Cinisuddi Fresh Cini News 

“ಫ್ಯಾನ್ಸ್ ಕ್ರಿಕೆಟ್ ಲೀಗ್ “ಗೆ ಅಖಾಡ ಸಜ್ಜು

ಗಂಧದಗುಡಿ ಅಂಗಳದಲ್ಲಿ ಫ್ಯಾನ್ಸ್ ವಾರ್…ಸ್ಟಾರ್ ವಾರ್ ಗುದ್ದಾಟ…ಕಾದಾಟ ಹೊಸದಲ್ಲ… ಅವ್ರ ಫ್ಯಾನ್ಸ್ ಕಂಡ್ರೇ.. ಇವ್ರ ಫ್ಯಾನ್ಸ್ ಗೆ ಆಗೋದೆ ಇಲ್ಲ. ನಮ್ ಬಾಸ್ ಮೇಲು ಅಂತಾ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಕಿತ್ತಾಡುವ ಅಭಿಮಾನಿ ದೇವರುಗಳು ಈಗ ಎಲ್ಲಾ ಫ್ಯಾನ್ಸ್ ವಾರ್ ಪಕ್ಕಕ್ಕಿಟ್ಟು, ನಾವೆಲ್ಲಾ ಒಂದೇ ಗಂಧಗುಡಿಯ ಬಳಗ ಅಂತಿದ್ದಾರೆ. ಆದ್ರೆ ಇದೇ ಫ್ಯಾನ್ಸ್ ಕಳೆದೆಂಟು ವರ್ಷಗಳ ಹಿಂದೆ ದೊಡ್ಡಮಟ್ಟಕ್ಕೆ ಕಿತ್ತಾಡಿಕೊಂಡಿದ್ರು. ಆಗಲೇ ಎಲ್ಲಾ ಸ್ಟಾರ್ ಫ್ಯಾನ್ಸ್ ಒಟ್ಟುಗೂಡಿಸಿ ಫ್ಯಾನ್ಸ್ ಕ್ರಿಕೆಟ್ ಲೀಗ್ ಪಂದ್ಯಾವಳಿ ಏರ್ಪಡಿಸಲಾಗಿತ್ತು. ಈಗ ಗೆಲುವಿನ ನಾಗಲೋಟ ಈಗ ಏಳನೇ ಸೀಸನ್ ಗೆ ಬಂದು ತಲುಪಿದೆ. ಇಂತಹ ಪ್ರಯತ್ನಕ್ಕೆ ಕೈ ಹಾಕಿದ್ದು ನಮ್ ಟಾಕೀಸ್ ತಂಡ .

ನಮ್ ಟಾಕೀಸ್ ತಂಡದ ಪ್ರಯತ್ನದಿಂದಾಗಿ ಎಲ್ಲಾ ಫ್ಯಾನ್ಸ್ ಒಟ್ಟಾಗಿ ಕ್ರಿಕೆಟ್ ಅಖಾಡಕ್ಕೆ ಧುಮುಕಿ ಬ್ಯಾಟ್ ಹಿಡಿದು ಸಿಕ್ಸರ್ ಬಾರಿಸ್ತಿದ್ದಾರೆ. ಈಗಾಗ್ಲೇ ಆರು ಸೀಸನ್ ಮುಗಿಸಿರುವ ಫ್ಯಾನ್ಸ್ ಕ್ರಿಕೆಟ್ ಲೀಗ್ ಈಗ ಏಳನೇ ಸೀಸನ್ ಗೆ ಸಜ್ಜಾಗಿ ನಿಂತಿದೆ. ಪ್ರತಿ ಬಾರಿ ಕನ್ನಡದ ಮೇರು ನಟರ ಹುಟ್ಟುಹಬ್ಬದಂದು ಈ ಎಫ್ ಸಿಎಲ್ ಆಯೋಜನೆ ಮಾಡಿಕೊಂಡು ಬರ್ತಿರುವ ಭರತ್ ಈ ಬಾರಿ ಗೀತಾ ರಚನಕಾರ ವಿ.ನಾಗೇಂದ್ರ ಹುಟ್ಟುಹಬ್ಬದಂದು ಅಂದ್ರೆ ಡಿಸೆಂಬರ್ ಐದರಿಂದ ಶುರುವಾಗುತ್ತಿದೆ.

ಒಟ್ಟು ಎಂಟು ತಂಡಗಳು ಎಫ್ ಸಿಎಲ್ ನಲ್ಲಿ ಆಡಲಿದ್ದು, ಇತ್ತೀಚೆಗಷ್ಟೇ ಜರ್ಸಿ ಬಿಡುಗಡೆ ಮಾಡಲಾಗಿದ್ದು, ನಮ್ಮನ್ನ ಅಗಲಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನೆನಪಿಗೆ ಆ ಅವರ ಸಿನಿಮಾಗಳ ಪೋಸ್ಟರ್ ನ್ನು ಜರ್ಸಿ ಮೇಲೆ ಪ್ರಿಂಟ್ ಮಾಡಲಾಗಿದೆ. ಅಂದಹಾಗೇ ಫ್ಯಾನ್ಸ್ ಕ್ರಿಕೆಟ್ ಲೀಗ್ ನಲ್ಲಿ ಎಲ್ಲಾ ಸ್ಟಾರ್ಸ್ ಫ್ಯಾನ್ಸ್ ಭಾಗವಹಿಸ್ತಿದ್ದು, ಶುಗರ್ ಲೆಸ್, ಸಖತ್, ಕಾಲಚಕ್ರ, ಮರ್ದಿನಿ, ರೈಡರ್, ಅರ್ಜುನ್ ಗೌಡ, ಬೈರಾಗಿ ಹಾಗೂ ಕ್ರಾಂತಿ ತಂಡಗಳು ಭಾಗವಹಿಸಲಿವೆ.

ಡಿಸೆಂಬರ್ ಐದಕ್ಕೆ ಶುರುವಾಗ್ತಿರುವ ಫ್ಯಾನ್ಸ್ ಕ್ರಿಕೆಟ್ ಲೀಗ್ ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಶುಭ ಕೋರಿದ್ದಾರೆ. ಈ ಬಾರಿ ಎಫ್ ಸಿಎಲ್ ಕಪ್ ಯಾರ ಪಾಲಾಗುತ್ತೋ ಕಾದು ನೋಡಬೇಕು.

Related posts