Cini NewsMovie ReviewSandalwood

ಸರ್ಕಾರಿ ಶಾಲೆಯ ಅಳಿವು ಉಳಿವಿನ ಕಥೆ “ಗುರಿ” (ಚಿತ್ರವಿಮರ್ಶೆ-ರೇಟಿಂಗ್ : 3.5 /5)

ರೇಟಿಂಗ್ : 3.5 /5
ಚಿತ್ರ : ಗುರಿ
ನಿರ್ದೇಶನ , ಛಾಯಾಗ್ರಹಣ : ಸೆಲ್ವಂ ಮಾದಪ್ಪನ್
ನಿರ್ಮಾಪಕರು : ರಾಧಿಕಾ.ಎಸ್.ಆರ್ , ಚಿತ್ರಲೇಖಾ. ಎಸ್
ಸಂಗೀತ : ಪಳನಿ ಸೇನಾಪತಿ
ತಾರಾಗಣ: ಮಾಸ್ಟರ್ ಮಹಾನಿಧಿ, ಮಾಸ್ಟರ್ ಜೀವಿತ್ , ಅಚ್ಯುತ್ ಕುಮಾರ್, ಜಯಶ್ರೀ, ಉಗ್ರಂ ಮಂಜು, ಸಂದೀಪ್‍ ಮಲಾನಿ,
ಟಿ.ಎಸ್. ನಾಗಾಭರಣ , ಅವಿನಾಶ್, ಜಾಕ್ ಜಾಲಿಜಾಲಿ, ಚಂದ್ರಪ್ರಭಾ,
ಪವನ್‍ಕುಮಾರ್ ಹಾಗೂ ಮುಂತಾದವರು…

ಜಗತ್ತಿನಲ್ಲಿ ಶ್ರೇಷ್ಠವಾದ ದಾನಗಳಲ್ಲೊಂದು ವಿದ್ಯಾ ದಾನವು ಕೂಡ , ಅಕ್ಷರ ಕಲಿತವರು ಬದುಕನ್ನ ಬೆಳಗಿಸಿಕೊಳ್ಳುವ ಶಕ್ತಿಯನ್ನು ಹೊಂದಿರುತ್ತಾರೆ ಎನ್ನಬಹುದು. ಅದರಲ್ಲೂ ಪ್ರತಿ ಹಳ್ಳಿಗಳಲ್ಲೂ ಮಕ್ಕಳು ಶಿಕ್ಷಣ ಪಡೆಯುವುದು ಅತ್ಯಗತ್ಯ. ಅದಕ್ಕಾಗಿ ಸರ್ಕಾರಿ ಶಾಲೆಗಳು ಕೂಡ ಕಾರ್ಯ ನಿರ್ವಹಿಸುತ್ತಿದೆ.

ಒಮ್ಮೆ ಈ ಚಿತ್ರದ ನಿರ್ದೇಶಕರು ನೋಡಿದಂತಹ ಮುಚ್ಚಲ್ಪಟ್ಟಿದ್ದ ಸರ್ಕಾರಿ ಶಾಲೆ ಹಾಗೂ ಅಲ್ಲಿನ ಮಕ್ಕಳ ಆಟವನ್ನು ಗಮನಿಸಿ , ಶಿಕ್ಷಣ ವಂಚಿತರಾದ ಮಕ್ಕಳ ಭವಿಷ್ಯ ಹಾಳಾಗಬಾರದು ಈ ಕುರಿತು ಒಂದು ಚಿತ್ರ ರೂಪಕವಾಗಿ ಜಾಗೃತಿ ಮೂಡಬೇಕೆಂಬುವ ನಿರ್ಧಾರದೊಂದಿಗೆ ಸರ್ಕಾರಿ ಶಾಲೆಯ ಅಳಿವು ಉಳಿವಿನ ಸೂಕ್ಷ್ಮತೆಯನ್ನು ತೆರೆಯ ಮೇಲೆ ತರುವ ಜೊತೆಗೆ ಮಕ್ಕಳನ್ನು ಅಪಹರಿಸಿ ಅಂಗಾಂಗ ಮಾರಾಟ ಮಾಡುವ ಜಾಲದ ಬಗೆಯು ಕೂಡ ಎಚ್ಚರಿಸುವ ಪ್ರಯತ್ನವಾಗಿ ಬಂದಿರುವಂತಹ ಚಿತ್ರವೇ “ಗುರಿ”.

ಕೋಲಾರ ಬಳಿಯ ತೇರಳ್ಳಿ ಬೆಟ್ಟಕ್ಕೆ ಹೊಂದಿಕೊಂಡಿರುವಂತಹ ಕುಪ್ಪಳಿ ಗ್ರಾಮದ ಸರ್ಕಾರಿ ಶಾಲೆಯ ಮೇಷ್ಟ್ರು (ಅಚ್ಯುತ್ ಕುಮಾರ್) ಒಂದರಿಂದ ಐದನೇ ತರಗತಿಯ ಎಲ್ಲಾ ಮಕ್ಕಳಿಗೂ ಒಂದೇ ಸೂರಿನಡಿ ವಿದ್ಯೆಯನ್ನ ಕಲಿಸುವುದೇ ಕಾಯಕ. ಅದೇ ರೀತಿ ಊರಿನ ಅನುಕೂಲಸ್ಥರ ಹಾಗೂ ಬಡವರ ಮಕ್ಕಳು ಕೂಡ ಶಿಕ್ಷಣವನ್ನ ಪಡೆಯುತ್ತಾರೆ. ಸರ್ಕಾರದ ಆದೇಶದ ಪ್ರಕಾರ 12 ಮಕ್ಕಳು ಇದ್ದರೆ ಶಾಲೆ ನಡೆಸಲು ಅನುಮತಿ ಇರುತ್ತದೆ.

ಆದರೆ ಈ ಶಾಲೆಯಲ್ಲಿ 16 ಜನ ಮಕ್ಕಳು , ಒಬ್ಬರಿಗಿಂತ ಒಬ್ಬರು ಗುರುಗಳು ಹೇಳಿಕೊಟ್ಟಂತ ಪಾಠವನ್ನು ಅಚ್ಚುಕಟ್ಟಾಗಿ ಓದಿಕೊಳ್ಳುವ ಮಕ್ಕಳೇ ಹೆಚ್ಚು , ಅದರಲ್ಲೂ ಕೆಲವರ ತುಂಟಾಟ ತರಲೆ ಇದ್ದದ್ದೇ. ಕುಡುಕ ಗಂಡ ರಾಮಚಂದ್ರ (ಉಗ್ರಂ ಮಂಜು) ಪತ್ನಿ ಸೀತಕ್ಕ (ಜಯಶ್ರೀ) ಳಿಗೆ ಇಬ್ಬರು ಮುದ್ದಾದ ಗಂಡು ಮಕ್ಕಳು ಸುಬ್ಬು ಹಾಗೂ ಮಹೇಶ. ಮನೆಯ ಕಷ್ಟದ ಪರಿಸ್ಥಿತಿಯ ನಡುವೆಯೂ ಶಾಲೆಗೆ ಹೋಗಿ ಚೆನ್ನಾಗಿ ಓದಿಕೊಳ್ಳುತ್ತಾ , ಕನ್ನಡ , ಇಂಗ್ಲಿಷ್ ಎಲ್ಲವನ್ನು ಗುರುವಿನಿಂದ ಕಲಿಯುತ್ತಾ ಡಾಕ್ಟರ್ , ಇಂಜಿನಿಯರ್ ಆಗುವ ಕನಸನ್ನ ಹೊಂದಿರುತ್ತಾರೆ.

ಇನ್ನು ಒಂದೊಂದು ಮಕ್ಕಳ ಕುಟುಂಬದಲ್ಲೂ ಒಂದೊಂದು ರೀತಿಯ ಬದುಕು, ಬವಣೆ. ಇದರ ನಡುವೆ ಶಾಲೆಯ ಇನ್ಸ್ಪೆಕ್ಷನ್ ಗೆ ಬರುವ ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಮಕ್ಕಳು ಕೊಡುವ ಉತ್ತರದಿಂದ ಮೇಷ್ಟ್ರು ಖುಷಿಯಾಗುತ್ತಾರೆ. ಇದರ ನಡುವೆ ಪ್ರೈವೇಟ್ ಶಾಲೆ ನಡೆಸುವ ವ್ಯಕ್ತಿ ಒಂದೇ ಊರಲ್ಲಿ ಎರಡೆರಡು ಶಾಲೆಯನ್ನ ಕಟ್ಟಿ ವಿದ್ಯೆಯನ್ನ ವ್ಯಾಪಾರ ಮಾಡಿತ್ತಾ ಹೆಚ್ಚು ಹಣವನ್ನ ಸಂಪಾದಿಸಲು ನಿರ್ಧರಿಸಿ, ಅಕ್ಕ ಪಕ್ಕದ ಗ್ರಾಮದ ಮಕ್ಕಳ ತಂದೆ ತಾಯಿಯನ್ನ ಫ್ರೀ ಅಡ್ಮಿಶನ್ ಮಕ್ಕಳಿಗೆ ಕೊಡುವುದಾಗಿ ನಂಬಿಸಿ ತನ್ನ ಕಾನ್ವೆಂಟ್ ಗೆ ಕರೆತರಲು ಟೀಚರ್ಸ್ಗಳಿಗೆ ಆದೇಶ ನೀಡುತ್ತಾನೆ.

ಹಾಗೆಯೇ ಶಿಕ್ಷಣ ಇಲಾಖೆಯ ಅಧಿಕಾರಿಗೆ ಲಂಚವನ್ನು ನೀಡಿ ಅನುಮತಿಯನ್ನು ಕೂಡ ಪಡೆಯುತ್ತಾನೆ. ಇದಕ್ಕೆ ಮಾರುಹೋಗುವ ತಂದೆ ತಾಯಿಗಳು ಸರ್ಕಾರಿ ಶಾಲೆಯಿಂದ ಮಕ್ಕಳನ್ನು ಕಾನ್ವೆಂಟ್ ಗೆ ಸೇರಿಸುತ್ತಾರೆ. ಇನ್ನು ಸರ್ಕಾರಿ ಶಾಲೆಯಲ್ಲಿ ಆರು ಬಡ ವಿದ್ಯಾರ್ಥಿಗಳು ಮಾತ್ರ ಉಳಿಯುತ್ತಾರೆ. ಸರ್ಕಾರದ ಆದೇಶದ ಪ್ರಕಾರ 12 ಮಕ್ಕಳು ಇಲ್ಲದ ಕಾರಣ ಶಾಲೆಯು ಮುಚ್ಚುವಂಥ ಸ್ಥಿತಿಗೆ ಹೋಗುತ್ತದೆ. ಮತ್ತೆ ಶಾಲೆ ತೆರೆಯಬೇಕಾದರೆ ಸಿಎಂ ಒಪ್ಪಿಗೆ ಇದ್ದರೆ ಮಾತ್ರ ಸಾಧ್ಯ ಎಂದು ತಿಳಿಯುವ ಸುಬ್ಬು ಹಾಗೂ ಮಹೇಶ ಯಾರಿಗೂ ಹೇಳದಂತೆ ಬೆಂಗಳೂರಿಗೆ ಬಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಪರದಾಡುತ್ತಾರೆ.

ಇದರ ನಡುವೆ ಆಸಿಫ್ ಎಂಬ ಇಂಟರ್ನ್ಯಾಷನಲ್ ಮಕ್ಕಳ ಮಾರಾಟದ ದಂಧೆಕೋರರ ತಂಡದ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾರೆ.ಇಲ್ಲಿಂದ ಎದುರಾಗುವ ಒಂದಷ್ಟು ರೋಚಕ ಘಟನೆಗಳು ಹಲವು ತಿರುಗುಗಳ ಪಡೆದು ಕೊನೆ ಹಂತಕ್ಕೆ ಬರುತ್ತದೆ. ಮಕ್ಕಳು ಸಿಎಂ ರನ್ನ ಭೇಟಿ ಆಗ್ತಾರ.. ಊರಿನ ಶಾಲೆ ತೆರೆಯುತ್ತಾ…
ಮಕ್ಕಳ ಕಳ್ಳರು ಏನಾಗುತ್ತಾರೆ..ಇದಕ್ಕೆಲ್ಲ ಉತ್ತರ ನೀವು ಗುರಿ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಬೇಕು.

ಸರ್ಕಾರಿ ಶಾಲೆಯ ಬಗ್ಗೆ ನಿರ್ದೇಶಕರು ಆಲೋಚನೆ ಮಾಡಿ ತೆರೆಯ ಮೇಲೆ ತಂದಿರುವ ವಿಚಾರ ಉತ್ತಮವಾಗಿದೆ. ಇದೊಂದು ಜಾಗೃತಿ ಮೂಡಿಸುವ ಚಿತ್ರವಾಗಿದ್ದು , ಸರ್ಕಾರಿ ಶಾಲೆಯ ಅಗತ್ಯತೆ ಮತ್ತು ಅದರ ಅಳಿವು ಉಳಿವಿನ ಬಗ್ಗೆ ಸೂಕ್ಷ್ಮವಾಗಿ ಹೇಳುವ ಪ್ರಯತ್ನವನ್ನ ಮಾಡುವುದರ ಜೊತೆಗೆ ಮಕ್ಕಳ ಬಗ್ಗೆ ಮನೆಯವರ ಎಷ್ಟು ಜಾಗೃತಿ ವಹಿಸಬೇಕು , ಮಕ್ಕಳ ಅಂಗಾಂಗ ಕಳ್ಳರ ಅಟ್ಟಹಾಸದ ಬಗ್ಗೆ ಬೆಳಕು ಚೆಲ್ಲಿರುವ ರೀತಿ ಜೊತೆ ಕ್ಲೈಮ್ಯಾಕ್ಸ್ ಗಮನ ಸೆಳೆಯುವಂತೆ ತಂದಿದ್ದಾರೆ.

ಒಂದು ಉಪಯುಕ್ತ , ಅರ್ಥಪೂರ್ಣ ಚಿತ್ರವನ್ನು ನಿರ್ಮಿಸಿರುವ ನಿರ್ಮಾಪಕರ ಆಲೋಚನೆ ಮೆಚ್ಚಲೇಬೇಕು.ಇನ್ನು ತಾಂತ್ರಿಕವಾಗಿ ಹಾಡುಗಳು ಕೂಡ ಅರ್ಥಗರ್ಭಿತವಾಗಿ ಮನಮುಟ್ಟುತ್ತದೆ. ಛಾಯಾಗ್ರಾಹಕರ ಕೈಚಳಕ , ಸಂಕಲನದ ಕೆಲಸ ಅಚ್ಚುಕಟ್ಟಾಗಿದೆ. ಇನ್ನು ಇಬ್ಬರು ಪುಟಾಣಿಗಳು ಬಹಳ ನೈಜಕ್ಕೆ ಹತ್ತಿರವಾಗಿ ಸೊಗಸಾಗಿ ಅಭಿನಯಿಸಿದ್ದು , ಪ್ರಶಸ್ತಿಯನ್ನ ಪಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎನ್ನಬಹುದು , ಅದೇ ರೀತಿ ತಿಮ್ಮನ ಪಾತ್ರಧಾರಿ ಮಗು ಕೂಡ ನಗುಸುವಲ್ಲಿ ಗೆದ್ದಿದ್ದಾನೆ.

ಕುಡುಕ ತಂದೆಯಾಗಿ ಉಗ್ರಂ ಮಂಜು ಪಾತ್ರಕ್ಕೆ ನ್ಯಾಯ ನೀಡಿದ್ದು , ತಾಯಿಯಾಗಿ ಜಯಶ್ರೀ ಕೂಡ ಅದ್ಭುತವಾಗಿ ನಟಿಸಿದ್ದಾರೆ. ಇನ್ನು ಚಿತ್ರದ ಕೇಂದ್ರ ಬಿಂದು ಸ್ಕೂಲ್ ಮಾಸ್ಟರ್ ಪಾತ್ರದಲ್ಲಿ ಅಚ್ಚುತ್ ಕುಮಾರ್ ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿ, ಒಬ್ಬ ಮೇಷ್ಟ್ರು ಎಂದರೆ ಹೀಗೆ ಇರಬೇಕು ಎನ್ನುವಂತೆ ಅಭಿನಯಿಸಿದ್ದಾರೆ. ಶಿಕ್ಷಣಾಧಿಕಾರಿಯಾಗಿ ಸಂದೀಪ್ ಮದಾನಿ , ಮುಖ್ಯಮಂತ್ರಿ ಪಾತ್ರದಲ್ಲಿ ಟಿ. ಎಸ್. ನಾಗಭರಣ , ಗೃಹ ಮಂತ್ರಿ ಪಾತ್ರದಲ್ಲಿ ಜಾಕ್ ಜಾಲಿ ಜಾಲಿ , ಚಂದ್ರಪ್ರಭ , ಪವನ್ ಕುಮಾರ್ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಉತ್ತಮ ಸಾಥ್ ನೀಡಿದ್ದಾರೆ. ಮನೋರಂಜನಾ ಅಂಶಗಳು ಹೆಚ್ಚು ಕಾಣದಿದ್ದರೂ , ಒಂದು ಉತ್ತಮ ಸಂದೇಶ ಇರುವ ಚಿತ್ರ ಇದಾಗಿದ್ದು , ಎಲ್ಲರೂ ಒಮ್ಮೆ ನೋಡಬೇಕು.

error: Content is protected !!