“ಗದಾಧಾರಿ ಹನುಮಾನ್” ಟೀಸರ್ ಬಿಡುಗಡೆ
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟಿನಲ್ಲಿರುವ ಶ್ರೀ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ “ಗದಾಧಾರಿ ಹನುಮಾನ್” ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಅಚ್ಚುಕಟ್ಟಾಗಿ ಆಯೋಜನೆಗೊಂಡಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ನರಸಿಂಹಲು , ಉಪಾಧ್ಯಕ್ಷ ಶಿಲ್ಪ ಶ್ರೀನಿವಾಸ್ , ಕಾರ್ಯದರ್ಶಿ ಏನ್. ಎಂ. ಕುಮಾರ್ , ಮಾಜಿ ಅಧ್ಯಕ್ಷರಾದ ಎನ್.ಎಂ. ಸುರೇಶ್ ಹಾಗೂ ಮುಖ್ಯ ಅತಿಥಿ , ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಯುವ ಪ್ರತಿಭೆಗಳ ಚಿತ್ರದ ಟೀಸರ್ ಬಿಡುಗಡೆ ಮಾಡಿದರು.
ತದನಂತರ ಮಾತನಾಡುತ್ತಾ ನಾವೆಲ್ಲರೂ ಹಿಂದೂ ಸಂಪ್ರದಾಯವನ್ನು ಪಾಲಿಸಿಕೊಂಡು ಬೆಳೆದು ಬಂದವರು, ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ , ಇಂದು ವಿಶೇಷವಾಗಿ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಈ ಚಿತ್ರದ ಟೀಸರ್ ಬಿಡುಗಡೆ ಮಾಡುತ್ತಿರುವುದು ಬಹಳ ಸಂತೋಷವಾಗಿದೆ.
ತಂಡದ ಶ್ರಮ ಟೀಸರ್ ನಲ್ಲಿ ಚೆನ್ನಾಗಿ ಕಾಣುತ್ತದೆ. ಚಿತ್ರ ಬಿಡುಗಡೆಗೊಂಡು ಯಶಸ್ವಿಯಾಗಲಿ ಈ ಚಿತ್ರದ ನೂರು ದಿನದ ಸಂಭ್ರಮಕ್ಕೆ ಇದೇ ಸ್ಥಳದಲ್ಲಿ ನಾವೆಲ್ಲರೂ ಸೇರುವಂತೆ ಆಗಲಿ ಎಂದರು.
ಹಾಗೆಯೇ ನಮ್ಮ ಅಧ್ಯಕ್ಷ ನರಸಿಂಹಲು ರವರ ಸುಪುತ್ರ , ಚಿತ್ರದ ನಟ ರವಿಕಿರಣ್ ಗೆ ಯಶಸ್ಸು ಸಿಗಲಿ ಉನ್ನತ , ಮಾಜಿ ಅಧ್ಯಕ್ಷ ಎನ್.ಎಂ. ಸುರೇಶ್ ಪುತ್ರ ನಾಯಕನಾಗುತ್ತಿದ್ದಾರೆ ಅವರಿಗೂ ಶುಭವಾಗಲಿ ಎಂದರು.
ನಂತರ ಅಧ್ಯಕ್ಷ ನರಸಿಂಹಲು ಮಾತನಾಡುತ್ತಾ ಹೊಸ ಪ್ರತಿಭೆಗಳು ಬರಬೇಕು, ಚಿತ್ರರಂಗಕ್ಕೆ ಮತ್ತಷ್ಟು ಚೈತನ್ಯ ಬರುತ್ತೆ, ಈ ತಂಡಕ್ಕೆ ದೇವರ ಅನುಗ್ರಹ ಸಿಗಲಿ ಎಂದರು. ಹಾಗೆಯೇ ಸರಕಾರದಿಂದ ಬಂದಿರುವಂತಹ ಮಾಹಿತಿ ಚಿತ್ರರಂಗಕ್ಕೆ ದೊಡ್ಡ ಕೊಡುಗೆಯಾಗಿದೆ. ಇನ್ನು ಮುಂದೆ ಎಲ್ಲಾ ಚಿತ್ರಮಂದಿರಗಳ ಟಿಕೆಟ್ ದರ 200 ಮಾಡಲಿರುವ ವಿಚಾರ ಸಂತೋಷವಾಗಿದೆ. ಇದು ಸುದೀರ್ಘ ಹೋರಾಟದ ಫಲ ಎಂದು ಹೇಳಿದರು.
ಇನ್ನು ಉಪಾಧ್ಯಕ್ಷ ಶಿಲ್ಪಾ ಶ್ರೀನಿವಾಸ್ ಮಾತನಾಡುತ್ತಾ ಇದು ನಮ್ಮ ನಾಯಕನ ಮೂರನೇ ಚಿತ್ರ. ತಂಡ ಬಹಳಷ್ಟು ಶ್ರಮಪಟ್ಟು ಚಿತ್ರ ಮಾಡಿದೆ. ಎಲ್ಲಾ ಕಾಲದಲ್ಲೂ ಗೆಲುವು ಸೋಲು ಇದ್ದಿದ್ದೆ , ಈಗ ಒಳ್ಳೆಯ ಸಮಯ ಬಂದಿದೆ. ಚಿತ್ರೋದ್ಯಮಕ್ಕೆ ಬೆಂಬಲ ನೀಡಿ , ಉತ್ತಮ ಚಿತ್ರಗಳು ಗೆಲ್ಲುವಂತಾಗಲಿ ಎಂದರು.
ಮಾಜಿ ಅಧ್ಯಕ್ಷ ಎನ್. ಎಂ . ಸುರೇಶ್ ಮಾತನಾಡುತ್ತಾ ಚಿತ್ರದ ಟೀಸರ್ ಬಹಳ ಸೊಗಸಾಗಿ , ಕುತೂಹಲಕಾರಿಯಾಗಿದೆ. ಯುದ್ಧ ತಂಡಕ್ಕೆ ಸಿಗಲಿ ಎನ್ನುತ್ತಾ, ನಿರಂತರ ಶ್ರಮದ ಫಲವಾಗಿ ಟಿಕೆಟ್ ದರ 200 ಏಕರೂಪ ಬಂದಿದೆ. ನನ್ನ ಕಾಲಘಟ್ಟದಲ್ಲಿ ಎಲ್ಲರ ಸಹಕಾರದೊಂದಿಗೆ ಚಲನಚಿತ್ರ ವಾಣಿಜ್ಯ ಮಂಡಳಿಯ ಕಲ್ಯಾಣ ನಿಧಿ ದುಪ್ಪಟ್ಟು ಮಾಡಿದ್ದೇನೆ, ಇನ್ನು ಬಹಳಷ್ಟು ಕೆಲಸ ಆಗಬೇಕಿದೆ, ಎಲ್ಲರೂ ಸೇರಿ ಚಿತ್ರೋದ್ಯಮದ ಜೊತೆ ಸಾಗೋಣ ಎಂದರು.
ಇನ್ನು ಕಾರ್ಯದರ್ಶಿ ಎಂ.ಎನ್.ಕುಮಾರ್ ಮಾತನಾಡುತ್ತಾ ಆಂಜನೇಯ ಸ್ವಾಮಿ ಸ್ಥಳ ಬಹಳ ವಿಶೇಷವಾದದ್ದು, ಇಲ್ಲಿ ಸಾ.ರಾ. ಗೋವಿಂದು ರವರು ಟೀಸರ್ ಬಿಡುಗಡೆ ಮಾಡಿದ್ದಾರೆ . ಚಿತ್ರ ಸಕ್ಸಸ್ ಆಗಲಿದೆ ಎಂದರು. ಯುವ ಪ್ರತಿಭೆಗಳ ಸಾರಥ್ಯದಲ್ಲಿ ನಿರ್ಮಾಣ ವಾಗಿರುವ “ಗದಾಧಾರಿ ಹನುಮಾನ್” ಚಿತ್ರವು ಕನ್ನಡ, ತೆಲುಗು , ಹಿಂದಿಯಲ್ಲಿ ಬಿಡುಗಡೆಯಾಗಲಿದೆಯಂತೆ. ಈಗಾಗಲೇ ಈ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿದ್ದು, ಸಿಜಿ ವರ್ಕ್ ಕೆಲಸ ಬಹಳ ವಿಶೇಷವಾಗಿ ಮೂಡಿ ಬಂದಿದೆಯಂತೆ.
ಈ ಚಿತ್ರದಲ್ಲಿ ದುಷ್ಟ ಶಕ್ತಿಗಳ ಎದುರು ದೈವಶಕ್ತಿಯ ಪವಾಡದ ಸುತ್ತ ಕಥಾನಕವಿದ್ದು , ಮೈ ಜುಮ್ ಎನಿಸುವ ರೋಮಾಂಚನ , ಭಕ್ತಿ ಪರವಶ ಅಂಶಗಳು ಚಿತ್ರದಲ್ಲಿ ಸಿಗಲಿದೆಯಂತೆ. ಹಾರರ್ , ಕಾಮಿಡಿ , ಆಕ್ಷನ್ ಸನ್ನಿವೇಶಗಳು ಚಿತ್ರದಲ್ಲಿ ಒಳಗೊಂಡಿದೆಯಂತೆ.
ಈ ಚಿತ್ರದ ನಟ ರವಿ ಕಿರಣ್ ಮಾತನಾಡುತ್ತಾ ತಾರಕಾಸುರ , ರಥಾವರ ಚಿತ್ರದ ನಂತರ ಅಭಿನಯಿಸುತ್ತಿರುವ ನನ್ನ ಮೂರನೇ ಚಿತ್ರ ಇದಾಗಿದೆ. ಈ ಚಿತ್ರದಲ್ಲಿ ನಾನು ಎರಡು ಶೇಡ್ ಗಳಲ್ಲಿ ಕಾಣಿಸಿಕೊಳ್ಳುತ್ತೇನೆ. ಚಿತ್ರದ ಮೊದಲ ಭಾಗದಲ್ಲಿ ಹಾರರ್ , ಕಾಮಿಡಿ ಜೊತೆ ಸಾಗಿದರೆ , ದ್ವಿತೀಯ ಭಾಗದಲ್ಲಿ ಆಕ್ಷನ್ ಇದು , ಹನುಮಾನ್ ದೃಶ್ಯಗಳು ಗ್ರಾಫಿಕ್ಸ್ ನಲ್ಲಿ ಅಬ್ಬರಿಸಲಿದೆ.
ನಮ್ಮ ಚಿತ್ರ 2023 ರಲ್ಲಿ ಆರಂಭಗೊಂಡು ಈಗ ಬಿಡುಗಡೆ ಹಂತಕ್ಕೆ ಬಂದಿದೆ.
ಅದರಲ್ಲೂ ಸಿಜಿ ಕೆಲಸ ಹೆಚ್ಚಾಗಿದ್ದು , ಐದನೇ ಕಂಪನಿಯ ಜೊತೆ ಕೆಲಸ ಮಾಡಿಸಿದ್ದೇವೆ. ಒಂದಷ್ಟು ಅತಿ ಸೂಕ್ಷ್ಮ ವಿಚಾರವು ಈ ಚಿತ್ರದಲ್ಲಿದೆ. ಈಗಾಗಲೇ ಹೈದರಾಬಾದ್ ನಲ್ಲಿ ಇವೆಂಟ್ ಮೂಲಕ ಟೀಸರ್ ಬಿಡುಗಡೆ ಮಾಡಿದ್ದೇವೆ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಚಿತ್ರವನ್ನ ರಿಲಿಸ್ ಮಾಡುತ್ತಿದ್ದೇವೆ ನಿಮ್ಮೆಲ್ಲರ ಬೆಂಬಲ ಇರಲಿ ಎಂದರು. ರೋಹಿತ್ ಕೊಲ್ಲಿ ನಿರ್ದೇಶಕ ಮಾತನಾಡುತ್ತಾ ಇದು ನನ್ನ ಮೊದಲ ನಿರ್ದೇಶನದ ಕನ್ನಡ ಚಿತ್ರ. ನನಗೆ ನಿರ್ಮಾಪಕರು , ಕಲಾವಿದರು ತುಂಬಾ ಸಹಕಾರ ನೀಡಿದ್ದಾರೆ. ಒಳ್ಳೆ ವೈಬ್ರೇಶನ್ ಇರುವ ಚಿತ್ರ ಇದು, ವಿಚಿತ್ರದಲ್ಲಿ ನಾಯಕಿಯಾಗಿ ಹರ್ಷಿತ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಜೂಡ ಸ್ಯಾಂಡಿ ಸಂಗೀತ ಹೇಳಿದ್ದು ಹನುಮಾನ್ ಚಾಲೀಸ್ ಸೇರಿದಂತೆ ನಾಲ್ಕು ವಿಭಿನ್ನ ಹಾಡುಗಳು ನಮ್ಮ ಚಿತ್ರದಲ್ಲಿದೆ. ಅರುಣ್ ಗೌಡ ಛಾಯಾಗ್ರಹಣ ಅದ್ಭುತವಾಗಿ ಮೂಡಿ ಬಂದಿದೆ ಎಂದರು.
ಇನ್ನು ಈ ಚಿತ್ರವನ್ನು ವಿರಾಬ್ ಸ್ಟುಡಿಯೋಸ್ ಬ್ಯಾನರ್ ನಲ್ಲಿ ಬಸವರಾಜು ಹುರುಕಡ್ಲಿ ಮಾತನಾಡುತ್ತಾ ಪ್ರೀತಿ , ಶ್ರದ್ಧೆ, ಪ್ರಾಮಾಣಿಥೆ ಯಿಂದ ಮಾಡಿರೋ ಚಿತ್ರ. ಬಂದಿರೋ ಎಲ್ಲಾ ಗಣ್ಯರಿಗೂ ಧನ್ಯವಾದಗಳು , ನಮ್ಮ ಚಿತ್ರಕ್ಕೆ ಬೆಂಬಲ ನೀಡಿ ಎಂದರು ಹಾಗೆಯೇ ಮತ್ತೊಬ್ಬ ನಿರ್ಮಾಪಕ ರೇಣುಕಾ ಪ್ರಸಾದ್ ಕೆ. ಆರ್. ಮಾತನಾಡುತ್ತಾ ದುಬಾರಿ ವೆಚ್ಚದ ಗ್ರಾಫಿಕ್ಸ್ , ವಿಎಫ್ ಎಕ್ಸ್ ಹಾಗೂ ಸೌಂಡ್ ಎಫೆಕ್ಟ್ಸ್ ಮೇಕಿಂಗ್ ಚಿತ್ರದಲ್ಲಿ ಇದೆ. ತಂತ್ರಜ್ಞಾನದ ನೈಪುಣ್ಯದ ಜೊತೆ ತಾರಾಬಳಗದ ಸಹಕಾರದಿಂದ ನಮ್ಮ ಈ ಚಿತ್ರದ ಮೇಲೆ ಭರವಸೆ ಹುಟ್ಟಿಸಿದೆ ಎಂದರು.
“ಗದಾಧಾರಿ ಹನುಮಾನ್” ಸಾಹಸಮಯ, ಹಾರರ್ ಥ್ರಿಲ್ಲರ್, ದೈವತ್ವ ಹಾಗೂ ರಾಕ್ಷಸತ್ವದ ಕಥಾಹಂದರ ವಿರೋ ಚಿತ್ರ. ತಾರಕಾಸುರ ಖ್ಯಾತಿಯ ಕಿರಣ್ ( ವೈಭವ್) ಈ ಚಿತ್ರದ ನಾಯಕನಾಗಿದ್ದು, ಹೊಸ ಪ್ರತಿಭೆ ಹರ್ಷಿತಾ ನಾಯಕಿ. ಇವರೊಟ್ಟಿಗೆಕಲ್ಯಾಣ್ ಕೃಷ್ಣ, ರಮೇಶ್ ಪಂಡಿತ್, ಸುನಂದ ಕಲ್ಬುರ್ಗಿ, ನಾಗೇಶ್ ಮಯ್ಯ, ಶಿವಪ್ಪ, ಅರ್ಜುನ್, ಭೀಷ್ಮ, ಲೋಕೇಶ್ ನಟಿಸಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ, ಅರುಣ್ ಗೌಡ ಛಾಯಾಗ್ರಣ ಈ ಚಿತ್ರಕ್ಕಿದೆ. ಸಿ.ಎನ್ ಕಿಶೋರ್ ಸಂಕಲನ ಮಾಡಿದ್ದಾರೆ. ಟೈಗರ್ ಶಿವು ಸಾಹಸ ಸಂಯೋಜನೆ ಮಾಡಿದ್ದಾರೆ.ಬೆಂಗಳೂರು, ಹಂಪಿ, ಗಂಗಾವತಿ, ಅಂಜನಾದ್ರಿ, ಕಿತ್ತೂರು, ಹೊನ್ನಾಪುರ ಸ್ಥಳದಲ್ಲಿ ಚಿತ್ರೀಕರಣವಾಗಿದೆ. ಈಗ ಟೀಸರ್ ಬಿಡುಗಡೆ ಮಾಡಿದ್ದು , ಹಂತ ಹಂತವಾಗಿ ಪ್ರಚಾರದ ಮೂಲಕ ಚಿತ್ರ ಬಿಡುಗಡೆ ಮಾಡಲಿದೆಯಂತೆ.