Cini NewsSandalwood

“ಅರಸಯ್ಯನ ಪ್ರೇಮ ಪ್ರಸಂಗ” ‘ಪೋಸ್ಟ್ ಕಾರ್ಡ್’ ಹಾಡು ರೀಲಿಸ್… ಸೆಪ್ಟೆಂಬರ್ 19ರಂದು ಚಿತ್ರ ಬಿಡುಗಡೆ.

ಮೇಘಶ್ರೀ ರಾಜೇಶ್ ನಿರ್ಮಾಣದ, ಜೆ.ವಿ.ಆರ್ ದೀಪು ನಿರ್ದೇಶನದ ಹಾಗೂ “ಫ್ರೆಂಚ್ ಬಿರಿಯಾನಿ” ಖ್ಯಾತಿಯ ಮಹಾಂತೇಶ್ ಹಿರೇಮಠ ನಾಯಕನಾಗಿ ನಟಿಸಿರುವ ಗ್ರಾಮೀಣ ಸೊಗಡಿನ ಕಾಮಿಡಿ ಕಥಾಹಂದರ ಹೊಂದಿರುವ “ಅರಸಯ್ಯನ ಪ್ರೇಮ ಪ್ರಸಂಗ” ಚಿತ್ರಕ್ಕಾಗಿ ವಿಕ್ರಮ್ ವಸಿಷ್ಠ ಅವರು ಬರೆದಿರುವ,‌ ನಿತಿನ್ ರಾಜರಾಮ್ ಶಾಸ್ತ್ರಿ ಹಾಗೂ “ಜೋಗಿ” ಸುನಿತಾ ಅವರು ಹಾಡಿರುವ ಮತ್ತು ಪ್ರವೀಣ್ – ಪ್ರದೀಪ್ ಸಂಗೀತ ನೀಡಿರುವ “ಪೋಸ್ಟ್ ಕಾರ್ಡ್” ಹಾಡು ಬಿಡುಗಡೆ ಹಾಗೂ ಚಿತ್ರದ ಪ್ರೀ ರಿಲೀಸ್ ಇವೆಂಟ್ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು.

ಚಂದನ್ ಶೆಟ್ಟಿ ಹಾಗೂ ಆರ್ ಚಂದ್ರು ಅವರು ಹಾಡನ್ನು ಬಿಡುಗಡೆ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ನಿರ್ಮಾಪಕರಾದ ನವರಸನ್, ಸಂಜಯ್ ಗೌಡ, ಚೇತನ್ ಗೌಡ ಹಾಗೂ ವಿತರಕರಾದ ಜಗದೀಶ್ ಗೌಡ, ಕೃಷ್ಣ ಸಾರ್ಥಕ್, ಗುರುದೇವ್ ಮುಂತಾದ ಗಣ್ಯರು ಸಮಾರಂಭಕ್ಕೆ ಆಗಮಿಸಿ “ಅರಸಯ್ಯನ ಪ್ರೇಮ ಪ್ರಸಂಗ” ಚಿತ್ರಕ್ಕೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಕನ್ನಡದ ಜನರು ಉತ್ತಮ ಕಂಟೆಂಟ್ ವುಳ್ಳ ಚಿತ್ರವನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ‌. ನಮ್ಮ ಚಿತ್ರದಲ್ಲೂ ಅಂತಹ ಉತ್ತಮ ಕಂಟೆಂಟ್ ಇದೆ. ಈಗಾಗಲೇ ಹಾಡುಗಳು ಹಾಗೂ ಟ್ರೇಲರ್ ಜನರ ಮನಸ್ಸಿಗೆ ಹತ್ತಿರವಾಗಿದೆ. ಚಿತ್ರ ಸೆಪ್ಟೆಂಬರ್ 19 ರಂದು ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಮೈಸೂರಿನಲ್ಲಿ ಪೇಡ್ ಪ್ರೀಮಿಯರ್ ‌ನಡೆಯಲಿದೆ. ಸಮಾರಂಭಕ್ಕೆ ಆಗಮಿಸಿರುವ ಗಣ್ಯರಿಗೆ ಹಾಗೂ ಚಿತ್ರತಂಡದ ಸದಸ್ಯರಿಗೆ ನನ್ನ ಧನ್ಯವಾದ ಎಂದರು ನಿರ್ಮಾಪಕ ರಾಜೇಶ್ ಗೌಡ.

ಚಿತ್ರದ ಬಗ್ಗೆ ಸಾಕಷ್ಟು ಮಾತನಾಡಿದ್ದೇನೆ. ಇದೇ 19 ರಂದು ನಮ್ಮ ಚಿತ್ರ ನಿಮ್ಮ ಮುಂದೆ ಬರಲಿದೆ. ನೋಡಿ. ಪ್ರೋತ್ಸಾಹ ನೀಡಿ ಎಂದು ನಿರ್ದೇಶಕ ಜೆ.ವಿ.ಆರ್ ದೀಪು ಹೇಳಿದರು.

ನಮ್ಮ ಚಿತ್ರಕ್ಕೆ ಪ್ರೋತ್ಸಾಹ ನೀಡುತ್ತಿರುವ ಪ್ರತಿಯೊಬ್ಬ ಗಣ್ಯರಿಗೆ ಹಾಗೂ ಚಿತ್ರತಂಡದ ಸದಸ್ಯರಿಗೆ ಅನಂತ ಧನ್ಯವಾದ ಎಂದು ಮಾತನಾಡಿದ ನಾಯಕ ಮಹಾಂತೇಶ್ ಹಿರೇಮಠ, ನಮ್ಮ ಚಿತ್ರದ ಬಗ್ಗೆ ಒಂದಂತೂ ಹೇಳಬಹುದು. ಪ್ರೇಕ್ಷಕರು ಕೊಟ್ಟ ದುಡ್ಡಿಗೆ ಯಾವುದೇ ಮೋಸ ಆಗದಂತ ಸಿನಿಮಾ ಇದು. ಮನೋರಂಜನೆಯ ಪ್ರಧಾನವಾಗಿರುವ ನಮ್ಮ “ಅರಸಯ್ಯನ ಪ್ರೇಮ ಪ್ರಸಂಗ”ವನ್ನು ಚಿತ್ರಮಂದಿರಗಳಲ್ಲಿ ನೋಡುವ ಮೂಲಕ ಪ್ರೋತ್ಸಾಹ ನೀಡಬೇಕೆಂದರು.

ನಾಯಕಿ ರಶ್ಮಿತ ಆರ್‌ ಗೌಡ, ನಿರ್ಮಾಪಕಿ ಮೇಘಶ್ರೀ ರಾಜೇಶ್, ಚಿತ್ರದಲ್ಲಿ ನಟಿಸಿರುವ ಪಿ.ಡಿ.ಸತೀಶ್, ವಿಜಯ್ ಚೆಂಡೂರ್, ಸುಜಿತ್, ಸುಧಾ, ಚಿಲ್ಲರ್ ಮಂಜು, ಮಹದೇವ್ ಲಾಲಿಪಾಳ್ಯ , ಸಂಗೀತ ನಿರ್ದೇಶಕ ಪ್ರವೀಣ್ – ಪ್ರದೀಪ್, ಛಾಯಾಗ್ರಾಹಕ ಗುರುಪ್ರಸಾದ್‌ ನಾರ್ನಾಡ್, ಸಂಕಲನಕಾರ ಸುನೀಲ್ ಕಶ್ಯಪ್, ಹಾಡು ಬರೆದಿರುವ ವಿಕ್ರಮ್ ವಸಿಷ್ಠ, ಗಾಯಕ ನಿತಿನ್ ರಾಜರಾಮ್ ಶಾಸ್ತ್ರಿ, ನೃತ್ಯ ನಿರ್ದೇಶಕ ರಾಮ್ ಪ್ರಸಾದ್ ಮುಂತಾದವರು ಪ್ರೀ ರಿಲೀಸ್ ಇವೆಂಟ್ ನಲ್ಲಿ ಉಪಸ್ಥಿತರಿದ್ದರು.

error: Content is protected !!