ಲವ್ , ಆಕ್ಷನ್ , ಮಾಸ್ ಎಂಟರ್ಟೈನರ್… “ಬೆಂಟ್ಲಿ” (ಚಿತ್ರವಿಮರ್ಶೆ-ರೇಟಿಂಗ್ : 3.5/5)

Spread the love

ಚಿತ್ರ : ಬೆಂಟ್ಲಿ
ನಿರ್ದೇಶಕ : ಸಂತೋಷ್ ಬಾಲರಾಜ್
ನಿರ್ಮಾಪಕಿ : ಶ್ವೇತ ಬಾಲರಾಜ್
ಸಂಗೀತ : ಜೂಡಾ ಸ್ಯಾಂಡಿ
ಛಾಯಾಗ್ರಹಣ : ಸುರೇಶ್
ತಾರಾಗಣ : ಸಂತೋಷ್ ಬಾಲರಾಜ್ , ಸಿಮ್ರಾನ್, ಶೃತಿ, ಚರಣರಾಜ್ , ಬಾಲ ರಾಜ್ವಾಡಿ ಹಾಗೂ ಮುಂತಾದವರು…

ಇದು ನಟ ಸಂತೋಷ ಬಾಲರಾಜ್ ಅಭಿನಯಿಸಿ , ನಿರ್ದೇಶಿಸಿ , ಹಾಗೆಯೇ ನಿರ್ಮಾಪಕ ಆನೇಕಲ್ ಬಾಲರಾಜ್ ಅರ್ಪಿಸಿರುವ ಅಪ್ಪ ಮಗನ ಕೊನೆಯ ಚಿತ್ರವಾಗಿದೆ.
ಕಾಲೇಜ್ ವಿದ್ಯಾರ್ಥಿ ಬೆಂಟ್ಲಿ( ಸಂತೋಷ ಬಾಲರಾಜ್)ಗೆ ಸ್ನೇಹಿತರೆ ಮುಖ್ಯ, ಅದರಲ್ಲೂ ಪ್ರೀತಿಸುವ ಹೃದಯಗಳಿಗೆ ಮುಂದೆ ನಿಂತು ಮದುವೆ ಮಾಡಿಸುವ ದಿಟ್ಟ ಹುಡುಗ. ತಾಯಿ ಇಲ್ಲದೆ ತಂದೆಯ ನೆರಳಲ್ಲಿ ಬೆಳೆಯುವ ಬೆಂಟ್ಲಿ ಹಿಂದೆ ಒಂದು ಫ್ಲಾಶ್ ಬ್ಯಾಕ್ ಕಥೆ ಇದೆ.

ವಿದೇಶದಲ್ಲಿ ಬೆಳೆದು ತನ್ನ ತಂದೆ ತಾಯಿಯ ಜೊತೆ ತನ್ನ ಹುಟ್ಟು ಊರಿನ ಚಿಕ್ಕಪ್ಪನ ಮನೆಗೆ ಬರುವ ಖಯಾದು ( ಸಿಮ್ರಾನ್ ನೆಟೀಕರ್). ಅಣ್ಣ ರಾಘವೇಂದ್ರ (ಚರಣ್ ರಾಜ್) ಮಾತು ಎಂದರೆ ತಮ್ಮಣ್ಣ (ಬಾಲ ರಾಜ್ವಾಡಿ) ಗೆ ವೇದವಾಕ್ಯ. ಇನ್ನು ತನ್ನೂರಿನ ಪರಿಸರದ ನಡುವೆ ಖಯಾದುಗೆ ಅಚಾನಕ್ಕಾಗಿ ಭೇಟಿಯಾಗುವ ಬೆಂಟ್ಲಿ ಯಾ ನಡುವಳಿಕೆ , ಮಾತು ನೋಟಕ್ಕೆ ಸ್ನೇಹ , ವಿಶ್ವಾಸ , ಸಲಿಗೆ ಪ್ರೀತಿ ಬೆಳೆಯುತ್ತದೆ.

ಇನ್ನು ಪ್ರೀತಿಸುವ ಹೃದಯಗಳಿಗೆ ಮದುವೆ ಮಾಡುವ ಬೆಂಟ್ಲಿ ಯ ಇನ್ನೂರನೆಯ ಜೋಡಿ ತನ್ನದೇ ಎಂಬ ಅರಿವು ಇರುವುದಿಲ್ಲ. ಇದರ ನಡುವೆ ಬೆಂಟ್ಲಿ ಹಾಗೂ ತಮ್ಮಣ್ಣನ ನಡುವೆ ವೈಶಮ್ಮ ಎದುರಾಗಿರುತ್ತದೆ. ತನ್ನ ಅಣ್ಣನ ಮಗಳ ಪ್ರೀತಿ ವಿಚಾರ ತಿಳಿಯುವ ತಮ್ಮಣ್ಣ ಬೆಂಟ್ಲಿ ಅನ್ನ ಕೊಲ್ಲಲು ನಿರ್ಧರಿಸುತ್ತಾನೆ. ಇದರ ನಡುವೆ ಮತ್ತೊಂದು ಕಠೋರ ಸತ್ಯ ಖಯಾದು ತಾಯಿ ಮಹಾಲಕ್ಷ್ಮಿ (ಶ್ರುತಿ) ಎಂಬ ಸತ್ಯ ತಿಳಿಯುತ್ತದೆ. ತನ್ನ ತಾಯಿಯ ಸಾವಿನ ಹಿಂದಿರುವ ರಹಸ್ಯ ಏನು ಎಂದು ತಿಳಿಯುವ ಹಾದಿಯಲ್ಲಿ ಹಲವು ನಿಗೂಢ ಸತ್ಯಗಳು ಹೊರ ಬರುತ್ತಾ ಹೋಗುತ್ತದೆ. ಅದು ಏನು… ಯಾಕೆ… ಕೊಲೆಯ ಸಂಚಿನ ಹಿಂದಿರುವ ರೂವಾರಿಗಳು ಯಾರ್ಯಾರು… ಕ್ಲೈಮಾಕ್ಸ್ ನೀಡುವ ಉತ್ತರ ಎಂಬುದಕ್ಕೆ ಒಮ್ಮೆ ಈ ಚಿತ್ರವನ್ನು ನೋಡಬೇಕು.

ಜೀವನದಲ್ಲಿ ಹಣ , ಆಸ್ತಿ ಸಂಬಂಧಗಳನ್ನು ಹೇಗೆ ಹದಗೆಡಿಸುತ್ತದೆ. ಎಲ್ಲಿಂದ ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ ಎಂಬ ಸತ್ಯವನ್ನ ಬಹಳ ಕುತೂಹಲಕಾರಿ ವಿಚಾರದೊಂದಿಗೆ ಸ್ನೇಹ , ಸಂಬಂಧ , ಪ್ರೀತಿ , ವೈಶಮ್ಯದ ಸುತ್ತ ಬೆಸೆದುಕೊಂಡು ಪ್ರೇಕ್ಷಕರ ಮುಂದೆ ತಂದಿಟ್ಟಿರುವಂತಹ ಚಿತ್ರ. ಇದು ನಿರ್ದೇಶಕ ಸಂತೋಷ್ ಬಾಲರಾಜ್ ನಿರ್ದೇಶನದ ಜೊತೆ ನಾಯಕ ನಟನಾಗಿ ಅಭಿನಯಿಸಿದ್ದು , ನಟನಾಗಿ ತನ್ನ ಸಮರ್ಥ್ಯವನ್ನ ತೆರೆಯ ಮೇಲೆ ಅಚ್ಚುಕಟ್ಟಾಗಿ ತೆರೆದಿಟ್ಟಿದ್ದಾರೆ.

ಅದ್ದೂರಿ ವೆಚ್ಚ ತೆರೆಯ ಮೇಲೆ ಕಾಣುತ್ತಿದ್ದು , ಹಾಡುಗಳು , ಆಕ್ಷನ್ ಸನ್ನಿವೇಶಗಳು ಉತ್ತಮವಾಗಿ ಮೂಡಿ ಬಂದಿದೆ. ಡಬ್ಬಿಂಗ್ ಸಮಸ್ಯೆ ಅಪೂರ್ಣವಾಗಿರುವುದಕ್ಕೆ ನಟ ಸಂತೋಷ ಇಲ್ಲದಿದ್ದು ಎಂಬ ಸತ್ಯ ತಿಳಿಯುತ್ತದೆ. ನಟ ಲೂಸ್ ಮಾದ ಯೋಗಿ ಡಬ್ಬಿಂಗ್ ನಲ್ಲಿ ಸಾತ್ ನೀಡಿದ್ದಾರೆ. ಇನ್ನು ಸಂತೋಷ್ ಸಹೋದರಿ ಶ್ವೇತಾ ಬಾಲರಾಜ್ ಹಾಗೂ ಅವರ ಪತಿ ಅಶೋಕ್ ಚಿತ್ರದಲ್ಲಿ ನಟಿಸಿ ಜೊತೆಗೆ ಬೆಂಬಲವಾಗಿ ನಿಂತು ಚಿತ್ರವನ್ನು ಪ್ರೇಕ್ಷಕರ ಮುಂದೆ ತಂದಿದ್ದಾರೆ. ಇನ್ನು ಈ ಚಿತ್ರದಲ್ಲಿ ನಟಿಯಾಗಿ ತಂಬಾಕು ಜಾಹೀರಾತಿನ ಹುಡುಗಿ ಸಿಮ್ರಾನ್ ನಾಟೀಕರ್ ಮುದ್ದು ಮುದ್ದಾಗಿ ತೆರೆಯ ಮೇಲೆ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಇನ್ನು ಪ್ರಮುಖ ಪಾತ್ರ ಒಂದರಲ್ಲಿ ಹಿರಿಯ ನಟಿ ಶ್ರುತಿ ಅದ್ಭುತವಾಗಿ ಅಭಿನಯಿಸಿದ್ದಾರೆ. ಅದೇ ರೀತಿ ಹಿರಿಯ ನಟ ಚರಣರಾಜ್ ಕೂಡ ತಮ್ಮ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ. ವಿಶೇಷವಾಗಿ ಮತ್ತೊಬ್ಬ ನಟ ಬಾಲ ರಾಜ್ವಾಡಿ ಇಡೀ ಚಿತ್ರವನ್ನು ಆವರಿಸಿಕೊಂಡಿದ್ದು , ಎಲ್ಲರ ಗಮನ ಸೆಳೆಯುವಂತೆ ಅದ್ಭುತವಾಗಿ ಅಭಿನಯಿಸಿದ್ದಾರೆ. ಇನ್ನುಳಿದಂತೆ ಬರುವ ಪಾತ್ರಗಳು ಚಿತ್ರದ ಓಟಕ್ಕೆ ಸಾತ್ ನೀಡಿದೆ. ಇದು ನಟ ಸಂತೋಷ್ ಬಾಲರಾಜ್ ಹಾಗೂ ನಿರ್ಮಾಪಕ ಆನೇಕಲ್ ಬಾಲರಾಜ್ ರವರ ಕೊನೆಯ ಚಿತ್ರವಾಗಿದ್ದು , ಎಲ್ಲರೂ ಒಮ್ಮೆ ನೋಡಿದರೆ ಒಳ್ಳೆಯದು ಅನಿಸುತ್ತದೆ.

Visited 1 times, 1 visit(s) today
error: Content is protected !!