ರಾಮಾಯಣ’ ಚಿತ್ರಕ್ಕೆ ನಿಮ್ಮೆಲ್ಲರ ಅಪ್ಪುಗೆ ಇರಲಿ… ರಾಕಿಂಗ್ ಸ್ಟಾರ್ ಯಶ್.

Spread the love

“ರಾ” ಅಕ್ಷರದ ಸರದಾರ… ರಾಜಾಹುಲಿ , ರಾಕಿ , ರಾಯ , ರಾವಣ… ಈ ರಾಧಿಕಾ ಪತಿ.

ಇಡೀ ವಿಶ್ವದಾದ್ಯಂತ ಸಿನಿಪ್ರಿಯರು ಬಹಳ ದೊಡ್ಡ ನಿರೀಕ್ಷೆಯನ್ನು ಇಟ್ಟುಕೊಂಡಿರುವಂತಹ ಅದ್ದೂರಿ ಮಹಾಕಾವ್ಯದ ಚಿತ್ರ “ರಾಮಾಯಣ”. ನಮ್ಮ ಭಾರತೀಯ ಚಿತ್ರರಂಗದ ಪಾಲಿಗೆ ಇದೊಂದು ಐತಿಹಾಸಿಕ ಕ್ಷಣ ಹಾಗೂ ಪ್ರತಿಯೊಬ್ಬರು ಹೆಮ್ಮೆಯ ಪಡುವ ವಿಷಯ. ಈ ದೃಶ್ಯ ವೈಭವದ ಅದ್ದೂರಿತನವನ್ನು ಜಗತ್ತಿಗೆ ಸಾರಲು ಸಜ್ಜಾಗಿದೆ. ನಿತೇಶ್ ತಿವಾರಿ ಸಾರಥ್ಯದಲ್ಲಿ ಮೂಡಿ ಬಂದಿರುವ ಈ ದೃಶ್ಯ ಕಾವ್ಯವನ್ನು ಅದ್ದೂರಿಯಾಗಿ ನಿಮ್ಮಸಿದ್ದಾರೆ ನಿರ್ಮಾಪಕ ನಮಿತ್ ಮಲ್ಹೋತ್ರಾ. ಈ ಚಿತ್ರದ ಮೂಲಕ ಮತ್ತೊಮ್ಮೆ ಭಾರತೀಯರ ಸಾಮರ್ಥ್ಯ ಏನು ಎಂಬುದನ್ನು ಜಗತ್ತಿಗೆ ತೋರಿಸಿಕೊಡುತ್ತಿದ್ದಾರೆ. ಈ ಚಿತ್ರದ ಮತ್ತೊಂದು ವಿಶೇಷ ಆಕರ್ಷಣೆಯೆಂದರೆ ಇದು ಅತ್ಯಾಧುನಿಕ 3D ತಂತ್ರಜ್ಞಾನದಲ್ಲಿ ಮೂಡಿಬರುತ್ತಿದೆ. ಇದು ಪ್ರೇಕ್ಷಕರಿಗೆ, ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಮತ್ತು ಕುಟುಂಬದವರಿಗೆ ದೊಡ್ಡ ಅಚ್ಚರಿಯಾಗಲಿದೆ. ಬೆಳ್ಳಿತೆರೆಯ ಮೇಲೆ ಈ ಅದ್ಭುತ 3D ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಸಿದ್ದರಾಗಿದ್ದಾರೆ.ಈ ರಾಮಾಯಣ ಚಿತ್ರವನ್ನು ಅದ್ದೂರಿಯಾಗಿ ದೀಪಾವಳಿಯ ಸಂಭ್ರಮಾಚರಣೆಯ ಸಂದರ್ಭದಲ್ಲಿ , ಅಂದರೆ ನವೆಂಬರ್ 5 ರಂದು ಬಿಡುಗಡೆಯಾಗಲಿದೆ.


ಇನ್ನು ಈ ಚಿತ್ರದ ಕುರಿತು ರಾಕಿಂಗ್ ಸ್ಟಾರ್ ಯಶ್ ಮಾತನಾಡುತ್ತಾ ನನಗೆ ಇಂದು ಬಹಳ ಸಂತೋಷವಾಗಿದೆ ಯಾಕೆಂದರೆ , ನಮ್ಮ ರಾಮಾಯಣ ಚಿತ್ರದ ಪ್ರಮೋಷನ್ ನಮ್ಮ ಬೆಂಗಳೂರಿನಿಂದ ಆರಂಭಗೊಳಿಸುತ್ತಿರುವುದು ಖುಷಿ ತಂದಿದೆ. ಈ ಊರು ಜಾಗ ಕೊಟ್ಟು ಬದುಕು ನೀಡಿ ಕೆಲಸ ಮಾಡೋರ್ಗೆ ಅವಕಾಶ ನೀಡಿದೆ. ನಾನು ಸದಾ ನಮ್ಮ ಕನ್ನಡಿಗರಿಗೆ ಋಣಿಯಾಗಿರುತ್ತೇನೆ. ಈ ನಮ್ಮ ರಾಮಾಯಣ ಚಿತ್ರದ ಪ್ರಯತ್ನಕ್ಕೆ ನಿಮ್ಮೆಲ್ಲರ ಅಪ್ಪುಗೆ ಅಗತ್ಯವಿದೆ. ಯಶ್ ಯಾವತ್ತು ಜನರನ್ನ ಒಟ್ಟಿಗೆ ಸೇರಿಸುವ ಕೆಲಸ ಮಾಡುತ್ತೇನೆ. ಅದೇ ರೀತಿ ನಮ್ಮ ಈ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ಪ್ರಖ್ಯಾತ ಕಲಾವಿದರು ಹಾಗೂ ತಂತ್ರಜ್ಞರು ಒಟ್ಟಿಗೆ ಸೇರಿ ಕೆಲಸ ಮಾಡಿದ್ದೇವೆ. ಅದರ ಪ್ರತಿಫಲ ನೀವು ತೆರೆಯ ಮೇಲೆ ನೋಡುತ್ತೀರಿ. ಈ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕರಾದ ಎ ಆರ್ ರೆಹಮಾನ್ ಹಾಗೂ ಅಂಜಿಮರ್ ಮ್ಯೂಸಿಕ್ ಕೊಟ್ಟಿದ್ದಾರೆ. ನಾನು ಬಾಲ್ಯದಲ್ಲಿ ರೆಹಮಾನ್ ರವರ ಚಿಕ್ಕು ಬುಕ್ಕು ರೈಲಿಗೆ ಡಾನ್ಸ್ ಮಾಡುತ್ತಿದ್ದೆ. ಇಂದು ಅವರೊಟ್ಟಿಗೆ ಕೆಲಸ ಮಾಡಿರುವ ಖುಷಿ ಇದೆ. ಇನ್ನೊಂದು ವಿಷಯ ಏನೆಂದರೆ ಡ್ಯಾನ್ಸ್ ಡ್ಯಾನ್ಸ್ ರಾಜ ಡ್ಯಾನ್ಸ್ ಕಾಡು ಸೇರಿದಂತೆ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿ ಮೊದಲ ಸ್ಟುಡಿಯೋ ಕನ್ನಡಿಗರು ಕೊಟ್ಟ ದುಡ್ಡಿನಿಂದ ಕಟ್ಟಿದ್ದು ಎಂದು ಎಆರ್ ರೆಹಮಾನ್ ಹೇಳಿಕೊಂಡರು ಎಂದರು.


ಹಾಗೆಯೇ ಚಿತ್ರದ ಪ್ರಮುಖ ಪಾತ್ರಧಾರಿ ರಣಬೀರ್ ಕಪೂರ್ ಬಹಳ ಶ್ರದ್ಧೆ ಸಿಂಪಲ್ , ಹಂಬಲ್ ನಟ. ತಮ್ಮ ಪಾತ್ರಕ್ಕೆ ಬಹಳ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ನಟಿ ಸಾಯಿ ಪಲ್ಲವಿ ಬಹಳ ಭಕ್ತಿಯಲ್ಲೇ ಇರ್ತಾರೆ, ಸೀತಾ ಪಾತ್ರವನ್ನು ಬಹಳ ಶ್ರದ್ದೆಯಿಂದ ನಿಭಾಯಿಸಿದ್ದಾರೆ. ರವಿ ದುಬೆ ಲಕ್ಷ್ಮಣನ ಪಾತ್ರ , ಸನ್ನಿ ಡಿಯೋಲ್ ಹನುಮನ ಪಾತ್ರ , ರಕುಲ್ ಪ್ರೀತ್ ಸಿಂಗ್ ಸೂರ್ಪಣಕಿ ಪಾತ್ರ ಸೇರಿದಂತೆ ದೊಡ್ಡ ತಾರಾ ಬಳಗ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನು ಚಿತ್ರದ ನಿರ್ದೇಶಕ ನಿತೇಶ್ ತಿವಾರಿ ಅದ್ಭುತವಾಗಿ ಈ ಚಿತ್ರವನ್ನು ಮಾಡಿದ್ದಾರೆ. ಈ ಚಿತ್ರದ ನಿರ್ಮಾಪಕ ಹಾಗೂ ತಂತ್ರಜ್ಞಾನ ಕುರಿತು ತಮ್ಮ ಮನದಾಳದ ಮಾತುಗಳನ್ನು ಹೇಳುತ್ತಾ , ಇತ್ತೀಚೆಗೆ ಬಿಡುಗಡೆ ಆದಂತಹ ಪ್ರೇಮದ ಊರಲ್ಲಿ ಚಿತ್ರ ಸಖತ್ತಾಗಿದೆ. ನಾನು ಆ ತಂಡವನ್ನು ಭೇಟಿ ಮಾಡಿದ್ದೆ. ಈ ಚಿತ್ರರಂಗದಲ್ಲಿ ಎರಡು ಬೇಕು ಒಂದು ಹೊರಗಡೆ ಹೋಗಿ ಎಲ್ಲಾ ಬೇಲಿಗಳನ್ನು ದಾಟಿ ನಿಲ್ಲಬೇಕು , ಹಾಗೆಯೇ ನಮ್ಮಲ್ಲಿರೋ ಅಡಿಪಾಯವನ್ನು ಗಟ್ಟಿ ಮಾಡಬೇಕು ಹೊಸ ಹೊಸ ಪ್ರತಿಭೆಗಳು , ನಿರ್ದೇಶಕರು ಬರಬೇಕು. ನಮಗೆ ಇನ್ನೂ ಉತ್ತಮ ಚಿತ್ರಗಳನ್ನು ಮಾಡುವ ಧೈರ್ಯ ಬರುತ್ತೆ. ಇದೊಂದು ದೊಡ್ಡ ಇಂಪೆಕ್ಟ್ ಸಿಗುವ ಚಿತ್ರ. ಈ ನಮ್ಮ ರಾಮಾಯಣ ಚಿತ್ರವನ್ನು ಭಾರತ ಚಿತ್ರರಂಗ ಒಟ್ಟಿಗೆ ಸೇರಿದಾಗಲೇ ಇಂತಹ ಚಿತ್ರ ಬರಲು ಸಾಧ್ಯ. ನಾವು ಭಕ್ತಿಯಿಂದ ಈ ಚಿತ್ರದ ಕೆಲಸ ಮಾಡಿದ್ದೇವೆ. ಇದನ್ನ ಜಗತ್ತಿಗೆ ತಿಳಿಸಬೇಕಾಗಿದೆ. ಸೋನಿ ಪಿಕ್ಚರ್ಸ್ ಒಂದು ಅಂತರಾಷ್ಟ್ರೀಯ ಸಂಸ್ಥೆ ನಮ್ಮ ಚಿತ್ರವನ್ನು ವಿಶ್ವದಾದ್ಯಂತ ಹಾಲಿವುಡ್ ಚಿತ್ರ ಮಾದರಿಯಲ್ಲಿ ವಿತರಣೆ ಮಾಡುತ್ತಿದೆ. ನಿರ್ಮಾಪಕ ನಮಿತ್ ಮಾಲೋತ್ರ ನಮ್ಮ ಪಾರ್ಟ್ನರ್ , ವಿದೇಶದಾದ್ಯಂತ ಅವರು ನೋಡಿಕೊಂಡರೆ , ಇಂಡಿಯಾ ಪ್ರಮೋಷನ್ ನಾವು ನೋಡ್ಕೋತೀವಿ. ಯಾರ್ ಏನೇ ಮಾತನಾಡಲಿ , ಈ ಸಿನಿಮಾ ಮನೆಮಂದಿಯಲ್ಲ ಕುಳಿತು ನೋಡುವಂತ ಚಿತ್ರ , ಯಾವ್ಯಾವ ಸಿನಿಮಾ ಯಾರ್ಯಾರಿಗೆ ಮಾಡಬೇಕು ಅಂತ ನಮಗೆ ಗೊತ್ತಿರುತ್ತೆ. ಈ ಚಿತ್ರವನ್ನು ಎಲ್ಲರೂ ಇಷ್ಟಪಡುತ್ತೀರಾ ನಮ್ಮ ಚಿತ್ರವನ್ನು ನೋಡಿ ನಮ್ಮನ್ನ ಹರಸಿ ಎಂದರು. ಇನ್ನು ಈ ಸಮಾರಂಭದಲ್ಲಿ ಹಾಜರಿದ್ದಂತಹ ಕಲಾವಿದರು , ತಂತ್ರಜ್ಞರು ಎಲ್ಲರೂ ಚಿತ್ರದ ಕುರಿತು ತಮ್ಮ ತಮ್ಮ ಅಭಿಪ್ರಾಯಗಳನ್ನ ಹಂಚಿಕೊಂಡರು.

Visited 1 times, 1 visit(s) today
error: Content is protected !!