ಪ್ರೀತಿ , ಹಣ, ವ್ಯಾಮೋಹದ ಹಿಂದಿರುವ ಬದುಕಿನ ಮೌಲ್ಯ “ಅಮೃತ ಅಂಜನ್” (ಚಿತ್ರವಿಮರ್ಶೆ-ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : ಅಮೃತ ಅಂಜನ್
ನಿರ್ದೇಶಕ : ಜ್ಯೋತಿ ರಾವ್ ಮೋಹಿತ್
ನಿರ್ಮಾಪಕ : ವಿಜಯ್ ಕುಮಾರ್
ಸಂಗೀತ : ರೋಹಿತ್
ಛಾಯಾಗ್ರಹಣ : ಸುಮಂತ್
ತಾರಾಗಣ : ಸುಧಾಕರ್ ಗೌಡ, ಪಾಯಲ್ ಚೆಂಗಪ್ಪ , ಗೌರವ್ ಶೆಟ್ಟಿ , ಶ್ರೀ ಭವ್ಯ, ಕಾರ್ತಿಕ್ ರೂವಾರಿ , ಪಲ್ಲವಿ ಪರ್ವ, ಚೇತನ್ ದುರ್ಗ ಹಾಗೂ ಮುಂತಾದವರು…
ಜೀವನದಲ್ಲಿ ಎಲ್ಲಾ ಅಂದುಕೊಂಡಂತೆ ನಡೆಯುವುದಿಲ್ಲ , ಸಮಯ , ಸಂದರ್ಭ , ಕಾಲಕ್ಕೆ ತಕ್ಕಂತೆ ಪ್ರತ್ಯುತ್ತರವನ್ನು ನೀಡುತ್ತಾ ಸಾಗುತ್ತದೆ. ಅದರಲ್ಲೂ ತಂದೆ ತಾಯಿಗೆ ಗೊತ್ತಾಗದ ಹಾಗೆ ಮಕ್ಕಳ ಓಡಾಟ , ಪ್ರೀತಿ , ಮೋಜು , ಮಸ್ತಿ ಜೊತೆಯಲ್ಲಿ ಮದುವೆಯಾದವನ ಪಾಡು , ಕುಡಿತದ ಚಟ , ಹೆಗಲ್ಲ ಮಾಡಿಸುತ್ತದೆ. ಬದುಕು ಯಾವ ದಿಕ್ಕಿನತ್ತ ಸಾಗುತ್ತದೆ ಎಂಬುದನ್ನು ಹಾಸ್ಯ ಮಿಶ್ರಣದೊಂದಿಗೆ ಮನಸೆಳೆಯುವ ಕಥಾನಕವಾಗಿ ಇವರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಅಮೃತಅಂಜನ್”. ಕರಾವಳಿ ಪ್ರದೇಶದ ಊರೊಂದರಲ್ಲಿ ಮೈಕ್ ಸೆಟ್ ಹಾಕುವ ಕೆಲಸ ಮಾಡುವ ಬಾಸ್ (ನವೀನ್ ಡಿ ಪಡಿಲ್) ನ್ನ ಗರ್ಭಿಣಿ ಪತ್ನಿ (ಮಧುಮತಿ) ಮುದ್ದಾದ ಮಗುವಿಗೆ ಜನ್ಮ ನೀಡುತ್ತಾಳೆ.
ಬಾಲ್ಯದಿಂದಲೂ ತುಂಟತನದಲ್ಲಿ ಬೆಳೆಯುವ ಮಗು , ಆರೋಗ್ಯ ಕೆಟ್ಟರೆ ಎಣ್ಣೆ ವಾಸನೆ ಮೂಸಿದ ತಕ್ಷಣ ಗುಣವಾಗುತ್ತಾನೆ. ಇದಕ್ಕೂ ಒಂದು ಹಿನ್ನೆಲೆ ಇರುತ್ತೆ , ಸಿಟಿಗೆ ಬಂದು ಕಾಲೇಜಿಗೆ ಸೇರುವ ಜೈರಾಮ್ (ಸುಧಾಕರ್ ಗೌಡ) ಲವ್ , ಬ್ರೇಕ್ ಅಪ್ ವಿಚಾರದಲ್ಲಿ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಾನೆ. ಇದರ ನಡುವೆ ಊರಿ ( ಪಾಯಲ್ ಚಂಗಪ್ಪ ) ಎಂಬ ಮುದ್ದಾದ ಹುಡುಗಿಯ ಜೊತೆ ಸ್ನೇಹ ಬೆಳೆದು ಪ್ರೀತಿಯ ಕಡೆ ವಾಲುತ್ತಾನೆ. ಇನ್ನು ಊರಿ ತನ್ನ ಪ್ರೇಮಿ ಯಾವ ಹುಡುಗಿಯರ ಸಹವಾಸವು ಮಾಡಬಾರದು, ತಾನು ಹೇಳಿದಂತೆ ಕೇಳಬೇಕೆಂಬ ಹಠ. ಅದಕ್ಕೆ ಓಕೆ ಎನ್ನುವ ಜಯರಾಮ್ ತನ್ನ ಪ್ರೇಯಸಿ ಕೇಳುವ ಐ ಫೋನ್, ಪಾರ್ಟಿ , ಮೋಜು , ಮಸ್ತಿಗೆ ಹಣವಿಲ್ಲದಿದ್ದರು ತಂದೆ ,
ಗೆಳೆಯರಿಂದ ಹಣ ಕೇಳಿ ಪಡೆಯುತ್ತಾನೆ. ಇದರ ನಡುವೆ ತನ್ನ ಗೆಳೆಯ ಅಪ್ಪಾಜಿ (ಗೌರವ್ ಶೆಟ್ಟಿ) ಒಳ್ಳೆ ಕೆಲಸವಿದ್ದರೂ ನನ್ನ ಪತ್ನಿ (ಶ್ರೀ ಭವ್ಯ) ಕಾಟಕ್ಕೆ ಬೇಸತ್ತು ಹೋಗಿ ಕುಡಿತದ ಚಟಕೆ ಬಿದ್ದಿರುತ್ತಾನೆ. ಕುಡಿತ ಬಿಟ್ಟು ಮನೆ ಒಳಗೆ ಬಾ ಎನ್ನುವ ಹೆಂಡತಿಗೆ… ಮೇಕಪ್ ಬಿಟ್ಟು ಬದುಕು ಕುಡಿತ ಬಿಡುತ್ತೇನೆ ಎನ್ನುವ ಗಂಡ. ಇದರ ನಡುವೆ ಗೆಳೆಯರೆಲ್ಲ ಒಂದೆಡೆ ಸೇರಿ ತಮ್ಮ ಸಂಕಷ್ಟಗಳ ಬಗ್ಗೆ ಚರ್ಚೆ ಮಾಡುತ್ತಾ ಹೋಗುತ್ತಾರೆ.
ಇನ್ನು ಸಣ್ಣ ಸಣ್ಣ ವಿಚಾರಕ್ಕೆ ಬೆಸೆದು ಗರ್ಲ್ ಫ್ರೆಂಡ್ ಜೊತೆ ಬ್ರೇಕ್ ಅಪ್ ಮಾಡಿಕೊಳ್ಳುವ ಜಗನ್ ತನ್ನ ತಂದೆ ತಾಯಿಯನ್ನು ಭೇಟಿಯಾಗಲು ಊರಿಗೆ ಹೋಗುತ್ತಾನೆ, ಅವರ ಕಷ್ಟ ಸಮಸ್ಯೆಯನ್ನು ಕಂಡು ಮತ್ತೆ ಬೆಂಗಳೂರಿಗೆ ಬರುತ್ತಾನೆ. ಇನ್ನು ಪ್ರತಿಯೊಬ್ಬರದು ಒಂದೊಂದು ರೀತಿಯ ಸಮಸ್ಯೆ , ಇದೆಲ್ಲಕ್ಕೂ ಉತ್ತರವಾಗಿ ಒಂದಷ್ಟು ಘಟನೆಗಳು ಬದುಕಿನ ತಿರುವನ್ನ ಬೇರೆದೇ ರೂಪ ನೀಡುತ್ತದೆ. ಹಣ , ಆಸ್ತಿ , ಸಂಬಂಧ ಪ್ರೀತಿಯನ್ನೇ ನಾಶ ಮಾಡುತ್ತದೆ. ಅದು ಹೇಗೆ.. ಏನು… ಇದರ ಹಿಂದಿರುವ ರಹಸ್ಯ ಯಾವುದು ಎಂಬ ವಿಚಾರವನ್ನು ತಿಳಿಯಬೇಕಾದರೆ ಒಮ್ಮೆ ಅಮೃತಅಂಜನ್ ಚಿತ್ರವನ್ನ ನೋಡಬೇಕು.

ಇನ್ನು ನಿರ್ದೇಶಕ ಜ್ಯೋತಿ ರಾವ್ ಮೋಹಿತ್ ತಮ್ಮ ಪ್ರಥಮ ಪ್ರಯತ್ನದಲ್ಲಿ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಪ್ರಸ್ತುತ ಬದುಕಿಗೆ ಬಹಳ ಹತ್ತಿರವಾಗಿದ್ದು , ಸಂಬಂಧಗಳ ಮೌಲ್ಯ , ಪ್ರೀತಿಯ ಶಕ್ತಿ , ಮಾನವೀಯತೆ ಜೊತೆಗೆ ಆಸೆ , ದುಂದು ವೆಚ್ಚ , ಅಲಂಕಾರ , ಮೋಜು ಮಸ್ತಿ , ಕುಡಿತವೇ ಜೀವನವಲ್ಲ , ಅದರ ಹಿಂದೆಯೂ ಒಂದು ಸುಂದರ ಬದುಕಿದೆ ಎಂಬುದನ್ನು ಬಹಳ ಸೊಗಸಾಗಿ ಹಾಸ್ಯ ಸನ್ನಿವೇಶಗಳೊಂದಿಗೆ ಹೇಳುವ ಪ್ರಯತ್ನ ಮಾಡಿದ್ದಾರೆ. ಚಿತ್ರಕಥೆ ಇನ್ನಷ್ಟು ಹಿಡಿತ ಮಾಡಿದರೆ ಚೆನ್ನಾಗಿರುತ್ತೆ. ಪ್ರೀತಿಯ ಭಾಗ ಹೆಚ್ಚು ಗಮನ ಸೆಳೆಯುತ್ತದೆ.
ಇಂತಹ ಯುವ ತಂಡಕ್ಕೆ ನಿರ್ಮಾಪಕರು ನೀಡಿರುವ ಸಹಕಾರವನ್ನು ಕೂಡ ಮೆಚ್ಚಲೇಬೇಕು. ಸಂಗೀತ , ಛಾಯಾಗ್ರಹಣ, ಸಂಕಲನ ಕೆಲಸವು ಅಚ್ಚುಕಟ್ಟಾಗಿ ಮೂಡಿದೆ. ನಾಯಕನಾಗಿ ಅಭಿನಯಿಸಿರುವ ಸುಧಾಕರ್ ಗೌಡ ಇಡೀ ಚಿತ್ರವನ್ನು ಆವರಿಸಿಕೊಂಡು , ಸಿಕ್ಕ ಅವಕಾಶಕ್ಕೆ ನ್ಯಾಯವನ್ನು ಒದಗಿಸಿದ್ದಾರೆ. ಇನ್ನು ಮುದ್ದಾಗಿ ಕಾಣುವ ಪಾಯಲ್ ಚಂಗಪ್ಪ ಕೂಡ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಗಮನ ಸೆಳೆದಿದ್ದಾರೆ.
ಮತ್ತೊಬ್ಬ ನಟ ಗೌರವ ಶೆಟ್ಟಿ ಮಾತಿನ ವರ್ಸೆ ಮೂಲಕ , ಕುಡಿತದ ದಾಸನಾಗಿ , ಪಂಚಿಂಗ್ ಡೈಲಾಗ್ ಮೂಲಕ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅದೇ ರೀತಿ ನಟಿ ಶ್ರೀ ಭವ್ಯ ಕೂಡ ನಾನು ಏನು ಕಮ್ಮಿ ಇಲ್ಲ ಎನ್ನುವಂತೆ ಮಾತಿನ ಭರಾಟೆಯಲ್ಲಿ ಮಿಂಚಿದ್ದಾರೆ. ಇನ್ನು ಕಾರ್ತಿಕ್ ರೂವಾರಿ ಸಿಂಗಲ್ ಆದ್ರೂ ಜಂಟಿಗಳ ಓಟಕ್ಕೆ ಉತ್ತಮ ಸಾಥ್ ನೀಡಿದ್ದಾರೆ. ಉಳಿದಂತೆ ಅಭಿನಯಿಸಿರುವ ಎಲ್ಲಾ ಪಾತ್ರಗಳು ಚಿತ್ರದ ಓಟುಕ್ಕೆ ಪೂರಕವಾಗಿದ್ದು , ಜೆ ಆರ್ ಎಂ ಸಂಸ್ಥೆಯ ಲವ್ ಲೋನ್ ವಿಚಾರ , ಪೊಟಾಟೋ ಪಚ್ಚಿ ಹಾಗೂ ಶಿಷ್ಯನ ಪಾತ್ರಧಾರಿ ನಗುವಿನ ಮೋಡಿ ಗಮನ ಸೆಳೆದಿದ್ದು , ಕ್ಲೈಮಾಕ್ಸ್ ನೀಡುವ ಸಂದೇಶ ಅರ್ಥಪೂರ್ಣವಾಗಿದೆ. ಮನರಂಜನೆಯ ದೃಷ್ಟಿಯಿಂದ ಎಲ್ಲರೂ ಒಮ್ಮೆ ನೋಡುವಂತಹ ಚಿತ್ರ ಇದಾಗಿದೆ.