜಿಂಗ್‍ ಸ್ಟಾರ್ ’ ದರ್ಶನ್‍ ಅಭಿನಯದ ‘ದಿ ಡೆವಿಲ್‍’ ಚಿತ್ರದ ‘ಇದ್ರೇ ನೆಮ್ದಿಯಾಗ್‍ ಇರ್ಬೇಕ್‍ …’ ಎಂಬ ಮೊದಲ ಹಾಡು ಕೆಲವು ದಿನಗಳ ಹಿಂದೆ ಸಾರೆಗಮ ಕನ್ನಡ ಚಾನಲ್‍ನಲ್ಲಿ ಬಿಡುಗಡೆಯಾಗಿದೆ. ಈ ಹಾಡು ಆರ್ಗಾನಿಕ್‍ ಆಗಿ ಯೂಟ್ಯೂಬ್‍ನಲ್ಲಿ 13 ಮಿಲಿಯನ್ ವೀಕ್ಷಣೆ ಕಂಡಿದೆ.

ಈ ಹಾಡಿಗೆ ಅನಿರುದ್ಧ್ ಶಾಸ್ತ್ರಿ ಸಾಹಿತ್ಯ ಬರೆದಿದ್ದು, ದೀಪಕ್‍ ಬ್ಲೂ ಹಾಡಿದ್ದಾರೆ. ಅಜನೀಶ್‍ ಲೋಕನಾಥ್‍ ಸಂಗೀತ ಸಂಯೋಜಿಸಿದ್ದಾರೆ. ಯೂಟ್ಯೂಬ್‍ನ ಟ್ರೆಂಡಿಂಗ್‍ ಮ್ಯೂಸಿಕ್‍ ವೀಡಿಯೋಸ್‍ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿ ಟ್ರೆಂಡಿಂಗ್‍ ಇದೆ. ಇದಲ್ಲದೆ, ಅಮೇಜಾನ್‍ ಮ್ಯೂಸಿಕ್‍ನಲ್ಲಿ, ಫ್ರೆಶ್‍ ಕನ್ನಡ, ನ್ಯೂ ಇನ್‍ ಡ್ಯಾನ್ಸ್, ಸ್ಯಾಂಡಲ್‍ವುಡ್‍ ಡ್ಯಾನ್ಸ್ ಪಾರ್ಟಿ, ಕನ್ನಡ ವರ್ಕೌಟ್‍ ಮಿಕ್ಸ್, ಲಾಂಗ್‍ ಡ್ರೈವ್‍ ವಿಥ್‍ ಸ್ಯಾಂಡಲ್‍ವುಡ್‍, ಸ್ಯಾಂಡಲ್‍ವುಡ್‍ ಹೀರೋಸ್‍, ಬೆಸ್ಟ್ ಆಫ್‍ ಅಜನೀಶ್‍ ಲೋಕನಾಥ್‍ ವಿಭಾಗಗಳಲ್ಲಿ ಮೊದಲ ಸ್ಥಾನದಲ್ಲಿ ಟ್ರೆಂಡಿಂಗ್‍ ಇದೆ. ಸ್ಪಾಟಿಫೈನ ಲೋಕಲ್‍ ಪಲ್ಸ್ ಬೆಂಗಳೂರು ವಿಭಾಗದಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಶ್ರೀ ಜೈಮಾತಾ ಕಂಬೈನ್ಸ್ ಲಾಂಛನದಲ್ಲಿ ‘ದಿ ಡೆವಿಲ್‍’ ಚಿತ್ರ ನಿರ್ಮಾಣವಾಗುತ್ತಿದ್ದು, ಪ್ರಕಾಶ್ ವೀರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ‘ದಿ ಡೆವಿಲ್’ ಚಿತ್ರದ ಚಿತ್ರೀಕರಣ‌ ಹಾಗೂ ಡಬ್ಬಿಂಗ್ ಮುಕ್ತಾಯವಾಗಿದೆ. ಈ ಚಿತ್ರದಲ್ಲಿ ದರ್ಶನ್‍ಗೆ ನಾಯಕಿಯಾಗಿ ರಚನಾ ರೈ ಅಭಿನಯಿಸಿದ್ದಾರೆ. ಮಿಕ್ಕಂತೆ ತುಳಸಿ,‌ ಅಚ್ಯುತ್ ‍ಕುಮಾರ್, ಮಹೇಶ್ ಮಂಜ್ರೇಕರ್, ಶ್ರೀನಿವಾಸ ಪ್ರಭು, ಶೋಭರಾಜ್ ಮುಂತಾದವರು ನಟಿಸಿದ್ದಾರೆ.

‘ದಿ ಡೆವಿಲ್‍’ ಚಿತ್ರಕ್ಕೆ ಅಜನೀಶ್‍ ಲೋಕನಾಥ್‍ ಸಂಗೀತ ಸಂಯೋಜಿಸಿದ್ದು, ಸುಧಾಕರ್‍ ರಾಜ್‍ ಛಾಯಾಗ್ರಹಣವಿದೆ. ಚಿತ್ರವು ಡಿಸೆಂಬರ್‍ 12, 2025ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ.

Visited 1 times, 1 visit(s) today
error: Content is protected !!