ಭ್ರಮೆ ಮತ್ತು ವಾಸ್ತವತೆಯ ಸುಳಿಯಲ್ಲಿ ತಲ್ಲಣದ ಬದುಕು “ವಿಕಲ್ಪ” (ಚಿತ್ರವಿಮರ್ಶೆ-ರೇಟಿಂಗ್ : 3/5)
ರೇಟಿಂಗ್ : 3/5
ಚಿತ್ರ : ವಿಕಲ್ಪ
ನಿರ್ದೇಶಕ : ಪೃಥ್ವಿರಾಜ್ ಪಾಟೀಲ್
ನಿರ್ಮಾಪಕಿ : ಇಂದಿರಾ ಶಿವಸ್ವಾಮಿ
ಸಂಗೀತ : ಸಂವತ್ಸರ ಛಾಯಾಗ್ರಹಣ : ಅಭಿರಾಮ್
ತಾರಾಗಣ : ಪೃಥ್ವಿರಾಜ್ ಪಾಟೀಲ್, ನಾಗಶ್ರೀ ಹೆಬ್ಬಾರ್, ಹರಿಣಿ ಶ್ರೀಕಾಂತ್, ಸಂಧ್ಯಾ ವಿನಾಯಕ್, ಗಣಪತಿ ವಡ್ಡಿನಗದ್ದೆ, ಸ್ವರೂಪ್ ಬಚ್ಚ್, ಪೂಜಾ ಬಚ್ಚ್, ಜಯಂತ್ ಡೇವಿಡ್, ಡಾ. ಪ್ರಕೃತಿ, ಮಾಸ್ಟರ್ ಆಯುಷ್ ಸಂತೋಷ್, ಗಿರೀಶ್ ಹೆಗಡೆ ಮುಂತಾದವರು…
ಸಾಮಾನ್ಯವಾಗಿ ಮನುಷ್ಯನ ನಡೆ-ನುಡಿ ಅವನ ಮನಸ್ಥಿತಿ, ಆಲೋಚನೆ ಮೇಲೆ ಸಾಗುತ್ತೆ ಎಂದು ಹೇಳಬಹುದು , ಅದರಲ್ಲೂ ಮನಸ್ಸಿನ ಸುಪ್ತ ಭಾವನೆಗಳು, ತುಮುಲ – ತಲ್ಲಣಗಳ ನಡುವೆ ಮಾನಸಿಕ ರೋಗ ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ (ಪಿಟಿಎಸ್ಡಿ)ಆವರಿಸಿಕೊಂಡರೆ ಅವರ ಸ್ಥಿತಿ ಗತಿ ಏನೆಲ್ಲಾ ಆಗುತ್ತದೆ ಎಂಬ ಸೂಕ್ಷ್ಮತೆಯ ಸುಳಿಯ ಜೊತೆಗೆ ತಾಯಿಯ ಮಮತೆ , ಊರಿನ ನೆಂಟು, ಸ್ನೇಹಿತರ ಒಡನಾಟ , ಪ್ರೀತಿ , ಭಯ , ವಾಸ್ತವತೆ , ಭ್ರಮೆಯ ಸುತ್ತ ಬೆಸೆದುಕೊಂಡು ರೋಚಕವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ವಿಕಲ್ಪ”. ಬೆಂಗಳೂರಿನಲ್ಲಿ ಫೇಸ್ ಸಾಫ್ಟ್ವೇರ್ ಕಂಪನಿಯ ಸಿಇಓ ಪೃಥ್ವಿ (ಪೃಥ್ವಿರಾಜ್ ಪಾಟೀಲ್) ತನ್ನ ಗೆಳೆಯರಾದ ಸ್ವರೂಪ್, ಪೂಜಾ ಜೊತೆ ಕಂಪನಿ ಬೆಳವಣಿಗೆ ಬಗ್ಗೆ ನಿರಂತರ ಕೆಲಸದಲ್ಲಿ ತೊಡಗಿರುತ್ತಾರೆ.
ಇದರ ನಡುವೆ ಪೃಥ್ವಿಗೆ ತನ್ನ ಬಾಲ್ಯದ ನೆನಪು , ತನ್ನ ಊರು, ತಾಯಿಯ ಜೊತೆ ಒಡನಾಟ , ಯಕ್ಷಗಾನದ ರಾವಣನ ನೋಟ ಭಯದಿಂದ ಆತಂಕದ ಸುಳಿಯಲ್ಲಿ ದುಡ್ಡಿರುತ್ತದೆ.
ಇನ್ನು ಕಂಪನಿಯ ಕೆಲಸ ಮಾಡಲಾಗದೆ , ತನ್ನ ಗೆಳತಿ ಸಮುಧ್ಯತ (ನಾಗಶ್ರೀ ಹೆಬ್ಬಾರ್) ಜೊತೆಯು ನೆಮ್ಮದಿಯಿಂದ ಇರಲಾಗದೆ ಪರಿತಪಿಸುವ ಪೃಥ್ವಿಯ ಮನಸ್ಥಿತಿಯನ್ನು ಕಂಡು ಗಾಬರಿಕೊಳ್ಳುತ್ತಾ ಜಾತಕದ ತೊಂದರೆ ಎನ್ನುತ್ತಾ ಜ್ಯೋತಿಷ್ಯರ ಬೇಟೆಯು ಪ್ರಯೋಜನವಾಗದೆ, ಸೈಕ್ಯಾಟೆಸ್ಟ್ ಬಳಿ ಟ್ರೀಟ್ಮೆಂಟ್ ಗೆ ಮುಂದಾಗುತ್ತಾರೆ.
ಒಂದಷ್ಟು ಫ್ಲಾಶ್ ಬ್ಯಾಕ್ ಘಟನೆಗಳು ತೆರೆದುಕೊಳ್ಳುತ್ತಾ ಹೋದಂತೆ ಪೃಥ್ವಿ ತನ್ನ ತಾಯಿ(ಸಂಧ್ಯಾ ವಿನಾಯಕ್) ಯ ಆಸೆಯಂತೆ ತನ್ನೂರಿಗೆ ಸಾಗುವ ಮಾರ್ಗ ಮಧ್ಯೆ ಬೊಮ್ಮ(ಗಣಪತಿ ವಡ್ಡಿನಗದ್ದೆ) ನನ್ನ ಭೇಟಿ ಮಾಡಿ ಊರಿನ ಯಕ್ಷಗಾನ ಕಲೆಯ ಪ್ರಮುಖರಾದ ಗೋಡೆ ನಾರಾಯಣ ಹೆಗಡೆ ಮನೆಗೆ ದಾರಿ ಕೇಳುತ್ತಾನೆ. ಅವರನ್ನ ಭೇಟಿ ಮಾಡಿದ ನಂತರ ತನ್ನ ಉದ್ದೇಶವನ್ನು ತಿಳಿಸುತ್ತಾನೆ. ಒಂದಷ್ಟು ಕಹಿ ಘಟನೆ , ಅಗೋಚರ ಶಕ್ತಿಯ ಸಂಚಲನದ ಆತಂಕದಲ್ಲಿ ವಿಚಿತ್ರ ಅನುಭವಗಳು ಎದುರಾಗಿ ಆಕ್ಸಿಡೆಂಟ್ ಆಗುತ್ತದೆ.
ಟ್ರೀಟ್ಮೆಂಟ್ ಗಾಗಿ ಪ್ರಖ್ಯಾತ ಡಾಕ್ಟರ್ ಇಂದಿರಾ (ಹರಿಣಿ ಶ್ರೀಕಾಂತ್) ಮಾರ್ಗದರ್ಶನವು ಪಡೆಯುತ್ತಾರೆ. ಭಯದ ಸುಳಿಯಲ್ಲೇ ಮನಸ್ಸಿನಲ್ಲಿ ಒತ್ತಡ ಹೆಚ್ಚಿಸಿಕೊಳ್ಳುತ್ತಾ ಆತಂಕದ ಸಿತಿಯತ್ತ ಸಾಗುವ ಪೃಥ್ವಿಗೆ ರಕ್ತಸಿಕ್ತ ಅನಾಮಿಕ ವ್ಯಕ್ತಿ , ಯಕ್ಷಗಾನದ ಮಹಿಷಾಸುರನ ನೋಟ , ನರ್ತನ ಕಾಡುತ್ತಲೇ ಇರುತ್ತದೆ.
ಮತ್ತೊಂದೆಡೆ ತನ್ನ ಪ್ರೇಯಸಿ ಸೇರಿದಂತೆ ಒಂದಷ್ಟು ಘಟನೆಗಳು ಬೇರೆ ರೂಪವನ್ನ ಪಡೆಯುತ್ತಾ ಹೋಗುತ್ತದೆ. ಅದು ಏನು… ಯಾಕೆ… ಹಿನ್ನಲೆಯ ಸತ್ಯ ಏನು… ಕ್ಲೈಮಾಕ್ಸ್ ನೀಡುವ ಉತ್ತರ…
ಇದೆಲ್ಲದಕ್ಕೂ ಉತ್ತರ ನೀವು ವಿಕಲ್ಪ ಚಿತ್ರ ನೋಡಬೇಕು.
ನಿರ್ದೇಶಕ ಪೃಥ್ವಿರಾಜ್ ಪಾಟೀಲ್ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಬಹಳ ವಿಭಿನ್ನವಾಗಿದೆ. ಒಂದಷ್ಟು ಮಾಹಿತಿಯೊಂದಿಗೆ ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್’ (ಪಿಟಿಎಸ್ಡಿ) ಎಂಬ ಮಾನಸಿಕ ವ್ಯಾಧಿಯ ಎಳೆಯನ್ನು ಚಿತ್ರಕಥೆ ಮಾಡಿ ಅದರ ಸುತ್ತ ಸೈಕಾಲಜಿಕಲ್ – ಥ್ರಿಲ್ಲರ್ ಕಥಾಹಂದರದ ಜೊತೆಗೆ ತಾಯಿಯ ಮಮತೆ , ಸ್ನೇಹ , ಪ್ರೀತಿ , ಸಂಬಂಧದ ಸುತ್ತ ಮನಸ್ಸಿನಲ್ಲಿರುವ ಭ್ರಮೆ ಮತ್ತು ವಾಸ್ತವದ ನಡುವಿಣ ಚಿತ್ರಣ ಅಚ್ಚುಕಟ್ಟಾಗಿ ತರುವ ಪ್ರಯತ್ನ ಮಾಡಿದ್ದಾರೆ. ಇನ್ನು ಚಿತ್ರಕಥೆಯಲ್ಲಿ ಮತ್ತಷ್ಟು ಹಿಡಿತ ಮಾಡಬಹುದಿತ್ತು ಮೊದಲ ಭಾಗ ಹೆಚ್ಚು ಗಮನ ಸೆಳೆಯುತ್ತದೆ.
ಹಾಗೆಯೇ ಪೃಥ್ವಿ ನಟನಾಗಿಯೂ ಕೂಡ ಆರಂಭದಿಂದ ಅಂತ್ಯದವರೆಗೂ ತಮ್ಮ ಸಾಮರ್ಥ್ಯವನ್ನು ತೋರಿದ್ದಾರೆ. ಇನ್ನೂ ಇಂದಿರಾ ಶಿವಸ್ವಾಮಿ ಗಂಡನ ಸಾರಥ್ಯಕ್ಕೆ ನಿರ್ಮಾಪಕಿನಾಗಿ ಸಾತ್ ನೀಡಿರುವುದನ್ನು ಮೆಚ್ಚಲೇಬೇಕು. ಇನ್ನು ನಟಿ ನಾಗಶ್ರೀ ಹೆಬ್ಬಾರ್ ಕೂಡ ಸಿಕ್ಕ ಅವಕಾಶಕ್ಕೆ ಜೀವ ತುಂಬಿ ದ್ವಿತೀಯ ಭಾಗದಲ್ಲಿ ಗಮನ ಸೆಳೆಯುತ್ತಾರೆ. ಸೆಕ್ರೆಟ್ ಲಿಸ್ಟ್ ಪಾತ್ರದಲ್ಲಿ ಹರಣಿ ಶ್ರೀಕಾಂತ್ ಹಾಗೂ ಬೊಮ್ಮನ ಪಾತ್ರದಲ್ಲಿ ಗಣಪತಿ ಹೆಗಡೆ ಒಡ್ಡಿನ ಗದ್ದೆ ಹಾಗೂ ಬಾಲ ಪ್ರತಿಭೆ ಆಯುಷ್ಯ ಸಂತೋಷ್ , ಗೆಳೆಯರಾಗಿ ಸ್ವರೂಪ್ ಬುಚ್ ಮತ್ತು ಪೂಜಾ ಬುಚ್ ಸಿಕ್ಕ ಸಣ್ಣ ಪಾತ್ರವಾದರೂ ಅಚ್ಚುಕಟ್ಟಾಗಿ ನಿಭಾಯಿಸಿ ಒಂದು ಎಲ್ಲರ ಗಮನ ಸೆಳೆಯುತ್ತಾರೆ.
ಹಿರಿಯ ಯಕ್ಷಗಾನ ಕಲಾವಿದರು ಗೋಡೆ ನಾರಾಯಣ ಹೆಗಡೆ , ತಾಯಿಯ ಪಾತ್ರಧಾರಿ ಸಂಧ್ಯಾ ವಿನಾಯಕ್, ಸೈಕ್ಯಾಟ್ರಿಸ್ಟ್ ಪ್ರಕೃತಿ ನಾರಾಯಣಸ್ವಾಮಿ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದೆ. ಇನ್ನು ಇಡೀ ಚಿತ್ರದ ಹೈಲೈಟ್ ಎಂದರೆ ಸಂವತ್ಸರ ಸಾಗರ ಸಂಗೀತ ಸುಧೆ. ಕಥೆಗೆ ಪೂರಕವಾಗಿ ಎಲ್ಲಿಯೂ ಆಡಾರಂಭವಿಲ್ಲದೆ , ಅರ್ಥಪೂರ್ಣವಾದ ಸಾಹಿತ್ಯಕ್ಕೆ , ಗಾಯಕರ ಧ್ವನಿ ಮನಮುಟ್ಟುವಂತಹ ಸಂಗೀತ ಅದ್ಭುತವಾಗಿದೆ. ಅದೇ ರೀತಿ ಛಾಯಾಗ್ರಾಹಕ ಅಭಿರಾಮ್ ಗೌಡ , ಸಂಕಲನ ಸುರೇಶ್ ಆರ್ಮುಗಂ , ಚಿತ್ರಕಥೆ ಮಿಥುನ್ ತೀರ್ಥಳ್ಳಿ ಗಮನ ಸೆಳೆಯುತ್ತದೆ. ಒಟ್ಟಾರೆ ಸಸ್ಪೆನ್ಸ್ , ಥ್ರಿಲ್ಲರ್ ಪ್ರೀಯರಿಗೆ ಇಷ್ಟವಾಗುವಂತಹ ಈ ಚಿತ್ರವನ್ನು ಎಲ್ಲರೂ ಒಮ್ಮೆ ನೋಡುವಂತಿದೆ.
