Cini NewsSandalwood

“ಅನಂತ ಪದ್ಮನಾಭ” ಸಿನಿಮಾದ ಟೈಟಲ್‌ ರಿವಿಲ್

Spread the love

ನಟ ರಿಷಿ ಹಾಗೂ ಪ್ರಕಾಶ್‌ ಬೆಳವಾಡಿ ಅಭಿನಯದ ಫೇಮಸ್‌ ಡೈಲಾಗ್‌ ರೈಟರ್‌ ಪ್ರಶಾಂತ್‌ ರಾಜಪ್ಪ ನಿರ್ದೇಶನದ ಅನಂತ ಪದ್ಮನಾಭ ಚಿತ್ರದ ಟೈಟಲ್‌ ಬಿಡುಗಡೆ.

ಅಧ್ಯಕ್ಷ, ವಿಕ್ಟರಿ, ರನ್ನ, ಪೊಗರು , ತೀರ್ಥರೂಪ ತಂದೆಯವರಿಗೆ, ಅಣ್ಣ ಫ್ರಂ ಮೆಕ್ಸಿಕೋ ಸಿನಿಮಾಗಳಿಗೆ ಸಖತ್ತಾಗಿರೋ ಡೈಲಾಗ್‌ ಬರೆದು ಸೈ ಎನ್ನಿಸಿಕೊಂಡಿದ್ದ ರೈಟರ್‌ ಪ್ರಶಾಂತ್‌ ರಾಜಪ್ಪ ನಿರ್ದೇಶನದ ಚೊಚ್ಚಲ ಸಿನಿಮಾದ ಟೈಟಲ್‌ ರಿವಿಲ್‌ ಆಗಿದೆ. ಪ್ರಶಾಂತ್‌ ರಾಜಪ್ಪ ನಿರ್ದೇಶನದ ಮೊದಲ ಸಿನಿಮಾಗೆ ಅನಂತ ಪದ್ಮನಾಭ ಎಂದು ಹೆಸರಿಡಲಾಗಿದೆ. ಸಿನಿಮಾದಲ್ಲಿ ರಿಷಿ ಹಾಗೂ ಪ್ರಕಾಶ್‌ ಬೆಳವಾಡಿ ಲೀಡ್‌ ಆಗಿ ಕಾಣಿಸಿಕೊಳ್ತಿದ್ದಾರೆ.

ಈಗಾಗಲೇ ಟೈಟಲ್‌ ಬಿಡುಗಡೆ ಮಾಡುವ ಮುನ್ನ ವಿಡಿಯೋ ಕಂಟೆಂಟ್‌ ಬಿಟ್ಟು ಸಿನಿಮಾ ಬಗ್ಗೆ ಕ್ಯೂರಿಯಾಸಿಟಿ ಮೂಡಿಸಿದ್ದ ಡೈರೆಕ್ಟರ್‌ ಸದ್ಯ ಡಿಫ್ರೆಂಟ್‌ ಆಗಿರೋ ಟೈಟಲ್‌ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ..ರಿಷಿ ನಾಯಕನಾಗಿ ಅಭಿನಯ ಮಾಡ್ತಿರೋ ಅನಂತ ಪದ್ಮನಾಭ ಸಿನಿಮಾದಲ್ಲಿ ಪ್ರಕಾಶ್‌ ಬೆಳವಾಡಿ ಅವರದ್ದು ವಿಶೇಷ ಪಾತ್ರ ಇನ್ನು ನಾಯಕಿಯಾಗಿ ಅಂಜಲಿ ಅನೀಶ್‌ ಕಾಣಸಿಕೊಂಡಿದ್ದಾರೆ.

ಎರಡು ಜನರೇಷನ್‌ ಬಗ್ಗೆ ಇರೋ ಈ ಕಥೆಯಲ್ಲಿ ಜೀವನದ ಮೌಲ್ಯಗಳ ಬಗ್ಗೆಯೂ ಹೇಳಿದ್ದಾರಂತೆ ನಿರ್ದೇಶಕರು ಕಾಮಿಡಿ ಡ್ರಾಮ ಇರೋ ಅನಂತ ಪದ್ಮನಾಭ ಸಿನಿಮಾವನ್ನ ಅಮ್ರೇಜ್‌ ಸೂರ್ಯವಂಶಿ ನಿರ್ಮಾಣ ಮಾಡಿದ್ದಾರೆ .ಸದ್ಯ ಟೈಟಲ್‌ ಪೋಸ್ಟರ್‌ ರಿಲೀಸ್‌ ಮಾಡಿರೋ ಸಿನಿಮಾತಂಡ ಇನ್ನು ಎರಡು ಹಾಡುಗಳ ಚಿತ್ರೀಕರಣವನ್ನ ಬಾಕಿ ಉಳಿಸಿಕೊಂಡಿದೆ.

ಅನಂತ ಪದ್ಮನಾಭ ಸಿನಿಮಾವನ್ನ ಬೆಂಗಳೂರು, ಸಾಗರ, ತೀರ್ಥಹಳ್ಳಿ ಸುತ್ತಾ ಮುತ್ತಾ ಚಿತ್ರೀಕರಣ ಮಾಡಿದ್ದಾರೆ. ಪ್ರಶಾಂತ್‌ ರಾಜಪ್ಪ ನಿರ್ದೇಶನದ ಅನಂತ ಪದ್ಮನಾಭ ಸಿನಿಮಾಗೆ ಅಶ್ವಿನ್‌ ಪಿ ಕುಮಾರ್‌ ಸಂಗೀತ ನೀಡಿದ್ದು, ವೀನಸ್‌ ನಾಗರಾಜ್‌ ಮೂರ್ತಿ ಕ್ಯಾಮೆರಾ ವರ್ಕ್‌ ಮಾಡಿದ್ದಾರೆ. ಸದ್ಯ ಟೈಟಲ್‌ ಮೂಲಕ ಸದ್ದು ಮಾಡ್ತಿರೋ ಅನಂತ ಪದ್ಮನಾಭ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ.

Visited 1 times, 1 visit(s) today
error: Content is protected !!