Cini NewsSandalwood

ಮೈಸೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿಸಿದ ‘ಪೌಡರ್’ ಚಿತ್ರತಂಡ

Spread the love

ಕೆ.ಆರ್.ಜಿ ಸ್ಟುಡಿಯೋಸ್‍ ಮತ್ತು ಟಿ.ವಿ.ಎಫ್‍ ಮೋಷನ್‍ ಪಿಕ್ಚರ್ಸ್ ನಿರ್ಮಾಣದಲ್ಲಿ ತಯಾರಾಗುತ್ತಿರುವ ‘ಪೌಡರ್’ ಚಿತ್ರದ ಮೊದಲ ಹಂತದ ಚಿತ್ರೀಕರಣ ಮೈಸೂರಿನಲ್ಲಿ ಮುಕ್ತಾಯವಾಗಿದೆ.

30 ದಿನಗಳ ಕಾಲ ನಡೆದ ಈ ಮೊದಲ ಹಂತದ ಚಿತ್ರೀಕರಣದಲ್ಲಿ ದಿಗಂತ್‍, ಧನ್ಯಾ ರಾಮ್‍ಕುಮಾರ್, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ಅಚ್ಯುತ್ ಕುಮಾರ್, ಅನಿರುದ್ಧ್ ಆಚಾರ್ಯ, ರವಿಶಂಕರ್ ಗೌಡ ಮುಂತಾದ ಪ್ರತಿಭಾವಂತ ಕಲಾವಿದರು ಸಂತೋಷದಿಂದ ಚಿತ್ರೀಕರಣ ಮುಗಿಸಿದರೆ.

ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡವು ಸದ್ಯದಲ್ಲೇ ಬೆಂಗಳೂರಿನಲ್ಲಿ ಎರಡನೆ ಹಂತದ ಚಿತ್ರೀಕರಣ ಪ್ರಾರಂಭಿಸಲು ಸಜ್ಜಾಗುತ್ತಿದ್ದಾರೆ.‘ಪೌಡರ್’ ಒಂದು ಹಾಸ್ಯಮಯ ಚಿತ್ರವಾಗಿದ್ದು, ಎಲ್ಲಾ ವರ್ಗದ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣವಾಗಲಿದೆ.

ಈ ಚಿತ್ರಕ್ಕೆ ಜನಾರ್ದನ್‍ ಚಿಕ್ಕಣ್ಣ  ನಿರ್ದೇಶಿಸುತ್ತಿದ್ದು, ಕೆ.ಆರ್.ಜಿ ಸ್ಟುಡಿಯೋಸ್‍ ಮತ್ತು ಟಿ.ವಿ.ಎಫ್‍ ಮೋಷನ್‍ ಪಿಕ್ಚರ್ಸ್ ಜೊತೆಯಾಗಿ ನಿರ್ಮಿಸಿವೆ. 2024ರ ಏಪ್ರಿಲ್‍ನಲ್ಲಿ ‘ಪೌಡರ್’ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ

Visited 1 times, 1 visit(s) today
error: Content is protected !!