Cini NewsSandalwood

ವಿಜಯ್ ರಾಘವೇಂದ್ರ ನಟನೆಯ “ರಿಪ್ಪನ್ ಸ್ವಾಮಿ”ಯಲ್ಲಿ ವೈದ್ಯೆಯಾಗಿ ಅಶ್ವಿನಿ ಎಂಟ್ರಿ

Spread the love

ಸದ್ಯ ಗಾಂಧಿನಗರದಲ್ಲಿ ರಿಪ್ಪನ್ ಸ್ವಾಮಿ ಸಿನಿಮಾ ಸದ್ದು ಮಾಡುತ್ತಿದೆ. ಫಸ್ಟ್ ಲುಕ್ ಪೋಸ್ಟರ್ ನಿಂದಾನೇ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟು ಹಾಕಿರುವಂತ ಸಿನಿಮಾವಿದು. ಪಂಚಾಂನನ ಬ್ಯಾನರ್ ಅಡಿಯಲ್ಲಿ ಸಮಾನ ಮನಸ್ಕರು ಸೇರಿ ನಿರ್ಮಾಣ ಮಾಡಿರುವಂತ ಸಿನಿಮಾ ಇದಾಗಿದೆ. ಯುವ ನಿರ್ದೇಶಕ ಕಿಶೋರ್ ಮೂಡುಬಿದ್ರೆ ವಿಭಿನ್ನ ಕಂಟೆಂಟ್ ನೊಂದಿಗೆ ಚಂದನವನದ ಅಂಗಳದಲ್ಲಿ ಚಂದದ ಚಿತ್ರ ಬಿಡಿಸಲು ಸಜ್ಜಾಗಿದ್ದಾರೆ. ವಿಜಯ್ ರಾಘವೇಂದ್ರ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ರಿಪ್ಪನ್ ಸ್ವಾಮಿ ಸಿನಿಮಾದಲ್ಲಿ ಅಶ್ವಿನಿ ಚಂದ್ರಶೇಖರ್ ಕೂಡ ಅಷ್ಟೇ ತೂಕದ ಪಾತ್ರ ನಿರ್ವಹಿಸಿದ್ದಾರೆ.

ನಟಿ ಅಶ್ವಿನಿ ಚಂದ್ರಶೇಖರ್ ಮೂಲತಃ ಶಿವಮೊಗ್ಗದವರು. ಓದಿದ್ದೆಲ್ಲಾ ಬೆಂಗಳೂರಿನಲ್ಲಿ. ಇಂಜಿನಿಯರಿಂಗ್ ಮುಗಿಸಿದ ಅಶ್ವಿನಿ ಅವರಿಗೆ ಸೆಳೆದಿದ್ದು ಚಿತ್ರೋದ್ಯಮ. ಸೀದಾ ಈ ಕಡೆ ಬಂದ ಇಂಜಿನಿಯರ್ ತಮ್ಮ ನಟನಾ ಕೌಶಲ್ಯದಿಂದ ಕನ್ನಡ, ತಮಿಳು, ತೆಲುಗು ಇಂಡಸ್ಟ್ರಿಯಲ್ಲಿ ತಮ್ಮದೇ ಸ್ಥಾನ ಪಡೆದರು. ಅಶ್ವಿನಿ ಅವರು ಒಳ್ಳೆಯ ಡ್ಯಾನ್ಸರ್ ಕೂಡ. ಅದರಲ್ಲೂ ಡ್ಯಾನ್ಸ್ ನಲ್ಲಿ ವಿದ್ವತ್ ಮುಗಿಸಿದ್ದಾರೆ.

ಈಗಾಗಲೇ ನಟಿ ಅಶ್ವಿನಿ ಚಂದ್ರಶೇಖರ್ ಕನ್ನಡದಲ್ಲಿ ಪ್ರೇಮ ಪಲ್ಲಕ್ಕಿ, ಒಂದು ರೋಮ್ಯಾಂಟಿಕ್ ಪ್ರೇಮ ಕತೆ, ಆಕ್ಟೋಪಸ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ಪ್ರೇಮ್ ಕಹಾನಿ, ಮಧ್ಯಲೋ ಪ್ರಭಾಸ್ ಪಳ್ಳಿ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳಿನಲ್ಲೂ ನಟಿಸೊರುವ ನಟಿ ಮೆರ್ಲಿನ್, ಪರಂಜು ಸೆಲ್ಲವ, ಕಾಲ್ ಟ್ಯಾಕ್ಸಿ, ಜಿವಿ2 ಸಿನಿಮಾದಲ್ಲಿ ನಟಿಸಿದ್ದಾರೆ. ಜಿವಿ2ಗೆ ಬೆಸ್ಟ್ ಡಿಬೇಟ್ ಅವಾರ್ಡ್ ಕೂಡ ಬಂದಿದೆ. ಜಿ3 ಸಿನಿಮಾದ ಶೂಟಿಂಗ್ ಈಗ ಶುರುವಾಗ್ತಾ ಇದೆ.

ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿರುವ ಅಶ್ವಿನಿ ಬ್ಯುಸಿ ನಟಿಯಾಗಿದ್ದಾರೆ. ಸದ್ಯಕ್ಕೆ ತಮಿಳಿನಲ್ಲಿ ಎರಡು ಸಿನಿಮಾ ರಿಲೀಸ್ ಗೆ ರೆಡಿ ಇದೆ. ಮಲಯಾಳಂನಲ್ಲಿ ಎರಡು ಸಿನಿಮಾ ಮಾಡಿದ್ದಾರೆ. ಕನ್ನಡದಲ್ಲಿ ರಿಪ್ಪನ್ ಸ್ವಾಮಿ ರಿಲೀಸ್ ಆಗಬೇಕಿದೆ.

ರಿಪ್ಪನ್ ಸ್ವಾಮಿಯಲ್ಲಿ ವಿಜಯ್ ರಾಘವೇಂದ್ರ ಅವರ ಹೆಂಡತಿ ಪಾತ್ರ ನಿರ್ವಹಿಸಿದ್ದಾರೆ. ಡಾಕ್ಟರ್ ಪಾತ್ರವಾಗಿದ್ದರು, ಕೌಟುಂಬಿಕ ಪಾತ್ರದ ಮಹತ್ವ ಸಾರುವಂಥ ಪಾತ್ರವದು. ರಿಪ್ಪನ್ ಸ್ವಾಮಿ ಸಿನಿಮಾದಲ್ಲಿ ಹೀರೋಗೆ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವ ಹೀರೋಯಿನ್ ಗು ಇದೆ. ಎರಡು ಕೂಡ ಸಮಾನವಾಗಿರುವಂಥ ಪಾತ್ರವದು. ಹೀಗಾಗಿ ಅಶ್ವಿನಿ ಅವರ ಪಾತ್ರದ ಬಗ್ಗೆ ನಿರೀಕ್ಷೆಗಳು ಹೆಚ್ಚಿವೆ. ಸದ್ಯ ರಿಪ್ಪನ್ ಸ್ವಾಮಿ ಸಿನಿಮಾ ಸೆನ್ಸಾರ್ ಅಂಗಳದಲ್ಲಿದ್ದು, ಶೀಘ್ರವೇ ರಿಲೀಸ್ ಆಗಲಿದೆ.

Visited 5 times, 1 visit(s) today
error: Content is protected !!