M.P ಫೀಲ್ಮ್ಸ್ ಬ್ಯಾನರ ಲಾಂಚ್ ಮಾಡಿದ ಸೆಂಚುರಿ ಸ್ಟಾರ್ ಶಿವಣ್ಣ.
ಚಿತ್ರರಂಗದಲ್ಲಿ ಸರಿಸುಮಾರು 14 ವರ್ಷಗಳಿಂದ ಬಹಳಷ್ಟು ಸಿನಿಮಾಗಳ ಜೊತೆ ತಮ್ಮನ್ನ ತೊಡಗಿಸಿಕೊಂಡಿರುವವರು ಕೆ. ಮುನೀಂದ್ರ , ಇವರು ಇತ್ತೀಚಿಗೆ ಗಾಂಧಿನಗರದಲ್ಲಿ ನೂತನ ಕಚೇರಿಯನ್ನ ಆರಂಭಿಸಿ ಸಿನಿಮಾ ಚಟುವಟಿಗಳನ್ನ ಆರಂಭಿಸಿದರು. ದೊಡ್ಡ ಮಟ್ಟದಲ್ಲಿ ಸದ್ದನ್ನ ಮಾಡಲು ಚಿತ್ರ ನಿರ್ಮಾಣ ಹಾಗೂ ವಿತರಣಾ ಚಟುವಟಿಕೆ ಆರಂಭಿಸಲು ಸಜ್ಜಾಗಿದ್ದಾರೆ.
ಕೆ. ಮುನೀಂದ್ರ ರವರು ಅಪ್ಪಟ ಶಿವಣ್ಣನ ಅಭಿಮಾನಿಯಾಗಿದ್ದು , ಅವರಿಂದ ತಮ್ಮ ಬ್ಯಾನರ್ ಲಾಂಚ್ ಮಾಡಿಸಬೇಕೆಂಬ ಆಸೆಯನ್ನು ಹೊಂದಿದ್ದರು. ಅದರಂತೆ ಹ್ಯಾಟ್ರಿಕ್ ಹೀರೋ ಡಾ|| ಶಿವರಾಜಕುಮಾರ್ “ಎಂ ಪಿ ಫೀಲ್ಮ್ಸ್” ಬ್ಯಾನರನ್ನು ಅನಾವರಣ ಮಾಡಿ ಶುಭವನ್ನು ಹಾರೈಸಿದರು.
ಇದು ನಿರ್ಮಾಪಕ ಕೆ. ಮುನೇಂದ್ರ ಗೆ ಅದೃಷ್ಟದ ಸಂಕೇತವಾಗಿದ್ದು , ಚಲನಚಿತ್ರ ನಿರ್ಮಾಣ ಹಾಗೂ ವಿತರಣಾ ಕೆಲಸವನ್ನ ಆರಂಭಿಸಿದ್ದು , ತಮ್ಮ ಎಂ ಪಿ ಫೀಲ್ಮ್ಸ್ ಮೂಲಕ ಇದೆ ನವಂಬರ್ 21ನೇ ತಾರೀಖು ಬಿಡುಗಡೆಗೆ ಸಿದ್ಧವಿರುವಂತಹ “ಕಂಗ್ರಾಜುಲೇಷನ್ Brother” ಚಿತ್ರವನ್ನು ತಮ್ಮ ಬ್ಯಾನರ್ ನ ಮೂಲಕ ಕರ್ನಾಟಕ ರಾಜ್ಯಾದಾದ್ಯಂತ ವಿತರಣೆ ಮಾಡುತ್ತಿದ್ದಾರೆ. ಇನ್ನು ಮುಂದೆ ಎಂ ಪಿ ಫೀಲ್ಮ್ಸ್ ಮುಖ್ಯಸ್ಥ ಕೆ. ಮುನೇಂದ್ರ ಸಾಲು ಸಾಲು ಚಿತ್ರ ನಿರ್ಮಾಣದ ಜೊತೆಗೆ ವಿತರಣೆಯನ್ನ ಅದ್ದೂರಿಯಾಗಿ ನಡೆಸಲು ಸಜ್ಜಾಗಿದರೆ.