Cini NewsSandalwood

ಯುವ ಪ್ರತಿಭೆಗಳ “ಆತ್ಮ” ಟ್ರೇಲರ್ ಬಿಡುಗಡೆ

Spread the love

ಹಾರರ್, ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರುವ ’ಆತ್ಮ’ ಚಿತ್ರದ ಟ್ರೇಲರನ್ನು ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್.ಕೆ.ವಿಶ್ವನಾಥ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ವಿರಾಜ್ ಫಿಲಿಂ ರೆರ್ಕಾಡಿಂಗ್ ಸ್ಟುಡಿಯೋ ಮಾಲೀಕ ಯುವ ಪ್ರತಿಭೆ ಅನಿಲ್.ಸಿ.ಆರ್ ಕಥೆ, ನಿರ್ಮಾಣ ಮಾಡುವುದರ ಜತೆಗೆ ನಾಯಕರಾಗಿ ಅಭಿನಯಿಸಿರುವುದು ಎರಡನೇ ಅನುಭವ. ಮುನೆಗೌಡ ಕಿತ್ತಗನೂರು ಸಹ ನಿರ್ಮಾಪಕರಾಗಿ ಗುರಿತಿಸಿಕೊಂಡಿದ್ದಾರೆ. ’ಅಚಲ’ ’ಓಂ ಶಾಂತಿ ಓಂ’ ಮತ್ತು ’ಅಸ್ಥಿರ’ ಚಿತ್ರಗಳಿಗೆ ಆಕ್ಷನ್ ಹೇಳಿರುವ ಎಸ್.ಆರ್. ಪ್ರಮೋದ್ ನಿರ್ದೇಶನ ಮಾಡಿದ್ದಾರೆ.

ಪ್ರಾರಂಭದಿಂದ ಅಂತ್ಯದವರೆಗೂ ಕುತೂಹಲ ಹುಟ್ಟಿಸುತ್ತಾ ಸಿನಿಮಾವು ಸಾಗಲಿದೆ. ಮನುಷ್ಯ ಸತ್ತ ಮೇಲೆ ಶ್ರಾದ್ಧ ಮಾಡದೆ ಇದ್ದಲ್ಲಿ ಅದು ಆತ್ನವಾಗುತ್ತದೆಂದು ಹೇಳುತ್ತಾರೆ. ಇದರ ಒಂದು ಏಳೆಯನ್ನು ತೆಗೆದುಕೊಂಡು ಚಿತ್ರಕಥೆ ಸಿದ್ದಪಡಿಸಲಾಗಿದೆ. ಆರು ಸ್ನೇಹಿತರುಗಳು ವೀಕೆಂಡ್ ಪಾರ್ಟಿಗೆಂದು ಒಂದು ಸ್ಥಳಕ್ಕೆ ಹೋಗುತ್ತಾರೆ. ಅವರ ಗುಂಪಿನಲ್ಲಿ ಒಬ್ಬಳು ಗೋಸ್ಟ್ ಹಂಟರ್ ಇರುತ್ತಾಳೆ.

ಅವಳು ಎಲ್ಲರನ್ನು ಭೂತದ ಮನೆಗೆ ಕರೆದುಕೊಂಡು ಹೋಗುತ್ತಾಳೆ. ಎಲ್ಲರೂ ಪಾರ್ಟಿ ಮಾಡುತ್ತಿರುವಾಗ ಇವಳು ಮಾತ್ರ ಗೋಸ್ಟ್ ಹಂಟ್ ಮಾಡ್ತಾ ಇರುತ್ತಾಳೆ. ಅಲ್ಲಿ ಸಿಗುವ ಆತ್ಮ ಇಪ್ಪತ್ತು ವರ್ಷಗಳ ಹಿಂದೆ ನಡೆದ ಭಯಾನಕ ಘಟನೆಯ ನಿಗೂಢತೆಯನ್ನು ತೆರೆದುಕೊಳ್ಳುತ್ತದೆ. ಕೊನೆಗೆ ಅದರಿಂದ ತಪ್ಪಿಸಿಕೊಂಡು ಹೇಗೆ ಹೊರಗೆ ಬರುತ್ತಾರೆ? ಗೋಸ್ಟ್ ಹಂಟರ್ ಯಾರು? ಅದಕ್ಕೆ ಕಾರಣವೇನು? ಇವೆಲ್ಲವೂ ಕುತೂಹಲಕಾರಿ ಸನ್ನಿವೇಶಗಳಲ್ಲಿ ಮೂಡಿಬರಲಿದೆ.

ನಾಯಕಿ ಕಾವ್ಯ, ಇವರೊಂದಿಗೆ ದಿವ್ಯ, ಪುಷ್ಪ, ಪ್ರೀತಿ,ಏಲೇಶ್,ಬನ್ನೂರು ಶ್ರೀನಿವಾಸಗೌಡ, ಮುಂತಾದವರ ನಟನೆ ಇದೆ. ಎರಡು ಹಾಡುಗಳಿಗೆ ನಿತಿನ್‌ರಾಜ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ರಣಧೀರ್‌ನಾಯಕ್, ಸಂಕಲನ ಆಯುರ್, ಸಂಭಾಷಣೆ ಅಜಯ್‌ವೇದಾಂತಿ, ಸಾಹಿತ್ಯ ಸಿದ್ದುಅರಸು, ನಿರ್ವಹಣೆ ದೀಪಕ್‌ಬಾಬು ಅವರದಾಗಿದೆ. ಮೈಸೂರು ಸುತ್ತಮುತ್ತ 22 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಯುಎ ಪ್ರಮಾಣ ಪಡೆದುಕೊಂಡಿರುವ ಚಿತ್ರವನ್ನು ಮುಂದಿನ ದಿನಗಳಲ್ಲಿ ತೆರೆಗೆ ತರಲು ತಂಡವು ಯೋಜನೆ ರೂಪಿಸಿಕೊಂಡಿದೆ.

Visited 1 times, 1 visit(s) today
error: Content is protected !!