Cini NewsSandalwood

ಪ್ರಣಾಮ್ ಹುಟ್ಟು ಹಬ್ಬದ ಪ್ರಯುಕ್ತ ‘ಎಂಜಿಆರ್’ ಟೈಟಲ್ ಲಾಂಚ್ ಮಾಡಿದ ನಟ ದೇವರಾಜ್

Spread the love

ಡೈನಾಮಿಕ್ ವೆಂಚರ್ಸ್ ಹಾಗೂ ಪುರಾತನ ಫಿಲಂ‌ ಪ್ರೊಡಕ್ಷನ್ಸ್ ಸಹಯೋಗದಲ್ಲಿ ನೂತನ ಚಿತ್ರವೊಂದು ನಿರ್ಮಾಣವಾಗುತ್ತಿದೆ. ಪ್ರಜ್ವಲ್ ದೇವರಾಜ್ ಈ‌ ಚಿತ್ರದ ಮೂಲಕ ನಿರ್ಮಾಣಕ್ಕಿಳಿದಿದ್ದಾರೆ. “ಎಂಜಿಆರ್” ಎಂಬ ವಿಶೇಷ ಶೀರ್ಷಿಕೆ ಈ ಚಿತ್ರಕ್ಕಿದೆ. ಚಿತ್ರದ ನಾಯಕ ಪ್ರಣಾಮ್ ದೇವರಾಜ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಲಾಂಚ್ ಕಾರ್ಯಕ್ರಮ ಬುಧವಾರ ಸಂಜೆ ನಡೆಯಿತು.

ಮುಖ್ಯ ಅತಿಥಿಯಾಗಿದ್ದ ಹಿರಿಯನಟ ದೇವರಾಜ್ ಅವರು ಮಗನ ಚಿತ್ರಕ್ಕೆ ಶುಭ ಹಾರೈಸುತ್ತ ಇದೊಂದು ಸಂತಸದ ಕ್ಷಣ. ನಾನು ಚಿತ್ರರಂಗಕ್ಕೆ ಬಂದು 30 ವರ್ಷಗಳಾದ ಮೇಲೆ ನಿರ್ಮಾಪಕನಾದೆ. ಈಗ ನನ್ನ ಮಗ 10-12 ವರ್ಷಗಳಿಗೇ ನಿರ್ಮಾಪಕನಾಗಿದ್ದಾನೆ. ನಮಗೆ ಸಿನಿಮಾ ಬಿಟ್ಟು ಬೇರೇನೂ ಗೊತ್ತಿಲ್ಲ.

ಇದರಲ್ಲೇ ಏನಾದರೂ ಮಾಡಬೇಕೆಂಬ ತುಡಿತವಿರುತ್ತದೆ. ಪುರಾತನ ಫಿಲಂಸ್ ಮಗನ ಜತೆ ಎರಡನೇ ಸಿನಿಮಾ ಮಾಡ್ತಿದಾರೆ. ಈ ಪೋಸ್ಟರ್ ನಲ್ಲಿ ಪ್ರಣಾಮ್ ಲುಕ್ ನೋಡಿ ನನಗೇ ಆಶ್ಚರ್ಯವಾಯ್ತು. ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾನೆ‌. ಚರಣರಾಜ್ ನನಗೆ ಇಷ್ಟವಾದ ಮ್ಯೂಸಿಕ್ ಡೈರೆಕ್ಟರ್. ಅವರ ಹಾಡುಗಳು ನಮ್ಮ ಸೊಗಡನ್ನು ಬಿಟ್ಟು ಹೋಗುವುದಿಲ್ಲ. ಡಿಓಪಿ ಕೃಷ್ಣ ಮುತ್ತಣ್ಣ ಚಿತ್ರದಲ್ಲಿ ಚೆನ್ನಾಗಿ ಕೆಲಸ ಮಾಡಿದ್ದರು. ಹೀಗೆ ನಮ್ಮನ್ನು ಅರ್ಥ ಮಾಡಿಕೊಂಡವರ ಜತೆ ಕೆಲಸ ಮಾಡುವುದಕ್ಕೆ ಖುಷಿ ಆಗುತ್ತದೆ ಎಂದು ಹೇಳಿದರು.

ಪುರಾತನ ಫಿಲಂಸ್ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ದಿವ್ಯ ಕೇಶವ್ ಮಾತನಾಡುತ್ತ ಪ್ರಜ್ವಲ್ ಅವರ ಜತೆ ಪ್ರೊಡ್ಯೂಸ್ ಮಾಡುವುದಕ್ಕೆ ತುಂಬಾ ಖುಷಿ ಆಗ್ತಿದೆ ಎಂದರು. ನಿರ್ದೇಶಕ ಶ್ರೀಕಾಂತ್ ಹುಣಸೂರು ಮಾತನಾಡಿ ಪ್ರಣಾಂ ಜತೆ ಮುತ್ತಣ್ಣ ನಂತರ ಇದು ಎರಡನೇ ಚಿತ್ರ. ಎಂಜಿಆರ್ ಅಂದ್ರೆ ಏನಂತ ಮುಂದಿನ ದಿನಗಳಲ್ಲಿ ಹೇಳುತ್ತೇವೆ. ಪ್ರಣಾಮ್ ಅವರನ್ನು ಬೇರೆ ಥರ ತೋರಿಸಬೇಕೆಂದು ಟ್ರೈ ಮಾಡಿದ್ದೇವೆ. ಟೈಟಲ್ ಸಮಸ್ಯೆಆಗಬಹುದು, ಆದರೆ ಕಾನ್ಸೆಪ್ಟ್ ಒಳ್ಳೆಯ ರೀತಿಯಲ್ಲೇ ಇರುತ್ತದೆ ಎಂದರು.

ನಿರ್ಮಾಪಕ ಪ್ರಜ್ವಲ್ ಮಾತನಾಡಿ ಇಡೀ ಸಿನಿಮಾ ಪ್ರಣಾಂ ಇರುತ್ತಾನೆ. ನಾವು ಹಿಂದೆ ನಿಂತು ಸಪೋರ್ಟ್ ಮಾಡುತ್ತೇವೆ. 2005ರಲ್ಲಿ ನಡೆವಂಥ ಕಥೆಯಿದು. ಮಾರ್ಚ್ ಎಂಡ್ ಅಥವಾ ಯುಗಾದಿ ವೇಳೆಗೆ ಮುಹೂರ್ತ ಮಾಡುತ್ತಿದ್ದೇವೆ. ನಮ್ಮ ಬ್ಯಾನರ್ ಮೂಲಕ ಹೊಸ ಪ್ರತಿಭೆಗಳಿಗೂ ಅವಕಾಶ ನೀಡುತ್ತೇವೆ ಎಂದರು.

ನಾಯಕ ಪ್ರಣಾಂ ಮಾತನಾಡಿ ನನ್ನ ಸಿನಿಮಾಗೆ ನಮ್ಮಣ್ಣ ಪ್ರೊಡ್ಯೂಸರ್ ಆಗಿರುವುದಕ್ಕೆ ಖುಷಿಯಾಗ್ತಿದೆ. ಎಂಜಿಆರ್ ನಿಂದ ಪ್ರಣಾಂ ಹೊಸ ಅಧ್ಯಾಯ ಶುರು ಆಗ್ತಿದೆ ಆತ ಅಳಿಸ್ತಾನೆ, ನಗಿಸ್ತಾನೆ, ಫೈಟ್ ಮಾಡ್ತಾನೆ. ನನ್ನ ಅಪೀಯರೆನ್ಸ್ ಬಾಡಿ ಲಾಂಗ್ವೇಜ್ ಬೇರೆ ಥರ ಇರುತ್ತೆ. ಪಾತ್ರಕ್ಕಾಗಿ ಸಾಕಷ್ಟು ಪ್ರಿಪರೇಶನ್ ಮಾಡಿಕೊಳ್ಳುತ್ತಿದ್ದೇನೆ ಎಂದರು. ಸ್ಕೇಟಿಂಗ ಕೃಷ್ಣ ಅವರ ಛಾಯಾಗ್ರಹಣ, ಚರಣರಾಜ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

Visited 1 times, 1 visit(s) today
error: Content is protected !!