Cini NewsSandalwood

ಯಶಸ್ವಿ ಎರಡನೇ ವಾರದತ್ತ ಸಾಗುತ್ತಿರುವ ಚಿತ್ರ “ಅಂದೊಂದಿತ್ತು ಕಾಲ”.

ಚಂದನವನದಲ್ಲಿ ಸಿನಿಮಾಗಳ ಸಂಭ್ರಮದ ಹಬ್ಬ ಜೋರಾಗಿದೆ. ಇತ್ತೀಚೆಗೆ ಬಿಡುಗಡೆಯಾದಂತಹ ಬಹುತೇಕ ಚಿತ್ರಗಳು ಯಶಸ್ಸಿನ ನಾಗಲಾಟವನ್ನು ಮುಂದುವರಿಸಿದೆ. ಅದರಲ್ಲೂ ಸಿನಿಪ್ರಿಯರ ಮನಸ್ಸನ್ನು ಗೆದ್ದಂತ ಮನ ಮಿಡಿಯುವಂತ 90ರ ಕಾಲಘಟ್ಟದ ಸುಂದರ ಪ್ರೇಮ ಕಥಾನಕದ ಚಿತ್ರದ “ಅಂದೊಂದಿತ್ತು ಕಾಲ” ಚಿತ್ರ ಪ್ರೇಕ್ಷಕರು ಹಾಗೂ ಮಾಧ್ಯಮದವರಿಂದ ಉತ್ತಮ ಪ್ರಶಂಸೆಯನ್ನ ಪಡೆದು ಮುನ್ನುಗುತ್ತಿದೆ. ಚಿತ್ರದ ಓಪನಿಂಗ್ ಗೆ ಬಹಳ ಅದ್ದೂರಿಯಾಗಿ ಆರಂಭಗೊಂಡು , ಮೊದಲ ವಾರದಲ್ಲೇ ಬಿಡುಗಡೆಗೊಂಡಂತ ಎಲ್ಲಾ ಕೇಂದ್ರಗಳಲ್ಲೂ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡು ಈಗ ಚಿತ್ರ ಎರಡನೇ ವಾರದತ್ತ ಯಶಸ್ವಿ ಪ್ರದರ್ಶನದೊಂದಿಗೆ ಮುನ್ನುಗ್ಗುತಿದೆ.

ಈ ಚಿತ್ರದಲ್ಲಿ ಬಾಲ್ಯದ ಕಥಾನಕವನ್ನ ಹೇಳುತ್ತಲೇ ಸಾಗುವ ಚಿತ್ರದ ಟೈಟಲ್ ಸಾಂಗ್ ಎಲ್ಲರ ಗಮನ ಸೆಳೆದಿದ್ದು , ತಾಯಿ ಮಗನ ಬಾಂಧವ್ಯದ ಹಾಡಂತೋ ಮನ ಮಿಡಿಯುವಂತಿದೆ. ಪ್ರತಿಯೊಂದು ಹಾಡು ಸೇರಿದಂತೆ ಟ್ರೆಂಡಿಂಗ್ ನಲ್ಲಿರುವಂತಹ “ಮುಂಗಾರು ಮಳೆಯಲ್ಲಿ”… ಹಾಡಂತೂ ಈ ವರ್ಷದ ಟಾಪ್ ಬೆಸ್ಟ್ ಹಾಡಿನಲ್ಲಿ ಸೇರಿಕೊಂಡಿದೆ ಎಂದೇ ಹೇಳಬಹುದು. ಇನ್ನು ಚಿತ್ರದ ಕಥೆಯೂ ಕೂಡ ಬಹಳ ವಿಭಿನ್ನವಾಗಿದ್ದು , ನಿರ್ದೇಶಕನಾಗಬೇಕೆಂದು ಕನಸು ಕಾಣುವ ಯುವಕನ ಬದುಕಿನಲ್ಲಿ ಎದುರಾಗುವ ಘಟನೆಗಳ ಸುತ್ತ ಬಹಳ ನೈಜಕ್ಕೆ ಹತ್ತಿರ ಎನ್ನುವಂತೆ ಚಿತ್ರಿಕರಿಸಿದ್ದಾರೆ. ಬಾಲ್ಯದ ಒಡನಾಟ , ಸ್ನೇಹ , ಗೆಳೆತನ, ಪ್ರೀತಿ , ತಾಯಿಯ ಮಮಕಾರ , ತಂದೆಯ ನಂಬಿಕೆಯ ಜೊತೆ ವಿಶ್ವಾಸ ಗುರಿ ಇದ್ದರೆ ಖಂಡಿತ ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನುವಂತಹ ಸ್ಪೂರ್ತಿದಾಯಕ ಚಿತ್ರವಾಗಿ ಹೊರಬಂದಿರುವಂತಹ “ಅಂದೊಂದಿತ್ತು ಕಾಲ” ಚಿತ್ರ ಎಲ್ಲರ ಮನಸ್ಸನ್ನು ಗೆದ್ದಿದೆ.

ನಟ ವಿನಯ್ ರಾಜಕುಮಾರ್
ಒಬ್ಬ ನಿರ್ದೇಶಕನ ಲೈಫ್ ಜರ್ನಿ ಲೈಫ್ ನಲ್ಲಿ ನಡೆಯುವ ಪಾತ್ರವನ್ನು ನಿರ್ವಹಿಸಿದ್ದಾರೆ. ಇದೊಂದು ಫಿಲ್ ಗುಡ್ ಚಿತ್ರವಾಗಿದ್ದು , ಎಲ್ಲಾ ವರ್ಗದವರಿಗೂ ಇಷ್ಟವಾಗುವಂತ ಕಥೆ ಒಳಗೊಂಡಿದೆ. ಅದೇ ರೀತಿ ನಟಿಯರಾದ ಅದಿತಿ ಪ್ರಭುದೇವ್ ನಾಯಕನಿಗೆ ಬೆಂಬಲಾಗಿ ನಿಲ್ಲುವಂತ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇನ್ನು ಶಾಲಾ ದಿನಗಳಲ್ಲಿ ಗೆಳತಿಯಾಗಿ ಕಾಣಿಸಿಕೊಂಡಿರುವ ಪಾತ್ರದಲ್ಲಿ ನಿಶಾ ರವಿಕೃಷ್ಟನ್ ಕೂಡ ಬಹಳ ಸೊಗಸಾಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅದರಲ್ಲೂ ವಿಶೇಷವಾಗಿ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಬರುವಂತಹ ಸನ್ನಿವೇಶಗಳು ನಮ್ಮ ಆತ್ಮೀಯ ಸ್ನೇಹಿತರನ್ನು ನೆನಪಿಸುವಂತಿದೆ. ಇನ್ನು ತಾಯಿಯ ಪಾತ್ರದಲ್ಲಿ ಅರುಣಾ ಬಾಲರಾಜ್ ಮನ ಸೆಳೆಯುವಂತೆ ಅಭಿನಯಿಸಿದ್ದು , ತಂದೆಯಾಗಿ ಧರ್ಮೇಂದ್ರ ಅರಸ್ ಕೂಡ ಜೀವ ತುಂಬಿದ್ದಾರೆ. ಉಳಿದಂತೆ ಜಗ್ಗಪ್ಪ , ಕಡ್ಡಿಪುಡಿ ಚಂದ್ರು ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ಇನ್ನು ಚಿತ್ರಕ್ಕೆ ಅಭಿಷೇಕ್ ಕಾಸರಗೋಡು ಕ್ಯಾಮೆರಾ ಕೈಚಳಕ ವಿಭಿನ್ನವಾಗಿ ಮೂಡಿಬಂದಿದ್ದು , ಅಷ್ಟೇ ಅದ್ಭುತವಾದ ಹಾಡುಗಳನ್ನು ರಾಘವೇಂದ್ರ. ವಿ ರವರು ನೀಡಿದ್ದಾರೆ.

ಒಂದು ಕುಟುಂಬ ಸಮೇತ ನೋಡುವಂತ ಚಿತ್ರವನ್ನು ನಿರ್ಮಿಸಬೇಕೆಂಬ ಉದ್ದೇಶದಿಂದ ಭುವನ್ ಫಿಲಂಸ್ ಮೂಲಕ ನಿರ್ಮಾಪಕ ಭುವನ್ ಸುರೇಶ್ ಚಿತ್ರವನ್ನ ನಿರ್ಮಾಣ ಮಾಡಿದ್ದು , ಸುಮಾರು ರಾಜ್ಯದ್ಯಂತ 180ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ವಿತರಕ ಜಗದೀಶ್ ಫಿಲ್ಮ್ಸ್ ಮೂಲಕ ಅದ್ದೂರಿಯಾಗಿ ಬಿಡುಗಡೆ ಮಾಡಿದ್ದು , ಈಗ ಎರಡನೇ ವಾರವು ಕೂಡ ಚಿತ್ರ ಬಹುತೇಕ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನವನ್ನು ಕಾಣುತ್ತಿದೆ. ಒಬ್ಬ ನಿರ್ದೇಶಕನ ಬದುಕಿನ ಸುತ್ತ ನಡೆಯುವ ಕಥೆಯನ್ನು ಬಹಳ ಅಚ್ಚುಕಟ್ಟಾಗಿ ಕಟ್ಟಿಕೊಡುವ ಹಾದಿಯಲ್ಲಿ ಗೆದ್ದಿರುವಂತಹ ನಿರ್ದೇಶಕ ಕೀರ್ತಿ ಕೃಷ್ಣಪ್ಪ. ಇದರಲ್ಲಿ ಲವ್ , ಫ್ರೆಂಡ್ಶಿಪ್ , ಸೆಂಟಿಮೆಂಟ್ ಎಲ್ಲವೂ ಇದೆ. ಅದರಲ್ಲೂ ಎಮೋಷನ್ ಜನರಿಗೆ ಬಹಳ ಬೇಗ ತಲುಪುವಂತೆ ಮೂಡಿ ಬಂದಿದೆ. ಕಥೆ – ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಯುವ ನಿರ್ದೇಶಕ ಕೀರ್ತಿ ಕೃಷ್ಣಪ್ಪ ಸಿನಿಮಾ ಜಗತ್ತಿನ ಒಳ ಹಾಗೂ ಹೊರ ಜಗತ್ತಿನ ವಿಚಾರವನ್ನು ಬಹಳ ಸೂಕ್ಷ್ಮವಾಗಿ ಪ್ರೇಕ್ಷಕರ ಮದ್ಯೆ ತೆರೆದಿಟ್ಟಿದ್ದಾರೆ. ಬಹಳ ಸೊಗಸಾಗಿ ಮೂಡಿ ಬಂದಿರುವ ಈ ಚಿತ್ರಕ್ಕೆ ಎ. ಆರ್. ಕೃಷ್ಣ , ಸುರೇಶ್ ಆರ್ಮುಗಂ ಸಂಕಲನ , ರವಿವರ್ಮ ಸಾಹಸ , ಸುಮಂತ್ ಸಿನಿಮಾ ಪ್ರಚಾರ ನಿಭಾಯಿಸಿದ್ದಾರೆ. ಈ “ಅಂದೊಂದಿತ್ತು ಕಾಲ” ಚಿತ್ರ ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿದ್ದು , ಯಶಸ್ವಿಯಾಗಿ ಎರಡನೇ ವಾರಕ್ಕೆ ಕಾಲಿಟ್ಟಿದೆ.

error: Content is protected !!