ಬಹು ಭಾಷೆಗಳಲ್ಲಿ ಸಿದ್ದವಾಗ್ತಿರೋ “ಸಹ್ಯಾದ್ರಿ” ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯ
ಚಂದನವನದಲ್ಲಿ ಮತ್ತೊಂದು ವಿಭ್ನಿನ ಪ್ರಯತ್ನದ ಚಿತ್ರವಾಗಿ ಬರುತ್ತಿದೆ “ಸಹ್ಯಾದ್ರಿ”. ಈ ಹಿಂದೆ 2023ರಲ್ಲಿ ತೆರೆಕಂಡ ಆರ ಮೂಲಕ ವಿಶೇಷವಾಗಿ ಗಮನ ಸೆಳೆದಿದ್ದ ನಟ ನಿರ್ದೇಶಕ ಬರಹಗಾರ ಆರ ರೋಹಿತ್ ಹಳೇ ಅನುಭವದ ಜೊತೆಗೆ ಹೊಸ ಕನಸನ್ನೊತ್ತು ಎರಡನೇ ಚಿತ್ರ ಸಿದ್ದವಾಗುತ್ತಿದ್ದು, ದೈವ ಹಾಗೂ ದುಷ್ಟ ಶಕ್ತಿಯ ನಡುವಿನ ಸಂಘರ್ಷವನ್ನ ಆಧರಿಸಿ ಕೌತುಕ ವಿಚಾರವನ್ನ ಹೇಳಲು ಹೊರಟ್ಟಿದ್ದಾರೆ.
ಸಹ್ಯಾದ್ರಿ ಪಂಚ ಭಾಷೆಯಲ್ಲಿ ಬರಲಿದ್ದು, ಟೈಟಲ್ ಟೀಸರ್ ಮೂಲಕ ಇದು ಪ್ಯಾನ್ ಇಂಡಿಯಾ ಸಿನ್ಮಾ ಅನ್ನೋದನ್ನ ಸೂಚಿಸಿದ್ದಾರೆ. ಹೌದು, ಸಹ್ಯಾದ್ರಿ ಚಿತ್ರದ ಕಥಾಹಂದರ
ಆಧ್ಯಾತ್ಮಿಕ ದರೋಡೆಕೋರ ಪ್ರಕಾರವಾಗಿದ್ದು, ಮೆದುಳಿನಲ್ಲಿ ಹೆಚ್ಚಿನ ನರಕೋಶಗಳನ್ನು ಹೊಂದಿರುವ ಅಕಾಲಿಕ ಮಗು ವಯಸ್ಸಾದಂತೆ, ಎಲ್ಲಾ ಶಕ್ತಿಯನ್ನು ತಡೆಹಿಡಿಯುವ ವಿಜಯಶಾಲಿಯಾಗುತ್ತದೆ. ಈ ಲೈನ್ ಇಟ್ಟುಕೊಂಡು ಈ ದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆ.
ಸಹ್ಯಾದ್ರಿ ಎಆರ್ ಫಿಲ್ಮ್ಸ್ ಬ್ಯಾನರ್ ನಡಿಯಲ್ಲಿ ರೇಣುಕಾ ಪಿ ಎನ್ ನಿರ್ಮಿಸ್ತಿದ್ದಾರೆ.ಆರ ರೋಹಿತ್ ಈ ಚಿತ್ರವನ್ನ ಬರೆದು ನಿರ್ದೇಶಿಸಿ,ನಟಿಸ್ತಿದ್ದಾರೆ. ವಿಲಿಯಲ್ ಡೇವಿಡ್ ಸಹಾಯಕ ವಿನೋದ್ ಲೋಕಣ್ಣನವರ್ ಛಾಯಾಗ್ರಹಣ ಮಾಡ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಹಾಯಕ ನವನಾಥ್ ವಾಸುದೇವ್ ಸಂಗೀತ ಸಂಯೋಜಿಸ್ತಿದ್ದಾರೆ. ತಾಂತ್ರಿಕವಾಗಿ ನಿಪುಣರ ತಂಡ ಕಟ್ಟಿಕೊಂಡಿರುವ ರೋಹಿತ್ ಪ್ರಸ್ತುತ ಉದ್ಯಮದ ಸ್ಥಿಗತಿಯನ್ನ ಅಧ್ಯಾಯನ ಮಾಡಿ ಸಹ್ಯಾದ್ರಿ ಚಿತ್ರವನ್ನ ಮಾಡೋದಕ್ಕೆ ಕೈ ಹಾಕಿದ್ದು, ಈ ತಂಡದ ನಡೆ ಉದ್ಯಮದಲ್ಲಿ ಸಂಚಲನ ಮೂಡಿಸಿದೆ.
“ನಾಯಕನಲ್ಲ… ಯೋಧ. ರಕ್ತದಲ್ಲಿ ತೊಯ್ದ ಪಾದಗಳೊಂದಿಗೆ ಅವನು ಧರ್ಮದ ನಿರ್ದಯ ಮಾರ್ಗದಲ್ಲಿ ನಡೆದಿದ್ದಾನೆ. ಅವನು ಅಚಲ, ದೈವದಿಂದ ರಕ್ಷಿಸಲ್ಪಟ್ಟಿದ್ದಾನೆ… ಮತ್ತು ಸಹ್ಯಾದ್ರಿಯಲ್ಲಿ ತನ್ನ ಆಗಮನದ ಧ್ವಜವನ್ನು ನೆಟ್ಟಿದ್ದಾನೆ.” ಚಿತ್ರದ ಸಂಗೀತ ಮತ್ತು ಹಾಡುಗಳ ಕೆಲಸ ನಡೆಯುತ್ತಿದೆ. ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಮತ್ತು ಟೀಸರ್ ತಯಾರಾಗಿದೆ. ಪಾತ್ರಗಳನ್ನ ಅನಾವರಣ ಗೊಳಿಸುವ ಟೀಸರ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
ಬಹು ಭಾಷೆಗಳಲ್ಲಿ ಸಿದ್ದವಾಗ್ತಿರೋ ಸಹ್ಯಾದ್ರಿ, ದರೋಡೆಕೋರ, ಆಧ್ಯಾತ್ಮಿಕ ಡ್ರಾಮಾ. ಮೇಕಿಂಗ್, ಪಾತ್ರದ ಆಯ್ಕೆ ಮತ್ತು ಕಥೆಯು ಪ್ರತಿಯೊಂದು ಅಂಶವೂ ಮನವರಿಕೆಯಾಗಬೇಕು ಅನ್ನೋ ಉದ್ದೇಶದಿಂದ ಚಿತ್ರೀಕರಣಕ್ಕೆ ಹೆಚ್ಚು ಸಮಯ ವ್ಯಯಿಸುತ್ತಿದೆ ಚಿತ್ರತಂಡ. ಅಪಾರ ವಿ ಎಫ್ ಎಕ್ಸ್ ಹಾಗೂ6 ಭಾಷೆಯಲ್ಲೂ ಅದೇ ಸುಗಡಿನಲ್ಲಿ ಬರವಣಿಗೆ ಮತ್ತು ಪಾತ್ರಗಳ ಆಯ್ಕೆ ಆಗುವ ಯೋಜನೆ ಅಂದ್ರೆ ಪ್ರಿಪ್ರೊಡಕ್ಷನ್ ಕೆಲಸ ಹೆಚ್ಚು ಸಮಯವನ್ನ ತೆಗೆದುಕೊಳ್ತಿದೆ. ಅದ್ರಂತೆ ಚಿತ್ರತಂಡ ಚಿತ್ರೀಕರಣವನ್ನ ಎಲ್ಲಾ ಭಾಷೆಯಲ್ಲೂ ಕಾರ್ಯರೂಪಕ್ಕೆ ತಂದಿದ್ದು ಸದ್ಯದಲ್ಲೇ ಪಾತ್ರಗಳ ಅನಾವರಣ ಮಾಡುವ ಪೋಸ್ಟರ್ ಹಾಗೂ ಟೀಸರ್ ನ ರಿಲೀಸ್ ಮಾಡಲಿದೆ ಚಿತ್ರತಂಡ.