ಲೈಫ್ ಟುಡೇ’ ಚಿತ್ರದ ಟ್ರೈಲರ್ ಬಿಡುಗಡೆ

Spread the love

ಲೈಫ್ ಟುಡೇ ಕಿರಣ್ ಆದಿತ್ಯ ಮತ್ತು ಲೇಖ ಚಂದ್ರ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರೋ, ಕಾಂತ ಕನ್ನಲ್ಲಿ ಅವರ ನಿರ್ದೇಶನ ದಲ್ಲಿ ಮೂಡಿ ಬಂದಿರುವ ಮೇಘನಾ ಪ್ರದೀಪ್ ಅವರು ನಿರ್ಮಾಣ ಮಾಡಿರುವ ಚೊಚ್ಚಲ ಸಿನಿಮಾ. ‘ಲೈಫ್ ಟುಡೇ’. ಶ್ರೀಧರ್ ವಿ ಸಂಭ್ರಮ್ ಸಂಗೀತ ಸಂಯೋಜನೆಯ ಈ ಚಿತ್ರದ ಹಾಡುಗಳು ಈಗಾಗ್ಲೇ ಜನಮನ ಸೆಳೆದಿದ್ದು, ಇದೀಗ ಚಿತ್ರತಂಡ‌ ಅಧಿಕೃತ ಟ್ರೈಲರ್ ಜೊತೆಗೆ ಚಿತ್ರದ ಬಿಡುಗಡೆಯ ದಿನಾಂಕವನ್ನೂ ಘೋಷಿಸಿದೆ.

ಭರವಸೆಯುಕ್ತ ಟ್ರೈಲರ್ ಇಂದಿನ ಹರೆದ ಮನಗಳ‌ ಪ್ರೀತಿ ನೀತಿ ನಿಷ್ಠೆಯ ಕದನ ಕಲಹಗಳ ಹೂರಣದಂತೆ ಕಾಣ್ತಿರೋ ಲೈಫ್ ಟುಡೇ ಚಿತ್ರದ ಟ್ರೈಲರ್ ಭರವಸೆಯುಕ್ತವಾಗಿದೆ. ನವ ನಟ ಕಿರಣ್ ಆದಿತ್ಯ, ನಟಿ ಲೇಖ ಚಂದ್ರ ಕೆಮಿಸ್ಟ್ರಿ ‌ಹೈಲೈಟ್ ಆಗಿ ಕಾಣ್ತಿದೆ. ಮೇಲ್ನೋಟಕ್ಕೆ ಇವತ್ತಿನ ಲವ್ ಸ್ಟೋರಿ ತರಹ ಕಾಣ್ತಿರೋ ಲೈಫ್ ಟುಡೇ ಚಿತ್ರದಲ್ಲಿ ಸಿಕ್ಕಾಪಟ್ಟೆ ಟ್ವಿಸ್ಟು ಟರ್ನ್ ಇರುವಂತಿದೆ… ನಾಯಕ ಹೊಸಬರಾದ್ರೂ ಇಡೀತಂಡದಲ್ಲಿ ಅನುಭವಸ್ಥರೇ ಇದ್ದಾರೆ.. ತಬಲನಾಣಿ, ಕಾಕ್ರೋಚ್ ಸುಧಿ, ಜಗ್ಗಪ್ಪ, ಯುಕ್ತ, ರತರ್ವ್ ಸೇರಿದಂತೆ ಹಲವು ಕಲಾವಿದರ ದಂಡು ಈ ಚಿತ್ರದಲ್ಲಿದೆ. ದಿಯಾ ನಿರ್ಮಾಪಕ ಕೃಷ್ಣ ಚೈತನ್ಯ, ವಾಮನ ನಿರ್ಮಾಪಕ ಚೇತನ್ ಗೌಡ ಲೈಫ್ ಟುಡೇ ಟ್ರೈಲರ್ ನ ಬಿಡುಗಡೆ ಮಾಡಿ, ಈ ಕಂಟೆಂಟ್ ಗೆಲ್ಲೋ ಕಂಟೆಂಟ್ ಎಂದು ಶುಭ ಹಾರೈಸಿದ್ರು.

ನಾಯಕ ಕಿರಣ್ ಆದಿತ್ಯ ಇದು ಈ ಜನರೇಷನ್ ವಿಷ್ಯ ನಿಮಗಿಷ್ಟ ಆಗಲಿದೆ ಎಂದರು… ನಿರ್ದೇಶಕ ಕಾಂತ ಕನ್ನಲ್ಲಿ ಇದು ಇಂದಿನ ಹದಿಹರೆಯದ ಬದುಕುಗಳಿಗೆ ತೀರ ಹತ್ತಿರವಿರೋ ವಿಚಾರ ಸಿನಿಮ್ಯಾಟಿಕ್ ಆಗಿ ಪ್ರೇಕ್ಷಕರ ಮನಮುಟ್ಟುವ ಪ್ರಯತ್ನ ಮಾಡಿದ್ದೀವಿ ಎಂದರು, ಕಾಕ್ರೋಚ್ ಸುಧಿ ಈ ಚಿತ್ರದ ಪಾತ್ರಧಾರಿಯಾಗಿ ಮತ್ತು ಈ ಚಿತ್ರತಂಡದ ಪ್ರಯತ್ನಕ್ಕೆ ಯಶಸ್ಸು ಧಕ್ಕಲಿದೆ ಅನ್ನೋ ಭರವಸೆಯ ಮಾತನ್ನಾಡುದ್ರು.. ಹಿರಿಯ ನಟ ತಬಲನಾಣಿ ಮಾತನಾಡುತ್ತಾ ಚಿತ್ರದಲ್ಲಿ ಲೇಖಚಂದ್ರರಿಗೆ ತಂದೆಯಾಗಿ ನಟಿಸಿದ್ದು,ಮಗಳಾಗಿ ಲೇಖ ಚಂದ್ರ ಈ ಚಿತ್ರದ ಕೇಂದ್ರ ಬಿಂದು, ರಾಷ್ಟ್ರಪ್ರಶಸ್ತಿ ಬರುವಂತಹ ನಟನೆ ಈ ಚಿತ್ರದಲ್ಲಿ ಅವ್ರದ್ದು ಎಂದರು..

ಇದೇ ವೇಳೆ ಮಾತನಾಡಿದ ಲೇಖ ಈ ಚಿತ್ರದ ಸಂದರ್ಭದಲ್ಲಿ ತಮ್ಮ ತಂದೆಯನ್ನ ಕಳೆದುಕೊಂಡದ್ದನ್ನ ನೆನೆದು ಭಾವುಕರಾದ್ರು.. ಅಂದ್ಹಾಗೆ ಲೈಫ್ ಡುಡೇ ಚಿತ್ರದ ಟ್ರೈಲರ್ ಬಿಡುಗಡೆಯಾಗೋ ಮೂಲಕ ಅಧಿಕೃತ ಪ್ರಚಾರ ಕಾರ್ಯ ಶುರುವಾಗಿದೆ. ಆಗಸ್ಟ್ 6ಕ್ಕೆ ಚಿತ್ರ ರಾಜ್ಯದಾದ್ಯಂತ ಬಿಡುಗಡೆಯಾಗ್ತಿದೆ.

Visited 1 times, 1 visit(s) today
error: Content is protected !!