ಪತ್ರಕರ್ತೆ ನೀರೂಶರ್ಮಾ ಈಗ ನಿರ್ದೇಶಕಿ

Spread the love

ಬಾಲಿವುಡ್ ಅಂಗಳದಲ್ಲಿ ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಕತೆಯಾಗಿ ಗುರುತಿಸಿಕೊಂಡಿರುವ *ನೀರೂಶರ್ಮಾ* ಹೊಸ ಅನುಭವ ಎನ್ನುವಂತೆ *’ಬಾಂದ್ರ ಬಾಯ್’* ಇಪ್ಪತ್ತೊಂದು ನಿಮಿಷದ ಸಿನಿಮಾಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹಿರಿಯ ನಿರ್ದೇಶಕ ಸುಭಾಷ್ ಘಾಯ್ ಒಡೆತನದ ವಿಸ್ಟಿಂಗ್‌ವುಡ್ಸ್ ಇಂಟರ್‌ನ್ಯಾಷನಲ್ ಸಂಸ್ಥೆಯಲ್ಲಿ ನಿರ್ದೇಶನದ ಕೋರ್ಸ್ ಮುಗಿಸಿ, ನಂತರ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇವರ ಶ್ರಮಕ್ಕೆ ರಾಜೀವ್ ಪರಾಶರ್ ಕ್ರ್ರಿಯೇಶನ್ಸ್ ಅಡಿಯಲ್ಲಿ ಬಂಡವಾಳ ಹೂಡಿದ್ದಾರೆ. ’ಕ್ರೂರ,ಕಹಿ, ಪಕ್ಷಪಾತ’ ಎಂಬ ಅಡಿಬರಹ ಇಂಗ್ಲೀಷ್‌ನಲ್ಲಿದೆ.

ಇಂದಿನ ಡಿಜಿಟಲ್ ಯುಗದಲ್ಲಿ ಬಲವಾಗಿ ಪ್ರತಿಧ್ವನಿಸುವ ವಿಷಯಗಳನ್ನು ಚಿತ್ರಕತೆಯಲ್ಲಿ ಬಳಸಿಕೊಂಡಿದ್ದಾರೆ. ಮಾಧ್ಯಮ, ಅಧಿಕಾರ ಮತ್ತು ಸಾಮಾಜಿಕ ತೀರ್ಪಿನ ನಡುವಿನ ಸಂಕೀರ್ಣ ಸಂಬಂಧಗಳನ್ನು ಅನ್ವೇಷಿಸುತ್ತದೆ. ಸತ್ಯಗಳು ಹೊರಹೊಮ್ಮುವ ಮೊದಲು ನಿರೂಪಣೆಗಳು ಹೇಗೆ ರಚಿಸ್ಪಡುತ್ತವೆ. ಇಂತಹ ಸತ್ಯಗಳು ಎಷ್ಟು ಸುಲಭವಾಗಿ ಮೀರಿಸಬಹುದು ಎಂದು ನೋಡುಗರನ್ನು ಪ್ರಶ್ನಿಸುವಂತೆ ಮಾಡುತ್ತದೆ.

ಮ್ಯೂಸಿಕ್ ಆಲ್ಬಂ,ದೂರದರ್ಶನ, ಡಿಜಿಟಲ್ ಫ್ಲಾಟ್‌ಫಾರ್ಮ್‌ಗಳಲ್ಲಿ ಹೆಸರು ಮಾಡಿರುವ ಆಹ್ವಾನ್‌ಕುಮಾರ್ ಹಾಗೂ ಗುಜರಾತಿ ಮತ್ತು ಮರಾಠಿ ಭಾಷೆಯ ಖ್ಯಾತ ನಟ ಧರ್ಮೇಂದ್ರ ಗೋಹಿಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಲೋಚನ್ ಬರ್ಸಗಡೆ, ಯಶ್ ಪಡ್ನೇಕರ್, ಶಾಮ್‌ಥೋಬರೆ, ಪವನ್ ತಿವಾರಿ, ಐಶ್ವರ್ಯ ಮನೋಹರ್, ಹಿಮಾಂಶಿ ಮಂಡಾಲಿಯ, ನಂದಿನಿಶರ್ಮಾ ಮುಂತಾದವರು ನಟಿಸಿದ್ದಾರೆ.

ಸಂಗೀತ ಮಹಾವೀರ್ ಕೌಶಲ್, ಛಾಯಾಗ್ರಹಣ ಆಯುಷ್ ಷಾ, ಸಂಕಲನ ಸಂದೀಪ್ ಕುರ್ರಪ್ ಚಿತ್ರಕ್ಕಿದೆ. ’ಬಾಂದ್ರ ಬಾಯ್’ ಈಗಾಗಲೇ ರಾಷ್ಟ್ರೀಯ, ಅಂತರರಾಷ್ಟ್ರೀಯ ಹಾಗೂ ಮುಂಬರುವ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸಲ್ಲಿಕೆಯಾಗಿದ್ದು, ತನ್ನ ಉತ್ಸವದ ಪ್ರಯಾಣವನ್ನು ಶುರು ಮಾಡಿಕೊಂಡಿದೆ.

Visited 1 times, 1 visit(s) today
error: Content is protected !!