ವರ್ಲ್ಡ್ ಪಿಕಲ್ ಬಾಲ್ ಲೀಗ್ ಚಾಂಪಿಯನ್ ಬೆಂಗಳೂರು ಜವಾನ್ಸ್.
ವಿಶ್ವ ಪಿಕಲ್ ಬಾಲ್ ಲೀಗ್ ನ ಎರಡನೇ ಸೀಸನ್ ನಿನ್ನೆ ಪ್ರಾರಂಭವಾಗಿದೆ.ನಿನ್ನೆ ನಡೆದ ಮ್ಯಾಚ್ ನಲ್ಲಿ ‘ಬೆಂಗಳೂರು ಜವಾನ್ಸ್ ‘ತಂಡವು ‘ಪುಣೆ ಯುನೈಟೆಡ್’ ತಂಡದ ವಿರುದ್ಧ 5-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡುವ ಮೂಲಕ ಭರ್ಜರಿ ಗೆಲುವು ಸಾಧಿಸಿದೆ. ಪ್ರಿಯಾ ಅಟ್ಲೀ ಮತ್ತು ಹೆಸರಾಂತ ನಿರ್ದೇಶಕ ಅಟ್ಲೀ ಮಾಲೀಕತ್ವದ ಬೆಂಗಳೂರು ಜವಾನ್ಸ್ ತಂಡವು ವಿಶ್ವ ಪಿಕಲ್ ಬಾಲ್ ಲೀಗ್ ನ ಮೊದಲ ಸೀಸನ್ ನ ಚಾಂಪಿಯನ್ ತಂಡವಾಗಿದ್ದು, ಮತ್ತೆ ತನ್ನ ಚಾಂಪಿಯನ್ ಆಟವನ್ನು ಈ ಮ್ಯಾಚ್ ಗೆಲ್ಲುವುದರ ಮೂಲಕ ಮುಂದುವರೆಸಿದೆ.

ಆತ್ಮ ವಿಶ್ವಾಸ ಮತ್ತು ಛಲದೊಂದಿದೆ ಅದ್ಭುತ ಪ್ರದರ್ಶನ ನೀಡಿರುವ ‘ಬೆಂಗಳೂರು ಜವಾನ್ಸ್’ ತಂಡವು ಲೀಗ್ ನ ಅತ್ಯಂತ ಬಲಿಷ್ಠ ತಂಡಗಳಲ್ಲಿ ಒಂದೆಂದು ಪುನಃ ಸಾಬೀತುಪಡಿಸಿದೆ. ಇನ್ನು ಸ್ಟೇಡಿಯಂನಲ್ಲಿ ನೆರೆದಿದ್ದ ಅಟ್ಲಿ ಅವರ ಅಭಿಮಾನಿಗಳ ಹರ್ಷೋದ್ಗಾರ ಮತ್ತು ಬೆಂಬಲ ಪಂದ್ಯಕ್ಕೆ ಇನ್ನಷ್ಟು ಮೆರುಗನ್ನು ನೀಡಿತು.

ಇಡೀ ಕ್ರೀಡಾಂಗಣದಲ್ಲಿ ‘ಜವಾನ್ಸ್’ ಮಯವಾಗಿತ್ತು.ಮೊದಲ ಸೀಸನ್ ಗೆದ್ದ ಹಾಗೇ ಎರಡನೇಯ ಸೀಸನ್ ಗೆದ್ದು, ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಸನ್ನದವಾಗಿದೆ ಎನ್ನುವ ಬಲವಾದ ಸಂದೇಶವನ್ನು ನೀಡಿದೆ.