Cini NewsMovie ReviewSandalwood

ಫೋಟೋಗ್ರಾಫರ್ ಬದುಕಿನ ಪ್ರೀತಿಯ ತಳಮಳ… “ಫುಲ್ ಮೀಲ್ಸ್” (ಚಿತ್ರವಿಮರ್ಶೆ-ರೇಟಿಂಗ್ : 3.5 /5)

Spread the love

ರೇಟಿಂಗ್ : 3.5 /5
ಚಿತ್ರ : ಫುಲ್ ಮೀಲ್ಸ್
ನಿರ್ದೇಶಕ : ಎನ್.ವಿನಾಯಕ
ನಿರ್ಮಾಪಕ : ಲಿಖಿತ್ ಶೆಟ್ಟಿ
ಸಂಗೀತ : ಗುರುಕಿರಣ್
ಛಾಯಾಗ್ರಹಣ : ಮನೋಹರ್ ಜೋಶಿ
ತಾರಾಗಣ : ಲಿಖಿತ ಶೆಟ್ಟಿ, ಖುಷೀರವಿ, ತೇಜಸ್ವಿನಿಶರ್ಮ, ರಂಗಾಯಣ ರಘು, ಸೂರಜ್ ಲೋಕ್ರೆ , ವಿಜಯ್ ಚಂಡೂರ್, ರವಿಶಂಕರ್ ಗೌಡ , ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ , ಚಂದ್ರಕಲಾ ಮೋಹನ್ ಹಾಗೂ ಮುಂತಾದವರು…

ಲೈಫ್ ನಲ್ಲಿ ಮೆಮೊರೆಬಲ್ ಮೂಮೆಂಟ್ಸ್ ನೆನಪಾಗುವುದು ಒಂದು ಸ್ಟಿಲ್ ಫೋಟೋಸ್ ನ ನೋಡಿದಾಗ ಎನ್ನಬಹುದು , ಅಂತದ್ದೇ ಒಬ್ಬ ಫೋಟೋಗ್ರಾಫಿ ತನ್ನ ಜೀವನ , ಉಸಿರು ಎಂದುಕೊಂಡು ಬದುಕು ನಡೆಸಲು ಪರದಾಡುವಂತಹ ಹುಡುಗನ ಜೀವನದಲ್ಲಿ ಬರುವ ಇಬ್ಬರು ಹುಡುಗಿಯರ ಸ್ನೇಹ , ಸಲುಗೆ , ಪ್ರೀತಿಯ ಸುಳಿಗೆ ಸಿಕ್ಕಿಹಾಕಿಕೊಳ್ಳುವನ ಸುತ್ತ ಸಂಬಂಧ , ಸ್ನೇಹ , ಸಮಸ್ಯೆದ ಲೇಪನದ ಜೊತೆಗೆ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ರೊಮ್ಯಾಂಟಿಕ್ ಕಾಮಿಡಿ ಚಿತ್ರ “ಫುಲ್ ಮೀಲ್ಸ್”.

ತನ್ನ ಮಾವ (ರಂಗಾಯಣ ರಘು) ನ ಆಶ್ರಯ ಸಹಾಯದೊಂದಿಗೆ ತನ್ನದೇ ಒಂದು ಫೋಟೋ ಸ್ಟುಡಿಯೋವನ್ನ ನಡೆಸುವ ಲಕ್ಕಿ (ಲಿಖಿತ್ ಶೆಟ್ಟಿ) ಹೆಚ್ಚು ಕೆಲಸವಿಲ್ಲದೆ ಪರದಾಡುತ್ತಾನೆ. ಇನ್ನು ಮಿರಿಂಡ (ವಿಜಯ್ ಚಂಡೂರ್) ಸಹಾಯಕನಾಗಿ ಲಕ್ಕಿ ಜೊತೆ ಇರುತ್ತಾನೆ. ಇವರ ಪರದಾಟ ನೋಡುವ ಗೆಳತಿ ಪ್ರೀತಿ (ತೇಜಸ್ವಿನಿ ಶರ್ಮ) ತಾನು ಮದುವೆ ಮನೆಯಲ್ಲಿ ಮೇಕಪ್ ಕೆಲಸಕ್ಕೆ ಹೋದಾಗ ಲಕ್ಕಿಗೆ ಫೋಟೋಗ್ರಫಿ ಕೆಲಸ ಕೊಡಿಸುವ ಕೆಲಸಕ್ಕೆ ಮುಂದಾಗುತ್ತಾಳೆ.

ಮತ್ತೊಂದೆಡೆ ಮಾವ ಅಳಿಯನಿಗಾಗಿ ಮನೆ ಅಡ ಇಟ್ಟು ಸ್ಟುಡಿಯೋಗೆ ಹಣ ನೀಡಿರುತ್ತಾನೆ. ಸಣ್ಣಪುಟ್ಟ ಕೆಲಸದ ಮೂಲಕ ಹಣ ಪಡೆದು ಒದ್ದಾಡುವ ಲಕ್ಕಿಗೆ ಕೃಷಿ ಮಾಡುವವರಿಗೆ ಗೊಬ್ಬರ , ಬೀಜ ಮಾರುವ ಮಾವ ಪುಲಿಕೇಶಿ ಮೂಲಕ ರಾಮನದೊಡ್ಡಿಯ ಶ್ರೀಮಂತ ವ್ಯಕ್ತಿ ಶಂಕ್ರಣ್ಣ (ರಾಜೇಶ್ ನಟರಂಗ) ರ ತಂಗಿ ಪೂಜಾ (ಖುಷಿ ರವಿ)ಯ ಫ್ರೀ ವೆಡ್ಡಿಂಗ್ ಫೋಟೋಶೂಟ್ ಗಾಗಿ ಕೆಲಸ ಕೊಡಿಸುತ್ತಾನೆ. ಇನ್ನು ವಿದೇಶದಿಂದ ಬಂದ ಗಂಡು ಕಿರಣ್ (ಸೂರಜ್ ಲೋಕ್ರೆ) ಪೂಜಾ ಹಾಗೂ ಅವರ ಕುಟುಂಬದ ಜೊತೆ ಒಳ್ಳೆ ಬಾಂಧವ್ಯ ಹೊಂದಿರುತ್ತಾನೆ.

ಇನ್ನು ಅದೇ ಊರಿನ ಲಕ್ಷ್ಮಣ ಎಂಬ ರೌಡಿಯ ತಮ್ಮ ಪೂಜಾಳನ್ನ ಇಷ್ಟಪಡುತ್ತಿರುತ್ತಾನೆ. ಇದರ ನಡುವೆ ಫ್ರೀ ವೈಟಿಂಗ್ ಶೂಟ್ ವಿಭಿನ್ನ ಹಾಗೂ ವಿಶೇಷ ರೀತಿಯಲ್ಲಿ ಮುಗಿಸಿ ಹಣ ಪಡೆದು ತನ್ನ ಸಮಸ್ಯೆ ಬಗೆಹರಿಸಿಕೊಳ್ಳುವ ಹಾದಿಯಲ್ಲಿ ಲಕ್ಕಿ ಸಿದ್ದನಾಗುತ್ತಾನೆ. ಪೂಜಾ ಗೆ ಮೇಕಪ್ ಮಾಡಲು ಬರುವ ಗೆಳತಿ ಪ್ರೀತಿ , ತನ್ನ ಪ್ರಿಯಕರ ಲಕ್ಕಿ ಕೂಡ ಫೋಟೋಶೂಟ್ ಕೆಲಸಕ್ಕೆ ಬಂದ ಖುಷಿಯಲ್ಲಿ ಪ್ರೀತಿ ಇರುತ್ತಾಳೆ.

ಫೋಟೋಶೂಟ್ ಮಾಡುವ ಸಮಯದಲ್ಲಿ ಪೂಜಾ ಲಕ್ಕಿಯನ್ನು ಇಷ್ಟಪಡುತ್ತಾ ಹೋಗುತ್ತಾಳೆ , ಇದನ್ನು ನೋಡುವ ಪ್ರೀತಿ ಎಚ್ಚರಿಕೆಯ ಮಾತನಾಡುತ್ತಾಳೆ. ಆಕಸ್ಮಿಕ ಒಂದು ಗಲಾಟೆಯಲ್ಲಿ ಪೂಜಾ ಹಾಗು ಕಿರಣ್ ಗೆ ರೌಡಿಗಳು ಹೊಡೆಯುತ್ತಾರೆ. ಇಲ್ಲಿಂದ ಮತ್ತೊಂದು ಫ್ಲಾಶ್ ಬ್ಯಾಕ್ ಘಟನೆಯಲ್ಲಿ ಲಕ್ಕಿ ಹಾಗೂ ಬಂಗಾರಿಯ ಪ್ರೇಮ ಕಥೆ ತೆರೆದುಕೊಳ್ಳುತ್ತದೆ. ಅದು ಇಡೀ ಚಿತ್ರದ ತಿರುವಿಗೆ ಹೊಸ ಟ್ವಿಸ್ಟ್ ಪಡೆಯುತ್ತಾ ಕೊನೆ ಹಂತಕ್ಕೆ ತಲುಪುತ್ತದೆ.

ಫ್ಲಾಶ್ ಬ್ಯಾಕ್ ಏನು…
ಇದು ತ್ರಿಕೋನ ಪ್ರೇಮ ಕಥೆನಾ..
ಮಾವನ ಸಾಲ ತೀರ್ಥ ತೀರುತ್ತಾ…
ಕ್ಲೈಮಾಕ್ಸ್ ಏನಾಗುತ್ತೆ… ಇದಕ್ಕಾಗಿ ನೀವೆಲ್ಲರೂ ಚಿತ್ರ ನೋಡಲೇಬೇಕು.

ಒಬ್ಬ ಪ್ರೀ ವೆಡ್ಡಿಂಗ್ ಫೋಟೋಗ್ರಾಫರ್ ಬದುಕಿನಲ್ಲಿ ನಡೆಯುವಂತಹ ಕಷ್ಟಕಾರ್ಪಣ್ಯಗಳು, ಒದ್ದಾಟದ ನಡುವೆ ಪ್ರೀತಿಯ ಸೆಳೆತ ಏನೆಲ್ಲಾ ಮಾಡುತ್ತೆ ಎಂಬುದನ್ನು ಅಚ್ಚುಕಟ್ಟಾಗಿ ತೋರಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು.

ಕಥೆಯಲ್ಲಿ ಹೇಳಿಕೊಳ್ಳುವಂತಹ ಹೊಸತನ ವಿಲ್ಲದಿದ್ದರೂ ನಿರೂಪಣೆ ಗಮನ ಸೆಳೆಯುತ್ತದೆ. ಇನ್ನು ಚಿತ್ರದ ಟೈಟಲ್ ಹಾಗೂ ಕಥೆಗೆ ಏನು ಸಂಬಂಧ ಎಂಬ ಪ್ರಶ್ನೆ ಮೂಡುತ್ತದೆ. ಇನ್ನು ಒಂದಷ್ಟು ಸಂಭಾಷಣೆಗಳು ಉತ್ತಮವಾಗಿದ್ದು , ಸಂಗೀತಕ್ಕಿಂತ ಹಿನ್ನೆಲೆ ಸಂಗೀತ ಗಮನ ಸೆಳೆದಿದೆ.

ಛಾಯಾಗ್ರಾಹಕರ ಕೈಚಳಕ ಚೆನ್ನಾಗಿದೆ. ಇನ್ನು ಈ ಚಿತ್ರವನ್ನ ನಿರ್ಮಿಸುವುದರ ಜೊತೆಗೆ ನಾಯಕನಾಗಿ ಲಿಖಿತ್ ಶೆಟ್ಟಿ ಪಾತ್ರಕ್ಕೆ ಜೀವ ತುಂಬಲು ಬಹಳ ಶ್ರಮ ಪಟ್ಟಿದ್ದು , ಸಾಹಸ ಸನ್ನಿವೇಶವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ನಟಿ ಖುಷಿ ರವಿ ಅದ್ಭುತವಾಗಿ ಮತ್ತೊಮ್ಮೆ ತಮ್ಮ ಪಾತ್ರಕ್ಕೆ ನ್ಯಾಯವನ್ನು ನೀಡಿದ್ದಾರೆ. ಇನ್ನೋರ್ವ ನಟಿ ತೇಜಸ್ವಿನಿ ಶರ್ಮ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಗಮನ ಸೆಳೆದಿದ್ದಾರೆ. ಮತ್ತೊಬ್ಬ ನಟ ಸೂರಜ್ ಲೋಕ್ರೆ ಕೂಡ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಹಿರಿಯ ನಟ ರಂಗಾಯಣ ರಘು ತಮ್ಮ ಪಾತ್ರದಲ್ಲಿ ಮಾತಿನ ಅಬ್ಬರದಲ್ಲೇ ಮುಳುಗಿದ್ದಾರೆ.

ನಾಯಕನ ಗೆಳೆಯನಾಗಿ ವಿಜಯ್ ಚಂಡೂರ್ ಸಂದರ್ಭಕ್ಕೆ ಅನುಗುಣವಾಗಿ ನಗಿಸುತ್ತ ಓಟಕ್ಕೆ ಪೂರಕವಾಗಿ ಸಾಗಿದ್ದಾರೆ. ನಾಯಕಿಯ ಅಣ್ಣನಾಗಿ ರಾಜೇಶ್ ನಟರಂಗ ಗತ್ತು , ಗಾಂಭೀರ್ಯದಲ್ಲಿ ಮಿಂಚಿದ್ದಾರೆ. ಉಳಿದಂತೆ ರವಿ ಶಂಕರ್ ಗೌಡ, ಸುಜಯ್ ಶಾಸ್ತ್ರಿ,ಚಂದ್ರಕಲಾ ಮೋಹನ್, ಹೂನ್ನವಳ್ಳಿ ಕೃಷ್ಣ, ರಮೇಶ್ ಪಂಡಿತ್, ಗಣೇಶ್ ರಾವ್, ಕೋಟೆ ಪ್ರಭಾಕರ್, ಚೇತನ್ ದುರ್ಗಾ, ನಾಗೇಂದ್ರ ಅರಸ್, ಮೂಗು ಸುರೇಶ್ ಸೇರಿದಂತೆ ಎಲ್ಲರೂ ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ಒಟ್ಟಾರೆ ಪ್ರೀತಿಸುವ ಮನಸ್ಸುಗಳಿಗೆ ಇಷ್ಟವಾಗುವಂತಹ ಈ ಚಿತ್ರವನ್ನು ಎಲ್ಲರೂ ಒಮ್ಮೆ ನೋಡುವಂತಿದೆ.

Visited 13 times, 1 visit(s) today
error: Content is protected !!