“ಬಂದೂಕ್” ಟ್ರೇಲರ್ ರಿಲೀಸ್, ಜುಲೈ 25ಕ್ಕೆ ಚಿತ್ರ ತೆರೆಗೆ
ಸಿನಿಮಾ ಎಂಬ ಬಣ್ಣದ ಲೋಕಕ್ಕೆ ಪ್ರತಿಭಾನ್ವಿತ ನಟ-ನಟಿಯರು, ನಿರ್ದೇಶಕರ ಪ್ರವೇಶ ಮುಂದುವರೆದಿದೆ. ಕಠಿಣ ಪರಿಶ್ರಮ, ಪ್ರತಿಭೆ ಜೊತೆಗೆ ಕೆಲವೊಮ್ಮೆ ಅದೃಷ್ಟವೂ ಬೇಕಾಗುತ್ತದೆ. ಈ ಚಿತ್ರರಂಗ ಕೆಲವರ ಕೈಹಿಡಿದರೆ, ಹಲವರು ಒಂದೆರಡು ಸಿನಿಮಾಗಳ ನಂತರ ಸುಮ್ಮನಾಗುತ್ತಾರೆ. ಬಹುತೇಕರು ಏಳು-ಬೀಳುಗಳ ನಡುವೆ ಪ್ರೇಕ್ಷಕರನ್ನು ಮನರಂಜಿಸುವುದನ್ನು ಮುಂದುವರೆಸುತ್ತಾರೆ.
ಅದಕ್ಕೆ ನಿರಂತರ ಪರಿಶ್ರಮ, ಧೈರ್ಯ ಅಗತ್ಯ. ಇದೀಗ ‘ಬಂದೂಕ್’ ಚಿತ್ರತಂಡ ಪ್ರೇಕ್ಷಕರನ್ನು ತಲುಪುವ ಪ್ರಯತ್ನದಲ್ಲಿದೆ. ಯುವ ಪ್ರತಿಭೆ ಮಹೇಶ್ ರವಿಕುಮಾರ್ ಸಾರಥ್ಯದಲ್ಲಿ ಮೂಡಿಬಂದಿರುವ ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ನಿರೀಕ್ಷೆ ಹೆಚ್ಚಿಸಿದೆ. ಜುಲೈ 25ಕ್ಕೆ ಬಂದೂಕ್ ತೆರೆಗೆ ಬರ್ತಿದೆ. ಈ ಹಿನ್ನೆಲೆ ಚಿತ್ರತಂಡ ಸುದ್ದಿಗಾರರೊಂದಿಗೆ ಹಲವು ವಿಷಯ ಹಂಚಿಕೊಂಡಿದೆ.
ಬೆಂಗಳೂರಿನ ಎಸ್ಆರ್ ವಿ ಥಿಯೇಟರ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಮಹೇಶ್ ರವಿಕುಮಾರ್ , ಮೂರು ವರ್ಷದ ಮುಂಚೆ ಶುರುವಾದ ಐಡಿಯಾ. ಬಂದೂಕ್ನಲ್ಲಿ ಆರು ಚೇಂಬರ್ ಇರುತ್ತದೆ. ನಮ್ಮ ಸಿನಿಮಾದಲ್ಲಿ ಐದು ಚೇಂಬರ್ ಇರುವ ಗನ್ ಯೂಸ್ ಮಾಡಿರುತ್ತೇವೆ. ಆ ಗನ್ ಎಲ್ಲಾ ಪಾತ್ರಗಳಿಗೂ ಕನೆಕ್ಟ್ ಆಗುತ್ತದೆ. ಹೀಗಾಗಿ ಬಂದೂಕ್ ಎಂದು ಹೆಸರಿಟ್ಟಿದ್ದೇವೆ. ಇದು ನನ್ನ ಮೊದಲ ಸಿನಿಮಾ. ಒಂದಷ್ಟು ಕಿರುಚಿತ್ರ ಮಾಡಿದ್ದೇನೆ ಎಂದು ಹೇಳಿದರು.
ಯುವ ಪ್ರತಿಭೆ ಮಹೇಶ್ ರವಿಕುಮಾರ್ ಕಥೆ ಬರೆದು, ಆ್ಯಕ್ಷನ್ ಕಟ್ ಹೇಳಿರೋ ಚೊಚ್ಚಲ ಚಿತ್ರ ಬಂದೂಕ್ ಚಿತ್ರದಲ್ಲಿ ಯುವ ಪ್ರತಿಭೆ ಪಾರ್ಥ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಬಾಲಾಜಿ ಮನೋಹರ್, ಶ್ವೇತಾ ಪ್ರಸಾದ್, ಗೋಪಾಲ ಕೃಷ್ಣ ದೇಶಪಾಂಡೆ, ಶಂಕರ್ ಅಶ್ವಥ್, ಹರೀಶ್ ರೈ ಅವರಂತಹ ಪ್ರತಿಭಾನ್ವಿತ ತಾರೆಯರು ಅಭಿನಯಿಸಿದ್ದಾರೆ.
ಕ್ರೈಮ್ – ಆ್ಯಕ್ಷನ್ ಕಥಾಹಂದರ ಹೊಂದಿರುವ ಬಂದೂಕ್ ಸಿನಿಮಾಗೆ ಶ್ರೀನಿವಾಸ್ ಮೂರ್ತಿ ಮತ್ತು ಚಂದ್ರಶೇಖರ್ ಬಂಡವಾಳ ಹೂಡಿದ್ದಾರೆ. ಪೈಡಿ ರಾಮಕೃಷ್ಣ ಸಹ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಹೊನ್ನಾವರ, ಉಡುಪಿ, ಮಲ್ಪೆ, ಮಂಗಳೂರು ಸುತ್ತಮುತ್ತ ಶೂಟಿಂಗ್ ನಡೆದಿದೆ.
ಕ್ರೈಮ್ – ಆ್ಯಕ್ಷನ್ ಕಥಾಹಂದರ ಹೊಂದಿರುವ ಬಂದೂಕ್ ಸಿನಿಮಾಗೆ ಶ್ರೀನಿವಾಸ್ ಮೂರ್ತಿ ಮತ್ತು ಚಂದ್ರಶೇಖರ್ ಬಂಡವಾಳ ಹೂಡಿದ್ದಾರೆ. ಪೈಡಿ ರಾಮಕೃಷ್ಣ ಸಹ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಹೊನ್ನಾವರ, ಉಡುಪಿ, ಮಲ್ಪೆ, ಮಂಗಳೂರು ಸುತ್ತಮುತ್ತ ಶೂಟಿಂಗ್ ನಡೆದಿದೆ. ಟ್ರೇಲರ್ ಬಿಡುಗಡೆ ಮೂಲಕ ತಮ್ಮನ್ನು ಪರಿಚಯಿಸಿಕೊಂಡಿರುವ ಚಿತ್ರ ತಂಡ ಜುಲೈ 25ಕ್ಕೆ ಚಿತ್ರಮಂದಿರ ಪ್ರವೇಶಿಸಲಿದೆ.