ಕೋಳಿ ತಿಂದ ಕೀಚಕರ ನಡುವೆ ಅಮಾಯಕರ ಕಥೆ ವ್ಯಥೆ “ಅನಿರೀಕ್ಷಿತ ಅತಿಥಿಗಳು” (ಚಿತ್ರವಿಮರ್ಶೆ-ರೇಟಿಂಗ್ : 3.5/ 5)

Spread the love

ಚಿತ್ರ : ಅನಿರೀಕ್ಷಿತ ಅತಿಥಿಗಳು
ನಿರ್ದೇಶಕ : ಮನೋಜ್ ಅಣ್ಣಯ್ಯ
ನಿರ್ಮಾಪಕ : ವಿನೋದ್ ಕುಮಾರ್
ಸಂಗೀತ : ಸ್ವಾಮಿನಾಥನ್
ಛಾಯಾಗ್ರಹಣ : ಎರಿಕ್ ಜಾನ್
ತಾರಾಗಣ : ವಿವೇಕ್ ಸಿಂಹ, ಮೈತ್ರಿ ಜಗ್ಗಿ, ಸಂಪ್ರತಿ ಅಲ್ವಾ , ಹರಿತ ಶಾ , ಶ್ರೀ ದತ್ತ , ದೈವಿಕ್, ದಯ ಪಲ್ಲವಗೆರೆ ಹಾಗೂ ಮುಂತಾದವರು…

ಜೀವನದಲ್ಲಿ ಎಷ್ಟೇ ಜಾಗೃತರಾಗಿದ್ದರು ಒಮ್ಮೊಮ್ಮೆ ಸಮಯ , ಸಂದರ್ಭ ಅನಿರೀಕ್ಷಿತ ತಿರುವುಗಳನ್ನ ಎದುರಿಸುವಂತಹ ಘಟನೆಗಳು ಎದುರಾಗುತ್ತದೆ. ಇಲ್ಲೊಂದು ಕಾಮುಕರ ಅಟ್ಟಹಾಸಕ್ಕೆ ಮುಗ್ಧರು ಸಿಲುಕಿ ಪರದಾಡುವಂತಹ ರಕ್ತಸಿಕ್ತ ದುರಂತ ಕಥಾನಕದೊಳಗೆ ಪ್ರೀತಿ , ಮೋಹ , ಕ್ರೌರ್ಯ , ಅತಿರೇಖದ ಆರ್ಭಟಗಳ ಮೂಲಕ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ ಅನಿರೀಕ್ಷಿತ ಅತಿಥಿಗಳು.

ಗೆಳೆಯರ ಗುಂಪೊಂದು ತಾವು ಯಾವುದೇ ಕೆಲಸ ಮಾಡಬೇಕಾದರೂ ಪ್ಲಾನ್ ಮಾಡಿಕೊಂಡು ಮುಂದೆ ಹೋಗ್ತಾರೆ. ಈ ಹಾದಿಯಲ್ಲಿ ಶಕ್ತಿ (ವಿವೇಕ್ ಸಿಂಹ) ಹಾಗೂ ಆತನ ಗೆಳೆಯರಾದ ವಿಭಾ, ರಾಬಿನ್ , ಮತ್ತು ಚಿರಾಗ್. ಇವರೆಲ್ಲರೂ ಅಂದುಕೊಂಡಂತೆ ತಾಶ್ವಿ (ಹರಿತ ಶಾ)ಯಾ ಪ್ರಿಯಕರ ವಿಭಾ ರೆಸಾರ್ಟ್ ಹೋಗಲು ನಿರ್ಧರಿಸುತ್ತಾನೆ. ಅದೇ ಸಮಯಕ್ಕೆ ಗೆಳೆಯರು ಕೂಡ ಡ್ರಾಪ್ ನೆಪದಲ್ಲಿ ಕಾರ್ ಹತ್ತುತ್ತಾರೆ. ಇನ್ನು ರೆಸಾರ್ಟ್ ಹೊಂದಿರುವ ರವಿ ಅಣ್ಣ ಹಲವು ಬಾರ್ ಗಳನ್ನು ನಡೆಸುತ್ತಾರೆ. ತಂದೆ ತಾಯಿ ಇಲ್ಲದೆ ಅನಾಥನಾಗಿ ಬೆಳೆದ ಚಕ್ರಿ (ಮೈತ್ರಿ ಜಗ್ಗಿ) ಇದೇ ಬಾರ್ ನಲ್ಲಿ ಕೆಲಸ ಮಾಡುತ್ತಾನೆ.

ಅಂಗಡಿಗೆ ಕೋಳಿ ತರುವ ನೆಪದಲ್ಲಿ ಅಂಗಡಿಯ ಹುಡುಗಿ ಗಿರಿಜಾ (ಸಂಪ್ರತಿ ಆಳ್ವ) ಳನ್ನ ಪ್ರೀತಿಸುತ್ತಾನೆ. ಇವರಿಬ್ಬರ ಸ್ನೇಹ , ಪ್ರೀತಿ , ಅತಿರೇಕವಾಗಿ ದೇಹದ ದಾಹ ತೀರಿಸಿಕೊಳ್ಳುವ ಹಂತಕ್ಕೆ ಹೋಗುತ್ತಾರೆ. ಅದೇ ಸಮಯಕ್ಕೆ ರವಿ ಅಣ್ಣನ ರೆಸಾರ್ಟ್ ಮನೆಗೆ ಚಕ್ರಿ ಹಾಗೂ ಗಿರಿಜಾ ಪ್ರವೇಶ ಮಾಡಲು ನಿರ್ಧರಿಸುತ್ತಾರೆ. ಮತ್ತೊಂದೆಡೆ ರವಿಯ ತಮ್ಮ ಶಕ್ತಿ ಹಾಗೂ ಆತನ ಗೆಳೆಯರು ಕೂಡ ಹುಡುಗಿಯನ್ನು ಅಪಹರಿಸಿಕೊಂಡು ಬರುತ್ತಾರೆ.

ಇಲ್ಲಿಂದ ವಿಧಿಯ ಆಟದ ದಿಕ್ಕು ಬದಲಾಗುತ್ತಾ ಹೋಗುತ್ತದೆ. ಕ್ರೂರಿಗಳ ಅಟ್ಟಹಾಸಕ್ಕೆ ಅಮಾಯಕರ ಪರದಾಟ ನಿರೀಕ್ಷೆಗೂ ಮೀರಿದಂತ ಅನಿರೀಕ್ಷಿತ ಘಟನೆಗಳು , ಘನ ಗೋರ ಕೃತ್ಯಗಳು , ಮುಂದೇನು ಎಂಬ ಹಲವು ಕುತೂಹಲದ ನಡುವೆ ಈ ರೀತಿಯ ವ್ಯಕ್ತಿಗಳು ಇರುತ್ತಾರ ಎಂಬ ಪ್ರಶ್ನೆ ಕಾಡುತ್ತದೆ. ಅದು ಏನು… ಹೇಗೆ… ಎಂದು ತಿಳಿಯಬೇಕಾದರೆ ಒಮ್ಮೆ ಈ ಚಿತ್ರವನ್ನು ನೋಡಬೇಕು.

ಈ ರೀತಿಯ ಕಥಾವಸ್ತುವನ್ನು ನಿರ್ದೇಶಕ ಆಯ್ಕೆ ಮಾಡಿಕೊಂಡಿರುವ ಪರಿ ಗಮನ ಸೆಳೆಯುತ್ತದೆ. ಸ್ತ್ರೀ ಮೂಹಿಗಳು , ಕಾಮುಕರ ಕ್ರೂರ ವರ್ತನೆ , ಪ್ರೇಮಿಗಳ ಮನಸ್ಥಿತಿ , ತಳಮಳ ಸುತ್ತಾ ಬೆಸೆದಿರುವ ಕಥೆಯಲ್ಲಿ ಜಾಗೃತಿಯ ಅಗತ್ಯತೆ ಎಷ್ಟು ಮುಖ್ಯ ಎಂಬುದನ್ನು ಸೂಕ್ಷ್ಮವಾಗಿ ಹೇಳಿದ್ದಾರೆ. ಚಿತ್ರಕಥೆಯಲ್ಲಿ ಬಹಳಷ್ಟು ಹಿಡಿತ ಮಾಡಬಹುದಿತ್ತು ಅನಿಸುತ್ತದೆ.

ಅತಿರೇಖದ ಕಾಮುಕರ ವರ್ತನೆ , ಹೊಡೆದಾಟ , ರಕ್ತಸಿಕ್ತ ಅನಗತ್ಯ ಅನಿಸುತ್ತದೆ. ಇದರ ಹೊರತಾಗಿಯೂ ಜನರಲ್ಲಿ ಜಾಗೃತಿ ಮೂಡಿಸುವ ಅಂಶ ಇಷ್ಟವಾಗುತ್ತಿದೆ. ನಿರ್ಮಾಪಕರು ಇಂತಹ ಚಿತ್ರಕ್ಕೆ ಧೈರ್ಯ ಮಾಡಿ ಬಂಡವಾಳ ಹೂಡಿರುವುದನ್ನ ವೆಚ್ಚಲೇಬೇಕು. ಚಿತ್ರದ ಸಂಗೀತ , ಛಾಯಾಗ್ರಾಹಕರ ಕೈಚಳಕ ಗಮನ ಸೆಳೆಯುತ್ತದೆ. ಇನ್ನು ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿರುವ ವಿವೇಕ್ ಸಿಂಹ ಒಬ್ಬ ನಟನಾಗಿ ತನ್ನ ಪಾತ್ರಕ್ಕೆ ಜೀವ ತುಂಬುವುದರಲ್ಲಿ ಗೆದ್ದಿದ್ದಾರೆ.

ಕೆಲವು ಸನ್ನಿವೇಶಗಳಲ್ಲಿ ಅತಿರೇಕ ಅನ್ನಿಸಿದರು ಗಮನ ಸೆಳೆಯುತ್ತಾರೆ. ಇನ್ನು ಗೆಳೆಯರಾಗಿ ಅಭಿನಯಿಸಿರುವ ದಯಾ , ಶ್ರೀ ದತ್ತ , ದೈವಿಕ್ ತಮ್ಮ ತಮ್ಮ ಪಾತ್ರವನ್ನ ಸಮರ್ಥವಾಗಿ ನಿರ್ವಹಿಸಿದ್ದಾರೆ. ಹರಿತಾ ಶಾ ಕೂಡ ಸಿಕ್ಕ ಅವಕಾಶವನ್ನ ನಿಭಾಯಿಸಿದ್ದು , ಚಿತ್ರದ ಕೇಂದ್ರ ಬಿಂದುವಾಗಿ ಮೈತ್ರಿ ಜಗ್ಗಿ ಇಡೀ ಚಿತ್ರವನ್ನ ಆವರಿಸಿಕೊಂಡು ಅದ್ಭುತವಾಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಅದೇ ರೀತಿ ನಟಿ ಸಂಪ್ರತಿ ಆಳ್ವಾ ಕೂಡ ಬಹಳ ಬೋಲ್ಡ್ ಆಗಿ ತಮ್ಮ ಪಾತ್ರದಲ್ಲಿ ಜೀವಿಸಿದ್ದು , ಎಲ್ಲರ ಗಮನ ಸೆಳೆಯುವಂತೆ ಮಿಂಚಿದ್ದಾರೆ. ಇನ್ನುಳಿದಂತಹ ಪಾತ್ರಗಳು ಕೂಡ ಚಿತ್ರದ ಓಟಕ್ಕೆ ಪೂರಕವಾಗಿದೆ. ಒಟ್ಟಾರೆ ಸಸ್ಪೆನ್ಸ್ , ಥ್ರಿಲ್ಲರ್ , ಮರ್ಡರ್ ಮಿಸ್ಟ್ರಿ ಸಿನಿಮಾ ಪ್ರಿಯರಿಗೆ ಇಷ್ಟವಾಗುವಂತಹ ಚಿತ್ರ ಇದಾಗಿದ್ದು , ಎಲ್ಲರೂ ಒಮ್ಮೆ ಚಿತ್ರವನ್ನು ನೋಡುವಂತಿದೆ.

Visited 1 times, 1 visit(s) today
error: Content is protected !!