Cini NewsSandalwoodTV Serial

ಝೀ5 ಒಟಿಟಿಯಲ್ಲಿ ಬರ್ತಿದೆ ಶಿವಣ್ಣನ “ಘೋಸ್ಟ್” ಸಿನಿಮಾ

Spread the love

ಸ್ಯಾಂಡಲ್ ವುಡ್ ನ ಸೆಂಚುರಿ ಸರ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಯಶಸ್ವಿ ಚಿತ್ರ “ಘೋಸ್ಟ್”. ಈಗ ಜಿ ಝೀ 5ನಲ್ಲಿ Ghost ಮಹಾ ಯಶಸ್ಸಿನ ಸಂಭ್ರಮ ಆಚರಿಸಿದೆ. ಆಟೋಗೆ ಘೋಸ್ಟ್ ಪೋಸ್ಟರ್ ಅಂಟಿಸಿ ಪ್ರಮೋಷನ್ ಮಾಡಿದ ಶಿವಣ್ಣನ ಫ್ಯಾನ್ಸ್. ಝೀ5 ಒಟಿಟಿಯಲ್ಲಿ ಧೂಳ್ ಎಬ್ಬಿಸುತ್ತಿರುವ ಘೋಸ್ಟ್ ಸಿನಿಮಾ.

100 ಮಿಲಿಯನ್ಸ್ ನಿಮಿಷಗಳಷ್ಟು ವೀಕ್ಷಣೆ ಕಂಡು ಹೊಸ ರೆಕಾರ್ಟ್ ಕ್ರಿಯೇಟ್ ಮಾಡಿದ ಘೋಸ್ಟ್. ನಿರ್ದೇಶಕ ಶ್ರೀನಿ ಒಂದು ಆಕ್ಷನ್ ಹಾಗೂ ಥ್ರಿಲ್ಲರ್ ಕಂಟೆಂಟ್ ಚಿತ್ರವನ್ನು ಬಹಳ ವಿಭಿನ್ನವಾಗಿ ತೆರೆಯ ಮೇಲೆ ತಂದು ಪ್ರೇಕ್ಷಕರ ಗಮನವನ್ನು ಸೆಳೆದರು.

ಸಂದೇಶ್ ನಾಗರಾಜ್ ನಿರ್ಮಾಣದ ಈ ಚಿತ್ರದಲ್ಲಿ ಬಾಲಿವುಡ್ ನಟ ಅನುಪಮ್ ಕೇರ್, ಮಲಯಾಳಂ ನಟ ಜಯರಾಮ್ , ಸತ್ಯ ಪ್ರಕಾಶ್, ಅರ್ಚನಾ ಜೋಯಿಸ್ ಸೇರಿದಂತೆ ದೊಡ್ಡ ತಾರಾ ಬಳಗವೇ ಅಭಿನಯಿಸಿದ್ದು , ಮಹೇಂದ್ರ ಸಿಂಹ ಅದ್ಭುತ ಛಾಯಾಗ್ರಹಣ ಹಾಗೂ ಅರ್ಜುನ್ ಜನ್ಯ ಮ್ಯೂಸಿಕ್ ಭರ್ಜರಿಯಾಗಿದೆ.

Visited 1 times, 1 visit(s) today
error: Content is protected !!