ನಟ, ನಿರ್ಮಾಪಕ ,ಲೇಖಕ ,ವೈದ್ಯ ಡಾ. ಲೀಲಾ ಮೋಹನ್ ಪಿ.ವಿ.ಆರ್ ಸಿನಿಮಾ ನಂಟು
ಜೀವನದಲ್ಲಿ ಆಸೆ , ಆಕಾಂಕ್ಷೆ , ಶ್ರದ್ಧೆ , ಗುರಿ , ಅದೃಷ್ಟವಿದ್ದರೆ ಖಂಡಿತ ಉನ್ನತ ಮಟ್ಟಕ್ಕೆ ಸಾಗಬಹುದು ಎಂಬುದಕ್ಕೆ ನಿದರ್ಶನವಾಗಿರುವ ವ್ಯಕ್ತಿ ಭಾರತೀಯ ವೈದ್ಯರು, ನಟರು, ಲೇಖಕರು, ಮ್ಯಾರಥಾನ್ ರನ್ನರ್, ಸಾಂಸ್ಕೃತಿಕ ರಾಯಭಾರಿಯಾಗಿದ ಡಾ. ಲೀಲಾ ಮೋಹನ್ ಪಿ.ವಿ.ಆರ್. ಮೂಲತಃ ಬೆಂಗಳೂರಿನವರಾಗಿದ್ದು , ಎಂ.ಬಿ.ಬಿ.ಎಸ್ ಮತ್ತು ಎಂ.ಡಿ ಪದವಿಗಳನ್ನು ಪೂರ್ಣಗೊಳಿಸಿದ ನಂತರ ಬೆಂಗಳೂರಿನ ಪ್ರಮುಖ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಯನ್ನು ಆರಂಭಿಸಿ ಸುಮಾರು 18 ವರ್ಷಗಳಿಗಿಂತ ಹೆಚ್ಚು ಅನುಭವದೊಂದಿಗೆ ಫ್ಯಾಮಿಲಿ ಮೆಡಿಸಿನ್, ಪೀಡಿಯಾಟ್ರಿಕ್ಸ್ , ಪಬ್ಲಿಕ್ ಹೆಲ್ತ್, ಲೈಫ್‌ಸ್ಟೈಲ್ ಮೆಡಿಸಿನ್ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದ್ದು , ಅದರಲ್ಲೂ ಪೇನ್ ಕಿಲ್ಲರ್‌ಗಳ ಬದಲು ನ್ಯೂಟ್ರಾಸ್ಯೂಟಿಕಲ್ಸ್ ಮೂಲಕ ನೋವು ನಿರ್ವಹಣೆಗೆ ಆದ್ಯತೆ ನೀಡುವ ವೈದ್ಯರಾಗಿ ಹೆಚ್ಚು ಪರಿಚಿತರು. ಇನ್ನು ಸರ್ಜಾಪುರ ಬಳಿ ಇರುವ ರೇನ್‌ಬೋ ಆಸ್ಪತ್ರೆ , ಮದರ್‌ಹುಡ್ ಆಸ್ಪತ್ರೆ ಹಾಗೂ ಮಣಿಪಾಲ್ ಆಸ್ಪತ್ರೆಯಲ್ಲಿ ಪರಾಮರ್ಶಕ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು, ಹೆಚ್ ಎಸ್ ಆರ್ ಲೇಔಟ್‌ನಲ್ಲಿ ಪಡಿತೇಮ್ ಹೆಲ್ತ್ ಕೇರ್ ಎಂಬ ಡೇ ಕೇರ್ ವೈದ್ಯಕೀಯ ಕೇಂದ್ರದ ಸಂಸ್ಥಾಪಕರೂ ಹೌದು. ಕೊವಿಡ್ ಮಹಾಮಾರಿಯ ಸಂದರ್ಭದಲ್ಲಿ ನೀಡಿದ ಸೇವೆಗೆ Covid Warrior Award ಸೇರಿದಂತೆ ಹಲವು ಗೌರವಗಳನ್ನು ಪಡೆದಿದ್ದಾರೆ.
ವೈದ್ಯಕೀಯ ಕ್ಷೇತ್ರದ ಜೊತೆಗೆ ಕನ್ನಡ ಚಿತ್ರರಂಗದಲ್ಲೂ ನಟ, ಸಾಹಿತ್ಯಗಾರ, ಕವನ-ಸಾಹಿತಿ ಹಾಗೂ ಸೃಜನಾತ್ಮಕ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ.
ಬಾಲ್ಯದಿಂದಲೇ ಅಭಿನಯ, ಬರವಣಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಡಾ. ಲೀಲಾ ಮೋಹನ್ ಪಿ.ವಿ.ಆರ್. ಅವರು 2016ರಲ್ಲಿ ಗಿರಿರಾಜ. ಬಿ.ಎಂ. , ಪರಮೇಶ್, ಕಲಾಮಧ್ಯಮ ಶಿಕ್ಷಕರಿಂದ ಅಭಿನಯ ಮತ್ತು ರಂಗ ಭೂಮಿ ತರಬೇತಿ ಪಡೆದ ನಂತರ ಕಿರು ಚಿತ್ರಗಳಾದ Don’t Be fuelish, ಆಕ್ಸಿಡೆಂಟ್, ಓ ಎಸ್ ಟಿ, ಹೈವೇ , ಟ್ರಕ್ ಚಿತ್ರಗಳಲ್ಲಿ ಅನುಭವ ಪಡೆದು , 2018ರಿಂದ ಆಲ್ಬಮ್ ಹಾಡುಗಳಲ್ಲೂ ಕಾಣಿಸಿಕೊಂಡಿದ್ದಾರೆ. ತದನಂತರ ಪೂರ್ಣ ಪ್ರಮಾಣದಲ್ಲಿ ಕನ್ಯಾ, ಗಡಿಯಾರ ಚಿತ್ರಗಳಲ್ಲಿ ಅಭಿನಯಿಸಿದ ನಂತರ ಈಗ “ನಾಯಿ ಇದೆ ಎಚ್ಚರಿಕೆ” ಚಿತ್ರ ಕೂಡ ಬಿಡುಗಡೆಗೆ ಸಿದ್ಧವಿದೆ. ಈ ಚಿತ್ರ ನಿರ್ಮಿಸುವುದರ ಜೊತೆಗೆ ನಾಯಕನಾಗಿ ಕೂಡ ಅಭಿನಯಿಸಿದ್ದಾರೆ ಡಾ. ಲೀಲಾ ಮೋಹನ್. ಇದಲ್ಲದೆ ಸಾಲುಸಲಾಗಿ ಕೌರವ ವೆಂಕಟೇಶ್ ನಿರ್ದೇಶನದ PYNA ನೂತನ ಚಿತ್ರದ ಜೊತೆಗೆ ಉಗ್ರಾವತಾರ ಚಿತ್ರದಲ್ಲಿ ಸೈಕೋ ಪಾತ್ರ , ರೇ1 ನಲ್ಲಿ ಖಳನಾಯಕನಾಗಿ , ಪುಟಾಣಿ ಪಂಟ್ರೂ ಹಾಗೂ ತೆಲುಗುನಲ್ಲಿ ಕಲ್ಯಾಣ ಮಸ್ತು , ಕಾಲಾನಿಕಿ ಭೈರವಡು ಚಿತ್ರಗಳಲ್ಲಿ ಅಭಿನಯಿಸಿದ್ದು , ಸದ್ಯ ಕನ್ನಡದಲ್ಲಿ ರಾಕ್ಷಸ , ಬಾರ್ಬಿ , ದಯಂಡ್ ಚಿತ್ರಗಳು ಬಿಡುಗಡೆಗೆ ಹಂತದಲ್ಲಿದೆ.
ಡಾ. ಲೀಲಾ ಮೋಹನ್ ಆರೋಗ್ಯ ಜಾಗೃತಿ ಬಗ್ಗೆ “One More Puff – A Guide on Smoking and Quitting” ಧೂಮಪಾನ ಮತ್ತು ನಿಕೋಟಿನ್ ವ್ಯಸನದಿಂದ ಹೊರಬರುವುದು ಹೇಗೆ ಎಂಬುದನ್ನು ಪುಸ್ತಕ ಮೂಲಕ ಅವರ ತಂದಿದ್ದು, ಕ್ರೀಡೆ ಮತ್ತು ಮ್ಯಾರಥಾನ್ ಓಟದಲ್ಲಿ ದೀರ್ಘಕಾಲದ ಮ್ಯಾರಥಾನ್ ರನ್ನರ್ ಆಗಿರುವ ಅವರು ಕರ್ನಾಟಕ ಹಾಗೂ ಭಾರತದ ಅನೇಕ ಮ್ಯಾರಥಾನ್‌ಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗಳಿಸಿದ್ದಾರೆ. ಹೃದಯ ಆರೋಗ್ಯ, ಫಿಟ್‌ನೆಸ್ ಮತ್ತು ಲೈಫ್‌ಸ್ಟೈಲ್ ಸುಧಾರಣೆಗೆ ಉತ್ತೇಜನ ನೀಡುವ ವ್ಯಕ್ತಿಯಾಗಿ ಪ್ರಸಿದ್ಧರು. ಇವರ ಹಲವು ಸಾಧನೆಗಳನ್ನು ಗಮನಿಸಿ ವೈದ್ಯಕೀಯ, ಸಂಸ್ಕೃತಿ, ಸಿನೆಮಾ, ಶಿಕ್ಷಣ, ಸಾಮಾಜಿಕ ಸೇವೆಗಳಲ್ಲಿ ನೀಡಿದ ಕೊಡುಗೆಗಾಗಿ 40ಕ್ಕೂ ಹೆಚ್ಚು ಪ್ರಶಸ್ತಿಗಳು ಪಡೆದಿದ್ದಾರೆ. ಅದರಲ್ಲೂ ಪ್ರಮುಖವಾಗಿ ನಾಡಪ್ರಭು ಕೇಂಪೇಗೌಡ ಪ್ರಶಸ್ತಿ , ವಿಕೆ ಹೆಲ್ತ್ ಎಕ್ಸಲೆನ್ಸ್ ಅವಾರ್ಡ್, ಡಾ. ರಾಜ್ಕುಮಾರ್ ಕಲೆ ರತ್ನ ಪ್ರಶಸ್ತಿ , ಎಸ್.ಎಸ್. ಕಲೆ ಸಂಗಮ ಪ್ರಶಸ್ತಿ, ಕಲೆ ಸಂಗಮ ರಾಜ್ಯ ಪ್ರಶಸ್ತಿ , ಕರ್ನಾಟಕ ರತ್ನ (ಕಲೆ ಸಂಗಮ), ಮದರ್ ತೆರೆಸಾ ಅವಾರ್ಡ್, ವಿದ್ಯಾ ರತ್ನ ಪ್ರಶಸ್ತಿ, ಕಾವ್ಯಕ ಯೋಗಿ ಬಸವಶ್ರೀ ಪ್ರಶಸ್ತಿ, ಗ್ಲೋಬಲ್ ವೆಲ್ಫೇರ್ ಪ್ರೊಟೆಕ್ಷನ್ ಗೌರವ , ಐಕಾನ್ಸ್ ಆಫ್ ಇಂಡಿಯನ್ ಬಿಸಿನೆಸ್ ಲೀಡರ್‌ಶಿಪ್ ಅವಾರ್ಡ್, ನವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ವಿಶ್ವವಾಣಿ ಗ್ಲೋಬಲ್ ಫೋರಂ ಗೌರವ, ಕೋವಿಡ್ ವಾರಿಯರ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರು ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು, ನೃತ್ಯ, ನಾಟಕ, ಮಕ್ಕಳ ಪ್ರತಿಭಾ ಸ್ಪರ್ಧೆಗಳು, ಮಾದರಿಂಗ್ ಶೋಗಳು, ಚಾರಿಟಿ ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಗಳಾಗಿ ಸಹಕಾರ ನೀಡುವುದರ ಜೊತೆಗೆ ಹೆಜ್ಜೆ ಹೆಜ್ಜೆ ರಂಗ ತಂಡ , ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮ, ಶಿಕ್ಷಣ ಟ್ರಸ್ಟ್ , ದೇವಸ್ಥಾನೋತ್ಸವಗಳು ಮತ್ತು ಸಮುದಾಯ ಚಟುವಟಿಕೆಗಳಿಗೆ ಸಾಥ್ ನೀಡಿದ್ದಾರೆ.
ಡಾ. ಲೀಲಾ ಮೋಹನ್ ಕನ್ನಡ, ತೆಲುಗು, ತಮಿಳು, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಪರಿಣಿತಿ ಹೊಂದಿದ್ದು , ನಟನೆ ಮಾಡ್ಲಿಂಗ್ , ಮುದ್ರಣ ಜಾಹೀರಾತುಗಳು, ರ್ಯಾಂಪ್ ಶೋಗಳು, ಕ್ಯಾಲೆಂಡರ್ ಶೂಟ್ ಗಳಲ್ಲೂ ನಟಿಸಲು ಸಿದ್ಧರಿದ್ದು , ಭಾರತೀಯ, ಪಾಶ್ಚಾತ್ಯ, ಫಿಟ್‌ನೆಸ್ ಹಾಗೂ ಸ್ಟೈಲಿಷ್ ವೇಷಗಳಿಗೂ ಸಿದ್ಧರಿದ್ದಾರೆ. ಬಹುಮುಖ ವ್ಯಕ್ತಿತ್ವವಾಗಿ ಡಾ. ಲೀಲಾ ಮೋಹನ್ ಪಿ.ವಿ.ಆರ್. ಈಗಾಗಲೇ ಗುರುತಿಸಿಕೊಂಡಿದ್ದು , ಸಿನಿಮಾ ಕ್ಷೇತ್ರದಲ್ಲಿ ದೊಡ್ಡ ನೆಲೆಯನ್ನ ಕಾಣಲು ಮುಂದಾಗಿದ್ದಾರೆ. ಆ ನಿಟ್ಟಿನಲ್ಲಿ ಡಾ. ಲೀಲಾ ಮೋಹನ್ ಪಿ.ವಿ.ಆರ್. ತಾವೇ ನಿರ್ಮಾಣದ ಜೊತೆ ಮುಖ್ಯಭೂಮಿಯಲ್ಲಿ ಅಭಿನಯಿಸಿರುವ “ನಾಯಿ ಇದೆ ಎಚ್ಚರಿಕೆ” ಚಿತ್ರವನ್ನು ಇದೇ ನವಂಬರ್ 28ರಂದು ರಾಜ್ಯದ್ಯಂತ ಅದ್ದೂರಿಯಾಗಿ ಬಿಡುಗಡೆ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಬಹಳಷ್ಟು ಕ್ಷೇತ್ರಗಳಲ್ಲಿ ತಮ್ಮನ್ನ ತೊಡಗಿಸಿಕೊಂಡು ಉತ್ತಮ ಸೇವೆ ಮಾಡುತ್ತಿರುವ ವೈದ್ಯ , ನಟ , ಡಾ. ಲೀಲಾ ಮೋಹನ್ ಪಿ.ವಿ.ಆರ್ ಸಿನಿಮಾ ಕ್ಷೇತ್ರದಲ್ಲಿ ಸಾಲು ಸಾಲು ಉತ್ತಮ ಚಿತ್ರಗಳ ನೀಡುವ ಬಯಕೆಯೊಂದಿಗೆ ಮುಂದೆ ಸಾಗಿದ್ದಾರೆ.
