ಚಿತ್ರರಂಗದ ಇತಿಹಾಸದಲ್ಲೇ ಕಾನ್ಫಿಡದಿಂದ ಮೊದಲ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿ.
1984 ರಲ್ಲಿ ಎಸ್ ಆರ್ ಪುಟ್ಟಣ್ಣ ಕಣಗಾಲ್, ಸಿದ್ದಲಿಂಗಯ್ಯ, ಎಂ ಎನ್ ಲಕ್ಷ್ಮೀ ನಾರಾಯಣ ಹಾಗೂ ಹಿರಿಯ ನಿರ್ದೇಶಕರುಗಳು ಸೇರಿ ಕಟ್ಟಿದ ಸಂಸ್ಥೆ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ. ಕಾನ್ಫಿಡ. ಈಗ ಇದೆ ಸಂಘದಡಿಯಲ್ಲಿ ಮೂರು ವರ್ಷಗಳಿಂದ ಡಿಸೆಂಬರ್ ಒಂದರಂದು ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದಲ್ಲಿ ಸಂಘದ ಸ್ಥಾಪಕ ಅಧ್ಯಕ್ಷರಾದ ಭಾರತೀಯ ಚಿತ್ರರಂಗದ ದಿಗ್ಗಜರು ಎಸ್ ಆರ್ ಪುಟ್ಟಣ್ಣ ಕಣಗಾಲರ ಹುಟ್ಟು ಹಬ್ಬವನ್ನು ನಿರ್ದೇಶಕರ ಸಂಘ ಆಚರಣೆ ಮಾಡುತ್ತಾ. ಬಂದಿದೆ.
ಅಂದು ಸದಸ್ಯರು ಮತ್ತು ಅವರ ಕುಟುಂಬ ವರ್ಗದವರಿಗೆ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಈ ವರ್ಷವೂ ಕೂಡ ಪುಟ್ಟಣ್ಣ ಕಣಗಾಲರ ಜನ್ಮದಿನ ಆಚರಿಸುವುದರೊಂದಿಗೆ ಈ ವರ್ಷ ವಿಶೇಷ ಎಂಬಂತೆ ಸಂಘದ ಈಗಿನ ಅಧ್ಯಕ್ಷರಾದ ಎನ್ನಾರ್ ಕೆ ವಿಶ್ವನಾಥ್ ಅವರ ಅಧ್ಯಕ್ಷತೆಯಲ್ಲಿ ಡಿಸೆಂಬರ್ ಒಂದರಂದು ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ಚಿತ್ರರಂಗದ ಎಲ್ಲಾ ವಿಭಾಗದಿಂದ ಹಿರಿಯ ಕಾರ್ಮಿಕರು, ಕಲಾವಿದರು, ತಂತ್ರಜ್ಞರು, ನಿರ್ದೇಶಕರು, ನಿರ್ಮಾಪಕರುಗಳ ವಲಯದಿಂದ ಎಲ್ಲಾ ವಿಭಾಗಳಿಂದಲೂ ಅಂದರೆ ನಿರ್ಮಾಣ ಸಹಾಯಕರಿಂದ ನಿರ್ಮಾಪಕರವರೆಗೆ 35 ಜನರನ್ನು ಆಯ್ಕೆ ಮಾಡಿ ಅವರಿಗೆ ಕಾನ್ಫಿಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ ವಿ ಪ್ರಭಾಕರ್, ಇಸ್ರೋದ ವಿಶಿಷ್ಟ ವಿಜ್ಞಾನಿ ರಾಮನಗೌಡ ವೆಂಕನಗೌಡ ನಾಡಗೌಡರು , ಹಿರಿಯ ನಿರ್ದೇಶಕರಾದ ಓಂ ಶ್ರೀ ಸಾಯಿಪ್ರಕಾಶ್, ಕಲಾವಿದರಾದ ಹಿರಿಯ ನಟ ಶ್ರೀಧರ್, ಸುಂದರ್ ರಾಜ್, ಶಿವಕುಮಾರ್, ಅನಿರುದ್ಧ ಜತಕರ್, ಶ್ರೀಮತಿ ಶ್ರೀರಕ್ಷಾ ಶಿವಕುಮಾರ್, ಶ್ರೀಮತಿ ಪ್ರಮೀಳಾ ಜೋಷಾಯ್, ಪುಟ್ಟಣ್ಣನವರ ಶಿಷ್ಯರಾದ ಚಂದ್ರಹಾಸ ಆಳ್ವ, ಶ್ರೀಮತಿ ಡಾ ಪುಣ್ಯವತಿ, ಡಾ. ಬಿ ಎಮ್ ಉಮೇಶ್ ಕುಮಾರ್, ಕೃಷ್ಣೇಗೌಡ, ಗುರುರಾಜ್ ಮತ್ತು ಪುಟ್ಟಣ್ಣ ಕಣಗಾಲ್ ರವರ ಮಕ್ಕಳಾದ ಭುವನೇಶ್ವರಿ ಮತ್ತು ತ್ರಿವೇಣಿ ಯವರು ಹಾಗೂ ಚಿತ್ರರಂಗದ ಮಹನೀಯರು, ಹಿರಿಯರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಟಾಪ್ ಸ್ಟಾರ್ ರೇಣುಕುಮಾರ್ ಅವರ ವಾದ್ಯಗೋಷ್ಠಿ ಕಾರ್ಯಕ್ರಮಕ್ಕೆ ಮೆರುಗು ನೀಡಿತ್ತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಂಘದ ಅಧ್ಯಕ್ಷರಾದ ಎನ್ನಾರ್ ಕೆ ವಿಶ್ವನಾಥ್, ಉಪಾಧ್ಯಕ್ಷರಾದ, ಜೋ ಸೈಮನ್, ಜಗದೀಶ್ ಕೊಪ್ಪ, ಕಾರ್ಯದರ್ಶಿಗಳಾದ ಟಾಪ್ ಸ್ಟಾರ್ ರೇಣುಕುಮಾರ್, ಜಂಟಿ ಕಾರ್ಯದರ್ಶಿಗಳಾದ ಮಳವಳ್ಳಿ ಸಾಯಿಕೃಷ್ಣ, ಖಜಾಂಚಿಗಳಾದ ಆದಿತ್ಯ ಚಿಕ್ಕಣ್ಣ ಹಾಗೂ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಉಪಸಮಿತಿ ಸದಸ್ಯರು ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದರು.
*ಕಾನ್ಫಿಡ ರಾಜ್ಯೋತ್ಸವ ಪ್ರಸಸ್ತಿ ವಿಜೇತರು*
ಉಡುಪಿ ಕೃಷ್ಣ ನಿರ್ಮಾಣ ಸಹಾಯಕರು, ರಾಜಣ್ಣ
ಬೆಳಕು ಚೆಲ್ಲುವವರು,
ಮಹಾಬಲ ವಾಹನ ಚಾಲಕರು,
ಎ ಎಚ್ ಭಟ್ ರಾಘವೇಂದ್ರ ಹೊರಾಂಗಣ ಚಿತ್ರೀಕರಣ ಘಟಕ ಮಾಲೀಕರು, ಕೆ.ಸಿ .ನಾಗರಾಜ್, ವಸ್ತ್ರಾಲಂಕಾರರು,
ಎನ್ ಕೆ ರಾಮಕೃಷ್ಣ ವರ್ಣಾಲಂಕಾರರು, ಜಿ . ನಾಗೇಶ್ವರ ರಾವ್ ಕೇಶಾಲಂಕಾರರು,
ರವೀಂದ್ರನಾಥ ಕೆ ಎಸ್ ಕಂಠದಾನ ಕಲಾವಿದರು, ರಾಮಣ್ಣ ಎನ್ ಎಲ್ ನಿರ್ಮಾಣ ನಿರ್ವಾಹಕರು, ಅಶ್ವಥ್ ನಾರಾಯಣ್ ಸ್ಥಿರ ಚಿತ್ರ ಛಾಯಾಗ್ರಹಕರು, ಮಹೇಂದ್ರ ಧ್ವನಿ ಮುದ್ರಣಕಾರರು, ಶಂಕರ್ ಎಫೆಕ್ಟ್ ಇಂಜಿನಿಯರ್, ಗಂಗಾಧರ್ ಸೋಮ್
ಪ್ರಚಾರ ಕಲೆ, ಸುಧೀಂದ್ರ ವೆಂಕಟೇಶ್ ಪಿ. ಆರ್. ಓ , ರಿಚರ್ಡ್ ಲೂಯಿಸ್ ಬರಹಗಾರರು, ದತ್ತಣ್ಣ ಹಿರಿಯ ಚಲನಚಿತ್ರ ಕಲಾವಿದರು, ಶ್ರೀಮತಿ ಎಂ ಎನ್ ಲಕ್ಷ್ಮೀ ದೇವಿ ಹಿರಿಯ ಚಲನಚಿತ್ರ ಕಲಾವಿದರು, ರಮಣ ಕಣಗಾಲ್ ಸಹಾಯಕ ನಿರ್ದೇಶಕರು, ರಘುನಂದನ್ ಬಿ ಸಹ ನಿರ್ದೇಶಕರು, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶಕರು, ಬಾಬು ಖಾನ್ ಕಲಾ ನಿರ್ದೇಶಕರು,ವಿಜಯ ರಾಮ್ ನೃತ್ಯ ನಿರ್ದೇಶಕರು ಎಂ ಎನ್ ಸ್ವಾಮಿ ಸಂಕಲನಕಾರರು, ಶ್ರೀಮತಿ ಬಿ ಕೆ ಸುಮಿತ್ರ ಹಿನ್ನೆಲೆ ಗಾಯಕರು, ಮೈಸೂರು ಮೋಹನ್ ಸಂಗೀತ ನಿರ್ದೇಶಕರು, ಕೆ.ವಾಸುದೇವ ಛಾಯಾಗ್ರಹಕರು ಟಿ .ಶ್ರೀನಿವಾಸ್ ರವರು ಪ್ರಾದೇಶಿಕ ಚಲನಚಿತ್ರ ವಿತರಕರು ಪ್ರದರ್ಶಕರು ನಿರ್ಮಾಪಕರು, ಸುಂದರೇಶ್ ಬಿ ಕೆ ಅಭಿಮಾನದ ಸೇವೆ, ಆದಿತ್ಯ ಚಿಕ್ಕಣ್ಣ ಅಭಿಮಾನದ ಸೇವೆ ಕೆ. ವಿ .ಚಂದ್ರಶೇಖರ್ ಚಲನಚಿತ್ರ ಪ್ರದರ್ಶಕರು, ನಾರಾಯಣ ರೆಡ್ಡಿ ಚಲನಚಿತ್ರ ವಿತರಕರು, ಎಸ್ ಎ ಶ್ರೀನಿವಾಸ್ ನಿರ್ಮಾಪಕರು, ನಂಜರಾಜೇ ಅರಸ್, ನಿರ್ದೇಶಕರು ಮುಂತಾದವರು.