Cini NewsSandalwood

ಜೋರಾಗಿದೆ ಗರಡಿ ಹವಾ, ವಾರ ತೆರೆಮೇಲೆ ತೊಡೆತಟ್ಟಲಿದೆ ಭಟ್ರು ಟೀಮ್

Spread the love

ಚಂದನವನದಲ್ಲಿ ಬಹಳಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿರುವಂತಹ “ಗರಡಿ” ಚಿತ್ರ ಈ ವಾರ ರಾಜ್ಯಾದ್ಯಂತ ಸುಮಾರು 250ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದ್ದು, ಈಗಾಗಲೇ ಚಿತ್ರದ ಟೀಸರ್ ಹಾಗೂ ರಾಣೆಬೆನ್ನೂರಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಮ್ಮುಖದಲ್ಲಿ ಬಿಡುಗಡೆಯಾದ ಟ್ರೈಲರ್ ಭರ್ಜರಿ ವೈರಲ್ ಆಗಿದ್ದು ಎಲ್ಲೆಡೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

ಸೌಮ್ಯ ಫಿಲಂಸ್ ಹಾಗೂ ಕೌರವ ಪ್ರೊಡಕ್ಷನ್ ಹೌಸ್ ಮೂಲಕ ವನಜಾ ಪಾಟೀಲ್ ನಿರ್ಮಿಸಿರುವ ಈ ಚಿತ್ರದ ಸಾರಥ್ಯವನ್ನು ಯೋಗರಾಜ್ ಭಟ್ ನಿರ್ವಹಿಸಿದ್ದು , ವಿ. ಹರಿಕೃಷ್ಣ ಸಂಗೀತ , ನಿರಂಜನ್ ಬಾಬು ಛಾಯಾಗಣ , ಸುರೇಶ್ ಅರಸ್ ಸಂಕಲನವಿರುವ ಈ ಗರಡಿ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಸೃಷ್ಟಿ ಪಾಟೀಲ್ ಕಾರ್ಯ ನಿರ್ವಹಿಸಿದ್ದಾರೆ.

ಇದೊಂದು ಗರಡಿ ಮನೆಯ ಮಹತ್ವದ ಹಿನ್ನೆಲೆಯಾಗಿಟ್ಟು ಕೊಂಡು ಅದರ ಸುತ್ತ ಸ್ನೇಹ , ಪ್ರೀತಿ ಎಳೆಯೊಂದಿಗೆ ನಿರ್ಮಾಣಗೊಂಡಿರುವ ಚಿತ್ರಗಿದ್ದು , ಈ ಸಿನಿಮಾದಲ್ಲಿ ಗರಡಿ ಮನೆಯ ಪೈಲ್ವಾನ್ ಉಸ್ತಾದ್ ಯಾಗಿ ಬಿ. ಸಿ. ಪಾಟೀಲ್ ಅಭಿನಯಿಸಲಿದ್ದು , ವಿಶೇಷ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಣಿಸಿಕೊಂಡಿದ್ದಾರೆ.

ಪೂರ್ಣ ಪ್ರಮಾಣದ ನಾಯಕನಾಗಿ ಮತ್ತೆ ಕಂಬ್ಯಾಕ್ ಆಗುತ್ತಿರುವ ಸೂರ್ಯಗೆ ಈ ಚಿತ್ರ ಬಹಳ ಮಹತ್ವವಾದದ್ದಾಗಿದ್ದು , ಇವರೊಟ್ಟಿಗೆ ನಾಯಕಿಯಾಗಿ ಸೋನಾಲ್ ಮಂತೆರೋ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ದೊಡ್ಡ ತಾರಾ ಬಳಗವಾಗಿ ರವಿಶಂಕರ್ , ಧರ್ಮಣ್ಣ , ಸುಜಯ್ ಬೇಲೂರು, ಚೆಲುವರಾಜ್, ಬಲ ರಾಜವಾಡಿ, ರಾಘವೇಂದ್ರ, ತೇಜಸ್ವಿನಿ ಪ್ರಕಾಶ್, ನಾಯನ, ಸೇರಿದಂತೆ ವಿಶೇಷ ಹಾಡೊಂದರಲ್ಲಿ ನಿಶ್ವಿಕಾ ನಾಯ್ಡು ಕೂಡ ಹೆಜ್ಜೆ ಹಾಕಿದ್ದಾರೆ.

ಇದರಲ್ಲೊಂದು ಪ್ರೇಮಕಥೆಯೂ ಇದು, ಗುರು -ಶಿಷ್ಯರ ಬಾಂಧವ್ಯ ಕೂಡ ಚಿತ್ರದಲ್ಲಿದೆ. ಇದೇ ದೀಪಾವಳಿಯ ಹಬ್ಬದ ಕೊಡುಗೆಯಾಗಿ ಬಿಡುಗಡೆಯಾಗುತ್ತಿರುವ “ಗರಡಿ” ಚಿತ್ರ ರಾಜ್ಯಾದ್ಯಂತ ಅಬ್ಬರಿಸಲು ಸಜ್ಜಾಗಿದೆ

Visited 1 times, 1 visit(s) today
error: Content is protected !!