ಸೂಕ್ಷ್ಮ ಸಂಗತಿಗಳ “ಗ್ರೀನ್ ಗರ್ಲ್” ಚಿತ್ರಕ್ಕೆ ಸಿಕ್ತು KRG ಸಾಥ್.
ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ಕೆಆರ್‌ಜಿ ಸಿನಿಮಾ ನಿರ್ಮಾಣ ಸಂಸ್ಥೆ ಹೊಸ ಪ್ರತಿಭೆಗಳಿಗೆ, ಹೊಸ ರೀತಿಯ ಸಿನಿಮಾಗಳಿಗೆ ಹೆಚ್ಚು ಒತ್ತು ನೀಡುತ್ತಿದೆ. ಎಕ್ಕ ಸಿನಿಮಾದ ಸೂಪರ್ ಸಕ್ಸಸ್ ಬಳಿಕ ಕೆಆರ್‌ಜಿ ಸಂಸ್ಥೆ ಮತ್ತೊಂದು ಸಿನಿಮಾ ರಿಲೀಸ್ ಮಾಡಲು ಸಜ್ಜಾಗಿದೆ. ಹೌದು ಮತ್ತೊಂದು ವಿಭಿನ್ನ ಸಿನಿಮಾ ಮೂಲಕ ಕೆಆರ್‌ಜಿ ಸಂಸ್ಥೆ ಅಭಿಮಾನಿಗಳ ಮುಂದೆ ಬರುತ್ತಿದೆ. ಯುವ ಪ್ರತಿಭೆ ಸಾರ್ಥಕ್ ಹೆಗ್ಡೆ ನಿರ್ದೇಶಿಸಿದ ‘ಗ್ರೀನ್ ಗರ್ಲ್’ ಸಿನಿಮಾವನ್ನು ಕೆಆರ್‌ಜಿ ಸಂಸ್ಥೆ ರಿಲೀಸ್ ಮಾಡುತ್ತಿದೆ. ಗ್ರೀನ್ ಗರ್ಲ್ ಈಗಾಗಲೇ ಟ್ರೈಲರ್ ಮೂಲಕ ಸಿಕ್ಕಾಪಟ್ಟೆ ಸುದ್ದು ಮಾಡಿದ ಸಿನಿಮಾ. ಟ್ರೈಲರ್ ಮೂಲಕ ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿದ್ದ ಗ್ರೀನ್ ಗರ್ಲ್ ಇದೀಗ ಚಿತ್ರಂದಿರಕ್ಕೆ ಬರತ್ತಿದೆ. ಸಿನಿಮಾ ಬಿಡುಗಡೆಗೆ ಕೆಆರ್‌ಜಿ ಅಂತ ದೊಡ್ಡ ನಿರ್ಮಾಣ ಸಂಸ್ಥೆಯ ಸಾಥ್ ಸಿಕ್ಕಿರುವುದು ಯುವ ಚಿತ್ರತಂಡಕ್ಕೆ ಮತ್ತಷ್ಟು ಬಲಬಂದಂತೆ ಆಗಿದೆ.
ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಆರ್‌ಜಿ ಸಂಸ್ಥೆ, ‘ಕೆಲವು ಕಥೆಗಳನ್ನು ಜೋರಾಗಿ ಮತ್ತು ಸ್ಟ್ರಾಂಗ್ ಆಗಿ ಹೇಳಬೇಕು. ಕೆಆರ್‌ಜಿ ಸಂಸ್ಥೆ ಯಾವಾಗಲೂ ಹೊಸ ಪ್ರತಿಭೆಗಳ ಬೆಂಬಲಕ್ಕೆ ನಿಂತಿರುತ್ತೆ. ಸಾರ್ಥಕ್ ಹೆಗ್ಡೆ ಅವರ ದಿಟ್ಟ, ನಿರ್ಭೀತ ಚಿತ್ರ ಗ್ರೀನ್ ಗರ್ಲ್ ಸಿನಿಮಾವನ್ನು ಪ್ರಸ್ತುತಪಡಿಸಲು ತುಂಬಾ ಉತ್ಸುಕರಾಗಿದ್ದೇವೆ. ಗ್ರೀನ್ ಗರ್ಲ್ ಅಂತರ್ಧರ್ಮೀಯ ಪ್ರೀತಿ ಮತ್ತು ನೈತಿಕ ಪೊಲೀಸ್‌ಗಿರಿಯ ಬಗ್ಗೆ ಇದೆ. ಸಾರ್ಥಕ್ ಹೆಗ್ಡೆ ಖಂಡಿತವಾಗಿಯೂ ಕನ್ನಡದ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರಾಗಲಿದ್ದಾರೆ’ ಎಂದು ಹೇಳಿದ್ದಾರೆ. ಈ ಬಗ್ಗೆ ಸಾರ್ಥಕ್ ಪ್ರತಿಕ್ರಿಯೆ ನೀಡಿ, ‘ಕೆಆರ್‌ಜಿ ಸ್ಟುಡಿಯೋಸ್ ಗ್ರೀನ್ ಗರ್ಲ್ ಸಿನಿಮಾವನ್ನು ಪ್ರಸ್ತುತಪಡಿಸುತ್ತಿರುವುದು ಖುುಷಿಯ ವಿಚಾರ. ಪ್ರೀತಿ, ಧರ್ಮ ಮತ್ತು ದಂಗೆಯ ಬಗ್ಗೆ ಧೈರ್ಯ ಮಾಡಿ ಸಿನಿಮಾ ಮಾಡುವುದು ತುಂಬಾ ಕಡಿಮೆ. ಆದರೆ ಗ್ರೀನ್ ಗರ್ಲ್ ಸಿನಿಮಾ ಕೂಡ ಒಂದು’ ಎಂದು ಹೇಳಿದ್ದಾರೆ.
ಕನ್ನಡದಲ್ಲಿ ಜಾತಿ, ಧರ್ಮದಂತಹ ಸೂಕ್ಷ್ಮ ಸಂಗತಿಗಳನ್ನು ಆಧರಿಸಿ ಸಿನಿಮಾ ಮಾಡುವುದು ತುಂಬಾ ಕಮ್ಮಿ. ಆದರೆ ನಿರ್ದೇಶಕ ಸಾರ್ಥಕ್ ಹೆಗ್ಡೆ ‘ಗ್ರೀನ್ ಗರ್ಲ್’ ಚಿತ್ರದಲ್ಲಿ ಅಂತಾದೊಂದು ಧೈರ್ಯ ಮಾಡಲಾಗಿದೆ. ಈಗಾಗಲೇ ರಿಲೀಸ್ ಆಗಿರುವ ಟ್ರೈಲರ್ ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು. ಹಾಗಾಗಿ ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಮಯೂರ್ ಗೌಡ, ಸುಚರಿತ, ಸುದರ್ಶನ ಆಚಾರ್ಯ ಯೆಕ್ಕಾರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಗ್ರೀನ್ ಗರ್ಲ್’ ಸೆಪ್ಟೆಂಬರ್ 12ಕ್ಕೆ ರಿಲೀಸ್ ಆಗುತ್ತಿದೆ. ಹೊಸಬರ ಗ್ರೀನ್ ಗರ್ಲ್ ಹೇಗಿರಲಿದೆ, ಟ್ರೈಲರ್ ನಲ್ಲಿದ್ದ ಕುತೂಹಲ, ಕಾತರತೆ ಸಿನಿಮಾದಲ್ಲೂ ಇರಲಿದೆಯಾ ಎನ್ನುವುದು ಸೆಪ್ಟಂಬರ್ 12ಕ್ಕೆ ಗೊತ್ತಾಗಲಿದೆ.