ಭುವನ್ & ಭಟ್ಟರ ಹೊಸಚಿತ್ರದ ಟೈಟಲ್ “ಹಲೋ123”.
ಅಮೃತಾ ಸಿನಿ ಕ್ರಾಫ್ಟ್ ಲಾಂಛನದಲ್ಲಿ ವಿಜಯ್ ಟಾಟಾ ಹಾಗೂ ಅಮೃತಾ ವಿಜಯ್ ಟಾಟಾ ನಿರ್ಮಾಣದಲ್ಲಿ ಹಲೋ 123. ಸ್ಟಾರ್ ಡೈರೆಕ್ಟರ್ ಯೋಗರಾಜ್ ಭಟ್ , ಮ್ಯೂಸಿಕ್ ಮಾಂತ್ರಿಕ ವಿ ಹರಿಕೃಷ್ಣ ಕಾಂಬಿನೇಷನ್ ನಲ್ಲಿ ಭುವನ್ ಪೊನ್ನಣ್ಣ ಸ್ಯಾಂಡಲ್ವುಡ್ ರಿ ಎಂಟ್ರಿ.
ಹರ್ಷಿಕಾ ಭುವನ್ ಪುತ್ರಿ ತ್ರಿದೇವಿಯ ಅಮೃತ ಹಸ್ತದಿಂದ ಚಿತ್ರಕ್ಕೆ ಚಾಲನೆ. ರಾಂಧವ ಸಿನಿಮಾ ಮಾಡಿ ಉದ್ಯಮದಲ್ಲಿ ದೊಡ್ಡದಾಗಿ ನಿಲ್ಲೋ ಭರವಸೆ ಹುಟ್ಟಿಸಿದ್ದ ನಟ ಭುವನ್ ಪೊನ್ನಣ್ಣ . ಈಸಲ ನಿಶ್ಚಳವಾಗಿ ಗೆದ್ದೆ ಗೆಲ್ಲೋ ಭರವಸೆಯೊಂದಿಗೆ, ಸ್ಟಾರ್ ಡೈರೆಕ್ಟರ್ ಯೋಗರಾಜ್ ಭಟ್ ರೊಂದಿಗೆ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಹಲೋ 123 ಅನ್ನೋ ವಿಶೇಷ ಕಥಾಹಂದರದ ಚಿತ್ರಕ್ಕೆ ಕೈಗೆತ್ತಿಕೊಂಡಿದ್ದಾರೆ.ಭುವನ್ ಜತೆಗೆ ಯೋಗರಾಜ್ ಭಟ್ ಮತ್ತು ಹರಿಕೃಷ್ಣ ಈ ಮ್ಯೂಸಿಕ್ ಜೊತೆ ವಿನೂತನ ಕಥೆಯೊಂದನ್ನ ಭುವನ್ ಮೂಲಕ ಹೇಳೋದಕ್ಕೆ ಮುಂದಾಗಿದ್ದಾರೆ.
ಅದ್ರಂತೆ ಬುಧವಾರ ಸಂಜೆ ಹಲೋ 123 ಚಿತ್ರ ನಿರ್ಮಾಪಕ ವಿಜಯ್ ಟಾಟಾರ ಮನೆಯಂಗಳದಲ್ಲಿ ಅಧಿಕೃತ ಸ್ಕ್ರಿಪ್ಟ್ ಪೂಜೆ ಹಾಗೂ ಶೀರ್ಷಿಕೆ ಅನಾವರಣಗೊಂಡಿದೆ.
ಹರ್ಷಿಕಾ ಹಾಗೂ ಭುವನ್ ಪುತ್ರಿ ತ್ರಿದೇವಿಯವ್ರ ಅಮೃತ ಹಸ್ತದಿಂದ ಚಿತ್ರಕ್ಕೆ ಚಾಲನೆ ನೀಡಿದ್ದು ವಿಶೇಷ.ದೇವರ ಪೂಜೆಯೊಂದಿಗೆ ನಾಯಕ ಭುವನ್ ನಿರ್ದೇಶಕ ಯೋಗರಾಜ್ ಭಟ್ ಹಾಗೂ ಸಂಗೀತ ನಿರ್ದೇಶಕ ವಿ. ಹರಿಕೃಷ್ಣರವರಿಗೆ ಅಡ್ವಾನ್ಸ್ ಕೊಟ್ಟು ಶುಭಕೋರಿದ ನಿರ್ಮಾಪಕ ವಿಜಯ್ ಟಾಟಾ.
ಒಳ್ಳೆ ದಿನ ಘಳಿಗೆ ಅನ್ನೋ ಕಾರಣಕ್ಕೆ ಸಿನಿಮಾ ಮಾತುಕತೆ ಮಾಡಿದ ಮರುದಿನವೇ ಚಿತ್ರಕ್ಕೆ ಚಾಲನೆ ನೀಡಿದ್ದು, ಉಳಿದ ಕೆಲಸಗಳು ಇಲ್ಲಿಂದ ಆರಂಭವಾಗ್ತಿವೆ. ಯೋಗರಾಜ್ ಭಟ್ ಯು ಎಸ್ ಪ್ರವಾಸ ಹೊರಟಿದ್ದು, ವಾಪಸ್ ಬಂದ ಕೂಡ್ಲೇ ಚಿತ್ರದ ಉಳಿದ ಕೆಲಸಗಳು ಶುರುವಾಗಲಿದ್ದು, ಅಕ್ಟೋಬರ್ ತಿಂಗಳಲ್ಲಿ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆಯಂತೆ. ಎಲ್ಲಾ ಅಂದುಕೊಂಡಂಗೆ ಆದ್ರೆ ಹಲೋ 123 ಮುಂದಿನ ವರ್ಷ ಮಾರ್ಚ್ ವೇಳೆಗೆ ರಿಲೀಸ್ ಆಗಲಿದೆ.