Cini NewsSandalwood

ಪ್ರೇಕ್ಷಕರ ಹೃದಯ ಗೆದ್ದಿರುವ ಖುಷಿಯಲ್ಲಿ “ಏಳುಮಲೆ” ಚಿತ್ರತಂಡ

ಈ ವರ್ಷದ ಮತ್ತೊಂದು ಒಳ್ಳೆ ಸಿನಿಮಾಗಳ ಸಾಲಿಗೆ ಏಳುಮಲೆ ಸೇರ್ಪಡೆಗೊಂಡಿದೆ. ನಿರ್ದೇಶಕರಾಗಿ ಗೆದ್ದಿರುವ ತರುಣ್ ಸುಧೀರ್ ನಿರ್ಮಾಪಕರಾಗಿಯೂ ಸಕ್ಸಸ್ ಕಂಡಿದ್ದಾರೆ. ಅವರ ನಿರ್ಮಾಣದಲ್ಲಿ ಬಂದಿರುವ ಏಳುಮಲೆ ಚಿತ್ರಕ್ಕೆ ಪ್ರೇಕ್ಷಕರ ವಲಯದಿಂದ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ. ನಾಯಕ ರಾಣಾ ಹಾಗೂ ನಾಯಕಿ ಪ್ರಿಯಾಂಕಾ ಆಚಾರ್ ಪ್ರೇಕ್ಷಕರ ಪ್ರೀತಿ ಪಡೆದುಕೊಂಡಿದ್ದಾರೆ. ಇನ್ನೂ ಈ ಚಿತ್ರದ ಮೂಲಕ ಕನ್ನಡ ಇಂಡಸ್ಟ್ರೀಗೆ ಪುನೀತ್ ರಂಗಸ್ವಾಮಿಯಂತಹ ಒಳ್ಳೆ ನಿರ್ದೇಶಕರು ಸಿಕ್ಕಿದ್ದಾರೆ. ಯಶಸ್ವಿ ಹಾದಿಯಲ್ಲಿ ಚಿತ್ರ ಸಾಗುತ್ತಿದ್ದು, ಚಿತ್ರತಂಡ ಈ ಬಗ್ಗೆ ಸುದ್ದಿ ಗೋಷ್ಟಿ ನಡೆಸಿ ಮಾಹಿತಿ ಹಂಚಿಕೊಂಡಿದೆ.

ಬೆಂಗಳೂರಿನ‌ ಎಂಎಂಬಿ ಲೆಗಸಿಯಲ್ಲಿ ಏಳುಮಲೆ ಚಿತ್ರದ ಸಕ್ಸಸ್ ಮೀಟ್ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಇಡೀ ಚಿತ್ರತಂಡ ಭಾಗಿಯಾಗಿತ್ತು. ಸಿನಿಮಾ ಗೆಲುವಿನ ಬಗ್ಗೆ ನಿರ್ಮಾಪಕ ತರುಣ್ ಸುಧೀರ್ ಮಾತನಾಡಿ, ಏಳುಮಲೆ‌ ಸಿನಿಮಾಗೆ ಸಿಕ್ಕುತ್ತಿರುವ ಅದ್ಭುತ ಪ್ರತಿಕ್ರಿಯೆ. ಪಾಸಿಟಿವ್ ಟಾಕ್ ಬರಲು ಟೀಂ, ಪ್ರೇಕ್ಷಕರು ಹಾಗೂ ಮೀಡಿಯಾ ಕಾರಣ.‌

ಇವರೆಲ್ಲರಿಗೂ ಧನ್ಯವಾದಗಳು. ನಾನು ಈ ಸಿನಿಮಾ ಮಾಡಲು ನಾನು ನಂಬಿದ್ದು ಎರಡನ್ನೇ. ಈ ಕಥೆ ಹಾಗೂ ಕನ್ನಡ ಪ್ರೇಕ್ಷಕರನ್ನು. ಒಳ್ಳೆ ಕಂಟೆಂಟ್ ನ್ನು ಪ್ರೇಕ್ಷಕರು ಯಾವತ್ತೂ ಕೈಬಿಡುವುದಿಲ್ಲ ಎನ್ನುವುದು ಮತ್ತೆ ಸಾಬೀತಾಗಿದೆ. ಚೌಕ ಸಿನಿಮಾ ಹೇಗೆ ನಿಧಾನವಾಗಿ ಪಿಕಪ್ ಆಯ್ತು. ಅದೇ ರೀತಿ ಏಳುಮಲೆ ಸಿನಿಮಾ ಕೂಡ ಪಿಕಪ್ ಆಯ್ತು. ಇಲ್ಲಿಯವರೆಗೂ ಅದ್ಭುತವಾದ ಕಲೆಕ್ಷನ್ ಆಗಿದೆ. ಈ ಸಿನಿಮಾ ಚಾಲೆಂಜಿಂಗ್. ಅದನ್ನು ಇಡೀ‌ ತಂಡ ಫುಲ್ ಮಾಡಿದೆ ಎಂದರು.

ಕರ್ನಾಟಕ ಹಾಗೂ ತಮಿಳುನಾಡಿ ಗಡಿ ಪ್ರದೇಶದಲ್ಲಿ ನಡೆಯುವ ನೈಜ ಕಥೆ ಸಿನಿಮಾಪ್ರೇಮಿಗಳಿಗೆ ಇಷ್ಟವಾಗಿದೆ. ಎಲ್ಲಾ ಕಲಾವಿದರೂ ಅಚ್ಚುಕಟ್ಟಾಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಿರೀಕ್ಷೆ ಇಟ್ಟುಕೊಳ್ಳದೇ ಥಿಯೇಟರ್ ಗೆ ಹೋದರೆ ನಿರೀಕ್ಷೆಗೂ‌ ಮೀರಿ ಇಷ್ಟವಾಗುವ ಸಿನಿಮಾ ಏಳುಮಲೆ.

ಏಳುಮಳೆ ಚಿತ್ರ ಸೆಪ್ಟೆಂಬರ್-5 ರಂದು ರಿಲೀಸ್ ಆಗಿದೆ. ರಾಜ್ಯದೆಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಮೊದಲ ದಿನವೇ ಒಳ್ಳೆ ಅಭಿಪ್ರಾಯ ಪಡೆದುಕೊಂಡಿದೆ. ಆ ಬಳಿಕ ಮೌತ್ ಪಬ್ಲಿಸಿಟಿ ಮೂಲಕ ಜನ ಏಳುಮಲೆ ಕಡೆ ಮುಖ‌ ಮಾಡಿದರು. ಚಿತ್ರ ನೋಡಿ ಪ್ರೇಕ್ಷಕರು ಅದ್ಭುತ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಪುನೀತ್ ರಂಗಸ್ವಾಮಿ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಇದು ಇವರ ಮೊದಲ ಚಿತ್ರ. ತರುಣ್ ಸುಧೀರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಡಿ ಇಮ್ಮಾನ್ ಸಂಗೀತ ನಿರ್ದೇಶನ ಮಾಡಿದ್ದಾರೆ.

error: Content is protected !!