ಫೆಬ್ರವರಿ 06ರಂದು “ಬಯಕೆಗಳು ಬೇರೂರಿದಾಗ “ಚಿತ್ರ ಬಿಡುಗಡೆ.
ಈ ಜಗತ್ತಿನಲ್ಲಿ ಮಾನವ ಜನ್ಮ ಬಹಳ ಪವಿತ್ರವಾದದ್ದು ಎಂಬ ಮಾತಿದೆ. ಅದರಂತೆ ಗಂಡು ಹೆಣ್ಣು , ಸಂಭಂದಗಳ ಬೆಸುಗೆ , ಎಲ್ಲದಕ್ಕೂ ಸಮಯ ಸಂದರ್ಭವೇ ಉತ್ತರ ನೀಡುತ್ತದೆ. ಅದರಂತೆ ಮದುವೆ ಸ್ವರ್ಗದಲ್ಲಿ ನಿಶ್ಚಯ ಎನ್ನುವ ನಂಬಿಕೆಯ ಜೊತೆ ಗಂಡು-ಹೆಣ್ಣು ಜೀವನ ಸಾಗಿಸಿಕೊಂಡು ಬರ್ದಿದ್ದಾರೆ. ಆದರೆ ಕರ್ನಾಟಕದಲ್ಲಿ ಮದುವೆಯಾದ ದಂಪತಿಗಳ ಬದುಕಿನ ಲೆಕ್ಕಾಚಾರದ ಪ್ರಕಾರ ಕಳೆದ 5 ವರ್ಷದಲ್ಲಿ ದಾಖಲಾದ 1.7 ಲಕ್ಷ ವಿಚ್ಛೇದನ ದಾವೆಗಳು ಸವಾಲಾಗಿಸಿದಿಯಂತೆ. ಸ್ವರ್ಗ ಬಂಧನಕ್ಕೆ ಮುದ್ರೆ ಹಾಕಬಹುದು, ಆದರೆ ಆ ಬಂಧನವನ್ನು ಪೋಷಿಸುವುದು ನಮ್ಮ ಕೈಯಲ್ಲಿದೆ. ವಿಶಾಲ ಸಂಸ್ಕಾರ, ಸಾಮಾಜಿಕ ಒತ್ತಡಗಳ ನಡುವೆ ಸಂವಾದ , ತಾಳ್ಮೆ , ಹೊಂದಾಣಿಕೆಯ ಮೌಲ್ಯಗಳು ಹಿಂದೆ ಸರಿಯುತ್ತಿವೆ. ನಮ್ಮ ಸಮಾಜದಲ್ಲಿ ವಿವಾಹೇತರ ಸಂಬಂಧಗಳು ಹೆಚ್ಚುತ್ತಿರುವುದು ಚಿಂತನೀಯ ವಿಷಯವಾಗಿದೆ. ಇದರ ಹಿಂದೆ ಅನೇಕ ಸಾಮಾಜಿಕ-ಆರ್ಥಿಕ ಕಾರಣಗಳಿರಬಹುದು. ಕೆಲಸದ ಒತ್ತಡ, ಪತಿ-ಪತ್ನಿಯರು ಒಬ್ಬರಿಗೊಬ್ಬರು ಸಮರ್ಪಿಸುವ ಸಮಯದ ಕೊರತೆ, ಸಂವಾದದ ಇಲ್ಲವಾಗುವಿಕೆ ಮತ್ತು ದೀರ್ಘಕಾಲೀನ ವಿವಾಹದಲ್ಲಿ ಭಾವನಾತ್ಮಕ ಅಂತರ ಬೆಳೆಯುವುದು ಇವುಗಳಲ್ಲಿ ಮುಖ್ಯವಾದವು. ನಿಜ, ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ಕಳೆಯುವ ಸಮಯ ಕುಟುಂಬದೊಂದಿಗೆ ಕಳೆಯುವ ಸಮಯಕ್ಕಿಂತ ಹೆಚ್ಚಾಗುತ್ತಿರುವುದು ಒಂದು ಪ್ರಮುಖ ಅಂಶವಾಗಿದೆ.

ಒಂದು ಆರೋಗ್ಯಕರ ಸಂಬಂಧಕ್ಕೆ ಪ್ರೇಮ, ನಂಬಿಕೆ, ಜವಾಬ್ದಾರಿ, ಸಂವಾದ ಮತ್ತು ಶಿಸ್ತು ಅಗತ್ಯ. ಇಂದಿನ ದ್ರುತಗತಿಯ ಜೀವನಶೈಲಿಯಲ್ಲಿ ಈ ಮೌಲ್ಯಗಳು ಕ್ಷೀಣಿಸುತ್ತಿರುವುದು ಎರಡು ಹೃದಯಗಳ ನಡುವೆ ದೂರವನ್ನು ಸೃಷ್ಟಿಸುತ್ತಿದೆ. ಇಂತಹ ಸಂದರ್ಭದಲ್ಲಿ ಆಕರ್ಷ್ ಆದಿತ್ಯ ಅವರ ‘ಬಯಕೆಗಳು ಬೇರೂರಿದಾಗ’ ಕಾದಂಬರಿ ಮತ್ತು ಎನ್. ಜ್ಯೋತಿಲಕ್ಷ್ಮಿ ಅವರ ನಿರ್ದೇಶನದ ಈ ಸಂದೇಶ ಸಾರುವಂತಹ ಚಿತ್ರ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದೆ.
ಈ ಚಿತ್ರವು ಈಗಾಗಲೇ 25 ರಾಷ್ಟ್ರೀಯ – ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದೆ. ಕುಟುಂಬ ಮೌಲ್ಯಗಳು ಮತ್ತು ಸಂಬಂಧಗಳ ಸೂಕ್ಷ್ಮ ತಂತುಗಳನ್ನು ಚಿತ್ರಿಸುವ ಈ ಕಥೆ, ಸಮಸ್ಯೆಗಳಿಗೆ ದಾರಿ ಹುಡುಕುವಾಗ ಮಹತ್ವದ ಸಂದೇಶ ನೀಡಬಲ್ಲದಂತೆ. ಸಂಬಂಧಗಳ ಬಗ್ಗೆ ಆಳವಾಗಿ ಯೋಚಿಸುವ ಕಥಾನಕವನ್ನು ಹೊಂದಿರುವಂತಹ ಈ ಚಿತ್ರವನ್ನು ಎಲ್ಲರೂ ನೋಡಬೇಕು ಎಂಬುವುದು ಇಡೀ ಚಿತ್ರತಂಡದ ಪ್ರಯತ್ನವಾಗಿದ್ದು , ಈ ಕನ್ನಡ ಚಿತ್ರವನ್ನು ಫೆಬ್ರವರಿ 06 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆಯಂತೆ.