Cini NewsSandalwoodUncategorized

ಕಾಶಿ ವಿಶ್ವನಾಥನ ಸನ್ನಿದಿಯಲ್ಲಿ “ಛೂ ಬಾಣ” ಚಿತ್ರಕ್ಕೆ ಚಾಲನೆ.

Spread the love

ಯುವ ಪಡೆಗಳ ಸಾರಥ್ಯದಲ್ಲಿ “ಛೂ ಬಾಣ” ಚಿತ್ರದ ಮುಹೂರ್ತ ಸಮಾರಂಭವು ಬಸವೇಶ್ವರ ನಗರದಲ್ಲಿರುವ ಕಾಶಿ ವಿಶ್ವನಾಥನ ಸನ್ನಿದಿಯಲ್ಲಿ ಅದ್ದೂರಿಯಾಗಿ ನಡೆಯಿತು. ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್.ಕೆ.ವಿಶ್ವನಾಥ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ಚಲನಚಿತ್ರ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಜೆ.ಜಿ.ಕೃಷ್ಣ ಕ್ಯಾಮಾರ ಚಾಲನೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.

ಎಸ್.ಕೆ.ಭಾಷಾ ಫಿಲಂಸ್ ಅಡಿಯಲ್ಲಿ ವಿಜಯವಾಡದ ಇಂಜಿನಿಯರ್ ಎಸ್.ಕೆ.ಫಿರೋಜ್‌ಭಾಷ ಬಂಡವಾಳ ಹೂಡುವುದರ ಜತೆಗೆ ನಾಯಕನಾಗಿ ಅಭಿನಯಿಸುತ್ತಿರುವುದು ಹೊಸ ಅನುಭವ. ಎಸ್.ಆರ್.ಪ್ರಮೋದ್ ಕಥೆ, ಸಾಹಿತ್ಯ ರಚಿಸಿ ಒಂಬತ್ತನೇ ಸಿನಿಮಾಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು, ಸಮಾಜದಲ್ಲಿ ಸಣ್ಣ ಸಣ್ಣ ವಿಷಯಕ್ಕೆ ಮನಸ್ತಾಪ ಬಂದು, ಒಂದು ಹಂತದಲ್ಲಿ ಕೊಲೆಯೊಂದಿಗೆ ಮುಕ್ತಾಯವಾಗುತ್ತದೆ. ಅದರಂತೆ ಚಿತ್ರದ ಕಥೆಯು ಹಳ್ಳಿಯಲ್ಲಿ ನಡೆಯುತ್ತದೆ. ಅಲ್ಲಿನ ದ್ವೇಷದ ಹಿನ್ನಲೆ, ಹಳೆಯ ವೈಷಮ್ಯದಿಂದ ಅಪರಾಧಗಳು ನಡೆಯುತ್ತದೆ. ಊರಿನ ಗೌಡರ ಮನೆಗಳಲ್ಲಿ ಮರ್ಡರ್‌ಗಳು ಆಗುತ್ತಿರುತ್ತವೆ. ಅವುಗಳನ್ನು ಮಾಡೋರು ಯಾರು? ಯಾವ ಕಾರಣಕ್ಕೆ? ಇದೆಲ್ಲಾವನ್ನು ಗೌಡರ ಮಗ ಅಪ್ಪನ ಸಾವಿನ ನಂತರ ಕೊಲೆಗಾರರನ್ನು ಭೇದಿಸಲು ಆರಂಭಿಸುತ್ತಾನೆ. ಈ ಹಾದಿಯಲ್ಲಿ ಆತನಿಗೆ ಎದುರಾಗುವ ಸವಾಲುಗಳು ಏನು? ಅದೆಲ್ಲಾವನ್ನು ಭೇದಿಸಿ ಹೇಗೆ ಗೆಲುವು ಸಾಧಿಸುತ್ತಾನೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ.

ಸನ್ನಿವೇಶಕ್ಕೆ ತಕ್ಕಂತೆ ಮೈಸೂರನ ಪುಟ್ಟ ಹಳ್ಳಿಯಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಲು ಯೋಜನೆ ಹಾಕಲಾಗಿದೆ. ಎರಡು ಹಾಡುಗಳು ಹಾಗೂ ಸಾಹಸಗಳು ಇರಲಿದೆ. ಇಬ್ಬರು ಹಿರಿಯ ಪೋಷಕ ಕಲಾವಿದರು ನಟಿಸಲಿದ್ದಾರೆ. ಅದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆಂದು ಎಸ್.ಆರ್.ಪ್ರಮೋದ್ ಮಾಹಿತಿ ಹಂಚಿಕೊಂಡರು. ಹಾಸನ ಮೂಲದ ರೇಖಾರಮೇಶ್ ನಾಯಕಿ. ಉಳಿದಂತೆ ನಾಯಕನ ತಂಗಿಯಾಗಿ ತನಿಖಾನಾರಾಯಣ್. ಅಯುರ್ ಮುಂತಾದವರು ನಟಿಸುತ್ತಿದ್ದಾರೆ. ಸಂಗೀತ ಕೆವಿನ್.ಎಂ, ಛಾಯಾಗ್ರಹಣ ಮೈಸೂರು ಸೋಮು, ಸಂಕಲನ ಅಯುರ್ ಅವರದಾಗಿದೆ.

Visited 1 times, 1 visit(s) today
error: Content is protected !!