ಸಂಕ್ರಾಂತಿ ಸಂಭ್ರಮದಲ್ಲಿ “ಬಲರಾಮನ ದಿನಗಳು” ಚಿತ್ರತಂಡ.
ಆ ದಿನಗಳು ಚಿತ್ರದ ಭರ್ಜರಿ ಯಶಸ್ಸಿನ 18 ವರ್ಷಗಳ ನಂತರ ನಿರ್ದೇಶಕ ಕೆ.ಎಂ ಚೈತನ್ಯ ನಿರ್ದೇಶನ ಮಾಡಿರುವ ಬಲರಾಮನ ದಿನಗಳು ಚಿತ್ರದ ಶುರು ಶುರು ಹಾಡು ಬಿಡುಗಡೆಯಾಗಿದ್ದು ಗಮನ ಸೆಳೆದಿದೆ. ಪದ್ಮಾವತಿ ಜಯರಾಮ್ ಮತ್ತು ಶ್ರೇಯಸ್ ಬಂಡವಾಳ ಹೂಡಿರುವ ಚಿತ್ರದಲ್ಲಿ ಟೈಗರ್ ವಿನೋದ್ ಪ್ರಭಾಕರ್ ನಾಯಕನಾಗಿ ಕಾಣಿಸಿಕೊಂಡಿದ್ದು ಇದು ವಿನೋದ್ ಅವರ 25 ನೇ ಚಿತ್ರ. ನಾಯಕಿಯಾಗಿ ಪ್ರಿಯಾ ಆನಂದ್ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಅವಿನಾಶ್, ಅತುಲ್ ಕುಲಕರ್ಣಿ , ಆಶಿಶ್ ವಿದ್ಯಾರ್ಥಿ, ವಿನಯ್ ಗೌಡ ಸೇರಿದಂತೆ ಹಿರಿ- ಕಿರಿಯ ಕಲಾವಿದರ ದಂಡು ಚಿತ್ರದಲ್ಲಿದೆ. ಹೌದು ಮಂಡ್ಯದ ಅರ್ಜಿ ರೆಸಾರ್ಟ್ ನಲ್ಲಿ ಸಂಕ್ರಾಂತಿ ಸಂಭ್ರಮವನ್ನು ಆಚರಿಸಿದ ಸಿನಿಮಾ ತಂಡ ಮಾಧ್ಯಮ ಮಿತ್ರರೊಂದಿಗೆ ಕುಣಿದು ಕುಪ್ಪಳಿಸಿದರು.. RG ರೆಸಾರ್ಟ್ ನಲ್ಲಿ ಹಬ್ಬದ ವಾತಾವರಣವೇ ನಿರ್ಮಾಣವಾಗಿತ್ತು.. ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿನಿಮಾದ ನಾಯಕಿ ಪ್ರಿಯಾ. ನಾಯಕ ವಿನೋದ್ ಪ್ರಭಾಕರ್, ನಿರ್ದೇಶಕ ಚೈತನ್ಯ ಪದ್ಮಾವತಿ ಪ್ರೊಡಕ್ಷನ್ ಹೌಸ್ ಪದ್ಮಾವತಿ ಮತ್ತು ಶ್ರೇಯಸ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಬಲರಾಮ ನನ್ನ ವೃತ್ತಿ ಬದುಕಿಗೆ ತಿರುವು ಕೊಡೋ ಸಿನಿಮಾ ಮಾದೇವ ಆದ ನಂತರ ನನ್ನ ಜೀವನವೇ ಬದಲಾಗಿದ್ದು ಬಲರಾಮನಿಂದ ನಾನು ಬಲರಾಮನಾಗಿ ಪ್ರತಿಕ್ಷಣ ಜೀವಿಸಿದ್ದೀನಿ ಬಹಳ ಡೆಡಿಕೇಶನ್ ಕೊಟ್ಟು ಪಾತ್ರಕ್ಕೆ ತಯಾರಿ ಮಾಡಿಕೊಂಡು ಇದ್ದೀನಿ ನಮ್ಮ ತಂದೆಯಿಂದಲೇ ಎಲ್ಲಾ ಸಿಕ್ಕಿದ್ದು ಬಿಡಿ ಎಂದು ತಂದೆ ನೆನೆದು ವಿನೋದ್ ಭಾವುಕರಾದರು.. ಸಿನಿಮಾದ ನಟಿ ಪ್ರಿಯಾ ಮಾತಾಡಿ ನನಗೆ ಪ್ರಾಣಿಗಳೆಂದರೆ ತುಂಬ ಇಷ್ಟ ತುಂಬ ಇಷ್ಟವಾದ ಸಿನಿಮಾ ಮತ್ತೆ ಕನ್ನಡ ಸಿನಿಮಾಕ್ಕೆ ಬಂದಿದೀನಿ ನಿಮ್ಮೆಲ್ಲರ ಆಶೀರ್ವಾದ ನನಗೆ ಬೇಕು ಡೈಲಾಗ್ ಸೀನ್ ಎಲ್ಲವೂ ತುಂಬ ಚೆನ್ನಾಗಿ ಬಂದಿದೆ ವಿನೋದ್ ಜೊತೆಗೆ ನಟಿಸಿ ಖುಷಿ ಆಗಿದೆ ಮುಂದೆ ಇನ್ನೂ ಹೆಚ್ಚು ಕನ್ನಡ ಸಿನಿಮ ಮಾಡ್ತೀನಿ ಎಂದು ಸಂತಸ ವ್ಯಕ್ತಪಡಿಸಿದರು. ಸಿನಿಮಾದ ಪ್ರೊಡ್ಯೂಸರ್ ಶ್ರೇಯಸ್ ಮಾತನಾಡಿ ನಮ್ಮ ಸಿನಿಮಾ ಸಿಂಪಲ್ ಆಗಿ ಪ್ರಾರಂಭವಾಗಿ ಸೂಪರ್ ಆಗಿ ಮುಗ್ಧಿದೆ ನಮಗೆ ನಿಮ್ಮ ಆಶೀರ್ವಾದ ಬೇಕು ಎಲ್ಲರೂ ನಮಗೆ ಶುಭ ಹಾರೈಸಿ ಎಂದು ಹೇಳಿದ್ರು.

ವಿನೋದ್ ಪ್ರಭಾಕರ್ ಪತ್ನಿ ನಿಶಾ ಮಾತನಾಡಿ ಶ್ರೇಯಸ್ ಹಾಕೋ ದುಡ್ಡು ಎಲ್ಲಿಗೆ ಹೋಗ್ತಿದೆ ಏನ್ ಆಗ್ತಿದೆ ಅದೆಲ್ಲ ನೋಡಿಕೊಳ್ಳುವ ಜವಾಬ್ದಾರಿ ನಂದಾಗಿತ್ತು ಈ ಟೀಮ್ ಜೊತೆಗೆ ಕೆಲಸ ಮಾಡಿ ನನಗೆ ಬಹಳ ಸಂತೋಷವಿದೆ ನಾನ್ ಹೇಳ್ತಾ ಇದೆ ಶ್ರೇಯಸ್ ಕೆ ತುಂಬಾ ಖರ್ಚಾಗ್ತಿದೆ ಅಂದ್ರು ಶ್ರೇಯಸ್ ಎಲ್ಲದನ್ನು ಮಾಡ್ತಾ ಇದ್ರು ಅಂತ ಸಂತಸ ವ್ಯಕ್ತಪಡಿಸಿದ್ದರು.. ಸಿನಿಮಾದಲ್ಲಿ ಮೇಜರ್ ಕ್ಯಾರೆಕ್ಟರ್ ಮಾಡಿರುವಂತಹ ವಿನಯ್ ಗೌಡ ಅಲಿಯಾಸ್ ಕತ್ತಿ ಮಾತನಾಡಿ ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು ತುಂಬಾ ಇಷ್ಟಪಟ್ಟು ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ ಇದೊಂತರ ನಮಗೆ ಸಂಕ್ರಾಂತಿ ಗಿಫ್ಟ್ ಇದ್ದಂಗೆ ನನ್ನ ವೃತ್ತಿ ಬದುಕಿಗೆ ತಿರುಗು ಕೊಟ್ಟ ಸಿನಿಮಾ ಅಂದ್ರೆ ಅದು ಬಲರಾಮ ನೀವು ಹೂವಿಸಲಾಗದಂತ ಪಾತ್ರವನ್ನು ನಾನು ಮಾಡಿದ್ದೇನೆ ಕತ್ತೆ ಹೇಗಿರುತ್ತಾನೆ? ಕತ್ತಿ ಏನ್ ಮಾಡ್ತಾನೆ? ಎಲ್ಲದನ್ನು ನೀವು ಸಿನಿಮಾದಲ್ಲೇ ನೋಡ್ತೀರ ಆ ಕುತೂಹಲ ನ ನಾನು ಬಿಟ್ಟು ಕೊಡುವುದಿಲ್ಲ ತನ್ನ ಪಾತ್ರದ ಬಗ್ಗೆ ವಿನಯ್ ಮಾತನಾಡಿ ಸಂತೋಷ ವ್ಯಕ್ತಪಡಿಸಿದ್ರು.

ಪದ್ಮಾವತಿ ಬ್ಯಾನರ್ಸ್ ಓನರ್ ಪ್ರೊಡ್ಯೂಸರ್ ಪದ್ಮಾವತಿ ಮಾತನಾಡಿ ನನಗೆ ಇದು ಬಹಳ ಸಂತೋಷ ಕೊಟ್ಟಂತಹ ದಿನವಾಗಿದೆ ಅಂದುಕೊಂಡಕ್ಕಿಂತ ಹೆಚ್ಚಿನ ನಿರೀಕ್ಷೆ ವ್ಯಕ್ತವಾಗ್ತಾಯಿದೆ ನೀವೆಲ್ಲ ನಮಗೆ ಸಪೋರ್ಟ್ ಮಾಡ್ತಾ ಇದ್ದೀರಾ ಈ ಸಪೋರ್ಟ್ ಹೀಗೆ ಇರಲಿ. ನನಗೆ ಈ ತಂಡದ ಜೊತೆಗೆ ಕೆಲಸ ಮಾಡಿ ಬಹಳ ಖುಷಿಯಾಗಿದೆ ಯಾವುದಕ್ಕೂ ಕೊಂದು ಕೊರತೆ ಮಾಡಿಲ್ಲ ಅದೇ ರೀತಿಯಾಗಿ ವಿನೋದ್ ಪ್ರಭಾಕರ್ ಪ್ರಿಯಾ ವಿನಯ್ ಗೌಡ ರಜತ್ ಪ್ರತಾಪ್ ನಾರಾಯಣ್ ಇಂತಹ ವ್ಯಕ್ತಿಗಳ ಜೊತೆಗೆ ಸಿನಿಮಾ ಮಾಡಿ ನಮಗೂ ಖುಷಿಯಾಗಿದೆ ಎಲ್ಲದಕ್ಕೂ ನಮಗೆ ಚೈತನ್ಯ ಸರ್ ಮುಂದೆ ನಿಂತಿದ್ದು ಬಹಳ ಖುಷಿಯ ವಿಚಾರ ಸಿನಿಮಾ ತಂಡದ ಜೊತೆಗೆ ಕೆಲಸ ಮಾಡಿ ಒಂದು ಬೇರೆದೆ ನಿರೀಕ್ಷೆ ವ್ಯಕ್ತವಾಗಿದೆ ನಿಮ್ಮ ಸಪೋರ್ಟ್ ನಮಗೆ ಬಹಳ ಮುಖ್ಯ ಹೀಗೆ ನಮ್ಮನ್ನು ಹರಿಸಿ ಎಂದ್ರು.

ಸಿನಿಮಾದಲ್ಲಿ ಪುಟ್ಟ ಕ್ಯಾರೆಕ್ಟರ್ ಅನ್ನ ಮಾಡಿರುವಂತಹ ರಜತ್ ಮಾತನಾಡಿ ನಾನು ಬಿಗ್ ಬಾಸ್ ನಲ್ಲಿ ಇದ್ದಾಗ ಈ ಸಿನಿಮಾದ ಶೂಟಿಂಗ್ ಆಗಿತ್ತು ಸ್ಟಾರ್ ಕಾಸ್ಟ್ ಕೂಡ ಕರೆದಿದ್ದರು ನನಗೆ ಏನು ಮಾಡಬೇಕು ಗೊತ್ತಾಗಿಲ್ಲ ಬಿಗ್ ಬಾಸ್ ಇಂದ ಆಚೆ ಬಂದ ನಂತರ ಚೈತನ್ಯ ಸರ್ ಹೀಗೆ ಅಂತ ನನಗೆ ಕಾಲ್ ಮಾಡಿ ಹೇಳಿದಾಗ ಬಹಳ ಖುಷಿಯಾಯಿತು ಇಲ್ಲಿಂದ ನನ್ನ ವೃತ್ತಿ ಜೀವನಕ್ಕೂ ಒಂದು ತಿರುವು ಕೊಟ್ಟಂತಹ ಸಿನಿಮಾ ಬಲರಾಮನ ದಿನ ಯಾವಾಗಲೂ ನಾನು ಇದನ್ನ ನೆನಪಿನಲ್ಲಿ ಇಟ್ಟುಕೊಂಡಿರುತ್ತೇನೆ ತಮಾಷೆ ಮಾಡುತ್ತ ತನ್ನ ಕ್ಯಾರೆಕ್ಟರ್ ಬಗ್ಗೆ ರಜತ್ ವಿವರಣೆ ನೀಡಿದ್ರು
ಇನ್ನು ಸಂಕ್ರಾಂತಿ ವಿಶೇಷವಾಗಿ ಮಾಧ್ಯಮದವರೊಂದಿಗೆ ಊಟವನ್ನು ಸವಿದಂತಹ ಸಿನಿಮಾ ತಂಡ ನಂತರ ಆ ಆಟವನ್ನು ಕೂಡ ಆಡಿದ್ರು ಸಿನಿಮಾ ತಂಡ ಒಂದು ತಂಡವಾದ್ರೆ ಮಾಧ್ಯಮ ಮಿತ್ರರು ಮತ್ತೊಂದು ತಂಡ ನಿಶಾ ವಿನೋದ್ ಪ್ರಭಾಕರ್ ನೇತೃತ್ವದಲ್ಲಿ ಜರಗಿದಂತಹ ಆಟದಲ್ಲಿ ವಿನ್ನರ್ ಆದಂತವರಿಗೆ ಗಿಫ್ಟ್ ಕೂಡ ನೀಡುವುದಾಗಿ ಹೇಳಿದರು ಆನಂತರದಲ್ಲಿ ಮಾಧ್ಯಮದವರೊಂದಿಗೆ ಕುಣಿದು ಕುಪ್ಪಳಿಸಿದ್ರು ಸ್ಪೂನ್ ಮೇಲೆ ನಿಂಬೆಹಣ್ಣು ಹಿಡಿದು ಓಡುವಂತಹ ಆಟ ಆಡಿ ಎಲ್ರು ಸಂತೋಷ ವ್ಯಕ್ತಪಡಿಸಿದ್ರು.. ಒಟ್ನಲ್ಲಿ.. ಬಲರಾಮನ ದಿನಗಳು 2026ರ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ ಆಗಿರೋದ್ರಿಂದ ಸಿನಿಮಾದ ಮೇಲೆ ನಿರೀಕ್ಷೆ ದುಪ್ಪಟಾಗಿದೆ ಸಿನಿಮಾ ತಂಡದ ಜೊತೆಗಿನ ಸಂಕ್ರಾಂತಿ ಹಬ್ಬ ಅದ್ಬುತವಾಗಿ ಜರುಗಿತು.