ಸರಿ , ತಪ್ಪು ಸುಳಿಯ ನಡುವೆ ನೆನಪಿನ ಬದುಕು “ನೆನಪುಗಳ ಮಾತು ಮಧುರ” (ಚಿತ್ರವಿಮರ್ಶೆ-ರೇಟಿಂಗ್ : 2.5 /5)
ರೇಟಿಂಗ್ : 2.5 /5
ಚಿತ್ರ : ನೆನಪುಗಳ ಮಾತು ಮಧುರ
ನಿರ್ದೇಶಕ : ಅಫ್ಜಲ್
ನಿರ್ಮಾಪಕ : ಸೆವೆನ್ ರಾಜ್
ಸಂಗೀತ : ರಾಜು ಎಮ್ಮಿಗನೂರು
ಛಾಯಾಗ್ರಹಣ : ಸ್ವಾಮಿ ಮೈಸೂರು
ತಾರಾಗಣ : ಸೆವೆನ್ ರಾಜ್ , ವಸಿಷ್ಠ ಬಂಟನೂರು , ರಣವೀರ್, ರಾಜಪ್ರಭು, ವಿನಯ್, ಅಂಜಲಿ, ಸೌಮ್ಯ, ರೇಖಾ ರಮೇಶ್, ಶುಭ ತೀರ್ಥ, ವಾದ್ಯಾ, ಗುಬ್ಬಚ್ಚಿ , ಅರವಿಂದ್, ನಾಗೇಂದ್ರ ಅರಸ್ ಹಾಗೂ ಮುಂತಾದವರು…
ಜೀವನದಲ್ಲಿ ಪ್ರತಿಯೊಬ್ಬರಿಗೂ ಸಮಯ , ಸಂದರ್ಭ ಸೂಕ್ತ ಸಮಯದಲ್ಲಿ ಕಲಿಸುವ ಪಾಠ ಬಹಳ ಮಹತ್ವವಾದದ್ದು , ತಪ್ಪು , ಸರಿಯ ನಡುವೆ ಎಚ್ಚೆತ್ತುಕೊಳ್ಳುವ ಮಾರ್ಗ ಬಹಳ ಮುಖ್ಯ. ಅದರಲ್ಲೂ ಹೆಣ್ಣು ಎಂಬ ಮಾಯೆಯ ಮೋಹ , ಕಾಮದ ಬಲೆಗೆ ಬಿದ್ದರೆ ಇನ್ನಿಲ್ಲದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಅಂತದ್ದೇ ಕೆಲವು ಗೆಳೆಯರ ಬದುಕಿನಲ್ಲಿ ನಡೆಯುವ ಘಟನೆಗಳ ಸುತ್ತ ಕಟ್ಟಿಕೊಂಡಿರುವ ನೆನಪುಗಳ ಮಾತುಗಳನ್ನು ಕುತೂಹಲಕಾರಿಯಾಗಿ ತೆರೆಯ ಮೇಲೆ ತಂದಿರುವಂತಹ ಚಿತ್ರ “ನೆನಪುಗಳ ಮಾತು ಮಧುರ”. ಬದುಕಿಗಾಗಿ ಕಷ್ಟಪಟ್ಟು ದುಡಿಯುವ ಅಭಿಗೆ ಮದುವೆಯ ಆಲೋಚನೆಯಿಂದ ದೂರ ಸರಿದರು, ತಾಯಿಯ ಒತ್ತಡದಿಂದ ಮದುವೆಗೆ ಒಪ್ಪುತ್ತಾನೆ.
ಗೆಳೆಯನ ಸಹಾಯದಿಂದ ಶ್ರೀಮಂತ ವ್ಯಕ್ತಿ ಕುಬೇರಪ್ಪ (ಸವೆನ್ ರಾಜ್) ನನ್ನ ಭೇಟಿಯಾಗುವ ಅಭಿ ಮದುವೆಗಾಗಿ ಎರಡು ಲಕ್ಷ ಹಣ ಕೇಳುತ್ತಾನೆ. ಹೆಣ್ಣು ಎಂದರೆ ಜೊಲ್ಲುಸುರಿಸುವ ಕುಬೇರಪ್ಪ ಹುಡುಗಿಯ ಫೋಟೋ ನೋಡಿ ಹಣ ನೀಡುತ್ತಾನೆ. ಓಡಿ ಹೋದ ಹುಡುಗಿ , ಹಣ ನೀಡಲಾಗದೆ ಪರದಾಡುವ ಅಭಿ ಗೆ ದೇಹ ಸುಖ ನೀಡುವ ದೀಪ್ತಿ ಸಿಗುತ್ತಾಳೆ.

ಮುಂದೆ ಅಭಿಗೆ ಅದು ಬೇರೆ ದಾರಿ ತರುತ್ತದೆ. ಮತ್ತೊಬ್ಬ ಗೆಳೆಯ ವಿಮಲ್ ಝಮೊಟೊ ಡೆಲಿವರಿ ಬಾಯಾಗೆ ಕೆಲಸ ಮಾಡುತ್ತಾ ಕವಿತಾ ಎನ್ನುವರ ಮನೆಗೆ ಹೋಗುತ್ತಾನೆ. ಆದರೆ ಆಕೆ ನಡೆಸುವ ಸರಸ , ಸಲ್ಲಾಪಕ್ಕೆ ಮನಸೋಲುತ್ತಾನೆ. ಆದರೆ ವಿಧಿ ಆಟ ಕೊಲೆಯಾಗುತ್ತದೆ. ಇನ್ನೊಂದು ಗೆಳೆಯರ ತಂಡ ರೋಹಿತ್ ಹಾಗೂ ಪೂಜಾ ಒಂದೇ ಕಡೆ ಫ್ರೆಂಡ್ಸ್ ಆಗಿ ಕೆಲಸ ಮಾಡುತ್ತಾರೆ. ಅಲ್ಲಿಗೆ ಬರುವ ಮತ್ತೊಬ್ಬ ಗೆಳೆಯ ಆಯುಷ್ಯ ಗೆ ಪೂಜಾ ಮೇಲೆ ಆಸೆ , ಅದೇ ರೀತಿ ತನ್ನ ಗೆಳತಿ ಟೀನಾ ಳನ್ನ ಕರೆಸಿ ನಾಲ್ವರು ರೆಸಾರ್ಟ್ ಗೆ ಹೋಗುತ್ತಾರೆ.
ಲಿವಿಂಗ್ ರಿಲೇಶನ್ಶಿಪ್ ಜೊತೆ ಮೋಜು ಮಸ್ತಿ ಮಾಡುತ್ತಾ ರೋಹಿತ್ ಗೆ ಸತ್ಯದ ವಿಚಾರ ತಿಳಿಯುತ್ತದೆ. ಹಣಕ್ಕಾಗಿ ಕಳ್ಳತನ ಮಾಡುವ ಮನೋಜ್ ಒಮ್ಮೆ ದೀಪ್ತಿ ಯಾ ಸ್ಕೂಟರ್ ಕದಿಯುತ್ತಾನೆ ಆದರೆ ಅಚಾನಕ್ಕಾಗಿ ಆಕೆಗೆ ಮನೋಜ್ ಡ್ರಾಪ್ ಮಾಡುವ ಸ್ಥಿತಿ ಎದುರಾಗುತ್ತಿದೆ. ಅವಳೊಟ್ಟಿಗೆ ಕಾಲ ಕಳೆದು ಹೊರ ಬಂದಾಗ ಖಾಲಿ ಜಾಗ , ದೀಪ್ತಿ ಫೋಟೋ ಕಾಣುತ್ತದೆ. ಈ ನಾಲ್ವರ ಬದುಕಿನಲ್ಲಿ ಎದುರಾಗಿದ್ದು ಏನು ಎನ್ನುವಷ್ಟರಲ್ಲಿ ಕುಬೇರಪ್ಪನ ಜೀವನದಲ್ಲಿ ಒಂದಷ್ಟು ಘಟನೆ ನಡೆದು ಎಲ್ಲದಕ್ಕೂ ಕೊಂಡಿಯಂತೆ ಬೆಸೆದುಕೊಳ್ಳುತ್ತಾ ಹೋಗುತ್ತದೆ. ಅದು ಏನು… ಯಾಕೆ… ಎಂಬುದನ್ನು ತಿಳಿಯಬೇಕಾದರೆ ನೀವು ಚಿತ್ರವನ್ನು ನೋಡಬೇಕು.

ಈ ಚಿತ್ರದಲ್ಲಿ ನಾಲ್ವರು ಯುವಕರ ಬದುಕಿನಲ್ಲಿ ಎದುರಾಗುವಾಗ ಘಟನೆಗಳು , ಹೆಣ್ಣಿನ ಮೇಲೆ ಆಸೆ , ವ್ಯಾಮೋಹಕ್ಕೆ ಸೋತು ಹೋದವರ ಬದುಕು ಏನಾಗುತ್ತೆ ಎಂಬುದನ್ನು ಹೇಳುವ ಪ್ರಯತ್ನದ ಜೊತೆ ಹಣ ಇದ್ದ ಶ್ರೀಮಂತನ ಆಟ ಚೆಲ್ಲಾಟಕ್ಕೆ ಸಿಕ್ಕುವ ಉತ್ತರ ಏನು ಎಂಬುದನ್ನು ಹೇಳುತ್ತಾ ಹೋಗಿದ್ದಾರೆ ನಿರ್ದೇಶಕ ಅಫ್ಜಲ್. ಚಿತ್ರಕಥೆ, ಸಂಗೀತ ಹಾಗೂ ಚಿತ್ರೀಕರಣ ಮಾಡಿರುವ ಹಾದಿ ಬಹಳ ಕೆಟ್ಟದಾಗಿದೆ. ನಿರ್ಮಾಪಕರಿಗೆ ಈ ಪ್ರೀತಿಯ ಚಿತ್ರ ಬೇಕಿತ್ತ ಅನಿಸುತ್ತದೆ. ಪಾತ್ರವರ್ಗದಲ್ಲಿ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಲೀಲಾ ಜಾಲವಾಗಿ ಅಭಿನಯಿಸಿದ್ದಾರೆ. ಹಣ ಹೂಡಿರುವ ಸವೆನ್ ರಾಜ್ ಕುಬೇರಪ್ಪನ ಪಾತ್ರದಲ್ಲಿ ಗಮನ ಸೆಳೆಯಲು ಪ್ರಯತ್ನಪಟ್ಟಿದ್ದು , ಇನ್ನು ಹೆಚ್ಚು ಪಾತ್ರಕ್ಕೆ ಪರಿಪಕ್ವತೆ ಅಗತ್ಯವಿದೆ. ನಾಲ್ಕು ಕಥೆಗಳ ಈ “ನೆನಪುಗಳ ಮಾತು ಮಧುರ” ಚಿತ್ರ ಪ್ರೇಕ್ಷಕರಿಗೆ ಯಾವ ರೀತಿ ಇಷ್ಟ ಆಗುತ್ತದೆ ಎಂಬುದನ್ನು ನೋಡಬೇಕು.