Cini NewsSandalwood

ಅರ್ಜುನ್ ಸರ್ಜಾ ಪುತ್ರಿಯ ಅದ್ದೂರಿ ನಿಶ್ಚಿತಾರ್ಥ

Spread the love

ದಕ್ಷಿಣಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಅರ್ಜುನ್ ಅವರ ನಿಶ್ಚಿತಾರ್ಥ ಇತ್ತೀಚೆಗೆ ಉಮಾಪತಿ ಅವರೊಂದಿಗೆ ನೆರವೇರಿದೆ.‌ ಚೆನ್ನೈನಲ್ಲಿ ಅರ್ಜುನ್ ಸರ್ಜಾ ನಿರ್ಮಿಸಿರುವ ಅರ್ಜುನ್ ಸರ್ಜಾ ಅವರ ಆರಾಧ್ಯ ದೈವ ಆಂಜನೇಯನ ದೇವಸ್ಥಾನದಲ್ಲಿರುವ ಸಿತಾರಾಮರ ಸನ್ನಿಧಾನದಲ್ಲಿ ಐಶ್ವರ್ಯ ಹಾಗೂ ಉಮಾಪತಿ ಅವರು ಉಂಗುರ ಬದಲಾವಣೆ ಮಾಡಿಕೊಂಡರು. ಕುಟುಂಬ ಸದಸ್ಯರು, ನಟ & ಸಂಬಂಧಿ ಧ್ರುವ ಸರ್ಜಾ ಹಾಗೂ ಅರ್ಜುನ್ ಸರ್ಜಾ ಆಪ್ತರಾದ ನಟ ವಿಶಾಲ್ ಸೇರಿದಂತೆ ಕೆಲವು ಗೆಳೆಯರು ಈ ಸುಂದರ ಸಮಾರಂಭಕ್ಕೆ ಸಾಕ್ಷಿಯಾದರು.

ಐಶ್ವರ್ಯ ಅವರು ಈಗಾಗಲೇ ನಟಿಯಾಗಿ ಜನಪ್ರಿಯರಾಗಿದ್ದು, ಉಮಾಪತಿ ಅವರು ನಟನಾಗಿ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವೊಂದನ್ನು ನಿರ್ದೇಶನ ಕೂಡ ಮಾಡಿದ್ದು, ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಉಮಾಪತಿ ಅವರ ತಂದೆ ತಂಬಿ ರಾಮಯ್ಯ ಹೆಸರಾಂತ ಹಾಸ್ಯನಟರಾಗಿ ಜನಮನ್ನಣೆ ಪಡೆದಿದ್ದಾರೆ.

ನಿಶ್ಚಿತಾರ್ಥದಲ್ಲಿ ಉಮಾಪತಿ ಹಾಗೂ ಐಶ್ವರ್ಯ ಅವರ ಸುಂದರ ಉಡುಗೆ ಎಲ್ಲರ ಗಮನ ಸೆಳೆಯಿತ್ತು. ಉಮಾಪತಿ ಅವರಿಗೆ ಮನೀಶ್ ಮಲ್ಹೋತ್ರ ಹಾಗೂ ಐಶ್ವರ್ಯ ಅವರಿಗೆ ಜಯಂತಿ ರೆಡ್ಡಿ ಅವರು ವಸ್ತ್ರವಿನ್ಯಾಸ ಮಾಡಿದ್ದರು. ಆಕರ್ಷಕವಾಗಿದ್ದ ರೂಬಿ ಹರಳಿನ ಬಂಗಾರದ ನಿಶ್ಚಿತಾರ್ಥದ ಉಂಗುರಗಳನ್ನು ಜೈಪುರದಿಂದ ತರಿಸಲಾಗಿತ್ತು.

2024 ರ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಐಶ್ವರ್ಯ ಹಾಗೂ ಉಮಾಪತಿ ಅವರ ಕಲ್ಯಾಣ ಮಹೋತ್ಸವ ನೆರವೇರಲಿದೆ ಎಂದು ನಟ ಅರ್ಜುನ್ ಸರ್ಜಾ ತಿಳಿಸಿದ್ದಾರೆ.

 

Visited 1 times, 1 visit(s) today
error: Content is protected !!